ಕೃಷಿ ಭಾಗ್ಯ ಯೋಜನೆಯಡಿಯ ಕೃಷಿ ಹೊಂಡದಿಂದ ಬೆಳೆಗಳಿಗೆ ನೇರವಾಗಿ ನೀರನ್ನು ಹರಿಬಿಡದೇ ಸ್ಪ್ರಿಂಕಲರ್ ಅಥವಾ ಹನಿ ನೀರಾವರಿ ಮೂಲಕ ನೀರುಣಿಸಬೇಕೆಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ರೈತರಿಗೆ ಸಲಹೆ ನೀಡಿದರು.

Image may contain: 3 people, people smiling, outdoor, text and nature

ಕೃಷಿ ಭಾಗ್ಯ ಯೋಜನೆಯಡಿಯ ಕೃಷಿ ಹೊಂಡದಿಂದ ಬೆಳೆಗಳಿಗೆ ನೇರವಾಗಿ ನೀರನ್ನು ಹರಿಬಿಡದೇ ಸ್ಪ್ರಿಂಕಲರ್ ಅಥವಾ ಹನಿ ನೀರಾವರಿ ಮೂಲಕ ನೀರುಣಿಸಬೇಕೆಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ರೈತರಿಗೆ ಸಲಹೆ ನೀಡಿದರು.
ಅವರು ಶುಕ್ರವಾರ ಕಲಬುರಗಿ ತಾಲೂಕಿನ ಸೋಮನಾಥನಹಳ್ಳಿಯ ರೈತ ಬಸವರಾಜ ತಂದೆ ವೀರಣ್ಣ ದೇವನೂರ ಅವರ ಹೊಲದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಲಾದ ಕೃಷಿಹೊಂಡ ವೀಕ್ಷಿಸಿ ರೈತರೊಂದಿಗೆ ಸಂವಾದ ನಡೆಸಿ, ರೈತರಿಗೆ ಶೇ.90ರ ಸಹಾಯಧನದಲ್ಲಿ ಸ್ಪ್ರಿಂಕಲರ್ ಮತ್ತು ಹನಿ ನೀರಾವರಿ ಉಪಕರಣಗಳನ್ನು ನೀಡಲಾಗುತ್ತಿದೆ. ಇವುಗಳ ಸಮರ್ಪಕ ಬಳಕೆಯಿಂದ ಕಡಿಮೆ ನೀರಿನಿಂದ ಹೆಚ್ಚಿನ ಬೆಳೆಗಳಿಗೆ ನೀರುಣಿಸಬಹುದು ಎಂದರು.
ಕೃಷಿ ಹೊಂಡದಲ್ಲಿ ಸಂಗ್ರಹವಾದ ಮಳೆನೀರನ್ನು ನೇರವಾಗಿ ಬೆಳೆಗಳಿಗೆ ಹರಿಬಿಡುವುದರಿಂದ ಕೇವಲ ಒಂದು ಎಕರೆ ಪ್ರದೇಶಕ್ಕೆ ನೀರುಣಿಸಬಹುದು. ಆದರೆ ಹನಿ ನೀರಾವರಿ ಪದ್ದತಿಯಿಂದ ಸುಮಾರು 4 ಎಕರೆ ಪ್ರದೇಶÀಕ್ಕೆ ಎರಡು ಬಾರಿ ನೀರುಣಿಸಬಹುದಾಗಿದೆ. ಮಳೆಗಾಲದಲ್ಲಿ ಮಳೆ ಬಾರದೇ ಇದ್ದ ಸಮಯದಲ್ಲಿ ಆಪತ್ಕಾಲದಲ್ಲಿ ಬೆಳೆಗಳನ್ನು ರಕ್ಷಿಸಲು ಕೃಷಿ ಹೊಂಡದಿಂದ ತೊಗರಿ, ಹತ್ತಿ, ಕಡಲೆ, ಜೊಳದ ಬೆಳೆಗಳಿಗೆ ನೀರನ್ನು ಬಳಿಸಿಕೊಳ್ಳಬೇಕು. ಇದರಿಂದ ಇಳುವರಿ ಹೆಚ್ಚುವುದು ಎಂದರು.
ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ಮಳೆಯಾಶ್ರಿತ ಖುಷ್ಕಿ ಭೂಮಿಯನ್ನು ಹೊಂದಿರುವ ರೈತರಿಗಾಗಿ ಕೃಷಿ ಭಾಗ್ಯ ಯೋಜನೆಯನ್ನು ಪ್ರಪ್ರಥಮಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ರೈತರಿಗೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆಯಡಿ ಕೃಷಿಹೊಂಡಗಳನ್ನು ನಿರ್ಮಿಸಿ ಮಣ್ಣಿನ ಗುಣಧರ್ಮದ ಆಧಾರದ ಮೇಲೆ ಪಾಲಿಥಿನ್ ಹೊದಿಕೆ, ಡಿಜೆಲ್ ಇಂಜೀನ್, ತುಂತುರು ನೀರಾವರಿ ಘಟಕವನ್ನು ಸಹಾಯಧನದ ಆಧಾರದಲ್ಲಿ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ರೈತರು ಪಡೆಯಬೇಕು ಎಂದರು.

Krishna Byre Gowda #ChiefMinisterOfKarnataka#KrishnaByreGowda

Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>