/ department

ಆದಾಯ ಇಲಾಖೆ

ಆದಾಯ ಇಲಾಖೆಯು ಸಾರ್ವಜನಿಕರೊಂದಿಗೆ ನಿಕಟವಿರುವ, ಪರಸ್ಪರ ಸಂಭಾಷಣೆಯಲ್ಲಿರುವ ಸರ್ಕಾರದ ಒಂದು ಮುಖ್ಯ ಇಲಾಖೆಯಾಗಿದೆ. ಈ ಇಲಾಖೆಯು ಸರ್ಕಾರದ ಭೂಮಿ ಹಾಗೂ ರಾಜ್ಯದ ಎಲ್ಲಾ ಭೂ ದಾಖಲೆಗಳ ರಕ್ಷಣೆ ಮಾಡುತ್ತದೆ. ಈ ಇಲಾಖೆಯು ಅನೇಕ ಪ್ರಮಾಣಪತ್ರವನ್ನು ಸಾರ್ವಜನಿಕರಿಗೆ ನೀಡುವ ಕೆಲಸವಷ್ಟೆ ಅಲ್ಲದೆ ಸರ್ಕಾರದ ಅನೇಕ ಭದ್ರತಾ ಯೋಜನೆಗಳನ್ನು ನೆಡೆಸುವ ಜವಾಬ್ದಾರಿಯನ್ನು ಹೊಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಆದಾಯ ಇಲಾಖೆಯು ಶ್ರೀ ಕಾಗೋಡು ತಿಮ್ಮಪ್ಪನ್ವ ನೇತೃತ್ವದಲ್ಲಿ ಅನೇಕ ಪ್ರಮುಖ ಯೋಜನೆಗಳನ್ನು ಮತ್ತು ಜನಪರವಾದ ನೀತಿಯನ್ನು ಕೈಗೊಂಡಿದೆ. ಇಲಾಖೆಯ ಕೆಲವು ಪ್ರಮುಖ ಮುಖ್ಯ ಸಾಧನೆಗಳೆಂದರೆ

49 ಹೊಸ ತಾಲ್ಲೂಕುಗಳ ರಚನೆ
ಸರ್ಕಾರಿ ಕಛೇರಿಯನ್ನು ಸುಲಭವಾಗಿ ಸಂಪರ್ಕಿಸಲು, ಸಾರ್ವಜನಿಕ ಆಡಳಿತವನ್ನು ಜನಸಾಮಾನ್ಯರೊಂದಿಗೆ ನಿಕಟಗೊಳಿಸಲು ಸರ್ಕಾರವು 49 ಹೊಸ ತಾಲ್ಲೂಕು ಕಛೇರಿಯನ್ನು ಪ್ರಸ್ತುತವಿರುವ 177 ತಾಲ್ಲೂಕುಗಳಲ್ಲಿ ಸ್ಥಾಪಿಸಲು ಅನುಮೋದಿಸಿದೆ. ಈ ಹೊಸ ತಾಲ್ಲೂಕುಗಳ ರಚನೆಯು 2018ರ ಜನವರಿ 1ನೇ ತಾರೀಖಿನಿಂದ ಪರಿಣಾಮ ಬೀರಲಿದ್ದು ಗಮನಾರ್ಹವಾದ ಆಡಳಿತ ಹಾಗೂ ಶೈಕ್ಷಣಿಕ ಮತ್ತು ವೈದ್ಯಕೀಯ ಮೂಲ ಸೌಕರ್ಯವನ್ನು ತಾಲ್ಲೂಕು ಕೇಂದ್ರಗಳಿಗೆ ಒದಗಿಸಲಿದೆ.

Creation-of-49-New-Taluks_LR

ಸರ್ಕಾರಿ ಭೂಮಿಯ ಅತಿಕ್ರಮಣವನ್ನು ತಡೆಯುವುದು ಮತ್ತು ಹೊರಹಾಕುವುದು
ರಾಜ್ಯ ಸರ್ಕಾರದ ಒಟ್ಟು 2.02 ಲಕ್ಷ ಎಕರೆಯ ಭೂಮಿಯ ಅತಿಕ್ರಮಣವನ್ನು ನಿರ್ಮೂಲನೆ ಮಾಡಲಾಗಿದೆ. ಬೆಂಗಳೂರಿನ ನಗರ ಪ್ರದೇಶಲ್ಲಿನ 5,325 ಎಕರೆ, ಸುಮಾರು 1 ಕೋಟಿ ರೂಪಾಯಿ ಬೆಲೆಯುಳ್ಳ ಸರ್ಕಾರಿ ಭೂಮಿಯನ್ನು ತೆರವು ಮಾಡಲಾಗಿದೆ. ಸರ್ಕಾರಿ ಭೂಮಿ ಮತ್ತು ಸರ್ಕಾರಿ ಮಾಲೀಕತ್ವ ಸಂಸ್ಥೆಯ ಭೂಮಿಯ ಅತಿಕ್ರಮಣವನ್ನು ತಡೆಯಲು ಕರ್ನಾಟಕ ಭೂ ನಿಷೇಧ ಮತ್ತು ಅತಿಕ್ರಮಣ ಕಾಯಿದೆ, 2011 ಜಾರಿಗೆ ತಂದಿದ್ದು ಈ ಕಾಯಿದೆಯನ್ನು ಉಲ್ಲಂಘಿಸಿದ ಅಪರಾಧಿಯನ್ನು ವಿಚಾರಣೆ ಮಾಡಲು ವಿಶೇಷ ನ್ಯಾಯಾಲವನ್ನು ನಿರ್ಮಿಸಲಾಗಿದೆ.

ಆದಾಯ ಗ್ರಾಮಗಳ ನಿರ್ಮಾಣ
ಆದಾಯ ಇಲಾಖೆಯು ಹಿಂದುಳಿದ ಜನಾಂಗದವರಾದ ಲಂಬಾಣಿ, ಗೊಲ್ಲ, ಭೋವಿ, ನಾಯ್ಕ, ಸೊಲ್ಲಿಗ ಮತ್ತು ಕಾಡುಕುರುಬರು ಕಾಗದ ಪತ್ರವಿಲ್ಲದೆ ಜನವಸತಿ ಪ್ರದೇಶದಲ್ಲಿ ವಾಸವಾಗಿರುವ ಭೂಮಿಯನ್ನು ಆದಾಯ ಗ್ರಾಮದ ನಿರ್ಮಾಣಕ್ಕಾಗಿ ಒಂದು ವಿಶೇಷ ಘಟಕವನ್ನು ನಿರ್ಮಿಸಿದೆ. ಪ್ರಸ್ತುತ ಪ್ರಾರಂಭಿಕ ಹಂತದಲ್ಲಿ 694 ವ್ಯಾಜ್ಯೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ನೀಡಲಾಗಿದ್ದು, ಮುಂದಿನ ಮಾರ್ಚ್ 2018ರ ಕೊನೆಯ ಹೊತ್ತಿಗೆ ಸುಮಾರು 1100 ಕಾಗದ ಪತ್ರವಿಲ್ಲದ ಜನವಸತಿ ಪ್ರದೇಶವನ್ನು ಆದಾಯ ಗ್ರಾಮವಾಗಿ ಮಾರ್ಪಡಿಸಲಾಗುವುದು.

ಅಕ್ರಮ - ಸಕ್ರಮ
ಗ್ರಾಮೀಣ ಪ್ರದೇಶ, ನಗರ, ಪಟ್ಟಣಗಳ ಸರ್ಕಾರಿ ಭೂಮಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಲಾದ ವಸತಿ ಗೃಹಗಳನ್ನು ಛೇದನ 94ಸಿ (ನಗರ ಪ್ರದೇಶ) ಮತ್ತು 94ಸಿಸಿ (ಗ್ರಾಮೀಣ ಪ್ರದೇಶ) ಕರ್ನಾಟಕ ಭೂ ಆದಾಯ ಕಾಯಿದೆಯಡಿಯಲ್ಲಿ ಸೇರಿಸಲಾಗಿದೆ. ಒಂದು ಬಾರಿಗೆ ಸರ್ಕಾರಿ ಗೋಮಾಳ ಭೂಮಿಯನ್ನು ಕ್ರಮಬದ್ಧಗೊಳಿಸಲು ಛೇದನ 94ಎ ಮತ್ತು 94ಬಿ ಕರ್ನಾಟಕ ಭೂ ಆದಾಯ ಕಾಯಿದೆ, ನೀತಿ 94 – ಕರ್ನಾಟಕ ಭೂ ಆದಾಯ ನೀತಿ 1966ನ್ನು ತಿದ್ದುಪಡಿ ಮಾಡಲಾಗಿದೆ.
ಜುಲೈ 2017ರ ಅಂತ್ಯದಲ್ಲಿ ಸುಮಾರು 1.67ಲಕ್ಷ ಅರ್ಜಿಗಳನ್ನು 94ಸಿಸಿ ಕಾಯಿದೆಯಡಿಯಲ್ಲಿ ಸ್ವೀಕರಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ನಿರ್ಮಿಸಲಾದ ನಿರ್ವಹಣಾ ಸಮಿತಿಯು 49,178 ಅರ್ಜಿಗಳನ್ನು ಮಂಜೂರು ಮಾಡಲಾಗಿದ್ದು 1.18 ಲಕ್ಷ ಕೇಸ್‍ಗಳು ವಿಮರ್ಶೆಯಲ್ಲಿವೆ. ಸುಮಾರು 5.40 ಲಕ್ಷ ಅರ್ಜಿಯನ್ನು ಛೇದನ 94ಸಿ ಕಾಯಿದೆಯಡಿಯಲ್ಲಿ ಸ್ವೀಕರಿಸಲಾಗಿದ್ದು ಅದರಲ್ಲಿ 2.61 ಲಕ್ಷ ಅರ್ಜಿಗಳನ್ನು ಸ್ಪಷ್ಟಪಡಿಸಲಾಗಿದ್ದು, 2.78 ಕೇಸ್‍ಗಳು ಸಮಿತಿಯ ವಿಮರ್ಶೆಯಲ್ಲಿದೆ.
ಛೇದನ 94ಎ ಕಾಯಿದೆಯಡಿಯಲ್ಲಿ ಒಟ್ಟು 10.87ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅದರಲ್ಲಿ 8.26 ಅರ್ಜಿಗಳನ್ನು ಸ್ಪಷ್ಟಪಡಿಸಲಾಗಿದೆ. ಭೂಮಿಯನ್ನು ಕ್ರಮಬದ್ಧಗೊಳಿಸಲು ಸುಮಾರು 10.81 ಲಕ್ಷ ಅರ್ಜಿಗಳನ್ನು ಛೇದನ 94ಬಿ ಕಾಯಿದೆಯಡಿಯಲ್ಲಿ ಸ್ವೀಕರಿಸಲಾಗಿದ್ದು ಅದರಲ್ಲಿ 10.61 ಅರ್ಜಿಯನ್ನು ಸಮ್ಮತಿಸಲಾಗಿದೆ.

ಫೋದ್ಯಮುಕ್ತ ಅಭಿಯಾನ
ಅನೇಕ ದಶಕಗಳಿಂದ ಕುಟುಂಬದಲ್ಲಿ ವಿಭಜನೆಯಾದ ಭೂಮಿಯ ಸರ್ವೆ ನಂಬರ್ ಪ್ರತಿಯೊಬ್ಬ ಮಾಲೀಕನಿಗೂ ಒಂದೇ ಆಗಿದೆ. ಸರ್ಕಾರವು 2015ರಲ್ಲಿ ಭೂ ಧಾಖಲೆಗಳನ್ನು ಸರಿಪಡಿಸಲು ಪ್ರತಿಯೊಬ್ಬ ಭೂ ಮಾಲೀಕನಿಗೂ ಹಕ್ಕು ಪಡೆಯುವ ಪ್ರಮಾಣ ಪತ್ರವನ್ನು (ಆರ್‍ಟಿಸಿ) ಫೋದ್ಯಮುಕ್ತ ಅಭಿಯಾನದಡಿಯಲ್ಲಿ ಜಾರಿಗಿ ತಂದಿದೆ. ಪ್ರಸ್ತುತ 6.28ಲಕ್ಷ ಒಬ್ಬ ಮಾಲೀಕನಿಗೆ ಆರ್‍ಟಿಸಿ ತಯಾರಿಸಲಾಗಿದ್ದು ಸುಮಾರು 3,782 ಹಳ್ಳಿಗಳ 8.36 ಲಕ್ಷ ಬ್ಲಾಕ್‍ಗಳಲ್ಲಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

ಇ-ಕಛೇರಿ
ನಿಯಮಿತ ಕಾಗದ ಕಛೇರಿ ಯೋಜನೆಯನ್ನು ಈಗಾಗಲೇ 15 ಜಿಲ್ಲಾಧಿಕಾರಿಗಳ ಕಛೇರಿ, ಸಹಾಯಕ ಅಧಿಕಾರಿಗಳ ಕಛೇರಿ ಹಾಗೂ 15 ತಾಲ್ಲೂಕು ಕಛೇರಿಗಳಲ್ಲಿ ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯನ್ನು ಮುಂದಿನ 2 ವರ್ಷಗಳಲ್ಲಿ 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎಲ್ಲಾ ಆದಾಯ ಇಲಾಖೆಗಳಿಗೆ ವಿಸ್ತರಿಸಲಾಗುವುದು.

ಡಿಜಿಟಲ್ ಭೂ ದಾಖಲೆ ನಿರ್ವಹಣಾ ಯೋಜನೆ (ಡಿ.ಎಲ್.ಆರ್.ಎಂ.ಪಿ)
ತಾಲ್ಲೂಕು ಕಛೇರಿಯ ಹಳೆಯ ಆದಾಯ ಪತ್ರಗಳುಳ್ಳ ಕೊಠಡಿಯನ್ನು ಸಂಪೂರ್ಣವಾಗಿ ಆಧುನೀಕರಿಸಲಾಗುವುದು. ರಾಜ್ಯದ ಎಲ್ಲಾ ತಾಲ್ಲೂಕುಗಳ ನಕ್ಷೆಗಳನ್ನು ಎನ್.ಐ.ಸಿ ತಯಾರಿಸಿರುವ “ಭೂ ನಕ್ಷೆ ಅಥವಾ ಕೊಲ್ಲಾಬ್ ಲ್ಯಾಂಡ್” ಸಾಫ್ಟ್‍ವೇರ್ ಮೂಲಕ ಡಿಜಿಟೈಸ್ ಮಾಡಲಾಗುವುದು. ಈ ಉದ್ದೇಶಕ್ಕಾಗಿ ಒಂದು ವಿಶೇಷ ಸಾಫ್ಟ್‍ವೇರ್ ತಯಾರಿಸಲಾಗುವುದು ಹಾಗೂ ಈ ಯೋಜನೆಯು 2017-18 ನೇ ಸಾಲಿನಲ್ಲಿ ಪೂರ್ಣಗೊಳ್ಳಲಿದೆ.

Namma-Karntaka-Revenue

ಮರಣ ಹೊಂದಿದ ರೈತರ ಪರಿವಾರದ ರಕ್ಷಣೆ
ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರಿಗೆ 2,000 ರೂಪಾಯಿಗಳ ಪಿಂಚಣಿ ನೀಡುವ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಪಿಂಚಣಿಯನ್ನು ನೀಡುವುದರೊಂದಿಗೆ ಅವಲಂಬಿತ ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆ, ಉಚಿತ ಶಿಕ್ಷಣ ಹಾಗೂ ಖರ್ಚನ್ನು ಮರುಪಾವತಿ ಮಾಡಿ ಪದವಿ ಶಿಕ್ಷಣ ಪೂರ್ಣಗೊಳಿಸುವವರೆಗೆ ಸಹಾಯ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ.

ಮನಸ್ವಿನಿ
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬಡತನ ರೇಖೆಗಿಂತ ಕಡಿಮೆ ಇರುವ ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗಾಗಿ ತಿಂಗಳಿಗೆ ಪಿಂಚಣಿ ನೀಡುವ ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ. 40 ರಿಂದ 60 ವರ್ಷದೊಳಗಿನ ಮಹಿಳೆಯರು ತಿಂಗಳಿಗೆ 500 ರೂಪಾಯಿಗಳನ್ನು ಪಡೆಯುವ ಅರ್ಹತೆಯನ್ನು ಹೊಂದಿದ್ದಾರೆ. ಈ ವರೆಗೆ ಸುಮಾರು 3,16,663 ಮಹಿಳೆಯರು ಈ ಯೋಜನೆಯ ಸುಮಾರು 174.5 ಕೋಟಿ ರೂಪಾಯಿಗಳ ಸದುಪಯೋಗವನ್ನು ಪಡೆದಿದ್ದಾರೆ.

ಮೈತ್ರಿ
ಸಲಿಂಗಕಾಮಿ ಜನರನ್ನು ಸಾಮಾಜಿಕ ಮುಖ್ಯವಾಹಿನಿಗೆ ಸೇರಿಸಿ ಅವರಿಗೆ ಸಾಮಾಜಿಕ ಮೂಲಭೂತ ರಕ್ಷಣೆ ನೀಡುವ ನಿಟ್ಟಿನಲ್ಲಿ ಸರ್ಕಾರವು ಮೈತ್ರಿ ಎಂಬ ತಿಂಗಳ ಪಿಂಚಣಿ ಯೋಜನೆಯನ್ನು 2013ರಲ್ಲಿ ಜಾರಿಗೊಳಿಸಿದೆ. ಸಲಿಂಗಕಾಮಿಗಳು ಪ್ರತಿ ತಿಂಗಳು 500 ರೂಪಾಯಿ ಪಿಂಚಣಿ ಪಡೆಯುವ ಅರ್ಹತೆಯನ್ನು 64 ವರ್ಷಗಳವರೆಗೆ ಹೊಂದಿದ್ದಾರೆ. ನಂತರ ನಿವೃತ್ತ ಪಿಂಚಣಿ ಯೋಜನೆಗೆ ಸೇರಿಸಲಾಗುವುದು. ಪ್ರಸ್ತುತ 2.02 ಕೋಟಿ ರೂಪಾಯಿಗಳನ್ನು 4,416 ಫಲಾನುಭವಿಗಳಿಗೆ ವಿತರಿಸಲಾಗಿದೆ.

ಬೃಹತ್ ದೇವಾಲಯಗಳ ಪುನರಭಿವೃದ್ಧಿ ಯೋಜನೆ
ದತ್ತಿ ಇಲಾಖೆಯಡಿಯಲ್ಲಿ ಬರುವ ಬೃಹತ್ ದೇವಾಲಯಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರವು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಸುಮಾರು 201 ಕೋಟಿ ರೂಪಾಯಿಗಳನ್ನು 17 ದೇವಾಲಯಗಳ ಅಭಿವೃದ್ಧಿ ಕಾರ್ಯವನ್ನು ಬೃಹತ್ ದೇವಾಲಯಗಳ ಪುನರಭಿವೃದ್ಧಿ ಯೋಜನೆಯಡಿಯಲ್ಲಿ ಕೈಗೊಂಡಿದೆ.

ಪರಿಹಾರ ಸಾಫ್ಟ್‍ವೇರ್
ರೈತರಿಗೆ ದೊರೆಯಬೇಕಾದ ಸಬ್ಸಿಡಿ ಮತ್ತು ಇತರೆ ಪರಿಹಾರ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲು ಹೊಸದಾಗಿ ನಿರ್ಮಿಸಿದ ಪರಿಹಾರ ಸಾಫ್ಟ್‍ವೇರ್‍ನ್ನು ಜಾರಿಗೊಳಿಸಲಾಗಿದೆ.

ಶಬರಿಮಲೆಯಲ್ಲಿ ವೈದ್ಯಕೀಯ ಸೌಲಭ್ಯ
ಶಬರಿಮಲೆ ದೇವಾಲಯದಲ್ಲಿ ಒಂದು ಶಾಖೆಯನ್ನು ಯಾತ್ರಿಗಳ ಸಹಾಯಕ್ಕಾಗಿ ತೆರೆಯಲಾಗಿದೆ. ಈ ಕಛೇರಿಯು ವೈದ್ಯಕೀಯ ಸೌಲಭ್ಯ, ಸಹಾಯವಾಣಿ, ರಕ್ಷಣಾ ಕಾರ್ಯಾಚರಣೆಯ ಸೇವೆಯನ್ನು ಕರ್ನಾಟಕದ 50 ಲಕ್ಷಕ್ಕಿಂತ ಹೆಚ್ಚಿನ ಯಾತ್ರಿಗಳಿಗೆ ನೀಡಲಿದೆ.

ಮಹಾಮಸ್ತಕಾಭಿಶೇಕ
ಫೆಬ್ರವರಿ 2018ರ ಮೊದಲ ವಾರದಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಶೇಕ ವಿಜೃಂಭಣಾಠ ಉತ್ಸವಕ್ಕಾಗಿ 175 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಪ್ರತಿ ಹನ್ನೆರೆಡು ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವವು ವಿಶ್ವದ ಎಲ್ಲಾ ಯಾತ್ರಿಗಳಿಗೆ ಆಕರ್ಷಣೀಯವಾಗಿದೆ.

ರಾಜ್ಯದಲ್ಲಿನ ಎಲ್ಲಾ ಟ್ಯಾಂಕ್ ಮತ್ತು ಕೆರೆಗಳ ಸಮೀಕ್ಷೆ
ರಾಜ್ಯದೆಲ್ಲೆಡೆ ಕೆರೆ ಹಾಗೂ ಟ್ಯಾಂಕ್‍ಗಳ ಸಮಗ್ರ ಸಮೀಕ್ಷೆ ನಡೆಯುತ್ತಿದೆ. ಒಂದು ವಿಶೇಷ ಕಾರ್ಯಪಡೆಯನ್ನು ಜಿಲ್ಲಾಧಿಕಾರಿಗಳ ಮುಖ್ಯಸ್ಥಿಕೆಯಲ್ಲಿ 10 ಕೋಟಿ ರೂಪಾಯಿಗಳ ಅನುದಾನದಲ್ಲಿ ಸ್ಥಾಪಿಸಲಾಗಿದೆ.

ಹಿರಿಯ ನಾಗರೀಕರ ಪಿಂಚಣಿಯಲ್ಲಿ ಹೆಚ್ಚಳಿಕೆ
ಬಡತನ ರೇಖೆಗಿಂತ ಕಡಿಮೆ ಇರುವ ಹಿರಿಯ ನಾಗರೀಕರಿಗೆ ಬೆಂಬಲ ನೀಡಲು ಸರ್ಕಾರವು 60 – 64 ವರ್ಷದವರಿಗೆ ತಿಂಗಳ ಪಿಂಚಣಿಯನ್ನು 200 ರೂಪಾಯಿಗಳಿಂದ 500 ರೂಪಾಯಿಗೆ ಹೆಚ್ಚಿಸಿದೆ. ಈ ವೃದ್ಧಿಕೆಯಿಂದ ಹಿರಿಯ ನಾಗರೀಕ ಪಿಂಚಣಿ ಯೋಜನೆಯನ್ನು ಎರೆಡು ಹಂತವಾಗಿ ಮಾಡಲಾಗಿದೆ. 60 – 79 ವರ್ಷದವರಿಗೆ ತಿಂಗಳ ಪಿಂಚಣಿ 500 ರೂಪಾಯಿ ಹಾಗೂ 80 ವರ್ಷ ಮೇಲ್ಪಟ್ಟವರಿಗೆ 750 ರೂಪಾಯಿಯನ್ನು ನಿಗದಿಪಡಿಸಿದೆ. ಪ್ರಸ್ತುತ ಇಲಾಖೆಯು ಒಟ್ಟು 3,510,043 ಹಿರಿಯ ನಾಗರೀಕರಿಗೆ ಒಟ್ಟು 169.2 ಕೋಟಿ ರೂಪಾಯಿಗಳನ್ನು ನೀಡುತ್ತಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Revenue