/ Agricultural Department

ಕೃಷಿ ಇಲಾಖೆ

ದೇಶದ ಬೆನ್ನೆಲುಬು ಕೃಷಿ ಕ್ಷೇತ್ರ. ಅನ್ನದಾತರು ತಮ್ಮನ್ನು ಭೂತಾಯಿಯೊಂದಿಗೆ ಅರ್ಪಿಸಿಕೊಂಡು ಉಳುಮೆ ಮಾಡದೇ ಹೋದರೆ ನಾವೆಲ್ಲ ತುತ್ತು ಅನ್ನಕ್ಕೂ ಹರಸಾಹಸ ಪಡಬೇಕಾದ ಸನ್ನಿವೇಶವಿದೆ. ಇಲ್ಲಿ ಸತತವಾಗಿ ಭೀಕರ ಬರಗಾಲ ಸಮಸ್ಯೆಯು ರಾಜ್ಯಕ್ಕೆ ಕಾಡುತ್ತಲೇ ಇದ್ದು ಅನ್ನದಾತನು ಕಂಗಾಲಾಗಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ರೈತರ ಹಿತ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸಿದೆ. ಕೃಷಿ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರ ನೇತೃತ್ವದಲ್ಲಿ ನೀರಿನ ಸಮರ್ಥವಾದ ಬಳಕೆ, ಕೃಷಿಯ ಯಾಂತ್ರೀಕರಣ, ಮತ್ತು ಕೃಷಿ ಬೆಳೆಗಳಿಗೆ ನ್ಯಾಯಯುತವಾದ ದರವನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು ವಿವಿಧ ಯೋಜನೆಗಳು ಇದಕ್ಕೆ ಸಾಕ್ಷಿಯಾಗಿವೆ.

ಸರ್ಕಾರದ ಆದಾಯದಲ್ಲಿ ಬಹುಪಾಲು ಅನುದಾನವನ್ನು ಕೃಷಿ ಕ್ಷೇತ್ರಕ್ಕೆ ನೀಡಲಾಗುತ್ತಿದ್ದು ಈ ವರ್ಷ 5,080 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಲಾಗಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿ ಅಭಿವೃದ್ಧಿಗೆ ಒಟ್ಟು 16,184 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

14184490_1079895625392234_2865420272559820010_n

ಕೃಷಿಭಾಗ್ಯ
ಕರ್ನಾಟಕವು ಕೃಷಿ ಅವಲಂಬಿತ ರಾಜ್ಯ. 2014-15 ರಿಂದ ‘ಕೃಷಿಭಾಗ್ಯ’ ಯೋಜನೆ ಅನಿಷ್ಠಾನಗೊಂಡಿದ್ದು, 25 ಜೆಲ್ಲೆಗಳ 131 ತಾಲೂಕುಗಳು ‘ಕೃಷಿಭಾಗ್ಯ’ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಈವರೆಗೂ ‘ಕೃಷಿಭಾಗ್ಯ’ ಯೋಜನೆಯಡಿ 1 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ. 1.2 ಲಕ್ಷ ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಕಳೆದ 5 ಬಜೆಟ್’ಗಳಲ್ಲಿ 600 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಪ್ಯಾಕೇಜ್ ರೂಪದಲ್ಲಿ ಇರುವುದರಿಂದ ಘಟಕಗಳ ಮೂಲಕ ರೈತರು ಸಹಾಯಧನ ಪಡೆದು ಸದುಪಯೋಗ ಪಡಿಸಿಕೊಂಡಿರುತ್ತಾರೆ. ಕೃಷಿ ಹೊಂಡಗಳಿಂದಾಗಿ ಒಟ್ಟು 1.60 ಲಕ್ಷ ಲೀಟರ್ ನೀರಿನ ಸಂಗ್ರಹಣೆ ಆಗುತ್ತಿದ್ದು ಒಟ್ಟು 8 ಲಕ್ಷ ಲೀಟರ್ ನಷ್ಟು ಮಳೆ ನೀರು ಕೃಷಿ ಚಟುವಟಿಕೆಗಳಿಗಾಗಿ ಬಳಕೆಯಾಗಿದೆ.

ಕೃಷಿ ಯಾಂತ್ರೀಕರಣ
ಶ್ರಮ ಶಕ್ತಿ ಮತ್ತು ಕೃಷಿ ವೆಚ್ಚವನ್ನು ತಗ್ಗಿಸುವ ಗುರಿಯನ್ನು ಹೊಂದಿ ರೂಪಿಸಲಾಗಿರುವ ಕೃಷಿ ಯಾಂತ್ರೀಕರಣ ಯೋಜನೆಯಿಂದ ಯಾಂತ್ರಿಕ ಸಲಕರಣೆಗಳನ್ನು ಒದಗಿಸಲಾಗುತ್ತಿದ್ದು ಇದರಿಂದ ರೈತರು ಸುಲಭವಾಗಿ ಬಿತ್ತುವುದು, ಕಳೆ ಕೀಳುವುದು , ನಾಟಿ ಮಾಡುವುದು ಹಾಗೂ ಇನ್ನಿತರೆ ಕೃಷಿ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಇಲ್ಲಿಯ ವರೆಗೂ 10.5 ಲಕ್ಷ ರೈತರಿಗೆ ಕೃಷಿ ಯಂತ್ರಗಳನ್ನು ವಿತರಿಸಲಾಗಿದ್ದು ಅವರ ಕೃಷಿ ಚಟುವಟಿಕೆಗಳಿಗೆ ಪ್ರಯೋಜವಾಗಿದೆ.

ಕೃಷಿ ಯಂತ್ರಧಾರೆ
‘ಕೃಷಿ ಯಂತ್ರಧಾರೆ’ ಯೋಜನೆಯಡಿ 490 ಹೋಬಳಿಗಳಲ್ಲಿ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಹೋಬಳಿಗಳಲ್ಲಿ ಹೆಚ್ಚು ಕೇಂದ್ರಗಳ ಸ್ಥಾಪನೆಗೆ 122 ಕೋಟಿ ರೂ ಮೀಸಲಾಗಿಟ್ಟಿದೆ. ಉಳುವ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಸುಧಾರಿತ ತಾಂತ್ರಿಕತೆಗಳ ಅಳವಡಿಕೆಯನ್ನು ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು 100 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಕೃಷಿಯಂತ್ರ ಬಳಕೆಯನ್ನು ಪ್ರೋತ್ಸಾಹಿಸಲು ಒಟ್ಟು 174 ತಾಲ್ಲೂಕುಗಲ್ಲಿ ‘ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರ’ಗಳನ್ನು ಆರಂಭಿಸಿದೆ.

ಕೃಷಿಕರನ್ನು ಬಹುವಾಗಿ ಪೀಡಿಸುವ ಸಮಸ್ಯೆಗಳನ್ನು ನಿವಾರಿಸಲು ಯಂತ್ರೋಪಕರಣ ಬಳಕೆಗೆ ಪ್ರಮುಖ ಆದ್ಯತೆ ನೀಡಲಾಗಿದ್ದು ಈ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಅತ್ಯಲ್ಪ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಇದರಿಂದ ರೈತರು ಕೃಷಿಗೆ ಸಹಾಯವಾಗುವ ಟಿಲ್ಲರ್, ಟ್ರಾಕ್ಟರ್, ನಾಟಿಯಂತ್ರ, ಸ್ಪೇಯರ್, ಕಳೆ ನಿಯಂತ್ರಣ ಯಂತ್ರ, ಒಕ್ಕಣೆ ಯಂತ್ರ (ನೇಜಿ ಕಟಾವು ಯಂತ್ರ) ಮ್ತತಿತರ ಉಪಕರಣಗಳನ್ನು ಕಡಿಮೆ ವೆಚ್ಚದಲ್ಲಿ ಕೊಂಡೊಯ್ಯಬಹುದಾಗಿದೆ.

ಕೃಷಿ ಯಂತ್ರಧಾರೆ ಯೋಜನೆಯಡಿ ಕಳೆದ 2 ವರ್ಷಗಳಲ್ಲಿ ರೂ. 341.15 ಲಕ್ಷ ಅನುದಾನದಲ್ಲಿ ಜಿಲ್ಲೆಯ 11 ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ರೈತರಿಗೆ ಆಧುನಿಕ ಕೃಷಿ ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗಿದೆ. ಇದಲ್ಲದೇ, ಯಂತ್ರಗಳ ಮೂಲಕ ಭತ್ತ ನಾಟಿ ಮಾಡುವ ರೈತರಿಗೆ ಪ್ರತೀ ಎಕರೆಗೆ ರೂ. 1600 ರಂತೆ ರಾಜ್ಯ ಸರಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ. ಇದಕ್ಕೆ ಒಂದು ಉದಾರಹರಣೆಯೆಂಬಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 8497 ರೈತರು ಕೃಷಿ ಯಂತ್ರಧಾರೆ ಪ್ರಯೋಜನ ಪಡೆದಿರುತ್ತಾರೆ.

Namma-Karntaka-Post_Agriculture

ಹನಿ ನೀರಾವರಿ
ಪ್ರತಿ ಹನಿ ನೀರನ್ನು ಹಾಳುಮಾಡದೇ ಹೆಚ್ಚು ಬೆಳೆಯನ್ನು ಪಡೆಯುವುದು ಯೋಜನೆಯ ಮೂಲಗುರಿ. ಸೂಕ್ಷ್ಮ ನೀರಾವರಿ ಪದ್ಧತಿ ಬಳಸಿ ಜಲಸಂಪನ್ಮೂಲವನ್ನು ಮಿತವ್ಯಯ ಮಾಡುವುದಾಗಿದೆ. ರೈತರಿಗೆ ಶೇ.90ರಷ್ಟು ಸಬ್ಸಿಡಿಯನ್ನು ನೀಡುವುದರ ಮೂಲಕ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ರೈತರ ಜಮೀನುಗಳಲ್ಲಿ ಅಳವಡಿಸಲು ಪ್ರೋತ್ಸಾಹಿಸಿ, ಶೇ.50-70 ರಷ್ಟು ನೀರಿನ ಮಿತವ್ಯಯವನ್ನು ಸಾಧಿಸುವುದು ಇದರ ಪ್ರಮುಖವಾದ ಗುರಿಯಾಗಿದೆ.

ರಾಜ್ಯ ಸರ್ಕಾರವು ಇದಕ್ಕೆ ಶೇ.90 ರಷ್ಟು ಸಹಾಯಧನವನ್ನು ನೀಡುತ್ತಿದ್ದು ರಾಜ್ಯದ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ಮತ್ತು ತುಂತುರು ನೀರಾವರಿಯನ್ನು ಅಳವಡಿಸಿಕೊಳ್ಳಲಾಗಿದ್ದು ಇದರಿಂದ 3.9 ಲಕ್ಷ ರೈತರು ಅನುಕೂಲವನ್ನು ಪಡೆಯುತ್ತಿದ್ದಾರೆ. ಈ ಯೋಜನೆಗಾಗಿ 2017-18 ನೇ ಸಾಲಿನಲ್ಲಿ ಸರ್ಕಾರವು 375 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿರುತ್ತದೆ.

ಭೂಚೇತನಾ
ರಾಸಾಯನಿಕ ಗೊಬ್ಬರಗಳ ಅಸಮರ್ಪಕ ಬಳಕೆಯಿಂದ ಬಹುಕಾಲದ ವರೆಗೆ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಕಷ್ಟವಾಗುವ ಕಾರಣದಿಂದಾಗಿ ಇದನ್ನು ಸರಿಪಡಿಸಲು ರಾಜ್ಯ ಸರ್ಕಾರವು ಅಂತರಾಷ್ಟ್ರೀಯ ಅರೆ ಉಷ್ಣ ವಲಯ ಬೆಳೆ ಸಂಶೋಧನಾ ಸಂಸ್ಥೆಯೊಂದಿಗೆ ಮಣ್ಣಿನ ಆರೋಗ್ಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಕ್ರಮಗಳನ್ನು ಕೈಗೊಂಡಿದೆ. ಮಣ್ಣಿನಲ್ಲಿ ಹೆಚ್ಚಿನ ಸತ್ವವನ್ನು ತುಂಬುಲು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಬೋರಾನ್, ಜಿಂಕ್, ಹಾಗೂ ಬಯೋಪೆಸ್ಟಿಸೈಡ್ ಗಳಾದ ರೈಜೋಬಿಯಂ ಮತ್ತು ಟ್ರೈಕೋಡೆರ್ಮಾಗಳನ್ನು ಹೆಚ್ಚಿನ ಸಬ್ಸಿಡಿ ದರದಲ್ಲಿ ರೈತ ಸಂಪರ್ಕ ಕೇಂದ್ರದ ಮೂಲಕ ರೈತ ಬಾಂಧವರಿಗೆ ವಿತರಿಸಲಾಗಿದೆ. ಈ ಯೋಜನೆಯಿಂದ ಇಲ್ಲಿಯವರೆಗೆ ಎಲ್ಲಾ ಜಿಲ್ಲೆಯ ಒಟ್ಟು 83 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲವಾಗಿದೆ.

ಸಾವಯವ ಭಾಗ್ಯ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಾವಯವ ಭಾಗ್ಯ’ ಯೋಜನೆಯನ್ನು 2013-14 ರಿಂದ ಪರಿಚಯಿಸಲಾಗಿದ್ದು ಇದನ್ನು ಹೋಬಳಿ ಮಟ್ಟಕ್ಕೂ ವಿಸ್ತರಿಸಲಾಗಿರುತ್ತದೆ.

ಇ-ಟೆಂಡರ್ ಮುಖಾಂತರ ಪಾರದರ್ಶಕವಾಗಿ ಆಯ್ಕೆ ಮಾಡಲಾದ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಯು ಅನುಷ್ಠಾನಗೊಂಡಿದ್ದು ಆಯ್ಕೆಯಾದ ಸರ್ಕಾರೇತರ ಸಂಸ್ಥೆಗಳಿಗೆ ಪ್ರತಿ ತಾಲೂಕಿನಲ್ಲಿ 100 ಹೆ. ಪ್ರದೇಶವನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

2013-14 ರಿಂದ ರಾಜ್ಯದ 566 ಹೋಬಳಿಗಳ 79 ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೊಂಡಿದ್ದು ಇಲ್ಲಿಯವರೆಗೆ 63,677 ಹೆಕ್ಟೇರ್ ಪ್ರದೇಶಕ್ಕೆ ಮತ್ತು 53,829 ಜನರ ರೈತರಿಗೆ ಇದರಿಂದ ಅನುಕೂಲವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ನೊಂದಾಯಿತರಾದ ರೈತರ ಗುಂಪುಗಳಿಗೆ ಪ್ರಮಾಣ ಪತ್ರದ ವ್ಯವಸ್ಥೆಯನ್ನು ಮಾಡಲಾಗಿದ್ದು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಪ್ರತಿವರ್ಷ ಸಾವಯವ ಪಂಡಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಕೃಷಿ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ರಫ್ತು ಮಾಡಲು ಸೂಕ್ತವಾದ ವ್ಯವಸ್ಥೆ ಹಾಗೂ ಇನ್ನಿತರೆ ಅನುಕೂಲಗಳನ್ನು ಈ ಯೋಜನೆಯಡಿಯಲ್ಲಿ ಮಾಡಲಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Agriculture