/ Animal Husbandry

ಪಶು ಸಂಗೋಪನಾ ಇಲಾಖೆ

ಗ್ರಾಮೀಣ ಆರ್ಥಿಕತೆಯಲ್ಲಿ ಪಶುಸಂಗೋಪನೆ ಪ್ರಮುಖ ಪಾತ್ರ ವಹಿಸುತ್ತದೆ. ರೈತರಿಗೆ ಕೃಷಿ ಆದಾಯವನ್ನು ಹೆಚ್ಚಿಸುವ ಕಾರಣಕ್ಕಾಗಿ ಹಾಲು ಉತ್ಪಾದನೆ, ಕುರಿ ಸಾಕಣೆ, ಮೇಕೆ ಸಾಕಣೆ, ಹಂದಿಸಾಕಣೆ ಮತ್ತು ಕುಕ್ಕೋಟದ್ಯಮದ ಚಟುವಟಿಕೆಗಳು ಪ್ರಮುಖ ಮೂಲ ಆದಾಯವಾಗಿದೆ.

ಪಶು ಸಂಗೋಪನೆ, ಸಂರಕ್ಷಣೆ, ಡೈರಿ ಅಭಿವೃದ್ಧಿ ಹಾಗೂ ಸುಧಾರಣೆ ಜಾನುವಾರು ಉತ್ಪಾದನೆ, ಡೈರಿ ಅಭಿವೃದ್ಧಿ ಮತ್ತು ಪಶು ವೈದ್ಯಕೀಯ ಸೇವೆಗಳಲ್ಲಿನ ನೀತಿಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಪಶು ಸಂಗೋಪನಾ ಇಲಾಖೆಯ ಹೊಣೆಗಾರಿಕೆಯಾಗಿದೆ.

ಪಶು ಸಂಗೋಪನಾ ಇಲಾಖೆಯ ಸಚಿವರಾದ ಶ್ರೀ ಎ. ಮಂಜು ಅವರು ಕೃಷಿ ಕುಟುಂಬದ ಬಂದವರಾಗಿದ್ದು ರಾಜ್ಯದ ರೈತರು ನಿರಂತರ ಬರಗಾಲದಿಂದ ಕಂಗೆಟ್ಟಿರುವುದನ್ನು ಅರಿತಿದ್ದಾರೆ. ಈ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ತಮ್ಮ ಇಲಾಖೆ ವತಿಯಿಂದ ಹಲವು ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆ ಮೂಲಕ ರೈತರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸಿ, ಅವರ ಆದಾಯ ಹೆಚ್ಚಿಸುವಂತೆ ಮಾಡಿದ್ದಾರೆ. ಇಲಾಖೆಯು ಸುಮಾರು ರೂ. 7,450 ಕೋಟಿಗಳನ್ನು ಖರ್ಚು ಮಾಡಿದ್ದು, 8.8 ಲಕ್ಷ ಜನರಿಗೆ ಇದರ ಪ್ರಯೋಜನಗಳು ಲಭ್ಯವಾಗಿದೆ.

“ಇಂದು ಕರ್ನಾಟಕವು ದೇಶದಲ್ಲೇ ಕ್ಷೀರ ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಕುರಿ ಮತ್ತು ಮೇಕೆಗಳ ಉತ್ಪಾದನೆಯಲ್ಲಿ 4ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 7ನೇ ಸ್ಥಾನ ಹಾಗೂ ಮಾಂಸ ಉತ್ಪಾದನೆಯಲ್ಲಿ 11ನೇ ಸ್ಥಾನದಲ್ಲಿದೆ” ಸಿದ್ದರಾಮಯ್ಯ, ಮುಖ್ಯಮಂತ್ರಿಗಳು.

Namma-Karntaka-Post-ENG-FOR-WEB

ಪಶುಸಂಗೋಪನಾ ಇಲಾಖೆವತಿಯಿಂದ ಕೈಗೊಳ್ಳಲಾದ ಹಲವು ಕಾರ್ಯಕ್ರಮಗಳು:

ಪಶುಭಾಗ್ಯ
ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗಮನದಲ್ಲಿರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜಾನುವಾರುಗಳು, ಮೇಕೆ, ಕುರಿ, ಹಂದಿ ಘಟಕಗಳನ್ನು ಸ್ಥಾಪಿಸಲು ನೆರವಾಗುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಜಾನುವಾರುಗಳನ್ನು ಕೊಳ್ಳಲು ಆರ್ಥಿಕ ಸಹಾಯ ಮಾಡಲಾಗುವುದು. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ಶೇ.50ರವರೆಗೆ ಧನಸಹಾಯ ಮತ್ತು ಸಣ್ಣ ಅತಿ ಸಣ್ಣ ರೈತರಿಗೆ ಶೇ. 25ರಷ್ಟು ಧನಸಹಾಯವನ್ನು ಸರ್ಕಾರ ನೀಡಲಿದೆ. ವಾಣಿಜ್ಯ ಬ್ಯಾಂಕುಗಳಿಂದ ಇವುಗಳನ್ನು ಖರೀದಿ ಮಾಡಲು 1.2 ಲಕ್ಷದವರೆಗೆ ಸಾಲವೂ ದೊರೆಯಲಿದೆ.

ಒಟ್ಟು ಹಂಚಿಕೆಯ ಶೇ. 30ರಷ್ಟು ಮಹಿಳೆಯರಿಗೇ ಮೀಸಲಾಗಿದೆ. ಸಹಕಾರಿ ಬ್ಯಾಂಕುಗಳಿಂದ ರೂ. 50,000ದವರೆಗೆ ಶೂನ್ಯ ಬಡ್ಡಿದರದಲ್ಲಿ ಜಾನುವಾರಗಳ ಪೋಷಣೆಗೆ ಹಾಗೂ ಇನ್ನಿತರೆ ನಿರ್ವಹಣೆಗೆ ಸಾಲ ಪಡೆಯಬಹುದಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ 5 ಜಾನುವಾರುಗಳವರೆಗೆ ವಿಮೆಯ ಪ್ರೀಮಿಯಂ ಪಾವತಿಸಲು ಸಹ ಸಬ್ಸಿಡಿ ನೀಡಲಾಗುತ್ತದೆ.

ಕ್ಷೀರಧಾರೆ
ಕ್ಷೀರ ಉತ್ಪಾದನೆ ಹೆಚ್ಚಿಸಲು ಮತ್ತು ಹೈನು ಉತ್ಪಾದನೆಯಲ್ಲ ತೊಡಗಿರುವ ರಾಜ್ಯದ ರೈತರಿಗೆ ಆರ್ಥಿಕವಾಗಿ ನೆರವಾಗಲು ‘ಕ್ಷೀರಧಾರೆ’ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯ ಮೂಲಕ ರಾಜ್ಯದ ಪ್ರತಿ ರೈತನೂ ಸಹಕಾರಿ ಸಂಸ್ಥೆಗೆ ಪೂರೈಸುವ ಪ್ರತಿ ಲೀಟರ್ ಹಾಲಿಗೆ ರೂ. 5/- ಪ್ರೋತ್ಸಾಹ ಧನ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಪಾರದರ್ಶಕತೆ ಕಾಪಾಡಲು ಪ್ರೋತ್ಸಾಹ ಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ.

ಕ್ಷೀರಭಾಗ್ಯ
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಯಾಲ್ಶಿಯಂ, ಪ್ರೋಟೀನ್ ಹಾಗೂ ಕೊಬ್ಬಿನಾಂಶಗಳು ಸಮೃದ್ಧವಾಗಿರುವ ಪೌಷ್ಟಿಕ ಹಾಲನ್ನು ವಿತರಿಸಲು 2013ರಲ್ಲಿ ಮುಖ್ಯಮಂತ್ರಿಗಳು ‘ಕ್ಷೀರ ಭಾಗ್ಯ’ ಯೋಜನೆಯನ್ನು ಜಾರಿಗೆ ತಂದರು. ಅಂಗನವಾಡಿಯಿಂದ 10 ನೇ ತರಗತಿಯವರೆಗೆ ಕಲಿಯುತ್ತಿರುವ ಮಕ್ಕಳು ವಾರದಲ್ಲಿ 5ದಿನ ಉಚಿತವಾಗಿ 150 ಎಂ.ಎಲ್. ಹಾಲು ಪಡೆಯಬಹುದು. ಸರ್ಕಾರ ಮತ್ತು ಸರ್ಕಾರದ ಸಹಾಯ ಪಡೆಯುತ್ತಿರುವ ಶಾಲೆಗಳ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳಿಯಿಂದ ಹಾಲು ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಅಮೃತ ಯೋಜನೆ
ವಿಧವೆಯರು ಮತ್ತು ನಿರಾಶ್ರಿತ ಮಹಿಳೆಯರು ಸ್ವಾವಲಂಬನೆ ಸಾಧಿಸಲು, ಪಶು ಸಂಗೋಪನಾ ಇಲಾಖೆಯು ಹಾಲು ನೀಡುವ 9,672 ಪ್ರಾಣಿಗಳನ್ನು ವಿತರಿಸಿದ್ದು, ಇದಕ್ಕಾಗಿ ರೂ. 28 ಕೋಟಿಗಳನ್ನು ಖರ್ಚು ಮಾಡಲಾಗಿದೆ.

karnataka-animal-husbandry-minister-a-manju-milks-445049-1

ಕುರಿಗಾಹಿ ಸುರಕ್ಷಾ ಯೋಜನೆ
ಜನಿಸಿದ 6 ತಿಂಗಳಲ್ಲಿ ಪ್ರತಿ ಕುರಿ ಅಥವಾ ಮೇಕೆ ಅಸಹಜವಾಗಿ ಪ್ರಮಾಣಿಕೃತ ಸಾಂಕ್ರಾಮಿಕ ರೋಗಗಳಿಗೆ ತುತ್ತಾದಲ್ಲಿ ರೂ. 2,500 ಹಾಗೂ 6 ತಿಂಗಳು ದಾಟಿದ ಪ್ರಾಣಿಗಳಿಗೆ ರೂ. 5,000ವನ್ನು ಪರಿಹಾರವಾಗಿ ನೀಡಲಾಗುತ್ತಿದೆ.

ಎಸ್ ಸಿ ಎಸ್ ಪಿ/ಟಿಎಸ್ ಪಿ
ಎಸ್.ಸಿ. ಎಸ್.ಟಿ. ಉಪಯೋಜನೆಗಳ ಅಡಿಯಲ್ಲಿ 16, 387 ಹಾಲು ಕರೆಯುವ ಪ್ರಾಣಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ರೂ. 100 ಕೋಟಿ ಖರ್ಚಿನಲ್ಲಿ ವಿತರಿಸಲಾಗಿದೆ.

ಕಾಲುಬಾಯಿ ರೋಗದ ವಿರುದ್ಧ ಲಸಿಕೆ
ಕಾಲುಬಾಯಿ ರೋಗದ ವ್ಯವಸ್ಥಿತ ನಿಯಂತ್ರಣಕ್ಕಾಗಿ ಜಾನುವಾರು, ಎಮ್ಮೆ, ಹಂದಿಗಳಿಗೆ ವರ್ಷದಲ್ಲಿ 2 ಬಾರಿ (ಆಗಸ್ಟ್- ಸೆಪ್ಟೆಂಬರ್ ಮತ್ತು ಫೆಬ್ರವರಿ-ಮಾರ್ಚಿ) ಲಸಿಕೆ ಹಾಕಲಾಗುತ್ತಿದೆ. ರಾಜ್ಯಾದ್ಯಂತ ಇರುವ ರೈತರಿಗೆ ಈ ಸೌಲಭ್ಯ ಉಚಿತವಾಗಿ ಲಭ್ಯವಿದೆ.

ವಿಮೆಮಾಡದ ಜಾನುವಾರುಗಳಿಗೆ ಪರಿಹಾರ
ರಾಜ್ಯದ ರೈತರು ಅನಿರೀಕ್ಷಿತ ಆರ್ಥಿಕ ಹೊಡೆತಕ್ಕೆ ತುತ್ತಾಗಬಾರದೆಂದು, ಇಲಾಖೆಯು ಪ್ರತಿ ಪ್ರಾಣಿಗೂ ರೂ. 10,000/- ಅಪಘಾತ ವಿಮೆ ಮಾಡದ ಜಾನುವಾರು/ಹಸು/ಎಮ್ಮೆಗೆ ನೀಡುತ್ತಿದೆ.

ಪಶುವೈದ್ಯ ಕೇಂದ್ರಗಳು
ರಾಜ್ಯದಲ್ಲಿನ ಎಲ್ಲಾ ಹಳ್ಳಿಗಳಿಗೆ ನುರಿತ ಮತ್ತು ಸುಧಾರಿತ ಪಶುವೈದ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ, ಇಲಾಖೆ 1,512 ಪ್ರಾಥಮಿಕ ಪಶು ಕೇಂದ್ರಗಳನ್ನು ಔಷಧಾಲಯಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಯೋಜನೆಯು ಅನುಷ್ಠಾನಗೊಂಡಲ್ಲಿ ಕರ್ನಾಟಕವು ದೇಶದಲ್ಲೇ ಪಶುವೈದ್ಯಕೀಯ ಪದವೀಧರರನ್ನು ಹೊಂದಿರುವ ಮೊದಲ ರಾಜ್ಯವಾಗಲಿದೆ.

ಲಸಿಕೆ ಉತ್ಪಾದನಾ ಘಟಕ
ಕಾಲುಬಾಯಿ ರೋಗದ (ಎಫ್ &ಎಂ) ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಇಲಾಖೆಯು ರೂ. 100 ಕೋಟಿಗಳಲ್ಲಿ ಲಸಿಕೆ ಉತ್ಪಾದನಾ ಘಟಕ ಸ್ಥಾಪಿಸುತ್ತಿದೆ.

ಆರೋಗ್ಯಕರ ಮಾಂಸದ ಮಳಿಗೆಗಳು
ಇಲಾಖೆಯು ಸಾರ್ವಜನಿಕರಿಗೆ ಸ್ವಚ್ಛ ಮತ್ತು ಆರೋಗ್ಯಕರ ಮಾಂಸವನ್ನು ಒದಗಿಸಲು, ಹಾಲಿ ಅಸ್ತಿತ್ವದಲ್ಲಿರುವ ಪ್ರತಿ ಮಾಂಸದ ಮಳಿಗೆಯನ್ನು 5 ಲಕ್ಷ ರೂಗಳಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಿದ್ದು ರೂ. 1.25 ಲಕ್ಷವನ್ನು ಸಹಾಯಧನ ನೀಡಲಿದೆ.

ಗೋದಾಮುಗಳು ಮತ್ತು ಸಂಸ್ಕರಣಾ ಘಟಕಗಳ ನಿರ್ಮಾಣ
ಉಣ್ಣೆಯ ಶೇಖರಣೆಗಾಗಿ 40 ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ. ಮೌಲ್ಯವರ್ಧಿತ ವೈಜ್ಞಾನಿಕ ಸಂಸ್ಕರಣೆ ಉತ್ಪನ್ನಗಳನ್ನು ತಯಾರಿಸಲು ನಾಲ್ಕು ಉಣ್ಣೆ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

ಪ್ರಮಾಣೀಕೃತ ಉತ್ಕೃಷ್ಟ ತಳಿ ಟಗರುಗಳ ಉತ್ಪಾದಕ ಘಟಕಗಳು
ಪಶು ಸಂಗೋಪನಾ ಇಲಾಖೆಯು ಪ್ರಮಾಣಿಕೃತ ಉತ್ಕೃಷ್ಟ ತಳಿ ಟಗರುಗಳು ಉತ್ಪಾದನೆಗಾಗಿ 10ಸಾವಿರ ಕ್ಕೂ ಹೆಚ್ಚಿನ ಗುಣಮಟ್ಟದ ಕುರಿಮರಿಗಳನ್ನು ‘ತಳಿಗೆ ತಕ್ಕಂತೆ’ ಮೂರು ತಿಂಗಳಿಂದ ವರ್ಷದವರೆಗೆ ಗುಣಮಟ್ಟದ ಆಹಾರ ಒದಗಿಸಲಾಗುವುದು.

ಹೈನುಗಾರಿಕೆ ಮತ್ತು ಪಶುಪಾಲನಾ ಡಿಪ್ಲೊಮಾ ಕಾಲೇಜ್
ಹೈನುಗಾರಿಕೆ ಮತ್ತು ಪಶುಪಾಲನೆಯಲ್ಲಿ ಕೌಶಲ್ಯ ಪೂರ್ಣ ಉದ್ಯೋಗಿಗಳ ಬೇಡಿಕೆ ಹೆಚ್ಚುತ್ತಿದ್ದು ಇಲಾಖೆಯು 3 ಡಿಪ್ಲೊಮಾ ಕಾಲೇಜ್ ಗಳನ್ನು ಸ್ಥಾಪಿಸಲು ಮುಂದಾಗಿದೆ. ಚಾಮರಾಜನಗರ, ಹಾಸನ ಮತ್ತು ಯಾದಗಿರಿಗಳಲ್ಲಿ ಈ ಕಾಲೇಜ್ ಗಳು ರೂ. 7.5 ಕೋಟಿಗಳಲ್ಲಿ ಸ್ಥಾಪನೆಯಾಗುತ್ತಿದೆ. ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸಲು ಸೇತುವೆಯಾಗಲಿದೆ.

ಆಧುನಿಕ ಕಸಾಯಿ ಖಾನೆ
ಪ್ರತಿ ಕಂದಾಯ ವಿಭಾಗದಲ್ಲೂ ರೂ. 7.25 ಕೋಟಿ ವೆಚ್ಚದಲ್ಲಿ ಕರ್ನಾಟಕ ಕುರಿ ಮತ್ತು ಮೇಕೆ ಸಂತಾನೋತ್ಪತ್ತಿ ಸಹಕಾರ ಸಂಘದ ವತಿಯಿಂದ ಆಧುನಿಕ ಕಸಾಯಿ ಖಾನೆಗಳನ್ನು ನಿರ್ಮಿಸುತ್ತಿದ್ದು ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.

ಬಳ್ಳಾರಿಯಲ್ಲಿ ಕುರಿ ಸಂತಾನೋತ್ಪತ್ತಿ ಕೇಂದ್ರ
ಅತ್ಯುತ್ತಮ ಮಾಂಸ ಹೊಂದಿರುವ ಕಾರಣ ಬಳ್ಳಾರಿಯ ಕುರಿಗಳು ಕರ್ನಾಟಕ ಮತ್ತು ನೆರೆ ಹೊರೆಯ ರಾಜ್ಯಗಳಲ್ಲಿ ಬೃಹತ್ ಬೇಡಿಕೆಯಲ್ಲಿವೆ. ರೈತರಿಗೆ ಈ ಮಾರುಕಟ್ಟೆಯನ್ನು ನಗದಾಗಿಸಿಕೊಳ್ಳಲು ಇಲಾಖೆಯು ಕರಿಕುಪ್ಪ ಗ್ರಾಮದಲ್ಲಿ ಬಳ್ಳಾರಿ ಕುರಿ ಸಂವರ್ಧನಾ ಕೇಂದ್ರವನ್ನು ರೂ. 1 ಕೋಟಿಯಲ್ಲಿ ನಿರ್ಮಿಸುತ್ತಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Animal-Husbandry