/ CM

ಬಳ್ಳಾರಿ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬಳ್ಳಾರಿ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

  1. 11,515 ಕೃಷಿ ಹೊಂಡಗಳನ್ನು ನಿರ್ಮಿಸುವ ಮೂಲಕ ಒಟ್ಟು 8,522.95 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು 7,811 ರೈತರಿಗೆ ಅನುಕೂಲವಾಗಿದೆ.
  2. 16 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು 19,106 ರೈತರಿಗೆ ಅನುಕೂಲವಾಗಿದೆ.
  3. ಒಟ್ಟು 31,382.43 ಲಕ್ಷ ರೂಪಾಯಿಗಳಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಗಿದ್ದು ಇದರಿಂದ 70,026 ರೈತರಿಗೆ ನಿಜಕ್ಕೂ ಬೆಂಬಲ ದೊರೆತಿದೆ.
  4. 1,263.11 ಕೋಟಿ ರೂ ಹೂಡಿಕೆಯಲ್ಲಿ 4,375 ಎಂಎಸ್ಎಂಇ ಗಳನ್ನು ಆರಂಭಿಸಿದ್ದು ಇದರಿಂದ 45,621 ಉದ್ಯೋಗಗಳು ನಿರ್ಮಾಣಗೊಂಡಿವೆ.

Bellary_Gok

  1. ಅನ್ನಭಾಗ್ಯ ಯೋಜನೆಯಡಿ 4,54,176 ಜನರು ಅನುಕೂಲ ಹೊಂದಿದ್ದು, 11,01,227 ವಿದ್ಯಾರ್ಥಿಗಳು ಕ್ಷೀರಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇನ್ನು 61,706 ಜನ ಗರ್ಭಿಣಿ ಮಹಿಳೆಯರು ಮಾತೃಪೂರ್ಣ ಯೋಜನೆಯಡಿ ಪ್ರಯೋಜನ ಹೊಂದಿದ್ದಾರೆ.
  2. ಬಡ ವಿದ್ಯಾರ್ಥಿಗಳಿಗಾಗಿ ಜಿಲ್ಲೆಗೆ 17 ಹೊಸ ಹಾಸ್ಟೆಲ್ ಹಾಗೂ 6 ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ.
  3. ಒಟ್ಟು 30 ಹೊಸ ಹೈ ಸ್ಕೂಲ್ ಗಳನ್ನು ಆರಂಭಿಸಿದ್ದು 1326 ಜನ ಬೋಧಕರನ್ನು ನೇಮಕ ಮಾಡಲಾಗಿದೆ.

Ballari-INCK

  1. 402 ಹೊಸ ಬಸ್ ಗಳನ್ನು ಪರಿಚಯಿಸಲಾಗಿದ್ದು 1,43,287 ವಿದ್ಯಾರ್ಥಿ ಬಸ್ ಪಾಸ್ ಗಳನ್ನು ವಿತರಿಸಲಾಗಿದೆ.
  2. ಜಿಲ್ಲೆಯಲ್ಲಿ ಒಟ್ಟು 2,651.02 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಿದ್ದು, 408 ಶುದ್ಧ ಕುಡಿಯುವ ನೀರಿನ ಕೇಂದ್ರಗಳನ್ನು ತೆರೆಯಲಾಗಿದ್ದು ಇವು ಸಾರ್ವಜನಿಕರಿಗೆ ವರದಾನವಾಗಿದೆ.

Ballari

  1. 5 ಹೊಸ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 14 ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರದ ವಿವಿಧ ಆರೋಗ್ಯ ಯೋಜನೆಯಡಿಯಲ್ಲಿ ಈವರೆಗೂ 2, 92, 964 ರೋಗಿಗಳು ಪ್ರಯೋಜನವನ್ನು ಪಡೆದಿದ್ದಾರೆ.
  2. ಒಟ್ಟು 271 ಕಿಮೀ ಯಷ್ಟು ತುಂಗ ಭದ್ರಾ ನಾಲೆಯನ್ನು ಆಧುನೀಕರಣಗೊಳಿಸಿದ್ದು ಇದು ಒಟ್ಟು 35,125 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ.

#NavaKarnatakaNirmana

1a-1

2a-1

3a-1

4a-1

5a-1

6a-1

7a-1

8a

9a

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ