/ CM

ಬೆಳಗಾವಿ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬೆಳಗಾವಿ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಜನರ ಬಹುದಿನಗಳ ಬೇಡಿಕೆಯಂತೆ “ಚೆನ್ನಮ್ಮನ ಕಿತ್ತೂರು” ತಾಲೂಕು ರಚನೆ- ಮಿನಿವಿಧಾನ ಸೌಧ ನಿರ್ಮಾಣಕ್ಕೆ 10 ಕೋಟಿ ಅನುದಾನ.
 2. ಮೂರು ಹೊಸ ತಾಲೂಕುಗಳ ಘೋಷಣೆ – ಎ) ಮೂಡಲಗಿ ಬಿ) ಕಾಗವಾಡ ಸಿ) ನಿಪ್ಪಾಣಿ
 3. ರೈತರ ಒಂದು ಸಾವಿರ ಕೋಟಿ ರೂಪಾಯಿ ಸಾಲಮನ್ನಾ. ಬೆಳಗಾವಿ ಜಿಲ್ಲೆಯು ರಾಜ್ಯದ ಪ್ರಮುಖ ಮತ್ತು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಮಲೆನಾಡು, ಅರೆ ಮಲೆನಾಡು ಮತ್ತು ಒಣ ಪ್ರದೇಶಗಳನ್ನು ಹೊಂದಿದ್ದು, ಒಟ್ಟು 10 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹೊಂದಿರುತ್ತದೆ. ಪ್ರಸ್ತುತ ಸರ್ಕಾರವು ಬೆಳಗಾವಿ ಜಿಲ್ಲೆಯ ಒಟ್ಟು 3,27,526 ರೈತರ ಒಟ್ಟಾರೆ 1,025 ಕೋಟಿ ರೂ. ಸಾಲ ಮನ್ನಾ ಮಾಡಿರುತ್ತದೆ.
 4. ಬೆಳಗಾವಿ ಜಿಲ್ಲೆಯ ರೈತರಿಗೆ 865 ಕೋಟಿ ಕೃಷಿ ಸಾಲ. ಬೆಳಗಾವಿ ಜಿಲ್ಲೆಯಲ್ಲಿ 2017 ರ ಅಕ್ಟೋಬರ್ ಅಂತ್ಯಕ್ಕೆ 2,61,342 ರೈತರಿಗೆ 865 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿರುತ್ತದೆ. ಇದುವರೆಗೆ ಜಿಲ್ಲೆಯ ಒಟ್ಟು 3.35 ಲಕ್ಷ ರೈತರಿಗೆ ರೂಪೆ ಕಾರ್ಡ್ ವಿತರಣೆ ಮಾಡಲಾಗಿದೆ.
 5. ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕುಟುಂಬಗಳಿಗೆ “ಅನ್ನಭಾಗ್ಯ” ಯೋಜನೆಯ ಲಾಭ. ಸುಮಾರು 9 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ.

Belagavi-INCK

 1. ವಸತಿ ಯೋಜನೆ - ಬಸವ ವಸತಿ ಯೋಜನೆ 2013- 14 ನೇ ಸಾಲಿನಲ್ಲಿ 7,985 ಮನೆ ನಿರ್ಮಾಣ. 2015-16ನೇ ಸಾಲಿನಲ್ಲಿ 10,525 ಮನೆ ನಿರ್ಮಾಣ.
 2. ಕಿತ್ತೂರು ಮತ್ತು ಬೈಲುಹೊಂಗಲ ಭಾಗದ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ 248 ಕೋಟಿ ಮೊತ್ತದ ಯೋಜನಾ ವರದಿಗೆ ಸಂಪುಟದ ಸಮ್ಮತಿ.

Belagaavi_GoK

 1. ಗೋಕಾಕ ಪಟ್ಟಣದಲ್ಲಿ ಅಂದಾಜು 18.75 ಕೋಟಿ ರೂ.ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ.
 2. ಬೆಳಗಾವಿ ನಗರದ ಹೈಟೆಕ್ ಬಸ್‍ನಿಲ್ದಾಣ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ನೂತನ ಬಸ್ ನಿಲ್ದಾಣವು 30 ಫ್ಲ್ಯಾಟ್‍ಫಾರ್ಮ್‍ಗಳು, ಉಪಾಹಾರ ಗೃಹ, ಕುಡಿಯುವ ನೀರಿನ ಸೌಲಭ್ಯ, ನವೀನ ಮಾದರಿಯ ಶೌಚಾಲಯಗಳು, ವಿಶ್ರಾಂತಿ ಕೊಠಡಿಗಳು, ವಾಣಿಜ್ಯ ಮಳಿಗೆಗಳನ್ನು ಹೊಂದಲಿದೆ.

Belgavi

 1. “ರಾಣಿಚೆನ್ನಮ್ಮ ಅಧ್ಯಯನ ಪೀಠ” ಸ್ಥಾಪನೆ. ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ “ರಾಣಿ ಚೆನ್ನಮ್ಮ ಅಧ್ಯಯನ ಪೀಠ” ಹಾಗೂ “ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ಪೀಠ” ಸ್ಥಾಪಿಸಲಾಗಿದೆ. ವೀರ ರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಸಮಗ್ರ ಶೋಧ, ದಾಖಲೀಕರಣ, ಸಾಂಸ್ಕøತಿಕ ಅಧ್ಯಯನ, ಜಾನಪದೀಯ ಅಧ್ಯಯನ, ಆಡಳಿತಾತ್ಮಕ ಅಧ್ಯಯನ, ಜನಾಂಗೀಯ ಅಧ್ಯಯನ ಹಾಗೂ ಸಂಶೋಧನೆಗಳನ್ನು ತಲಸ್ಪರ್ಶಿಯಾಗಿ ಕೈಗೊಳ್ಳಲು ಈ ಅಧ್ಯಯನ ಪೀಠಗಳು ಸಹಕಾರಿಯಾಗಲಿವೆ. ರಾಣಿ ಚೆನ್ನಮ್ಮ ಅಧ್ಯಯನ ಪೀಠಕ್ಕಾಗಿ 2 ಕೋಟಿ ರೂಪಾಯಿ ನಿಧಿಯನ್ನು ಸರ್ಕಾರ ಒದಗಿಸಲಿದೆ.
 2. ಕರ್ನಾಟಕದ ಸುಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ತಯಾರಿಸಲಾಗಿರುವ ಪರಿಷ್ಕøತ ಮಾಸ್ಟರ್ ಪ್ಲ್ಯಾನ್ ಅನುಷ್ಠಾನಕ್ಕೆ ಪ್ರಸ್ತುತ ಸರ್ಕಾರವು ಒಟ್ಟು 137 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದು ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ವಾರ್ಷಿಕ ಅಂದಾಜು ಒಂದು ಕೋಟಿ ಜನರು ಯಲ್ಲಮ್ಮ ದೇವಿಯ ದರ್ಶನ ಪಡೆಯುತ್ತಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ 137 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ಸಮುದಾಯ ಶವಚಾಲಯ, ಪಾರ್ಕಿಂಗ್, ರಸ್ತೆ ಹಾಗೂ ಅನ್ನ ದಾಸೊಹ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

#NavaKarnatakaNirmana

DRi8frCU8AAU966-1

WhatsApp-Image-2017-12-21-at-3.28.42-PM--1-

DRjKRoCVoAAIERg-1

WhatsApp-Image-2017-12-21-at-3.28.42-PM

WhatsApp-Image-2017-12-21-at-3.28.41-PM

WhatsApp-Image-2017-12-21-at-3.28.40-PM--1-

WhatsApp-Image-2017-12-21-at-3.28.39-PM

DRpAr5AUMAAna8h

DRpccT0UQAAOIsy

DRpltqQV4AA5-xG

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ