/ achievements

ಬಿ.ಎಂ.ಟಿ.ಸಿ.

ಇಡೀ ದೇಶದಲ್ಲೇ ಅತ್ಯುತ್ತಮವಾದ ಸಾರಿಗೆ ಸೌಲಭ್ಯ ವ್ಯವಸ್ಥೆಯನ್ನು ಹೊಂದಿರುವ ಸರ್ಕಾರೀ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಪ್ರತಿದಿನ 50 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರ ಪ್ರಯಾಣಕ್ಕೆ ನೆರವಾಗಿದೆ. ಇದಕ್ಕಾಗಿ ಸಾರಿಗೆ ಸಂಸ್ಥೆಯು 6323 ಬಸ್ ಗಳನ್ನು ಏರ್ಪಡಿಸಿದ್ದು 74600 ಬಾರಿ ಸಂಚಾರ ಗೊಳ್ಳುತ್ತಿದೆ. ಬಿಎಂಟಿಸಿ ಸಂಸ್ಥೆಯ ದೈನಂದಿನ ಆದಾಯವು 5.18 ಕೋಟಿ ರೂಪಾಯಿಗಳಾಗಿದ್ದು ಒಟ್ಟು 11.85 ಲಕ್ಷ ಕಿಲೋಮೀಟರ್ ಗಳಷ್ಟು ಸಂಚರಿಸುತ್ತದೆ.

ಕಳೆದ 4 ವರ್ಷಗಳಲ್ಲಿ ಒಟ್ಟು 1701 ಹೊಸ ಬಸ್ ಗಳನ್ನು ಪರಿಚಯಿಸಲಾಗಿದ್ದು 5,492 ಜನ ನೌಕರರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ನಮ್ಮ ಮೆಟ್ರೋ ಸೇವೆಗಳಿಗಾಗಿ 156 ಮೆಟ್ರೋ ಬಸ್ ಗಳನ್ನೂ ಸಹ ಬಿಎಂಟಿಸಿ ಸಂಸ್ಥೆಯು ಪರಿಚಯಿಸಿದೆ.

ಗ್ರಾಹಕ ನಿರ್ವಹಣಾ ಕೇಂದ್ರ (ಸಿ ಆರ್ ಎಂ)
ಬೆಂಗಳೂರಿನ ಎಲ್ಲಾ ಸ್ಥಳಗಳಿಗೂ ಸಂಚರಿಸುವ ಬಿಎಂಟಿಸಿ ಬಸ್ ಗಳು ಸೂಕ್ತವಾದ ನಿಲ್ದಾಣಗಳನ್ನು ಹೊಂದಿವೆ. ಇಷ್ಟೇ ಅಲ್ಲದೇ ಗ್ರಾಹಕರ ಅನುಕೂಲಕ್ಕಾಗಿ ದೂರು ಕೇಂದ್ರವನ್ನು ಸ್ಥಾಪಿಸಲಾಗಿದ್ದು ವಾಹನವನ್ನು ಸಂಚರಿಸುವ ಚಾಲಕ ಮತ್ತು ನಿರ್ವಾಹಕರಿಂದ ತೊಂದರೆಯಾದಲ್ಲಿ ಅವರ ಮೇಲೆ ದೂರನ್ನು ನೀಡಬಹುದಾಗಿದೆ.

ಬಿಎಂಟಿಸಿ ಆ್ಯಪ್
ಮೊಬೈಲ್ ಸ್ನೇಹಿಯಾಗಿರುವ ವೆಬ್ ಸೈಟ್ ನೊಂದಿಗೆ 24 ಗಂಟೆಗಳ ಸಹಾಯವಾಣಿಯನ್ನು (1800-425-1663) ಹೊಂದಿರುವ ಬಿಎಂಟಿಸಿ ಸಂಸ್ಥೆಯು 2016 ರಲ್ಲಿ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದೆ. ಇದನ್ನು ಬಳಸಿ ನಗರದೊಳಗೆ ಟ್ರಾಫಿಕ್ ಹಾಗೂ ಇನ್ನಿತರೆ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. ಐ ಫೋನ್ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರು ಈ ಆ್ಯಪ್ ನಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಸ್ಮಾರ್ಟ್ ಕಾರ್ಡ್ ಗಳು
ನಗದು ರಹಿತ ವ್ಯವಹಾರಕ್ಕಾಗಿ ಬಿಎಂಟಿಸಿ ಯವರು ಆ್ಯಕ್ಸಿಸ್ ಬ್ಯಾಂಕ್ ನೊಂದಿಗೆ ಸಹಯೋಗವನ್ನು ಹೊಂದಿದ್ದು ಸ್ಮಾರ್ಟ್ ಕಾರ್ಡ್ ನಲ್ಲಿ ಹಣತುಂಬಿಕೊಂಡು ಪ್ರಯಾಣದ ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಇದು ಸಾರ್ವಜನಿಕರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು ಇದರ ವಿತರಣೆ ಪ್ರಕ್ರಿಯೆಯೂ ಇನ್ನು ಆರಂಭಗೊಳ್ಳಲಿದೆ.