/ CM

ಚಿಕ್ಕಬಳ್ಳಾಪುರ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಚಿಕ್ಕಬಳ್ಳಾಪುರ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಜಿಲ್ಲೆಯಲ್ಲಿ 6 ತಾಲ್ಲೂಕುಗಳಿದ್ದು, ಈ ಪೈಕಿ ಗುಡಿಬಂಡೆ ತಾಲ್ಲೂಕನ್ನು ಪೋಡಿಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು, ಉಳಿಕೆ 5 ತಾಲ್ಲೂಕುಗಳಲ್ಲಿ 9 ಗ್ರಾಮಗಳು ದುರಸ್ತಿಗೆ ಕಾರ್ಯದಲ್ಲಿದೆ.
 2. ಶೇ.99 ರಷ್ಟು ಪಿಂಚಣಿ ಫಲಾನುಭವಿಗಳ ಆಧಾರ್ ಸಂಖ್ಯೆಗಳನ್ನು ಪಡೆದು ಜೋಡಿಸಲಾಗಿದೆ.
 3. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೀಘ್ರದಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗುತ್ತಿದೆ.

Chikkaballapura

 1. ಶೇ.99 ರಷ್ಟು ಫಲಾನುಭವಿಗಳಿಗೆ ಪರಿಹಾರ ತಂತ್ರಾಂಶದ ಮೂಲಕ ಫಲಾನುಭವಿಗಳಿಗೆ ನೇರವಾಗಿ ಬೆಳೆ ಪರಿಹಾರವನ್ನು ಸಂದಾಯ ಮಾಡಲಾಗಿದೆ.
 2. ಗೌರಿಬಿದನೂರು ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಭೂಮಿಯನ್ನು ಕಾಯ್ದಿರಿಸಲಾಗಿದ್ದು, ಸ್ಮಶಾನಯುಕ್ತ ತಾಲ್ಲೂಕು ಆಗಿರುತ್ತದೆ.
 3. ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ 7,252 ಬಸವ ವಸತಿ ಮನೆಗಳನ್ನು ನಿರ್ಮಿಸಲಾಗಿದೆ.

Chikkaballapura-INCK

 1. ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಗುಡಿಬಂಡೆ, ಶಿಡ್ಲಘಟ್ಟ, ಗೌರಿಬಿದನೂರು ತಾಲ್ಲೂಕನ್ನು ಬಯಲು ಮುಕ್ತ ತಾಲ್ಲೂಕುಗಳನ್ನಾಗಿ ಘೋಷಿಸಲಾಗಿದೆ.
 2. ತೋಟಗಾರಿಕೆ ಇಲಾಖೆಯಿಂದ ಆಲೂಗಡ್ಡೆ ಬೀಜ ಉತ್ಪಾದನಾ ಕೇಂದ್ರ ಸ್ಥಾಪಿಸಲಾಗಿದ್ದು ಇದರಿಂದ ಬಹಳಷ್ಟು ರೈತರಿಗೆ ಅನುಕೂಲವಾಗಿದೆ.
 3. ಗೌರಿಬಿದನೂರು ತಾಲ್ಲೂಕಿನ ವೈಜುಕೂರಹಳ್ಳಿ ಗ್ರಾಮವನ್ನು ಹೊಗೆಮುಕ್ತ ಗ್ರಾಮವೆಂದು ಘೋಷಣೆ ಮಾಡಲಾಗಿದೆ.

C-1

 1. ಜಿಲ್ಲೆಯಲ್ಲಿ 3 ರೈತ ಮಾರಾಟ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
 2. ಚಿಂತಾಮಣಿ ತಾಲ್ಲೂಕು ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನದಿಂದಾಗಿ 2015-16ನೇ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ದೊರಕಿದೆ.
 3. ಜಿಲ್ಲೆಯಲ್ಲಿ ಒಟ್ಟು 204 ಹೊಸ ಕಂದಾಯ ಗ್ರಾಮಗಳನ್ನು ಸೃಜಿಸಲು ತೀರ್ಮಾನಿಸಿದ್ದು, ಒಟ್ಟು 100 ಗ್ರಾಮಗಳನ್ನು ಅಂತಿಮ ಅಧಿಸೂಚನೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಈ ಪೈಕಿ ಈಗಾಗಲೇ 63 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ.

#NavaKarnatakaNirmana

WhatsApp-Image-2017-12-29-at-3.01.20-PM

WhatsApp-Image-2017-12-29-at-3.01.17-PM

WhatsApp-Image-2017-12-29-at-3.01.18-PM

WhatsApp-Image-2017-12-29-at-3.01.19-PM

WhatsApp-Image-2017-12-29-at-3.01.19-PM--1-

WhatsApp-Image-2017-12-29-at-3.01.17-PM--1-

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ