/ CM

ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಚಿಕ್ಕಮಗಳೂರು ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಚಿಕ್ಕಮಗಳೂರು ತಾಲ್ಲೂಕಿನ ಹಿರೇ ಕೊಳಲೆ ಹಾಗೂ ಚೆಕ್ ಡ್ಯಾಂಗಳ ನಿರ್ಮಾಣಕ್ಕಾಗಿ ನಬಾರ್ಡ್ ಯೋಜನೆಯಡಿ ರೂ.171 ಲಕ್ಷ ಒದಗಿಸಲಾಗಿದೆ. ರಾಜ್ಯ ವಲಯದಲ್ಲಿ 1532 ಲಕ್ಷ ಅನುದಾನವನ್ನು ಒದಗಿಸಲಾಗಿದೆ.
 2. ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ 25 ಕೋಟಿ ರೂಗಳ ಅನುದಾನ ಒದಗಿಸಲಾಗಿದೆ.
 3. ಬಾಳೆಹೊನ್ನೂರು ಹತ್ತಿರ ಸೇತುವೆ ನಿರ್ಮಾಣ ಕಾಮಗಾರಿಗೆ (ಎನ್.ಹೆಚ್. 27 ಭದ್ರಾ ನದಿಗೆ) ರೂ. 1279 ಲಕ್ಷ ಮಂಜೂರು ಮಾಡಲಾಗಿದೆ.
 4. ಕೊಪ್ಪ ತಾಲ್ಲೂಕು ಬಾಳಗಡಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣವು ಆಗಿದ್ದಯ ಇದಕ್ಕಾಗಿ 200 ಲಕ್ಷ. ರೂಗಳನ್ನು ವೆಚ್ಚ ಮಾಡಲಾಗಿದೆ.

Chikkamagaluru

 1. ಚಿಕ್ಕಮಗಳೂರು ಜಿಲ್ಲೆಗೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಲಾಗಿರುತ್ತದ್ದು ರಕ್ತ ವಿದಳನ ಘಟಕವೂ ಸಹ ಮಂಜೂರಾಗಿರುತ್ತದೆ.
 2. ತರೀಕೆರೆಗೆ ನೂತನ ಕಾರಗೃಹವನ್ನು ಮಂಜೂರು ಮಾಡಲಾಗಿದ್ದು, ರೂ. 50 ಕೋಟಿ ಮೌಲ್ಯದ ವಿಶೇಷ ರಸ್ತೆ ಪ್ಯಾಕೇಜ್ ಘೋಷಿಸಲಾಗಿದೆ.
 3. ಜಿಲ್ಲೆಗೆ ನಾಲ್ಕು ವರ್ಷಗಳಲ್ಲಿ 163 ಅಂಬೇಡ್ಕರ್ ಭವನ, 76 ಬಾಬು ಜಗಜೀವನರಾಮ್ ಭವನಗಳು ಮಂಜೂರು ಆಗಿದ್ದು, ಈ ಭವನಗಳ ನಿರ್ಮಾಣಕ್ಕೆ ರೂ. 23 ಕೋಟಿ ಅನುದಾನ ಒದಗಿಸಲಾಗಿದೆ.
 4. ಮಾತೃಪೂರ್ಣ ಯೋಜನೆಯಡಿಯಲ್ಲಿ 13,920 ಫಲಾನುಭವಿಗಳು ಅಂಗನವಾಡಿಯಲ್ಲಿ ನೊಂದಾಯಿಸಿಕೊಂಡಿದ್ದು, ಇವರಲ್ಲಿ 8626 ಗರ್ಬಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಹಾಜರಾಗಿ ಪೌಷ್ಠಿಕ ಆಹಾರವನ್ನು ಸೇವಿಸುತ್ತಿದ್ದಾರೆ.

Chikmagaluru-INCK

 1. 16 ರಿಂದ 18 ವರ್ಷ ವಯಸ್ಸಿನ 1808 ಕಿಶೋರಿಯರನ್ನು ವೃತ್ತಿಪರ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಗುರುತಿಸಲಾಗಿದೆ. ಇದಕ್ಕಾಗಿ ರೂ. 246.42 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ.
 2. ಕೃಷಿ ಭಾಗ್ಯ: ಕೃಷಿ ಭಾಗ್ಯ ಯೋಜನೆ ಅಡಿ ಜಿಲ್ಲೆಗೆ 1285 ಕೃಷಿ ಹೊಂಡಗಳನ್ನು 28 ಪಾಲಿ ಹೌಸ್‍ಗಳ ನಿರ್ಮಾಣಕ್ಕೆ ರೂ. 1077.13 ಲಕ್ಷ ವೆಚ್ಚ ಮಾಡಲಾಗಿದೆ.
 3. 50 ರಿಂದ 100 ಹಾಸಿಗೆಗಳಿಗೆ ಉನ್ನತೀಕರಿಸಿದ ಕೊಪ್ಪ ತಾಲ್ಲೂಕು ಮಟ್ಟದ ಆಸ್ಪತ್ರೆಯನ್ನು ಕಟ್ಟಡಕ್ಕೆ ರೂ. 313 ಲಕ್ಷ. ವೆಚ್ಚ ಮಾಡಲಾಗಿದೆ.

Chickmagalur

 1. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಎ.ಎ.ವೈ, ಬಿ.ಪಿ.ಎಲ್, ಎ.ಪಿ.ಎಲ್ ಸೇರಿದಂತೆ ಒಟ್ಟು 2,86,474 ಪಡಿತರ ಚೀಟಿದಾರರಿದ್ದು, ಇದಕ್ಕಾಗಿ ಒಟ್ಟು ರೂ. 1600 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ. 12,597 ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲಾಗಿದೆ.
 2. ಜಿಲ್ಲೆಯಲ್ಲಿ ಹನಿ ನೀರಾವರಿಗಾಗಿ ರೂ. 784.14 ಲಕ್ಷ ವೆಚ್ಚ ಮಾಡಲಾಗಿದ್ದು ನೀರಾವರಿ ಅಭಿವೃದ್ಧಿಗೆ ಮಹತ್ತರವಾದ ಕ್ರಮಗಳನ್ನ ಕೈಗೊಳ್ಳಲಾಗಿದೆ.
 3. ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಇದಾಗಿದ್ದು ಈ ಯೋಜನೆಗೆ ರೂ. 12 ಕೋಟಿ ಅನುದಾನ ಒದಗಿಸಲಾಗಿದೆ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

#NavaKarnatakaNirmana

ಈ ವೀಡಿಯೋ ವೀಕ್ಷಿಸಿ

DS7wzs5V4AAy_C7

DSwaFVnVQAECf0I

DSwRO3WUMAIASp7

DSx7ou8UMAEZfgq

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ