/ CM

ಚಿತ್ರದುರ್ಗ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಚಿತ್ರದುರ್ಗ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಜನರು ವಲಸೆ ಹೋಗದಂತೆ ಉದ್ಯೋಗ ಖಾತರಿಯಲ್ಲಿ 4,00,923 ಕುಟುಂಬಗಳಿಗೆ ಉದ್ಯೋಗ ನೀಡಿ ಇದಕ್ಕಾಗಿ 780 ಕೋಟಿ ವೆಚ್ಚ ಮಾಡಲಾಗಿದೆ. ಮತ್ತು ಜಾನುವಾರುಗಳಿಗೆ ಮೇವು ಬ್ಯಾಂಕ್ ಮೂಲಕ 6,500 ಮೆಟ್ರಿಕ್ ಟನ್ ಮೇವು ಖರೀದಿ ಮಾಡಿದ್ದು ಇದಕ್ಕಾಗಿ 29 ಕೋಟಿ ರೂ ವೆಚ್ಚಮಾಡಲಾಗಿದೆ.
 2. ಬರಗಾಲದಿಂದ ಅಂತರ್ಜಲ ಮಟ್ಟ ಸಂಪೂರ್ಣ ಬತ್ತಿ ಹೋಗಿದ್ದು ಆ ಸಂದರ್ಭದಲ್ಲಿ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪೂರೈಕೆ ಮಾಡಿ ಜನರಿಗೆ ನೀರನ್ನು ಒದಗಿಸಲಾಗಿದ್ದು ಇದಕ್ಕಾಗಿ 25 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
 3. ಜಿಲ್ಲೆಯಲ್ಲಿ ಬೆಳೆನಷ್ಟ ಉಂಟಾದ ರೈತರಿಗೆ ಇನ್‍ಪುಟ್ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ. ಸುಮಾರು 2 ಲಕ್ಷ ರೈತರು ಇದರಿಂದ ಲಾಭ ಪಡೆದಿದ್ದು 110.42 ಕೋಟಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ.
 4. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಹೊಸ ಹಾಸ್ಟೆಲ್‍ಗಳನ್ನು, ವಸತಿ ಶಾಲೆಗಳನ್ನು ತೆರೆಯಲಾಗಿದೆ. 2,51,058 ವಿದ್ಯಾರ್ಥಿಗಳು ಈ ಹಾಸ್ಟೆಲ್ ಸೌಲಭ್ಯವನ್ನು ಪಡೆದಿದ್ದು ಇದಕ್ಕಾಗಿ 58.25 ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ.
 5. ಸುಡುಗಾಡು ಸಿದ್ದರ ಕಾಲೋನಿ; ಹೊಳಲ್ಕೆರೆ ತಾ; ರಾಮಗಿರಿ ಮತ್ತು ಚಿತ್ರಹಳ್ಳಿ ಸಮೀಪ ಅತ್ಯಾಧುನಿಕ ಬಡಾವಣೆಗಳನ್ನಾಗಿ ವಿಂಗಡಿಸಿ ಉಚಿತವಾಗಿ ನಿವೇಶನ ಮತ್ತು ಮನೆ ನಿರ್ಮಾಣ ಮಾಡುವ ಯೋಜನೆಯಡಿಯಲ್ಲಿ ಬಡಾವಣೆ ವಿಂಗಡಣೆಗಾಗಿ 4.98 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

Chitradurga_GoK

 1. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೊಳಲ್ಕೆರೆಯಲ್ಲಿ 3.34 ಕೋಟಿ ವೆಚ್ಚದಲ್ಲಿ ಸರ್ಕಾರಿ ಹಿರಿಯ ಮಾದರಿ ಕನ್ನಡ ಮತ್ತು ಉರ್ದು ಶಾಲೆಗೆ ಅತ್ಯಾಧುನಿಕ ಹೈಟೆಕ್ ಕಟ್ಟಡವನ್ನು ನಿರ್ಮಿಸಲಾಗಿದೆ.
 2. ಡಾ. ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‍ರಾಂ ಭವನ, ವಾಲ್ಮೀಕಿ ಭವನಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ 9,957 ಲಕ್ಷವನ್ನು ಬಿಡುಗಡೆ ಮಾಡಲಾಗಿದೆ.
 3. ಭದ್ರಾ ಮೇಲ್ದಂಡೆ ಯೋಜನೆಯಡಿ ಎಂಟು ಪ್ಯಾಕೇಜ್ ಕಾಮಗಾರಿ ನಡೆಯುತ್ತಿದೆ. 12,395 ಕೋಟಿ ರೂಪಾಯಿಯ ಯೋಜನೆ ಇದಾಗಿದ್ದು, ಚಿತ್ರದುರ್ಗ ಶಾಖಾ ಕಾಲುವೆ, ತುಮಕೂರು ಶಾಖಾ ಕಾಲುವೆ ಸರ್ವೆ ಕೆಲಸ, ಟನಲ್ ಕೆಲಸ ಸೇರಿದಂತೆ ಅನೇಕ ಕಡೆ ಕಾಮಗಾರಿ ಸಾಗಿದ್ದು ಇಲ್ಲಿಯವರೆಗೆ 1,986, ಕೋಟಿ ರೂಗಳನ್ನು ವೆಚ್ಚ ಮಾಡಲಾಗಿದೆ.
 4. ಮಾನ್ಯ ಮುಖ್ಯಮಂತ್ರಿಗಳು ನಾಲ್ಕು ವರ್ಷದ ಸಾಧನಾ ಸಮಾವೇಶದ ವೇಳೆ ಚಿತ್ರದುರ್ಗ ನಗರದಲ್ಲಿನ ರಸ್ತೆಗಳ ಅಭಿವೃದ್ದಿಗಾಗಿ 25 ಕೋಟಿ ಅನುದಾನ ನೀಡಿರುತ್ತಾರೆ.

Chitradurga-INCK-1

 1. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಕೆ.ಎಸ್.ಆರ್.ಟಿ.ಸಿಯಿಂದ ಬಸ್ ನಿಲ್ದಾಣ ಮತ್ತು ಘಟಕವನ್ನು ಸ್ಥಾಪನೆ ಮಾಡಿ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿದೆ. ಇದಕ್ಕಾಗಿ ಸುಮಾರು 10 ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡಲಾಗಿದೆ.
 2. ಚಳ್ಳಕೆರೆ ಬಸ್ ನಿಲ್ದಾಣ ಮತ್ತು ಘಟಕ ಸ್ಥಾಪನೆ ಮಾಡಲಾಗಿದ್ದು ಇದಕ್ಕಾಗಿ 17.5 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
 3. ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಹಿರಿಯೂರು ತಾ; ಐಮಂಗಲ, ಜವನಗೊಂಡನಹಳ್ಳಿ, ಸಿರಿಗೆರೆ- ಭರಮಸಾಗರ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಹೊಸದುರ್ಗ ತಾಲ್ಲೂಕಿಗೆ ಭದ್ರಾದಿಂದ ನೀರು ನೀಡಲು 300 ಕೋಟಿ ರೂಗಳ ಯೋಜನೆಯನ್ನು ತಯಾರಿಸಲಾಗಿದೆ.

C

 1. ಕೃಷಿ ಭಾಗ್ಯದಡಿ 5,174, ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗಿದ್ದು 269 ಪಾಲಿಹೌಸ್ ನಿರ್ಮಿಸಲಾಗಿದೆ. ಇದರಿಂದ ಒಟ್ಟು 5,443, ರೈತರು ಫಲಾನುಭವಿಗಳಾಗಿದೆ. ಕೃಷಿಯಂತ್ರ ಧಾರೆಯಡಿ 17 ಬಾಡಿಗೆ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು 627.43 ಲಕ್ಷ ವಿನಿಯೋಗ ಧನವನ್ನು ಸರ್ಕಾರದಿಂದ ನೀಡಲಾಗಿದೆ.
 2. ಜಿಲ್ಲೆಯಲ್ಲಿ ಈವರೆಗೆ 563 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದ್ದು ಇದರಿಂದ ಸಾವಿರಾರು ಜನ ಸಾರ್ವಜನಿಕರಿಗೆ ಮಕ್ಕಳಿಗೆ ಅನುಕೂಲವಾಗಿದೆ.

#NavaKarnatakaNirmana

WhatsApp-Image-2017-12-27-at-4.07.10-PM--1-

WhatsApp-Image-2017-12-27-at-4.07.10-PM

WhatsApp-Image-2017-12-27-at-4.07.11-PM

WhatsApp-Image-2017-12-27-at-4.07.08-PM

WhatsApp-Image-2017-12-27-at-4.07.09-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ