/ CM

ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

  1. ಕೃಷಿ ಭಾಗ್ಯ ಯೋಜನೆಯಡಿಯಲ್ಲಿ 175 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದ್ದು, ಕೃಷಿ ಯಂತ್ರಧಾರೆ ಯೋಜನೆಡಿಯಲ್ಲಿ 11 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಇದರಿಂದ 37,703 ರೈತರಿಗೆ ಅನುಕೂಲವಾಗಿದೆ.
  2. ಇನ್ನು ಬರದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ರೈತರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿ, ಸಿದ್ದರಾಮಯ್ಯ ಸರ್ಕಾರವು ಜಿಲ್ಲೆಯ ರೂ.298.64 ಕೋಟಿ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದ್ದು ಇದರಿಂದ 65,518 ರೈತರಿಗೆ ಅನುಕೂಲವಾಗಿದೆ.
  3. ರೈತರಿಗೆ ಅನುಕೂಲವನ್ನು ಮಾಡುವುದಕ್ಕಾಗಿ, 1,788.9 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಲಾಗಿದ್ದು ಇದರಿಂದ 1791 ರೈತರಿಗೆ ಅನುಕೂಲವಾಗಿದೆ.
  4. ರಾಜ್ಯದ ಶ್ರಮಿಕರಿಗೆ ಮತ್ತು ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ಹಸಿವುಮುಕ್ತವಾಗಿಸುವ ಸಲುವಾಗಿ ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು ನೀಡಲಾಗಿದ್ದು ಇದರಿಂದ ಸದ್ಯ 9,04,857 ಜನರಿಗೆ ಅನುಕೂವಾಗಿದ್ದು ಕ್ಷೀರಭಾಗ್ಯ ಯೋಜನೆಯಿಂದಾಗಿ 9,04,857 ಮಕ್ಕಳಿಗೆ ಹಾಲು ದೊರಕುತ್ತಿದ್ದು, ಮಾತೃಪೂರ್ಣ ಯೋಜನೆಯಿಂದ 28,849 ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ದೊರಕುತ್ತಿದೆ.

Dakshina-Kannada_GoK

  1. ಸುಮಾರು 79,015 ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡಲಾಗಿದ್ದು 8 ಹೊಸ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆರಂಭಿಸಲಾಗಿದ್ದು 26,770 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ನೆರವು ನೀಡಲಾಗುತ್ತಿದೆ.
  2. ಎಸ್‍ಸಿ, ಎಸ್‍ಟಿ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ 449 ಕೊಳವೆ ಬಾವಿ ನಿರ್ಮಾಣ, 636ಕ್ಕೆ ವಿದ್ಯುತ್ ಸಂಪರ್ಕ ಮತ್ತು 344 ಪಂಪ್‍ಸೆಟ್ ವಿತರಣೆ ಮಾಡಲಾಗಿದೆ. ಎಸ್‍ಸಿ/ಎಸ್‍ಟಿ ಸಮುದಾಯದ ವಿದ್ಯಾರ್ಥಿಗಳಿಗಾಗಿ 5 ಹೊಸ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಆರಂಭ ಮಾಡಲಾಗಿದೆ.
  3. ಋಣಮುಕ್ತ ಯೋಜನೆಯಡಿ ರೂ.2.30 ಕೋಟಿ ಸಾಲ ಮನ್ನಾ ಮಾಡಲಾಗಿದ್ದು ಇದರಿಂದ 1,190 ಫಲಾನುಭವಿಗಳಿಗೆ ಅನುಕೂಲವಾಗಿದೆ.
  4. ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ 70 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದ್ದು 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.
  5. 10,430 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯನ್ನು ಬಹಿರ್ದೆಸೆ ಮುಕ್ತವಾಗಿ ಮಾಡಲು ಶ್ರಮಿಸಲಾಗಿದೆ.
  6. ನರೇಗಾ ಯೋಜನೆ ಅಡಿಯಲ್ಲಿ ಸುಮಾರು 44.97 ಲಕ್ಷ ದಿನಗಳಷ್ಟು ಕೆಲಸವನ್ನು ಸೃಷ್ಟಿಸಲಾಗಿದ್ದು ಇದರಿಂದ 1,03,743 ಕುಟುಂಬಗಳಿಗೆ ಪ್ರಯೋಜನ ಆಗಿದೆ.

Dakshinakannada-INCk

  1. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ 6 ಡಯಾಲಿಸಿಸ್ ಘಟಕಗಳ ಆರಂಭ, 6 ಸಿಟಿ ಸ್ಕ್ಯಾನಿಂಗ್ ಸೌಲಭ್ಯ ಅಳವಡಿಕೆ ಮಾಡಲಾಗಿದೆ.
  2. ರೂ. 10 ಕೋಟಿ ವೆಚ್ಚದಲ್ಲಿ ವೆನ್‍ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು 33 ಹೊಸ ಆಸ್ಪತ್ರೆಗಳ ಕಟ್ಟಡ ಕಾಮಗಾರಿಯು ಪೂರ್ಣಗೊಂಡಿರುತ್ತದೆ.

Dakshinakannada

  1. ಏತ ನೀರಾವರಿ ಕಮಗಾರಿಗೆ 46.06 ಲಕ್ಷ ಅನುದಾನವನ್ನು ನೀಡಲಾಗಿದ್ದು, ಕೆರೆಗಳ ಆಧುನೀಕರಣ ಮತ್ತು ಪುನಶ್ಚೇತನ ಯೋಜನೆಯಡಿ 488.722 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
  2. ಬಸವ ವಸತಿ ಯೋಜನೆ, ಅಂಬೇಡ್ಕರ್ ನಿವಾಸ ಯೋಜನೆ ಮತ್ತು ವಿಶೇಷ ವಸತಿ ಯೋಜನೆ ಮತ್ತು ಇಂದಿರಾ ಅವಾಸ್ ಯೋಜನೆಯಡಿಯಲ್ಲಿ ಒಟ್ಟು 34,718 ವಸತಿ ರಹಿತರಿಗೆ ಸರಕಾರವು ವಸತಿಯನ್ನು ಕಲ್ಪಿಸಿದ್ದು ರೂ. 26,486.07 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
  3. ಗ್ರಾಮೀಣಾಭಿವೃದ್ಧಿ ಇಲಾಖೆಯಡಿಯಲ್ಲಿ ಒಟ್ಟು 1620.26 ಕಿಮೀ ಯಷ್ಟು ಪ್ರಮುಖ ರಸ್ತೆಗಳು ಮತ್ತು ಒಟ್ಟು 12 ಸೇತುವೆಗಳನ್ನು ನಿರ್ಮಿಸಿದ್ದು 37676.22 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ.

#NavaKarnatakaNirmana

WhatsApp-Image-2018-01-07-at-3.24.37-PM

WhatsApp-Image-2018-01-07-at-3.24.38-PM--1-

WhatsApp-Image-2018-01-07-at-3.24.39-PM

WhatsApp-Image-2018-01-07-at-3.24.40-PM--1-

WhatsApp-Image-2018-01-07-at-3.24.40-PM

WhatsApp-Image-2018-01-07-at-3.24.41-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ