/ CM

ದಾವಣಗೆರೆ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ದಾವಣಗೆರೆ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ರಸ್ತೆ-ಸುಧಾರಣೆ/ನವೀಕರಣ ಯೋಜನೆಯಡಿಯಲ್ಲಿ ರೂ. 3375.30 ಲಕ್ಷ ವೆಚ್ಚದಲ್ಲಿ ಬೀರೂರು-ಸಮ್ಮಸಗಿ (ರಾಜ್ಯ ಹೆದ್ದಾರಿ-76) ರಸ್ತೆಯ 109.00 ರಿಂದ 115.00 ಕಿ.ಮೀ.ರವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕೈಗೊಳ್ಳಲಾಗಿದ್ದು 439.36 ಲಕ್ಷ ವೆಚ್ಚದಲ್ಲಿ ಕೊಂಡಜ್ಜಿ - ಕುರುಬರಹಳ್ಳಿ ನಡುವೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ.
 2. 4,348.37 ಲಕ್ಷ ವೆಚ್ಚದಲ್ಲಿ ಎರಡನೇ ಹಂತದಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ ಕುಮಟಾ-ಕಡಮದಗಿ ಎಸ್‍ಹೆಚ್ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ.
 3. ರೂ. 1,157.16 ಲಕ್ಷ ವೆಚ್ಚದಲ್ಲಿ ಜಗಳೂರು ತಾಲ್ಲೂಕಿನಲ್ಲಿ ಸಿವಿಲ್ ಜಡ್ಜ್ ನ್ಯಾಯಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ.
 4. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೇತೂರು ಗ್ರಾಮದ ವಿವಿಧ ರಿ.ಸ.ನಂ ಗಳಲ್ಲಿನ ಸುಮಾರು 62ಎ-00 ಗುಂಟೆ ಜಮೀನನ್ನು ವಸತಿ ಹೀನರಿಗೆ ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ನಿವೇಶನ ಹಂಚಿಕೆ ಮಾಡಲು ರೂ. 24.80 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ.
 5. ಎಪಿಎಂಸಿ ದಾವಣಗೆರೆ ವತಿಯಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಆರ್‍ಕೆವೈ ಯೋಜನೆಯಡಿಯಲ್ಲಿ 2500 ಮೆಟ್ರಿಕ್ ಟನ್ ಸಾಮಥ್ರ್ಯದ ಹಾಗೂ 1800 ಮೆಟ್ರಿನ್ ಟನ್ ಸಾಮಥ್ರ್ಯದ 02 ಸಂಖ್ಯೆಯ ನವೀನ ಮಾದರಿಯ ಗೋದಾಮು ನಿರ್ಮಾಣಕ್ಕಾಗಿ ರೂ. 585.99 ಲಕ್ಷ ಮೊತ್ತ ಅನುಮೋದಿತವಾಗಿದೆ.
 6. ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ಕೃಷಿಹೊಂಡ, ಕ್ಷೇತ್ರ ಬದು ನಿರ್ಮಾಣ, ನೀರೆತ್ತಲು ಡೀಸೆಲ್ ಪಂಪ್‍ಸೆಟ್‍ಗಳು, ತುಂತುರು ನೀರಾವರಿ ಉಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 80 ಮತ್ತು ಎಸ್‍ಸಿ-ಎಸ್‍ಟಿಗಳಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತಿದೆ.

Davanagere_GoK-1

 1. ದಾವಣಗೆರೆ ತಾಲ್ಲೂಕು ಮತ್ತು ಅಕ್ಕಪಕ್ಕದ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರವನ್ನು ರೂಪಿಸಲಾಗಿದ್ದು 22 ಕೆರೆಗಳಿಗೆ ತುಂಗಭದ್ರ ನದಿಯಿಂದ ಏಕಕಾಲದಲ್ಲಿ ನೀರು ತುಂಬಿಸಲಾಗಿದ್ದು ಈ ಯೋಜನೆಗಾಗಿ ಸರ್ಕಾರವು 79 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.
 2. ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ 2013-14 ರಿಂದ ಇಲ್ಲಿಯವರೆಗೆ ರೈತರ ಸಾಲಮನ್ನಾ ಯೋಜನೆಯಡಿ 83,323 ರೈತರು ಪ್ರಯೋಜನ ಪಡೆದಿದ್ದಾರೆ.
 3. ಬಸವ ವಸತಿ ಯೋಜನೆ ಅಡಿಯಲ್ಲಿ ದಾವಣಗೆರೆಯ ಎರಡೂ ಕ್ಷೇತ್ರದÀ ಗ್ರಾಮೀಣ ಪ್ರದೇಶದಲ್ಲಿ 2017 ರಲ್ಲಿ 1500 ಮನೆಗಳನ್ನು ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿವೇಶನ ಹೊಂದಿರುವವರಿಗೆ ವಸತಿ ನಿರ್ಮಿಸಿಕೊಳ್ಳಲು 13 ಕೋಟಿ ಸಹಾಯಧನ ನೀಡಲಾಗಿದ್ದು ಒಟ್ಟು 434 ಕುಟುಂಬಗಳು ಇದರಿಂದ ಪ್ರಯೋಜನ ಪಡೆದಿವೆ.
 4. ಕುಂದುವಾಡ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೀರು ಸರಬರಾಜು ಮತ್ತು ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ 12 ಕೋಟಿ 6 ಲಕ್ಷ ಅನುದಾನದ ಮೂಲಕ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

Davangere-INCK-2

 1. ಮಾತೃಪೂರ್ಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಈವರೆಗೆ 33176 ಫಲಾನುಭವಿಗಳಿಗೆ 24910 ಸಂಖ್ಯೆಯಲ್ಲಿ ಊಟವನ್ನು ವಿತರಿಸಲಾಗಿದೆ. ಇದರಿಂದ 2013 ರ ಆರಂಭದಲ್ಲಿ 10004 ದಷ್ಠಿದ್ದ ಅಪೌಷ್ಠಿಕ ಮಕ್ಕಳ ಸಂಖ್ಯೆಯು ಇಂದು 370 ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ.
 2. ಅಂಗನವಾಡಿ ಕೇಂದ್ರಗಳಲ್ಲಿ 2013 ರಿಂದ ಇದುವರೆಗೆ 15,49,771 ಮೊಟ್ಟೆ ನೀಡಲಾಗಿದ್ದು, 6,35,373 ಲೀ ಹಾಲು ನೀಡಲಾಗಿದೆ. 11,46,497 ಮಕ್ಕಳು ಈ ಯೋಜನೆಯಡಿ ಪ್ರಯೋಜನೆ ಪಡೆದಿದ್ದು ರೂ. 2,031.87 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
 3. 2013 ರಿಂದ ನವೆಂಬರ್ 2017 ರವರೆಗೆ ಹರಪನಹಳ್ಳಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮೀಣ ರಸ್ತೆ ಯೋಜನೆಯಡಿ 13.87 ಕಿ.ಮೀ ರಸ್ತೆ ಹಾಗೂ 01 ಸೇತುವೆಯ ನಿರ್ಮಾಣ ನಿರ್ವಹಣೆಗೆ ಒಟ್ಟಾರೆಯಾಗಿ 413.51 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ.

D

 1. ಹಳೆ ಬಸ್ ನಿಲ್ದಾಣ ಹಾಗೂ ಬಸ್ ನಿಲ್ದಾಣ ನವೀಕರಿಸಲು ರೂ. 25 ಕೋಟಿ ಕಾಯ್ದಿರಿಸಲಾಗಿದ್ದು ನಗರದ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಮಾಡಲಾಗುವ ವಿದ್ಯುತ್ ಉತ್ಪಾದನೆಯನ್ನು ಸ್ಥಳೀಯವಾಗಿ ಬಳಸಿಕೊಳ್ಳಲು 9 ಕೋಟಿ 40 ಲಕ್ಷ ರೂಗಳನ್ನು ನಿಗದಿಗೊಳಿಸಲಾಗಿದೆ.
 2. ಜಲಸಿರಿ ಯೋಜನೆಯಡಿ ಕೆ ಯು ಐ ಡಿ ಎಫ್ ಸಿ ವತಿಯಿಂದ ದಾವಣಗೆರೆ ನಗರಕ್ಕೆ ಒಟ್ಟು 203 ಕಿ.ಮೀ. ಒಳಚರಂಡಿ ನಿರ್ಮಿಸಲು 109 ಕೋಟಿ 99 ಲಕ್ಷ ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ನಡೆಯುತ್ತಿದೆ.
 3. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2013 ರಿಂದ 2017 ರವರೆಗೆ 19954 ಸ್ತ್ರೀಶಕ್ತಿ ಸಂಘದ ಒಟ್ಟು 264981 ಸದಸ್ಯರು 1061.53 ಲಕ್ಷ ಮೊತ್ತವನ್ನು ಸಹಾಯಧನವಾಗಿ ಪಡೆದಿದ್ದಾರೆ.
 4. ತೋಟಗಾರಿಕಾ ಇಲಾಖೆಯ ವತಿಯಿಂದ 2013 ರಿಂದ ಇಲ್ಲಿಯವರೆಗೆ 1568.6 ಲಕ್ಷ ಮೊತ್ತದಲ್ಲಿ ಒಟ್ಟು 81 ಫಲಾನುಭವಿಗಳಿಗೆ 81 ಪಾಲಿಹೌಸ್ ನಿರ್ಮಿಸಿಕೊಡಲಾಗಿದೆ. 14680 ಹೆಕ್ಟೇರು ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಸೌಲಭ್ಯ ವಿತರಿಸಲಾಗಿದೆ.

#NavaKarnatakaNirmana

DR-LDimU8AAfPC0

DR-PRbAV4AE06JD

DR-X57UVoAEjCIp

DR8u776VQAUbpUs

DR86Kt5VQAIpeTx

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ