/ delivered as promised

ನಡೆದಿದ್ದೇವೆ: ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ & ಉದ್ಯೋಗ, ಕಾಯಿದೆ 371(ಜೆ),ಬೆಂಗಳೂರಿನ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆ

2013ರ ಚುನಾವಣಾ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಮೇಲೆ 155 ಭರವಸೆಗಳನ್ನು ಈಡೇರಿಸಿದೆ. ಈಡೇರಿಸಲಾದ ಭರವಸೆಗಳ ಸಮಗ್ರ ಚಿತ್ರಣ ಈ ಕೆಳಕಂಡಂತಿದೆ

NS_Sum_Creative-Kan-13-to-16-1

ಕಾಯಿದೆ 371(ಜೆ)

ನುಡಿದಂತೆ
• ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನೇತೃತ್ವದಲ್ಲಿ ಸಾಂವಿಧಾನಿಕವಾಗಿ ಕಲಂ 371 ಜೆ ಪರಿಚಯಿಸಿ ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುವುದು
• 6 ತಿಂಗಳೊಳಗೆ ಈ ಪ್ರದೇಶದ ಅಭಿವೃದ್ಧಿಗೆ ಮಂಡಳಿ ರಚಿಸುವುದು ಈ ಭಾಗದ ಜನತೆಗೆ ಉದ್ಯೋಗ ಮೀಸಲಾತಿ ಕಲ್ಪಿಸಿ ಕಲಂ 371 ಜೆ ನ್ನು ಎತ್ತಿ ಹಿಡಿಯುವುದು.

ನಡೆದಿದ್ದೇವೆ
• ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ. ಈ ಪ್ರದೇಶಕ್ಕೆ ನೀಡಲಾದ ಅನುದಾನದ ಮೊತ್ತ ರೂ.2750 ಕೋಟಿ. ಕಳೆದ 4 ವರ್ಷಗಳಲ್ಲಿ 9,688 ಅಭಿವೃದ್ಧಿ ಕಾಮಗಾರಿಗಳಾಗಿವೆ.
• ಹೈ.ಕ.ಪ್ರದೇಶದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 70% ರಷ್ಟು ಮೀಸಲಾತಿ. ಕರ್ನಾಟಕ ಸರ್ಕಾರದ ಉದ್ಯೋಗಗಳಲ್ಲಿ 8% ಮೀಸಲಾತಿ
• ಹೈ.ಕ. ಪ್ರದೇಶದ ಸ್ಥಳೀಯರಿಗೆ ಗ್ರೂಪ್-ಎ & ಬಿ (ಕಿರಿಯ ವೃಂದ) ಹುದ್ದೆಗಳಲ್ಲಿ 75%, ಗ್ರೂಪ್-ಸಿ ಹುದ್ದೆಗಳಲ್ಲಿ 80%, ಗ್ರೂಪ್-ಡಿ ಹುದ್ದೆಗಳಲ್ಲಿ 85% ಮೀಸಲಾತಿ

ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳ ಮೂಲಕ ಸರ್ಕಾರಿ ಸಂಸ್ಥೆಗಳ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿ

ನುಡಿದಂತೆ
2 ವರ್ಷಗಳಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಎಸ್ಸಿ/ಎಸ್ಟಿ/ಹಿಂದುಳಿದ/ಅಲ್ಪಸಂಖ್ಯಾತರಿಗೆ ಬ್ಯಾಕ್‍ಲಾಗ್ ಹುದ್ದೆಗಳನ್ನು ನೀಡಲಾಗುವುದು

ನಡೆದಿದ್ದೇವೆ
• ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಖಾಲಿಯಿರುವ ಎಸ್ಸಿ/ಎಸ್ಟಿ/ಹಿಂದುಳಿದ/ಅಲ್ಪಸಂಖ್ಯಾತರ ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬಲು ಆದೇಶ ಹೊರಡಿಸಲಾಗಿದೆ
• ಇಂಧನ ಇಲಾಖೆಯಲ್ಲಿ ದಾಖಲೆಯ 15,000 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ
• ಸಮಾಜ ಕಲ್ಯಾಣ ಮತ್ತು ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿ
• ದುರ್ಬಲ ವರ್ಗಗಳ 4,98,538 ಫಲಾನುಭವಿಗಳ ಸಾಲ ಮನ್ನಾ

ಹೊಸ ಕಂದಾಯ ಗ್ರಾಮಗಳು

ನುಡಿದಂತೆ
• 2 ವರ್ಷಗಳಲ್ಲಿ ಲಂಬಾಣಿ ತಾಂಡಾಗಳು, ಗೊಲ್ಲರ ಹಟ್ಟಿಗಳು ಹಾಗೂ ಗಿರಿಜನ ಹಾಡಿಗಳ ಪ್ರದೇಶವನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಕಾನೂನಾತ್ಮಕ ಸ್ವತ್ತಿನ ಹಕ್ಕು ಪತ್ರವನ್ನು ವಿತರಿಸುವುದು

ನಡೆದಿದ್ದೇವೆ
• ರಾಜ್ಯ ಸರ್ಕಾರದ ನಿರ್ದೇಶನದಂತೆ ಕೂಡಲೆ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಲಿರುವ 413 ವಾಸಸ್ಥಾನಗಳು
• ಸ್ಥಳೀಯ ಮಟ್ಟದಲ್ಲಿ ಸಮರ್ಪಕವಾಗಿ ಸರ್ಕಾರಿ ಸೇವೆಗಳನ್ನು ತಲುಪಿಸಲು ಹೆಚ್ಚುವರಿ 50 ತಾಲ್ಲೂಕುಗಳನ್ನು ಸ್ಥಾಪಿಸಲಾಯಿತು.

ಒಂದೇ ಬಾರಿಗೆ ನಿಗಮಗಳಲ್ಲಿ ಬಾಕಿಯಿದ್ದ ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಜನತೆಯ ಸಾಲ ಮನ್ನಾ

ನುಡಿದಂತೆ
ಮಹಿಳಾ, ಮಕ್ಕಳ, ಮೀನುಗಾರಿಕೆ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಲ್ಲಿ ಸಾಲ ಪಡೆದ ಎಸ್ಸಿ/ಎಸ್ಟಿ/ಹಿಂದುಳಿದ/ಅಲ್ಪಸಂಖ್ಯಾತರ ಸಾಲ ಮನ್ನಾ

ನಡೆದಿದ್ದೇವೆ
• ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಒಟ್ಟು ರೂ. 514.26 ಕೋಟಿ ಸಾಲ ಮನ್ನಾ
• ದುರ್ಬಲ ವರ್ಗಗಳ 4,98,538 ಫಲಾನುಭವಿಗಳ ಸಾಲ ಮನ್ನಾ

NS_Sum_Creative-Kan_17-to-20

ಭಾಗ್ಯಜ್ಯೋತಿ ಯೋಜನೆಯಡಿ ರಿಯಾಯಿತಿಯಲ್ಲಿ ಸೂಕ್ತ ವಿದ್ಯುತ್ ವಿತರಣೆ

ನುಡಿದಂತೆ
ಭಾಗ್ಯಜ್ಯೋತಿ ಯೋಜನೆಯಡಿ ಪಾವತಿಸದಿರುವ ವಿದ್ಯುತ್ ಶುಲ್ಕಗಳನ್ನು ಏಕ ಕಾಲಕ್ಕೆ ಮನ್ನಾ ಮಾಡಲಾಗುವುದು

ನಡೆದಿದ್ದೇವೆ
• ಭಾಗ್ಯಜ್ಯೋತಿ/ಕುಟೀರ ಜ್ಯೋತಿ ಅಡಿಯಲ್ಲಿ ಏಕ ಕಾಲಕ್ಕೆ ರೂ.319.61 ಕೋಟಿ ವಿದ್ಯುತ್ ಶುಲ್ಕ ಮನ್ನಾ
• ಭಾಗ್ಯಜ್ಯೋತಿ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುತ್ತಿರುವ ಉಚಿತ ವಿದ್ಯುತ್ ಪ್ರಮಾಣವನ್ನು 18 ರಿಂದ 40 ಯುನಿಟ್‍ಗಳಿಗೆ ಏರಿಕೆ ಮಾಡಲಾಗಿದೆ

ವಿಶೇಷ ಯೋಜನೆಯಡಿ ಬಳಕೆಯಾಗದ ಅನುದಾನವನ್ನು ಮುಂದಿನ ಸಾಲಿನ ಗಿರಿಜನ ಉಪಯೋಜನೆ & ಕಲ್ಯಾಣ ಯೋಜನೆಗಳ ಅನುದಾನಕ್ಕೆ ಸೇರಿಸುವುದು

ನುಡಿದಂತೆ
ಬಳಕೆಯಾಗದ ಆಯವ್ಯಯ ಅನುದಾನವನ್ನು ಪ.ಜಾತಿ ಮತ್ತು ಪ.ಪಂಗಡದವರ ಕಲ್ಯಾಣ ಯೋಜನೆಗಳಿಗೆ ವಿಸ್ತರಿಸಿ ಮುಂದಿನ ವರ್ಷದಲ್ಲಿ ಅನುದಾನ ಬಳಸಲಾಗುವುದು

ನಡೆದಿದ್ದೇವೆ
• ಐತಿಹಾಸಿಕ ಪ.ಜಾತಿ ಉಪ ಯೋಜನೆ ಮತ್ತು ಪ.ಪಂಗಡದ ಉಪ ಯೋಜನೆಯ ಮಸೂದೆ-2013 ಜಾರಿಗೊಳಿಸಿದ ರಾಜ್ಯ ಸರ್ಕಾರ
• ಉಪ ಯೋಜನೆಗಳಿಗೆ ಮಾತ್ರ ಮೀಸಲಾದ ನಿಧಿಯನ್ನು ಇತರೆ ಯೋಜನೆಗಳಿಗೆ ಬಳಸಲಾಗುವುದಿಲ್ಲ
• ಬಳಕೆಯಾಗದ ನಿಧಿಯನ್ನು ಮುಂದಿನ ವರ್ಷದ ಯೋಜಿತ ಆಯವ್ಯಯದ ಅನುದಾನಕ್ಕೆ ಸೇರಿಸಲಾಗಿದೆ

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸುವ ಮೂಲಕ ಸಬಲೀಕರಣ

ನುಡಿದಂತೆ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಹಾಗೂ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುವುದು

ನಡೆದಿದ್ದೇವೆ
• ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾಸಿರಿ ಅಡಿ ಆರ್ಥಿಕ ಸಹಾಯ ನೀಡಲಾಗುತ್ತಿದೆ
• ವಿದ್ಯಾಸಿರಿ ಅಡಿ 3.29 ಲಕ್ಷ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರೂ.346 ಕೋಟಿ ವಿದ್ಯಾರ್ಥಿವೇತನ ನೀಡಲಾಗಿದೆ
• 2013ರಿಂದ ಹಿಂದುಳಿದ ವರ್ಗಗಳ 93,482 ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ
• 2017-18ರ ಆರ್ಥಿಕ ವರ್ಷದಲ್ಲಿ 300 ಹೊಸ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗಿದೆ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ನುಡಿದಂತೆ
• ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಮೂಲಕ ಆರ್ಥಿಕ ಸಹಾಯ ಮಾಡಲಾಗುವುದು

ನಡೆದಿದ್ದೇವೆ
• ಭಾರತದಲ್ಲೇ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿದ ಏಕೈಕ ರಾಜ್ಯ ಕರ್ನಾಟಕ
• 2013ರಿಂದ 37.89 ಲಕ್ಷ ಪ್ರಿ & ಪೋಸ್ಟ್ ಮೆಟ್ರಿಕ್ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿತರಣೆಯಾದ ವಿದ್ಯಾರ್ಥಿ ವೇತನ ರೂ.634.38 ಕೋಟಿ
• ನೇರವಾಗಿ ಬ್ಯಾಂಕ್ ಖಾತೆಗಳಿಗೆ ವಿದ್ಯಾರ್ಥಿವೇತನ ಪಡೆಯುತ್ತಿದ್ದ ಪ್ರಿ & ಪೋಸ್ಟ್ ಮೆಟ್ರಿಕ್ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ 5.5 ಲಕ್ಷದಿಂದ (2013) 13.18(2017) ಲಕ್ಷಕ್ಕೆ ಏರಿಕೆ

NS_Sum_Creative-Kan-21-to-24-1

ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಸುರಕ್ಷಿತ ಬೆಂಗಳೂರಿನ ನಿರ್ಮಾಣ

ನುಡಿದಂತೆ
• ಪೊಲೀಸ್ ಆಡಳಿತದಲ್ಲಿ ದಕ್ಷತೆಯನ್ನು ತರುವುದು
• ಟ್ರಾಫಿಕ್ ಹಾಗೂ ಗುಪ್ತಚರ ಪೊಲೀಸ್ ಹಾಗೂ ಇತರ ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವುದು

ನಡೆದಿದ್ದೇವೆ
• ರಾಜ್ಯ ಗುಪ್ತಚರ ಇಲಾಖೆಯಲ್ಲಿ ಪ್ರತ್ಯೇಕ ಪಿಎಸ್‍ಐ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು,2016ರ ಡಿಸೆಂಬರ್ ವೇಳೆಗೆ 12,000 ಸಿಬ್ಬಂದಿಯ ನೇಮಕವಾಗಿದೆ
• ಸಮಿತಿ ಶಿಫಾರಸ್ಸಿನ ಮೇರೆಗೆ ಸಂಬಳದಲ್ಲಿ ಏರಿಕೆಯಾಗಿದ್ದು 2000 ಹೆಚ್ಚುವರಿ ಭತ್ಯೆಯನ್ನು ನೀಡಲಾಗುತ್ತಿದೆ
• ದೂರುದಾರರ ಸ್ಥಳವನ್ನು 15 ನಿಮಿಷಗಳಲ್ಲಿ ತಲುಪಲು 221 ಹೊಯ್ಸಳ ವಾಹನಗಳು ಕಾರ್ಯಾಚರಣೆಯಲ್ಲಿವೆ
• ಮಹಿಳೆಯರ ರಕ್ಷಣೆಗೆ ಮೊಬೈಲ್ ಸುರಕ್ಷಾ ಆ್ಯಪ್‍ನ್ನು ಪರಿಚಯಿಸಿದ್ದು 5 ಬಾರಿ ಅಪಾಯ ಗುಂಡಿಯೊತ್ತಿದ ಕೂಡಲೆ ಸ್ಥಳಕ್ಕೆ ಧಾವಿಸಲು 272 ಪಿಂಕ್ ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗಿದೆ
• ಬೆಂಗಳೂರು ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ಕೂಡಲೆ ಯುವಸಮೂಹದ ಬೇಡಿಕೆಗೆ ಸ್ಪಂದಿಸುತ್ತಿದೆ

ನಮ್ಮ ಮೆಟ್ರೊ ಹಂತ- 1 ಕಾಮಗಾರಿ ಪೂರ್ಣ ಹಾಗೂ ಹಂತ-2 ಕಾಮಗಾರಿಯ ವೇಗದಲ್ಲಿ ಹೆಚ್ಚಳ

ನುಡಿದಂತೆ
• ನಮ್ಮ ಮೆಟ್ರೊ ಹಂತ-1 ಮತ್ತು ಹಂತ -2ರ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುವುದು
• ಮೆಟ್ರೊ ಸಂಚಾರವನ್ನು ನಗರದ ಹೊರವಲಯಕ್ಕೆ ವಿಸ್ತರಿಸುವುದು

ನಡೆದಿದ್ದೇವೆ
• ನಮ್ಮ ಮೆಟ್ರೊ ಹಂತ-1ರ ಕಾಮಗಾರಿ ಪೂರ್ಣ
• 72 ಕಿಮೀ ಉದ್ದದ ಮೆಟ್ರೊ ಹಂತ -2ರ ಕಾಮಗಾರಿ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ
• ಕೆ.ಆರ್.ಪುರಂ-ಸಿಲ್ಕ್‍ಬೋರ್ಡ್‍ನ್ನು ಸಂಪರ್ಕಿಸುವ (17 ಕಿಮೀ) ಮತ್ತು ನಾಗವಾರ- ಬೆಂಗಳೂರು ವಿಮಾನ ನಿಲ್ದಾಣವರೆಗಿನ ಮೆಟ್ರೊ ಹಂತ -2ಎ ಗೆ ಒಪ್ಪಿಗೆ ದೊರೆತಿದೆ

ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾದ ಗ್ರಾಮಗಳಿಗೆ ವಿಶೇಷ ಅಭಿವೃದ್ಧಿ ಕಾರ್ಯಕ್ರಮಗಳು

ನುಡಿದಂತೆ
• ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳನ್ನು ಪ್ರಾಯೋಗಿಕವಾಗಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವುದು
• ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುವುದು

ನಡೆದಿದ್ದೇವೆ
• ಬಿಬಿಎಂಪಿಗೆ ಸೇರಿದ ಹೊಸ ವಾರ್ಡ್‍ಗಳ ಸಮಗ್ರ ಅಭಿವೃದ್ಧಿಗೆ ವಾರ್ಷಿಕ ಅನುದಾನಗಳನ್ನು ನೀಡಲಾಗಿದೆ
• ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಗ್ರಾಮಗಳಿಗೆ ರೂ.250 ಕೋಟಿ ಅನುದಾನ ವಿತರಿಸಲಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ವಿವಿಧ ಯೋಜನೆಗಳು ಅನುಷ್ಠಾನಗೊಂಡಿವೆ
• ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ ಹೊಸ 110 ಗ್ರಾಮಗಳಲ್ಲಿ ಯಶಸ್ವಿಯಾಗಿ ಕಾವೇರಿ ನೀರಿನ ಯೋಜನೆ ಅನುಷ್ಠಾನಗೊಂಡಿದೆ

ಬೆಂಗಳೂರಿನಲ್ಲಿ ತ್ಯಾಜ್ಯ ನೀರು ಸಂಸ್ಕರಣೆ

ನುಡಿದಂತೆ
• 100% ರಷ್ಟು ತ್ಯಾಜ್ಯ ನೀರಿನ ಸಂಸ್ಕರಣೆ
• ಸಂಸ್ಕರಿತ ನೀರನ್ನು ವಿವಿಧ ಕೆಲಸಗಳಿಗೆ ಮರುಬಳಸುವುದು

ನಡೆದಿದ್ದೇವೆ
• ನಗರದ 1,440 ದಶಲಕ್ಷ ಲೀ.ತ್ಯಾಜ್ಯ ನೀರಿನಿಂದ 982 ದಶಲಕ್ಷ ಲೀ. ನೀರನ್ನು ಸಂಸ್ಕರಿಸುತ್ತಿರುವ ಹಾಲಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳು
• ಬೆಳ್ಳಂದೂರು-ಅಮಾನಿಕೆರೆ, ಹೊರಮಾವು-ಅಗರ, ದೊಡ್ಡಬೆಲೆ-ಕಾಡುಗೋಡಿಯಲ್ಲಿ ರೂ.1,209.36 ಕೋಟಿ ವೆಚ್ಚದಲ್ಲಿ 440 ದಶಲಕ್ಷ ಲೀ.ಸಾಮಥ್ರ್ಯದ 4 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಯಾಗಿದೆ
• ಕೋರಮಂಗಲ-ಚಲ್ಲಘಟ್ಟ ಕಣಿವೆಯ 60 ದಶಲಕ್ಷ ಲೀ. ಸಾಮಥ್ರ್ಯದ ಎಸ್‍ಟಿಪಿಯಿಂದ 1 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ
• ಪ್ರಸ್ತುತ ಬೆಂಗಳೂರಿನ 70%ರಷ್ಟು ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿದೆ
• 2020ರ ವೇಳೆಗೆ ಬೆಂಗಳೂರಿನಲ್ಲಿ 1,766 ದಶಲಕ್ಷ ಲೀ. ತ್ಯಾಜ್ಯ ನೀರಿನ ಸಂಸ್ಕರಣೆಯಾಗಲಿದೆ