/ department

ಇ-ಆಡಳಿತ ಇಲಾಖೆ

ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಎಲ್ಲಾ ಸೇವೆಗಳಿಗೆ ಉತ್ತಮ ಆಡಳಿತವನ್ನು ನೀಡುವುದು.
ಎಲ್ಲೆಡೆ ಮತ್ತು ಎಲ್ಲಾ ಸಮಯದಲ್ಲೂ ಸೇವೆಗಳು ಲಭ್ಯ. ಸಂಪೂರ್ಣ ಪಾರದರ್ಶಕತೆ, ತಕ್ಷಣದ ನಿರ್ಧಾರ

ಮೊಬೈಲ್ ಒನ್, ಇ-ಪ್ರೊಕ್ಯೂರ್ ಮೆಂಟ್, ಕರ್ನಾಟಕ ವೈಡ್ ಏರಿಯಾ ನೆಟ್ ವರ್ಕ್, ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯು ನಮ್ಮ ಸರ್ಕಾರದ ಇ-ಆಡಳಿತ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ.

ಮೊಬೈಲ್ ಒನ್ ಯೋಜನೆಯು ಸರ್ಕಾರದ ಮತ್ತು ಖಾಸಗೀ ವಲಯದಲ್ಲಿ ಸಾರ್ವಜನಿಕರಿಗೆ ಬಹು ಸೇವೆಗಳನ್ನು ಮೊಬೈಲ್ ಮೂಲಕ ಸಮಗ್ರವಾಗಿ ಪಡೆದುಕೊಳ್ಳಲು ವೇದಿಕೆ ಒದಗಿಸುವ ವಿಶ್ವದ ಮೊಟ್ಟ ಮೊದಲ ಯೋಜನೆ ಇದಾಗಿದೆ.

ಮೊಬೈಲ್ ಒನ್ ಯೋಜನೆಗೆ ಪುರಸ್ಕಾರ
ಮೊಬೈಲ್ ಒನ್ ನಂತಹ ವಿನೂತನ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಪುರಸ್ಕಾರವನ್ನು ಪಡೆದಿರುತ್ತದೆ.

ಅತ್ಯುತ್ತಮ ಇ-ಸೇವೆಗಳನ್ನು ಪೂರೈಕೆದಾರರ ಪ್ರಶಸ್ತಿ - 2016 ಜಾಗತಿಕ ಸರ್ಕಾರಗಳ ಸಮ್ಮೇಳನ, ದುಬೈ(ಯುಎಇ)

ಇಂಡಿಯಾ ಡಿಜಿಟಲ್ ಅವಾರ್ಡ್ – 2016 ಡಿಜಿಟಲ್, ಸೋಷಿಯಲ್ ಮತ್ತು ಎಕನಾಮಿಕ್ ಎನ್ ಹ್ಯಾನ್ಸ್ ಮೆಂಟ್ ಗ್ರೂಪ್ – ಐಎಎಂಎಐ

ಅತ್ಯುತ್ತಮ ಎಂ-ಗವರ್ನಮೆಂಟ್ ಪ್ರಶಸ್ತಿ - 2016 ಜಾಗತಿಕ ಸರ್ಕಾರಗಳ ಸಮ್ಮೇಳನ, ದುಬೈ(ಯುಎಇ)

ಎಂಬಿಲಿಯನ್ ಅವಾರ್ಡ್ ಸೌಥ್ ಏಷಿಯಾ – ಎಂ-ಆಡಳಿತ ವಿಭಾಗದಲ್ಲಿ ಪ್ರತಿಷ್ಠಿತ ಸ್ಥಾನ (2015).

39 ಕರ್ನಾಟಕ ಒನ್ ಕೇಂದ್ರಗಳು – ಬೆಂಗಳೂರು ಒನ್ ಯೋಜನೆಯಡಿಯಲ್ಲಿ 9 ಪ್ರಮುಖ ನಗರಗಳಾದ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ಮೈಸೂರು, ದಾವಣೆಗೆರೆ, ಕಲ್ಬುರ್ಗಿ ಮತ್ತು ತುಮಕೂರಿನಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.

ವಿಶ್ವ ಬ್ಯಾಂಕ್ ಇವರು ಹೆಚ್ ಆರ್ ಎಂ ಎಸ್ ನಿರ್ವಹಣಾ ವ್ಯವಸ್ಥೆಗೆ ಸಹಕಾರ ನೀಡಿದ್ದು ಇದರಿಂದ ಸಾಕಷ್ಟು ಬೆಳವಣಿಗೆ ಆಗಿದೆ. ಹೆಚ್ ಆರ್ ಎಂ ಎಸ್-2.0 ವ್ಯವಸ್ಥೆಯೂ ಸಹ ಅನುಷ್ಠಾನ ಪಕ್ರಿಯೆಯಲ್ಲಿದೆ. ಈ ವ್ಯವಸ್ಥೆಯಡಿಯಲ್ಲಿ ಒಟ್ಟು 5.5 ಲಕ್ಷ ರಾಜ್ಯ ನೌಕರರ (State, AIS, AICTE, UGC, FNJPC) ಮತ್ತು 100% ನಷ್ಟು ಅನುಮೋದನೆಗೊಂಡ ಶಿಕ್ಷಣ ಸಂಸ್ಥೆಗಳಿಗೆ ಸಂಬಳವನ್ನು ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯವಾರು ನೆಟ್ ವರ್ಕ್ – ಮುಂದಿನ 5 ವರ್ಷಗಳಲ್ಲಿ 800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಒಟ್ಟು ಕಚೇರಿಗಳ ಸಂಖ್ಯೆಯು 10,000 ದ ವರೆಗೆ ತಲುಪಲಿದೆ. ಇದರಿಂದ ಸಾರ್ವಜನಿಕರಿಗೆ ನೀಡುವ ಸೌಲಭ್ಯವು ಇನ್ನಷ್ಟು ಸರಳವಾಗಲಿದೆ.

ಸ್ವಾತಂತ್ರ ಹೋರಾಟಗಾರರಿಗೆ ನೀಡಲಾಗುತ್ತಿದ್ದ ಮಾಸಿಕ ಪಿಂಚಣಿಯನ್ನು 8,000 ರೂಪಾಯಿಗಳಿಂದ 10,000 ರೂಪಾಯಿಗೆ ಏರಿಸಲಾಗಿದ್ದು ಗೋವಾ ವಿಮೋಚನಾ ಹೋರಾಟಗಾರರ ಪಿಂಚಣಿಯನ್ನು 3000 ರೂಪಾಯಿಗಳಿಂದ 4,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Graph_1-12-2017