/ CM

ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಧಾರವಾಡ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

  1. ವಿದ್ಯೆಗೆ ಹೆಸರಾಗಿರುವ ಧಾರವಾಡದಲ್ಲಿ ರಾಜ್ಯದ ಮೊದಲ ಐಐಟಿಯ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಸ್ಥಾಪನೆಗೆ ಕರ್ನಾಟಕ ಸರಕಾರ ನೂರಾರು ಕೋಟಿ ರೂ.ಬೆಲೆ ಬಾಳುವ 470 ಎಕರೆ ಭೂಮಿಯನ್ನು ಉಚಿತವಾಗಿ ಒದಗಿಸಿದೆ.
  2. ಧಾರವಾಡದ ಕರ್ನಾಟಕ ವಿ.ವಿ.ಆವರಣದ 25 ಎಕರೆ ನಿವೇಶನದಲ್ಲಿ ಕರ್ನಾಟಕ ಸರಕಾರ ಉನ್ನತ ಶಿಕ್ಷಣ ಅಕಾಡೆಮಿ ಸ್ಥಾಪಿಸಿದ್ದು ಪ್ರತ್ಯೇಕ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ 45 ಕೋಟಿಗೂ ಹೆಚ್ಚಿನ ಅನುದಾನ ನೀಡಿದೆ.
  3. ಪೊಲೀಸರಲ್ಲಿನ ಕಾರ್ಯಕ್ಷಮತೆ ಮತ್ತು ದಕ್ಷತೆ ಹೆಚ್ಚಿಸಲು ಧಾರವಾಡದ ಕಲಘಟಗಿ ರಸ್ತೆಯಲ್ಲಿ ಸುಸಜ್ಜಿತ ಪೊಲೀಸ್ ತರಬೇತಿ ಕೇಂದ್ರವನ್ನು ರೂಪಿಸಲಾಗಿದೆ.
  4. ಕೃಷಿಭಾಗ್ಯ ಯೋಜನೆಯಡಿ ಇದುವರೆಗೆ 7 ಸಾವಿರಕ್ಕಿಂತ ಹೆಚ್ಚು ಕೃಷಿಹೊಂಡಗಳನ್ನು ನಿರ್ಮಿಸಲಾಗಿದೆ. ಕೃಷಿಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 5710 ಫಲಾನುಭವಿಗಳಿಗೆ 43.73 ಕೋಟಿ ರೂಪಾಯಿಗಳ ಅನುದಾನದಲ್ಲಿ ಸೌಲಭ್ಯ ನೀಡಿದೆ.

Dhaarwad_GoK-1

  1. ಸಹಕಾರ ಸಂಘಗಳಲ್ಲಿ ಸಾಲ ಹೊಂದಿದ್ದ ಜಿಲ್ಲೆಯ 22,207 ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಲು ,ಜಿಲ್ಲೆಗೆ 79.96 ಕೋಟಿ ರೂ. ಅನುದಾನ ಒದಗಿಸಲಾಗಿದೆ.
  2. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ 2013 ರಿಂದ ಇಲ್ಲಿಯವರೆಗೆ 3014 ರೈತರಿಗೆ ಸುಮಾರು 141 ಕೋಟಿ ರೂಪಾಯಿಗಳ ಸಹಾಯಧನ ವಿತರಿಸಲಾಗಿದ್ದು ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಮಾವು,ಪೇರಲ,ಬಾಳೆ,ತರಕಾರಿ ಬೆಳೆ ಪ್ರದೇಶದ ವಿಸ್ತರಣೆಗಾಗಿ 4600 ರೈತರಿಗೆ 76.65 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ.

Dharwad-INCK-1

  1. ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಮೊದಲನೇ ಹಂತದಲ್ಲಿ 2.4 ಕೊಟಿ ರೂ.ವೆಚ್ಚದಲ್ಲಿ 49 ಕಾಮಗಾರಿಗಳು.ಎರಡನೇ ಹಂತದಲ್ಲಿ 85 ಲಕ್ಷ ರೂ.ವೆಚ್ಚದಲ್ಲಿ 24 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.ಮೂರನೇ ಹಂತದಲ್ಲಿ 24 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
  2. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿಯನ್ನು ಉಚಿತವಾಗಿ ಪೂರೈಸಲಾಗುತ್ತಿದ್ದು ಜಿಲ್ಲೆಯ 3,20,679 ಬಡ ಕುಟುಂಬಗಳ ಸದಸ್ಯರಿಗೆ ಈ ಸೌಲಭ್ಯ ನಿರಂತರವಾಗಿ ದೊರೆಯುತ್ತಿದೆ.

Dharwad

  1. ವಿವಿಧ ಗ್ರಾಮೀಣ ವಸತಿ ಯೋಜನೆಗಳಡಿ ಧಾರವಾಡ ಜಿಲ್ಲೆಗೆ ಒಟ್ಟು 45991 ಮನೆಗಳು ಮಂಜೂರಾಗಿದ್ದು,31409 ಮನೆಗಳು ಪೂರ್ಣಗೊಂಡಿವೆ.14582 ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ.
  2. ಮಾತೃಪೂರ್ಣ ಯೋಜನೆಯಡಿಯಲ್ಲಿ ಜಿಲ್ಲೆಯ 1505 ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ ಮತ್ತು ಬಾಣಂತಿಯರಿಗೆ ಪ್ರತಿದಿನ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 34,673 ಮಹಿಳೆಯರು ಈ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದಾರೆ.

#NavaKarnatakaNirmana

ಈ ವೀಡಿಯೋ ವೀಕ್ಷಿಸಿ

WhatsApp-Image-2017-12-24-at-2.55.21-PM

WhatsApp-Image-2017-12-24-at-2.55.20-PM

WhatsApp-Image-2017-12-24-at-2.55.19-PM

WhatsApp-Image-2017-12-24-at-2.55.18-PM

WhatsApp-Image-2017-12-24-at-2.55.17-PM

WhatsApp-Image-2017-12-24-at-2.55.16-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ