/ e-mandi

ಇ-ಮಂಡಿ ಯೋಜನೆ

ದೇಶದಲ್ಲಿಯೇ ಮೊದಲ ಬಾರಿಗೆ ಏಕೀಕೃತ ಆನ್‌ಲೈನ್ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಮತ್ತು ಕೃಷಿ ಚಟುವಟಿಕೆಗಳಿಗೆ ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಸಬ್ಸಿಡಿ ನೀಡುವ ಯೋಜನೆಯನ್ನು ಜಾರಿಗೆ ತಂದ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ್ದು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ರೈತರು ತಮ್ಮ ಬೆಳೆಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ಉತ್ತಮ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಕರ್ನಾಟಕದ ಕಾಂಗ್ರೆಸ್ ಸ‌ರ್ಕಾರ ‘ಇ-ಮಂಡಿ’ ಯೋಜನೆಯನ್ನು ಜಾರಿಗೆ ತಂದಿದೆ. ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಇ-ಮಂಡಿ ಯೋಜನೆ ಸಹಕಾರಿಯಾಗಿದೆ. ಸರಕು ಖರೀದಿದಾರರ ಪೈಕಿ ಪೈಪೋಟಿ ಹೆಚ್ಚಿದಾಗ ರೈತರಿಗೆ ಉತ್ತಮ ದರ ಸಿಗುತ್ತದೆ.

ರೈತರಿಗೆ ವ್ಯಾಪಾರೋದ್ಯಮದ ಭಾರವನ್ನು ಸರಾಗಗೊಳಿಸುವ ಮತ್ತು ಬೆಳೆಗಾರರಿಗೆ ನ್ಯಾಯಯುತ ದರಗಳನ್ನು ಒದಗಿಸಲು ಎಪಿಎಂಸಿಗಳು ಸ್ಥಾಪಿಸಲಾಗಿತ್ತು. ಆದರೆ ಅವು ತನ್ನ ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿವೆ. ಹಾಗಾಗಿ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿದೂಗಿಸಲು ಇ-ಮಂಡಿ ರೂಪುಗೊಂಡಿದೆ. ಕರ್ನಾಟಕ ಸರ್ಕಾರ ಮತ್ತು ಎನ್ ಸಿಡಿಇಎಕ್ಸ್ ಜಂಟಿ ಸಹಯೋಗದಲ್ಲಿ 2013-14ನೇ ಸಾಲಿನಲ್ಲಿ ಇ-ಮಂಡಿ ಸ್ಥಾಪಿಸಲಾಗಿದೆ.

Namma-Karntaka-Post_e-Mandi

ರಾಜ್ಯದ ಎಪಿಎಂಸಿಗಳನ್ನು ಇ-ಮಂಡಿ ವೇದಿಕೆಯಡಿ ತರವುದರಿಂದ ರೈತರು ತರುವ ತಮ್ಮ ಉತ್ಪನ್ನಗಳಿಗೆ ಪೈಪೋಟಿ ಹೆಚ್ಚಿ ನ್ಯಾಯಯುತ ಬೆಲೆ ಸಿಗಲು ಅನುಕೂಲವಾಗಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕುಳಿತಿರುವ ಪರವಾನಗೆ ಹೊಂದಿರುವ ಯಾವುದೇ ವಹಿವಾಟುಗಾರರು ರೈತರ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದು. ಕಳೆದ ಮೂರು ವರ್ಷಗಳಲ್ಲಿ 29 ಜಿಲ್ಲೆಗಳಲ್ಲಿ 162 ಎಪಿಎಂಸಿಗಳ ಪೈಕಿ 157 ಎಪಿಎಂಸಿಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಪ್ರಸ್ತುತವಾಗಿ ಸುಮಾರು 32,000 ಪರವಾನಗಿ ಹೊಂದಿರುವ ವ್ಯಾಪಾರಿಗಳು ಇ-ಮಂಡಿ ವೇದಿಕೆ ಬಳಸುತ್ತಿದ್ದಾರೆ. ಹಾಗೂ 42 ಲಕ್ಷ ರೈತರು ಈ ಸೇವೆಗಾಗಿ ನೋಂದಾಯಿಸಿದ್ದಾರೆ. ಸುಮಾರು 298 ಲಕ್ಷ ಟನ್’ಗಳಷ್ಟು ಸರಕುಗಳ ವಹಿವಾಟು ನಡೆದಿದೆ. ಇದೆಲ್ಲದರ ಮೊತ್ತವು 56,696 ಕೋಟಿಗಳಷ್ಟಾಗುತ್ತದೆ.
ಕರ್ನಾಟಕದ ರೈತರು 2015-16ರಲ್ಲಿ 38% ಹೆಚ್ಚಿನ ಆದಾಯವನ್ನು ಇ-ಮಂಡಿಯ ಸಹಾಯದಿಂದ ಪಡೆದುಕೊಂಡಿದ್ದಾರೆ ಎಂದು ನೀತಿ ಆಯೋಗ್ ಅಧ್ಯಯನದ ವರದಿ ತಿಳಿಸಿದೆ. ರಾಷ್ಟ್ರದ ವಿವಿಧ ಮಾರುಕಟ್ಟೆಗಳನ್ನು ಹೋಲಿಸಿದರೆ ಕರ್ನಾಟಕದ ಇ-ಮಂಡಿ ವೇದಿಕೆಯಡಿ ವಹಿವಾಟಾದ ಸರಕುಗಳ ಬೆಲೆ ಹೆಚ್ಚಿನದಾಗಿದೆ. ಇದರಿಂದ ಹೆಚ್ಚಿನ ರೈತರಿಗೆ ಲಾಭವಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಈ ಯೋಜನೆಯನ್ನು ಶ್ಲಾಘಿಸಿದ್ದು, ಇದರ ಸುದುಪಯೋಗಗಳನ್ನು ಅರಿತು 2016ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ.
ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ತಂದುಕೊಡುವ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ಬೆಳೆ ಬಿಕರಿ ಮಾಡಲು ರಾಜ್ಯ ಸರಕಾರ ಹೊರತಂದ 'ಏಕೀಕೃತ ಮಾರುಕಟ್ಟೆ ವೇದಿಕೆ' ಅರ್ಥಾತ್‌ 'ಇ-ಮಾರುಕಟ್ಟೆ' ವ್ಯವಸ್ಥೆ ಈಗ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ತಂತ್ರಜ್ಞಾನದ ಆವಿಷ್ಕಾರವನ್ನು ರೈತರಿಗೆ ಲಾಭವಾಗುವಂತೆ ಮಾರ್ಪಡಿಸಿ, ಆ ಮೂಲಕ ಕೃಷಿ ಉತ್ಪನ್ನಗಳಿಗೆ ಮೌಲ್ಯ ತಂದುಕೊಡುವ ಶ್ರೇಯಸ್ಸು ಇ-ಮಾರುಕಟ್ಟೆ ಯೋಜನೆಗೆ ಸಂದಿದೆ.

ಯೋಜನೆ ಪ್ರಾರಂಭವಾದ ಎರಡೇ ವರ್ಷದಲ್ಲಿ ದೇಶದ ಗಮನ ಸೆಳೆದಿರುವ ಇ-ಮಾರುಕಟ್ಟೆ ವ್ಯವಸ್ಥೆ ನಮಗೂ ಬೇಕೆಂದು ನಾನಾ ರಾಜ್ಯಗಳ ರೈತರು ಆಯಾ ಸರಕಾರಗಳ ಮುಂದೆ ಬೇಡಿಕೆ ಇಟ್ಟಿವೆ. ಕೃಷಿಕರು, ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳು ಕೂಡ ಯೋಜನೆಗೆ ಉಘೇ ಎಂದಿದ್ದಾರೆ. ಅಧಿಕಾರಿಶಾಹಿ ಕೂಡ ಮೈ ಚಳಿ ಬಿಟ್ಟು ಅನ್ನದಾತರ ನೆರವಿಗೆ ಧಾವಿಸಿ, ಅವರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ತಂದುಕೊಡುವ ಯತ್ನ ಮಾಡಿದೆ. ಕೃಷಿ ಉತ್ಪನ್ನಗಳನ್ನು ಇ-ಮಾರ್ಕೆಟ್‌ ವ್ಯವಸ್ಥೆಗೆ ಜೋಡಿಸಿರುವ ಕರ್ನಾಟಕ ಮಾದರಿಯನ್ನು ಕೇಂದ್ರ ಸರಕಾರ ಒಪ್ಪಿದೆ. ಕೇಂದ್ರದ ಕೃಷಿ ಸಚಿವಾಲಯ ಹಾಗೂ ನೀತಿ ಆಯೋಗ ಕರ್ನಾಟಕದ ಸಾಧನೆಯನ್ನು ಬೆನ್ನು ತಟ್ಟಿದೆ. ಈಗ ರಾಜ್ಯದ ಮಾದರಿಯಲ್ಲೇ ಇಡೀ ದೇಶಕ್ಕೆ ವಿಸ್ತರಿಸುವ ಸಂಕಲ್ಪವನ್ನು ಕೇಂದ್ರ ಸರಕಾರ ಕೈಗೊಂಡಿದ್ದು, ಕಳೆದ ಏಪ್ರಿಲ್‌ನಿಂದ ಅಧಿಕೃತವಾಗಿ ಜಾರಿಗೆ ತಂದಿದೆ.