/ #department

ಇಂಧನ ಇಲಾಖೆ

ವಿದ್ಯುತ್ ಕ್ಷೇತ್ರದ ಅಭಿವೃದ್ಧಿ ರಾಜ್ಯದ ಒಟ್ಟಾರೆ ಬೆಳವಣಿಗೆಯನ್ನು ಅವಲಂಬಿಸಿದೆ. ರಾಜ್ಯ ಇಂಧನ ಇಲಾಖೆಯು ಡಿ.ಕೆ.ಶಿವಕುಮಾರ್ ಅವರ ದಕ್ಷ ನೇತೃತ್ವದಲ್ಲಿ ಹಲವು ವಿಶ್ವ ದರ್ಜೆಯ ಯೋಜನೆಗಳನ್ನು ಕೈಗೊಂಡು ವಿದ್ಯುತ್ ಪೂರೈಕೆಯ ಬಂಧವನ್ನು ಬೆಸೆಯುತ್ತಿದೆ. 2020ರ ವೇಳೆಗೆ 24X7 ವಿದ್ಯುತ್ ಪೂರೈಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ.

ಸರಿ ಸುಮಾರು 3 ದಶಕಗಳಿಂದಲೂ ರಾಜ್ಯದಲ್ಲಿ ವಿದ್ಯುತ್ ಕೊರತೆ ಇತ್ತು. ಆದರೆ ಇಂದು ವಿದ್ಯುತ್ ವಲಯದಲ್ಲಿ ಅಪರಿಮಿತವಾದ ಸಾಧನೆಯನ್ನು ರಾಜ್ಯ ಮಾಡಿದೆ. ಇದೆಲ್ಲವೂ ಸಾಧ್ಯವಾಗಿದ್ದರೆ ಅದಕ್ಕೆ ಡಿ.ಕೆ. ಶಿವಕುಮಾರ್ ಅವರ ದೂರದರ್ಶಿತ್ವ ಮತ್ತು ದಕ್ಷ ನಿರ್ವಹಣೆಯೇ ಕಾರಣ. ಬಹುಮುಖ್ಯವಾಗಿ ಸೌರಶಕ್ತಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯ ಇಂಧನ ಇಲಾಖೆಯು ತನ್ನ ಒಟ್ಟಾರೆ ವಿದ್ಯುತ್ ಉತ್ಪನ್ನದಲ್ಲಿ ಶೇ. 20ರಷ್ಟನ್ನು ನವೀಕರಿಸಬಹುದಾದ ಶಕ್ತಿಯನ್ನು ಅಲಂಬಿಸಿವೆ. ಈ ಗುರಿ ಸಾಧನೆಗೆ ಇಲಾಖೆಯು ‘ಕರ್ನಾಟಕ ಸೌರ ನೀತಿ 2014-21’ ನ್ನು ಅನಾವರಣಗೊಳಿಸಿದೆ. ಈ ನೀತಿಯನ್ನು ಪಾಲುದಾರರು ಸಹರ್ಷದಿಂದ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ರಾಜ್ಯ ಇಂಧನ ಇಲಾಖೆಯ ಕಾರ್ಯವನ್ನು ಭಾರತದ ಅತ್ಯುತ್ಕೃಷ್ಟವೆಂದು ಮೆಚ್ಚುಗೆ ಸೂಚಿಸಿದೆ. ನವೀಕರಿಸಬಹುದಾದ ಇಂಧನ ಉಪಕ್ರಮದಲ್ಲಿನ ಶ್ರೇಷ್ಠತೆಗಾಗಿ ಪ್ರಶಸ್ತಿಯನ್ನು ನೀಡಿದೆ. ರಾಜ್ಯವೀಗ ನವೀಕರಿಸಬಹುದಾದ ಶಕ್ತಿಯ 3ನೇ ಅತಿ ದೊಡ್ಡ ಉತ್ಪಾದಕವಾಗಿದೆ. ಈ ಸಾಧನೆಯ ಹಿಂದಿನ ಪ್ರೇರಕ ಶಕ್ತಿಯಾದ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು ಹೇಳಲೇ ಬೇಕು. “ನಾವು ಅಧಿಕಾರಕ್ಕೆ ಬರುವ ಮೊದಲು ಕೇವಲ 17 M.W. ವಿದ್ಯುತ್ ಉತ್ಪಾದನೆ ಮಾತ್ರ ಮಾಡಲಾಗುತ್ತಿತ್ತು. ಆದರೆ, ಈಗ 500 M.W. ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, 2020ಕ್ಕೆ ನಮ್ಮ ಗುರಿಯನ್ನು 6000 M.W. ಸೌರಶಕ್ತಿ ಉತ್ಪಾದನೆ ಮಾಡಲು ಗುರಿ ಹೊಂದಿದ್ದೇವೆ” ಎಂದು ಸಚಿವರು ನುಡಿಯುತ್ತಾರೆ. ನವೀಕರಿಸಬಹುದಾದ ಇಂಧನ ಮೂಲಗಳಿಂದ ರಾಜ್ಯವು 7,458 M.W.ವಿದ್ಯುತ್ ಉತ್ಪಾದನೆಯೊಂದಿಗೆ ರಾಜ್ಯವು ದೇಶದಲ್ಲಿಯೇ 3 ನೇ ಸ್ಥಾನದಲ್ಲಿದೆ. ಅತಿ ಶೀಘ್ರದಲ್ಲಿಯೇ ಮಹಾರಾಷ್ಟ್ರವನ್ನು ಹಿಂದಿಕ್ಕಿ ನಾವು 2ನೇ ಸ್ಥಾನಕ್ಕೆ ಜಿಗಿಯುತ್ತೇವೆ”

20770095_1129365840527706_1323067379152784207_n

ಕಳೆದ 4 ವರ್ಷಗಳಲ್ಲಿ ರಾಜ್ಯ ಇಂಧನ ಇಲಾಖೆಯ ಸಾಧನೆಗಳು:

ವಿದ್ಯುತ್ ಶಕ್ತಿ ಉತ್ಪಾದನೆ

 1. ಹೆಚ್ಚುವರಿಯಾಗಿ 4 ವರ್ಷಗಳಲ್ಲಿ 5848 M.W. ವಿದ್ಯುತ್ ಉತ್ಪಾದನೆ, ಕರ್ನಾಟಕದ ಇತಿಹಾಸದಲ್ಲಿಯೇ ಇದೊಂದು ದಾಖಲೆ.

 2. ಸೌರ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯವು ನಂಬರ್ ಒನ್ ಸ್ಥಾನದಲ್ಲಿದ್ದು 3,293 M.W. ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ನಮ್ಮ ನಂತರದಲ್ಲಿ ಆಂಧ್ರ ಪ್ರದೇಶ (2,664 M.W.) ತೆಲಂಗಾಣವು (2446 M.W.) ಉತ್ಪಾದನೆ ಮಾಡುತ್ತಿದೆ. ಬೆಂಗಳೂರಿನಲ್ಲಿ 2014-15ನೇ ಸಾಲಿನಲ್ಲಿ ಛಾವಣಿ ಮೇಲಿನ ಸೌರ ವಿದ್ಯುತ್ ಉತ್ಪಾದನೆಯಲ್ಲಿ 0.364 M.W. ಗಳಿಂದ 2016-17ನೇ ಸಾಲಿಗೆ ಅದು 29.14 M.W.ಗೆ ಏರಿದೆ. ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ಇದು 36.75 M.W.ಗಳಷ್ಟಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 61. 34 M.Wಗಳಷ್ಟು ಮೇಲ್ಚಾವಣಿ ಸೌರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ಛಾವಣಿ ಸೌರ ಘಟಕದ ಹೆಚ್ಚುವರಿ ವಿದ್ಯುತ್ ಅನ್ನು BESCOM ಗೆ ಪೂರೈಸುತ್ತಿರುವುದು ರೂಫ್ ಟಾಪ್ ಸೋಲಾರ್ ಉತ್ಪಾದನೆಯ ಯಶಸ್ಸಿನ ಒಂದು ಸಣ್ಣ ಉದಾಹರಣೆಯಾಗಿದೆ.

 3. ಪಾವಗಡದ ಬೃಹತ್ ಸೌರ ವಿದ್ಯುತ್ ಯೋಜನೆ ವಿಶ್ವದ ಬೃಹತ್ ಸೌರ ಉದ್ಯಾನ(ಸೋಲಾರ್ ಪಾರ್ಕ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಇತಿಹಾಸದಲ್ಲೇ ಇದೊಂದು ಹೆಗ್ಗುರುತು. ಈ ಯೋಜನೆಯಡಿ 2000 M.W. ಸಾಮರ್ಥ್ಯದ ವಿದ್ಯುತ್ ನ್ನು ತುಮಕೂರಿನಲ್ಲಿ ಉತ್ಪಾದಿಸಬಹುದಾಗಿದೆ. ಈ ಯೋಜನೆಯು ಸುಮಾರು 13,000 ಎಕರೆಗಳಷ್ಟು ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಇದಕ್ಕಾಗಿ ರೈತರ ಭೂಮಿಯಲ್ಲಿ 1 ಇಂಚು ಜಾಗವನ್ನು ಕೂಡ ಸ್ವಾಧೀನ ಪಡಿಸಿಕೊಳ್ಳದೆ, ಅವರಿಂದ ಗುತ್ತಿಗೆ ಆಧಾರದ ಮೇಲೆ ಜಮೀನು ಪಡೆದುಕೊಳ್ಳಲಾಗಿದೆ. ರೈತರಿಗೆ ಎಕರೆಗೆ ವರ್ಷಕ್ಕೆ ರೂ. 21,000 ಹಣವನ್ನು ಪಾವತಿಸಲಾಗುತ್ತಿದೆ. ಮತ್ತು ಎರಡು ವರ್ಷಕ್ಕೊಮ್ಮೆ ಶೇ. 5ರಷ್ಟು ಹೆಚ್ಚಿಸಲು ಅವಕಾಶ ಸಹ ಕಲ್ಪಿಸಲಾಗಿದೆ. ಮೊದಲ ಹಂತದ ಈ ಯೋಜನೆಯು 2017ನೇ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಂಡು 600 M.W. ವಿದ್ಯುತ್ ಉತ್ಪಾದಿಸಲಿದೆ.

 4. ನೂತನ ವಿದ್ಯುತ್ ಸ್ಥಾವರಗಳು - ಬಳ್ಳಾರಿ ಘಟಕ-3, ಯರಮರಸ್ 1&2 ಗಳ ಮೂಲಕ ಒಟ್ಟು 23 ಸಾವಿರ M.W. ವಿದ್ಯುತ್ ಉತ್ಪಾದನೆ ಚಾಲನೆಯಲ್ಲಿದೆ.

 5. ರೈತರಿಗೆ ತಮ್ಮ ಭೂಮಿಯ ಮೌಲ್ಯವನ್ನು ತಿಳಿಯುವಂತೆ ಮಾಡಲು, ಕರ್ನಾಟಕ ರಾಜ್ಯವು ಒಂದು ಅನನ್ಯ ಯೋಜನೆಯನ್ನು ರೂಪಿಸಿದ್ದು 300 M.W. ವಿದ್ಯುತ್ ಉತ್ಪಾದನೆಯನ್ನು ರೈತರಿಗೆ ಮೀಸಲಿರಿಸಿದೆ. ಇದರಂತೆ ರೈತರು ತಮ್ಮ ಕೃಷಿ ಜಮೀನಿನಲ್ಲಿ 1-3 M.W. ವಿದ್ಯುತ್ ಉತ್ಪಾದನಾ ಘಟಕವನ್ನು ತಮ್ಮ ಕೃಷಿ ಭೂಮಿಯಲ್ಲಿ ಸ್ಥಾಪಿಸಬಹುದಾಗಿದ್ದು ಪ್ರತಿ ಯುನಿಟ್ ಗೆ ರೂ. 8.40 ವಿಶೇಷ ದರದಲ್ಲಿ ಗ್ರಿಡ್ ಗೆ ಪೂರೈಸಬಹುದಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಕೂಡ ಅಳವಡಿಸಿಕೊಳ್ಳುತ್ತಿದ್ದು ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಈ ವರೆವಿಗೂ ಸುಮಾರು 144 ಮೆ.ವ್ಯಾ. ಸಾಮರ್ಥದ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಉಳಿದ 156 ಮೆ.ವ್ಯಾ. ಅನ್ನು 2018ಕ್ಕೆ ಸೇರ್ಪಡೆಗೊಳಿಸಲಾಗುವುದು.

 6. ರಾಜ್ಯದ ಪ್ರತಿಯೊಂದು ಹಿಂದುಳಿದ ತಾಲ್ಲೂಕು ಕೂಡ “ ವಿಕೇಂದ್ರೀಕೃತ ಸೌರ ವಿದ್ಯುತ್ ಉತ್ಪಾದನಾ ವಿತರಣೆ” ಯೋಜನೆಯಲ್ಲಿ ತನ್ನದೇ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು ನಿರ್ಮಿಸುತ್ತಿದೆ. ಪ್ರತಿ ತಾಲ್ಲೂಕಿಗೆ 20 ಮೆ.ವ್ಯಾ.ನಂತೆ ರಾಜ್ಯಾಧ್ಯಂತ 60 ತಾಲ್ಲೂಕುಗಳಲ್ಲಿ 1,200 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

 7. ಯಲಹಂಕದ ಕೆಪಿಸಿಎಲ್ ಘಟಕವು 350 M.W. ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು 2019ನೇ ಜೂನ್ ನಿಂದ ಈ ಘಟಕವು ಪರಿಪೂರ್ಣವಾಗಿ ವಿದ್ಯುತ್ ಉತ್ಪಾದಿಸಲಿದೆ.

DKShivakumar-at-Jog-Falls-3

ವಿದ್ಯುತ್ ಪ್ರಸರಣ

 1. ಪ್ರಸರಣ ಮತ್ತು ವಿತರಣೆ ನಷ್ಟವನ್ನು ಕಳೆದ 4 ವರ್ಷಗಳಲ್ಲಿ ಕ್ರಮವಾಗಿ 3.81% ರಿಂದ 3.22% ಮತ್ತು 16.10% ಗೆ 14.09% ಗೆ ಇಳಿಸಲಾಗಿದೆ. ಪ್ರಸರಣ ಜಾಲವನ್ನು ಬಲಪಡಿಸಲು, 117 ಹೊಸ ಉಪ-ಕೇಂದ್ರಗಳು ಮತ್ತು 3233 ರವಾನೆ ಮಾರ್ಗಗಳ ಸರ್ಕ್ಯೂಟ್ ಕಿಲೋಮೀಟರ್ ಅನ್ನು ಸ್ಥಾಪಿಸಲಾಗಿದೆ.

 2. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ 174 ಟ್ರಾನ್ಸ್ಫಾರ್ಮರ್ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ. 137 ಹೊಸ ಟ್ರಾನ್ಸ್ಫಾರ್ಮರ್ ರಿಪೇರಿ ಕೇಂದ್ರಗಳನ್ನು ತೆರೆದಿದ್ದು, ಇದರಿಂದಾಗಿ ರೈತರು ತಮ್ಮ ಹಾಳಾದ ಟ್ರಾನ್ಸ್ಫಾರ್ಮರ್ಗಳನ್ನು 3 ದಿನಗಳಲ್ಲಿ ದುರಸ್ಥಿ ಅಥವಾ ಬದಲಾಯಿಸಬಹುದಾಗಿದೆ.

 3. ಭಾರತದಲ್ಲಿ ಮೊದಲ ಬಾರಿಗೆ ಗ್ರಾಹಕರ ಅನುಕೂಲಕ್ಕಾಗಿ '1912' ಟೋಲ್-ಫ್ರೀ (ಉಚಿತ) ಗ್ರಾಹಕ ಸೇವೆ ಸೇವೆಯನ್ನು ಪ್ರಾರಂಭಿಸಲಾಗಿದೆ. ದಿನ ನಿತ್ಯ ಸುಮಾರು 35,0000 ಕರೆಗಳು ಈ ನಂಬರ್ ಗೆ ಬರುತ್ತಿವೆ. ಎಲ್ಲ ಜಿಲ್ಲೆಗಳಲ್ಲೂ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು ನಾಮ ನಿರ್ದೇಶನಗೊಂಡ ಒಮ್ ಬಡ್ಸ್ ಮನ್ ಕೇಂದ್ರಗಳನ್ನು ತೆರೆಯಲಾಗಿದೆ.

Namma-Karntaka-_energy_dept-1

ಕಲ್ಯಾಣ ಕಾರ್ಯಕ್ರಮಗಳು

 1. ಇಂಧನ ಇಲಾಖೆಯು ಸೇವಾ ಉದ್ದೇಶಿತ ಸಂಸ್ಥೆಯಾಗಿದ್ದು ಅದರ ಕಾರ್ಯಕ್ಷಮತೆಯು ಗ್ರಾಹಕರ ತೃಪ್ತಿಯ ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರ ಸೇರ್ಪಡೆಯಾಗುತ್ತಿರುವುದರಿಂದ, ಮಾನವ ಶಕ್ತಿಯ ಕೊರತೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯಿಂದ ಪಾರಾಗಲು ಇಲಾಖೆಯು ಅತ್ಯಂತ ಪಾರದರ್ಶಕ ವ್ಯವಸ್ಥೆಯಡಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಎಲ್ಲಾ ಶ್ರೇಯಾಂಕಗಳಲ್ಲೂ 21,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ.

 2. ಕೃಷಿ ಕಾರ್ಮಿಕರಿಗೆ ದಿನಕ್ಕೆ 7 ಗಂಟೆಗಳ 3- ಫೇಸ್ ವಿದ್ಯುತ್ ಒದಗಿಸುವುದು ಈ ಸರ್ಕಾರದ ಹಾಗೂ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಈ ಗುರಿ ಸಾಧಿಸಲು ಸರ್ಕಾರವು ರೂ. 28,450 ಕೋಟಿ ಗಳನ್ನು ವಿವಿಧ ಯೋಜನೆಗಳಿಗೆ ವ್ಯಯ ಮಾಡಿದೆ.

 3. ಅತ್ಯಂತ ಯಶಸ್ವಿಯಾದ 'ಹೊಸ ಬೆಳಕು' ಯೋಜನೆಯ ಮುಖಾಂತರ ಸುಮಾರು 1.72 ಕೋಟಿ ಎಲ್ಇಡಿ ಬಲ್ಬ್ಗಳನ್ನು ಲಕ್ಷಾಂತರ ಕುಟುಂಬಗಳಿಗೆ ವಿತರಿಸಿದೆ. ಬಡತನ ರೇಖೆಗಿಂತಲೂ ಕೆಳಗಿನ ಕುಟುಂಬಗಳಿಗೆ 19.1 ಲಕ್ಷ ಸಿಎಫ್ ಎಲ್ ಬಲ್ಬ್ ಗಳನ್ನು ವಿತರಿಸಲಾಗಿದೆ. 33ಸಾವಿರ ಸೌರ ದೀಪಗಳನ್ನು ಹಳ್ಳಿಗಾಡು ಪ್ರದೇಶದ ಜನರಿಗೆ ವಿತರಿಸಲಾಗಿದೆ.

 4. ಉದಯ ಯೋಜನೆ ಅಡಿ ಕೇಂದ್ರ ಸರ್ಕಾರವು ‘ಬೆಸ್ಕಾಂ’ ಅನ್ನು ಶ್ರೇಷ್ಠ ಸಾಧಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಇನ್ನು ಳಿದ ಎಸ್ಕಾಂಗಳಾದ ‘HESCOM’ & ‘CESCOM’ ಗಳು ಕೂಡ ಸ್ಪರ್ಧೆಯಲ್ಲಿದ್ದು ಮೊದಲ 7 ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಪ್ರಸರಣ ಮತ್ತು ವಿತರಣಾ ಹಂತಗಳಲ್ಲಿ ಇಲಾಖೆಯು ಕೈಗೊಂಡ ಕಾರ್ಯನೀತಿ ಸುಧಾರಣೆಗಳ ಒಂದು ಪುರಾವೆಯಾಗಿದೆ.

 5. ಭಾಗ್ಯಜ್ಯೋತಿ ಯೋಜನೆಯಡಿ ಬಿಪಿಎಲ್ ಕುಟುಂಬಗಳು 40 ಉಚಿತ ಯುನಿಟ್ ಗಳನ್ನು ನೀಡಲಾಗುತ್ತಿದೆ. ಈ ಹಿಂದೆ ಕೇವಲ 18 ಯುನಿಟ್ ಉಚಿತ ವಿದ್ಯುತ್ ಪೂರೈಕೆಯಾಗುತ್ತಿತ್ತು.

 6. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ 14, 436 ಫಲಾನುಭವಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಬೋರ್ ವೆಲ್ ಕೊರೆಸಲು ಮತ್ತು ಪಂಪ್ ಸೆಟ್ ಅಳವಡಿಸಿಕೊಳ್ಳಲು ‘ಸೂರ್ಯಜ್ಯೋತಿ ರೈತರ ಬಾಳಿನ ಪರಂಜ್ಯೋತಿ’ ಯೋಜನೆಯನ್ನು ಜಾರಿಗೆ ತರಲಾಗಿದೆ.

 7. ಇಂಧನ ಇಲಾಖೆಗೆ ರೂ. 1,17,504 ಕೋಟಿಗಳಷ್ಟು ಹಣ ‘ಇನ್ವೆಸ್ಟ್ ಕರ್ನಾಟಕದ ಮೂಲಕ ಹರಿದು ಬಂದಿದ್ದು ಒಟ್ಟಾರೆ ಹೂಡಿಕೆಯ ಶೇ. 30ರಷ್ಟು ಬಂಡವಾಳ ಇದಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Energy