/ CM

ಹಾಸನ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಾಸನ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಎಸ್.ಎಂ.ಕೃಷ್ಣ ಬಡಾವಣೆ ಮೂಲಕ ಹಾಸನ ನಗರದ ಹೊರವಲಯದಲ್ಲಿ ಅತ್ಯಾಧುನಿಕವಾದ ಸುಸಜ್ಜಿತ ಬಡಾವಣೆಯನ್ನು ನಿರ್ಮಿಸಿ ಸುಮಾರು 6335 ಕ್ಕೂ ಅಧಿಕ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು 270 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
 2. ಹಾಸನ ನಗರಕ್ಕೆ ನೀರು ಪೂರೈಸುವ ಅಮೃತ್ ಯೋಜನೆ ಬಹುತೇಕ ಪೂರ್ಣಗೊಳ್ಳುತ್ತಿದ್ದು ಇದಕ್ಕಾಗಿ 117 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
 3. 26 ಕೋಟಿ ರೂಪಾಯಿ ವೆಚ್ಚದಲ್ಲಿ ಅರಸೀಕೆರೆ ತಾಲ್ಲೂಕಿನ 70 ಗ್ರಾಮಗಳಲ್ಲಿ ಯಗಚಿ ಜಲಾಶಯದಿಂದ ನೀರು ಸರಬರಾಜು ಮಾಡುವ ಯೋಜನೆ ಪೂರ್ಣಗೊಂಡಿದೆ.
 4. ಅರಸೀಕೆರೆ ತಾಲ್ಲೂಕಿನ 530 ಗ್ರಾಮಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು 254.32 ಕೋಟಿ ರೂಪಾಯಿ ಯೋಜನೆ ರೂಪುಗೊಂಡಿದೆ.

Hassan

 1. ಅರಸೀಕೆರೆ ನಗರದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವತಿಯಿಂದ 6415 ಲಕ್ಷ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
 2. 4272 ಲಕ್ಷ ರೂಪಾಯಿ ವೆಚ್ಚದಲ್ಲಿ ಹೇಮಾವತಿ ನದಿಯಿಂದ ಚನ್ನರಾಯಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಜಾರಿಗೊಳಿಸಲಾಗಿದ್ದು ಅರಕಲಗೂಡು ಪಟ್ಟಣದಲ್ಲಿ 18 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ಯೋಜನೆ ಜಾರಿಗೊಳಿಸಲಾಗಿದೆ.
 3. ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಳೆದ ಐದು ವರ್ಷಗಳಲ್ಲಿ ಸುಮಾರು 100 ಕೋಟಿಗೂ ಅಧಿಕ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ, ಅಣೆಕಟ್ಟೆ ನಿರ್ಮಾಣ, ಏತನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
 4. ಎತ್ತಿನಹಳ್ಳ ಯೋಜನೆ ಕಾಮಗಾರಿ ಸಕಲೇಶಪುರ ತಾಲ್ಲೂಕಿನಲ್ಲಿ ಚುರುಕಿನಿಂದ ಸಾಗಿದ್ದು ಈಗಾಗಲೇ ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ, ಪೈಪ್‍ಲೈನ್ ಅಳವಡಿಕೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

Hassan-INCK

 1. ಸಂಕಷ್ಟದಲ್ಲಿರುವ ರೈತರ ಹಿತಕಾಯುವ ಸಲುವಾಗಿ ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿ ರೈತರು ಮಾಡಿದ 50 ಸಾವಿರ ರೂಪಾಯಿವರೆಗಿನ ಸಾಲಮನ್ನಾದಿಂದ ಹಾಸನ ಜಿಲ್ಲೆಯ 1.15 ಲಕ್ಷ ರೈತರಿಗೆ ಅನುಕೂಲ, 395 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ.
 2. ಕೃಷಿ ಭಾಗ್ಯ ಯೋಜನೆಯಡಿ 36 ಕೋಟಿ ರೂಪಾಯಿ ವೆಚ್ಚ 122 ಪಾಲಿ ಹೌಸ್ ಹಾಗೂ 2959 ಕೃಷಿ ಹೊಂಡಗಳ ನಿರ್ಮಾಣ. ಜಿಲ್ಲೆಯಲ್ಲಿ 8 ಕೃಷಿ ಯಂತ್ರಧಾರೆಗಳ ಸ್ಥಾಪನೆ.
 3. ನಗರಾಭಿವೃದ್ಧಿ: ಹಾಸನ ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳು ಕಳೆದ 5 ವರ್ಷಗಳಲ್ಲಿ ಎಸ್.ಎಫ್.ಸಿ ಮುಕ್ತ ನಿಧಿಯಲ್ಲಿ 41.83 ಕೋಟಿ ರೂಪಾಯಿ ವೆಚ್ಚದಲ್ಲಿ 127 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ.

Hassan-1

 1. ನಗರೋತ್ಥಾನ 2 ಹಾಗೂ 3ನೇ ಹಂತದ ಯೋಜನೆಗಳಿಗೆ 159 ಕೋಟಿ ವೆಚ್ಚ ನಿಗಧಿ ಪಡಿಸಿದ್ದು ಈಗಾಗಲೇ 61.91 ಕೋಟಿ ರೂಪಾಯಿ ವೆಚ್ಚದಲ್ಲಿ 163 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ.
 2. 500 ಕೋಟಿ ರೂಪಾಯಿ ವೆಚ್ಚದಲ್ಲಿ ಹೇಮಾವತಿ ಎಡದಂಡೆ ನಾಲಾ ಆಧುನಿಕರಣ (0 ಕಿ.ಮೀ. ನಿಂದ 72ರ ವರೆಗೆ) ರೂ: 560 ಕಾಮಗಾರಿ ಕೈಗೊಳ್ಳಲಾಗಿದ್ದು ಹೇಮಾವತಿ ಬಲದಂಡೆ ನಾಲೆಯಡಿಯಲ್ಲಿ ಬರುವ ವಿತರಣಾ ನಾಲೆ 35ರ ಆಧುನಿಕರಣಕ್ಕೆ ರೂ: 19.95 ಕೋಟಿ ವೆಚ್ಚ ಮಾಡಲಾಗಿದೆ.
 3. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ 64.2 ಕೋಟಿ ರೂಪಾಯಿ ವೆಚ್ಚದಲ್ಲಿ 139.85 ಕಿ.ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಯಡಿ 10.27 ಕೋಟಿ ರೂಪಾಯಿ ವೆಚ್ಚದಲ್ಲಿ 32.36 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ.
 4. ರಾಜ್ಯ ಹೆದ್ದಾರಿ ಅಭಿವೃದ್ಧಿ 2ನೇ ಹಂತದ ಯೋಜನೆಯಡಿ 226 ಕೋಟಿ ರೂಪಾಯಿ ವೆಚ್ಚದಲ್ಲಿ 272.46 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದ್ದು ಒಟ್ಟಾರೆ 10 ಸೇತುವೆಗಳ ನಿರ್ಮಾಣ ಮಾಡಲಾಗಿದೆ.

#NavaKarnatakaNirmana

ಈ ವೀಡಿಯೋ ವೀಕ್ಷಿಸಿ

WhatsApp-Image-2018-01-04-at-12.24.21-PM

WhatsApp-Image-2018-01-04-at-12.24.22-PM

WhatsApp-Image-2018-01-04-at-12.24.23-PM

WhatsApp-Image-2018-01-04-at-12.24.24-PM

WhatsApp-Image-2018-01-04-at-12.24.25-PM--1-

WhatsApp-Image-2018-01-04-at-12.24.26-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ