/ CM

ಹಾವೇರಿ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಾವೇರಿ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಕಾಗಿನೆಲೆ ಗ್ರಾಮದಲ್ಲಿ 351 ಲಕ್ಷ ರೂ. ವೆಚ್ಚದಲ್ಲಿ ಪರಿಸರ ಸ್ನೇಹಿ ಕನಕ ಉದ್ಯಾನವನ ಮತ್ತು ಕನಕರ ಜನ್ಮ ಭೂಮಿ ಬಾಡಾದಲ್ಲಿ 125 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ, ವಿಶ್ರಾಂತಿಧಾಮ ನಿರ್ಮಾಣ ಮಾಡಲಾಗಿದೆ.
 2. ತುಂಗಾ ಮೇಲ್ದಂಡೆ ಯೋಜನೆಯಡಿ ಹಾವೇರಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 197 ಗ್ರಾಮಗಳ 80,494 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 1991-92ರ ಸಾಲಿನಲ್ಲಿ ರೂ.2562 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.
 3. ಧರ್ಮಾ ಜಲಾಶಯ ಯೋಜನೆಯಡಿ ಒಟ್ಟು 62 ಕಿ.ಮೀ. ನಾಲಾ ಆಧುನೀಕರಣ ಕಾಮಗಾರಿಗಳನ್ನು ರೂ.23.73 ಕೋಟಿ ಮತ್ತು 22.37 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು, ಈವರೆಗೆ ಶೇ.80 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ

Haveri_GoK

 1. ವರದಾ ನದಿಯಿಂದ 1.00 ಟಿ.ಎಂ.ಸಿ ನೀರನ್ನು ಎರಡು ಹಂತದಲ್ಲಿ ಎತ್ತಿ ಬ್ಯಾಡಗಿ ತಾಲೂಕಿನ 22 ಗ್ರಾಮದ 5261 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ಈ ಯೋಜನೆಗೆ 3274.92 ಲಕ್ಷ ರೂ.ಗಳನ್ನು ವೆಚ್ಚಮಾಡಲಾಗಿದೆ.
 2. ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹೊಂಕಣ ಗ್ರಾಮದ ಬ್ಯಾರೇಜಿನ ಮೇಲ್ಭಾಗದಲ್ಲಿ 0.76 ಟಿ.ಎಂ.ಸಿ. ನೀರನ್ನು ಎತ್ತಿ ತಿಳುವಳ್ಳಿ, ಯತ್ತಿನಹಳ್ಳಿ ಮತ್ತು ಇನಾಂ ಲಕಮಾಪೂರ ಗ್ರಾಮಗಳ ಒಟ್ಟು 2975 ಎಕರೆ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ರೂ. 34.00 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
 3. ಹಾವೇರಿ ಜಿಲ್ಲೆಯಲ್ಲಿ ಜುಲೈ 2013 ರಿಂದ ಬಿ.ಪಿ.ಎಲ್.ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ 31,565 ಅಂತ್ಯೋದಯ ಪಡಿತರ ಹಾಗೂ 2,95,750 ಬಿ.ಪಿ.ಎಲ್ ಹಾಗೂ 41,008 ಎ.ಪಿ.ಎಲ್.ಪಡಿತರ ಕುಟುಂಬಗಳಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ, 10,03,905 ಬಿಪಿಎಲ್ ಕುಟುಂಬಗಳಿಗೆ ಆಹಾರ ವಿತರಿಸಲಾಗುತ್ತಿದೆ.

Haveri_INC-2

 1. ಕೃಷಿ ಭಾಗ್ಯ ಯೋಜನೆಯಡಿ ಈ ವರೆಗೆ ಜಿಲ್ಲೆಯಲ್ಲಿ 2833 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು ಇದಕ್ಕಾಗಿ ರೂ. 4148.19 ಲಕ್ಷ ವೆಚ್ಚ ಮಾಡಲಾಗಿದೆ. ಹಾಗೂ ಕೃಷಿ ಯಾಂತ್ರೀಕರಣ ಯೋಜನೆಯಡಿ ರೂ. 5372 ಲಕ್ಷ ಸಹಾಯಧನದಲ್ಲಿ 33839 ಫಲಾನುಭವಿಗಳಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ.
 2. ಋಣಮುಕ್ತ ಯೋಜನೆಯಡಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಸಾಲ ಪಡೆದ 889 ಜನರ ಸಾಲ ಮನ್ನಾ ಮಾಡಿದ್ದು ಇದಕ್ಕಾಗಿ, 591 ಲಕ್ಷ ರೂ. ಅನುದಾನ ನೀಡಲಾಗಿದೆ.
 3. ಗ್ರಾಮೀಣ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯಾದ್ಯಂತ ಶುದ್ಧ ನೀರಿನ ಘಟಕ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಕಳೆದ ನಾಲ್ಕು ವರ್ಷದಲ್ಲಿ 21447.17 ಲಕ್ಷ ರೂ.ವೆಚ್ಚ ಮಾಡಲಾಗಿದೆ. 3494 ವಿವಿಧ ನೀರು ಪೂರೈಕೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

Haveri

 1. ಹಾವೇರಿ ಜಿಲ್ಲೆ ಹಿರೆಕೇರೂರ ತಾಲೂಕ ರಟ್ಟಿಹಳ್ಳಿಯನ್ನು ಹೊಸ ತಾಲೂಕಾಗಿ ಷೋಷಿಸಲಾಗಿದ್ದು ಹಾವೇರಿ ಜಿಲ್ಲೆಯಲ್ಲಿ ತಲಾ 50 ಸಾವಿರದಂತೆ 35106 ರೈತರ ಸಾಲ ಮನ್ನಾ ಮಾಡಿದ್ದು ಇದಕ್ಕಾಗಿ 106 ಕೋಟಿ 45 ಲಕ್ಷ 93 ಸಾವಿರ ರೂ. ವೆಚ್ಚ ಮಾಡಲಾಗಿದೆ.
 2. ಸವಣೂರ ಪಟ್ಟಣದಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ. ವಿ.ಕೃ ಗೀಕಾಕ್ ಸ್ಮಾರಕ ಭವನ ನಿರ್ಮಾಣ. ರೂ. 375 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ.
 3. ರೂ.347 ಲಕ್ಷ ವೆಚ್ಚದಲ್ಲಿ ಹಾವೇರಿ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ. ರೂ.2.69ಕೋಟಿ ವೆಚ್ಚದಲ್ಲಿ ಹಾವೇರಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಟ್ಟಡ ನಿರ್ಮಾಣ. ರೂ.150 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೆಂದ್ರ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
 4. ಬಡವರಿಗಾಗಿ ಇರುವ ವಿವಿಧ ವಸತಿ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 36,258 ವಸತಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು 33,219 ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ 15,739 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು. ಉಳಿದ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ.

#NavaKarnatakaNirmana

WhatsApp-Image-2017-12-23-at-1.35.19-PM

WhatsApp-Image-2017-12-23-at-1.35.20-PM

WhatsApp-Image-2017-12-23-at-1.35.21-PM

WhatsApp-Image-2017-12-23-at-1.35.22-PM

WhatsApp-Image-2017-12-23-at-1.35.23-PM

WhatsApp-Image-2017-12-23-at-1.35.24-PM

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ