/ departments

ಉನ್ನತ ಶಿಕ್ಷಣ ಇಲಾಖೆ

ಉನ್ನತ ಶಿಕ್ಷಣ ಮಂತ್ರಿಗಳಾದ ಶ್ರೀ ಬಸವರಾಜ ರಾಯರೆಡ್ಡಿಯವರು ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕವನ್ನು ದೇಶದ ಜ್ಞಾನಕೆಂದ್ರವನ್ನಾಗಿ ಉಳಿಸಿಕೊಳ್ಳಲು ತೀವ್ರವಾಗಿ ಶ್ರಮವಹಿಸುತ್ತಿದ್ದಾರೆ. ಇಲಾಖೆಯು ಸುಮಾರು ೮ ಲಕ್ಷ ವಿದ್ಯಾರ್ಥಿಗಳ ಒಳಿತಿಗಾಗಿ ೧೧,೦೦೦ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ವೆಚ್ಚ ಮಾಡಿದೆ. ಸಚಿವಾಲಯದಿಂದ ರೂಪಿತವಾದ ವಿವಿಧ ಉಪಕ್ರಮಗಳು ಮತ್ತು ಯೋಜನೆಗಳು

ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬಿ.ಎ.ಎಸ್.ಇ)
ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನೋಮಿಕ್ಸ್ (ಬಿ.ಎ.ಎಸ್.ಇ)ನ್ನು ಅರ್ಥಶಾಸ್ತದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ಲಂಡನ್ ಸ್ಕೂಲ್ ಆಫ್ ಎಕನೋಮಿಕ್ಸ್ ರೀತಿಯಲ್ಲಿ ಸ್ಥಾಪಿಸಲಾಗಿದೆ. ಈ ಸಂಸ್ಥೆಗೆ ಧಾಖಲಾದ ವಿದ್ಯಾರ್ಥಿಗಳು ಅರ್ಥಶಾಸ್ತ್ರದ ಬಗ್ಗೆ ಅಂಬೇಡ್ಕರ್‌ರವರಿಗೆ ಇದ್ದಂತಹ ನೋಟ ಮತ್ತು ಅಂಶಗಳಾದ ತಾರತಮ್ಯವಾದ ಅರ್ಥಶಾಸ್ತ್ರ, ಜಾತಿ, ವಿತ್ತೀಯ ಅರ್ಥಶಾಸ್ತ್ರ, ಸಂಯುಕ್ತ ರಾಜ್ಯಗಳ ಹಣಕಾಸಿನ ಬಗ್ಗೆ ಅಭ್ಯಾಸ ಮಾಡುತ್ತಾರೆ. ಬಿ.ಎ.ಎಸ್.ಇ ಸಂಸ್ಥೆಯು ವಿಜ್ಞಾನ ಪದವಿ (ಗೌರವ ಪದವಿ) ಅರ್ಥಶಾಸ್ತ್ರ - ಪರಿವಿಡಿಯನ್ನು ಪ್ರಾರಂಭಿಸಿದ್ದು ೨೦೧೭-೧೮ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ೫೦ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಿದೆ. ರಾಜ್ಯ ಸಚಿವ ಸಂಪುಟವು ೧೫೦ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು ಕಟ್ಟಡವು ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಭಾರತಿ ಆವರಣದಲ್ಲಿ ೪೩.೩೫ ಎಕರೆಯಲ್ಲಿ ನಿರ್ಮಾಣವಾಗಲಿದೆ ಹಾಗೂ ಈ ಕಾಮಗಾರಿಗಾಗಿ ೧೫೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯು ಜ್ಞಾನಭಾರತಿ ಆವರಣದ ವಿಶುವಲ್ ಆರ್ಟ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಬೆಂಗಳೂರು ಶಾಲೆಯ ಶಿಕ್ಷಣ ಮತ್ತು ಪಠ್ಯಕ್ರಮವನ್ನು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾರ್ಗದರ್ಶನದ ಮೇರೆಗೆ ತಯಾರಿಸಲಾಗುವುದು. ಈ ಸಂಸ್ಥೆಗೆ ದಾಖಲಾದ ವಿದ್ಯಾರ್ಥಿಗಳು ಅರ್ಥಶಾಸ್ತ್ರದ ಬಗ್ಗೆ ಅಂಬೇಡ್ಕರ್‌ರವರಿಗೆ ಇದ್ದಂತಹ ನೋಟ ಮತ್ತು ಇತರೆ ಅಂಶಗಳಾದ ತಾರತಮ್ಯವಾದ ಅರ್ಥಶಾಸ್ತ್ರ, ಜಾತಿ, ವಿತ್ತೀಯ ಅರ್ಥಶಾಸ್ತ್ರ, ಸಂಯುಕ್ತ ರಾಜ್ಯಗಳ ಹಣಕಾಸಿನ ಕುರಿತು ಅಭ್ಯಾಸ ಮಾಡುತ್ತಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)
ಕರ್ನಾಟಕ ರಾಜ್ಯ ಸರ್ಕಾರವು ೪೭೦ ಎಕರೆ ಭೂಮಿಯನ್ನು ಭಾರತದ ಪ್ರಧನ ತಂತ್ರಜ್ಞಾನ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಲು ಮಂಜೂರು ಮಾಡಿದೆ. ಕರ್ನಾಟಕದ ಉತ್ತರದಲ್ಲಿರುವ ವಾಟರ್ ಅಂಡ್ ಲ್ಯಾಂಡ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಡಬ್ಲ್ಯೂ.ಎ.ಎಲ್.ಎಂ.ಐ) ಕ್ಯಾಂಪಸ್ ಆಫ್ ಐ.ಐ.ಟಿ ಧಾರವಾಡವು ಸಂಪೂರ್ಣವಾಗಿ ಸುಸಜ್ಜಿತವಾದ ಕೊಠಡಿ, ಪ್ರಯೋಗಾಲಯ ಮತ್ತು ಆಧುನಿಕ ವಿದ್ಯಾರ್ಥಿನಿಲಯವನ್ನು ಹೊಂದಿದೆ. ಮೊದಲ ಕೆಲವು ವರ್ಷಗಳ ಕಾಲ ಈ ತಾತ್ಕಾಲಿಕವಾದ ಕ್ಯಾಂಪಸ್ ಐ.ಐ.ಟಿ ಧಾರವಾಡಕ್ಕೆ ಅಗತ್ಯವಿರುವುದನ್ನು ಪೂರೈಸಲಿದೆ. ಐಐಟಿ ಧಾರವಾಡದ ಆವರಣವು ಪೂಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.೪)ನಿಂದ ೨ ಕಿ.ಮೀ ದೂರದಲ್ಲಿದ್ದು ಮುಂದಿನ ದಿನಗಳಲ್ಲಿ ಸಿದ್ಧವಾಗಲಿದೆ. ಪ್ರಾರಂಭಿಕವಾಗಿ ವಿದ್ಯಾರ್ಥಿಗಳನ್ನು ೩ ಪದವಿಗಳಿಗೆ ದಾಖಲಿಸಿಕೊಳ್ಳಲಾಗುವುದು (ಕಂಪ್ಯೂmರ್‌ಸೈನ್ಸ್, ಮ್ಯಾಕಾನಿಕಲ್ ಇಂಜಿನಿಯರಿಂಗ್ ಹಾಗು ಎಲೆಕ್ಟ್ರಾನಿಕ್ಸ್ ) ಪ್ರತಿಯೊಂದು ಪದವಿಗೆ ಒಟ್ಟು ೪೦ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ.

ನೂತನ ಕಾಲೇಜುಗಳ ಸ್ಥಾಪನೆ
ಶಿಕ್ಷಣದ ಮೂಲ ಸೌಕರ್ಯಗಳ ಬೆಳವಣಿಗೆಯು ಸರ್ಕಾರದ ಒಂದು ಮಹತ್ತವರಾದ ಸಾಧನೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ೪ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು, ೩ ಸರ್ಕಾರಿ ಪಾಲಿಟೆಕ್ನಿಕ್‌ಗಳನ್ನು, ೫೨ ಪ್ರಥಮದರ್ಜೆ ಕಾಲೇಜುಗಳನ್ನು ಮತ್ತು ೨೬ ಮಹಿಳಾ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ
ರಾಜ್ಯ ಸರ್ಕಾರವು ಸ್ನಾತಕೋತ್ತರ ಪದವಿಯವರೆಗೆ ಹೆಣ್ಣುಮಕ್ಕಳಿಗೆ ಉಚಿತವಾದ ಶಿಕ್ಷಣವನ್ನು ರಾಜ್ಯದೆಲ್ಲೆಡೆ ನೀಡಲಿದೆ. ಪ್ರಸ್ತುತ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣವನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪದವಿ ಪೂರ್ವದವರೆಗೆ ಮಾತ್ರ ನೀಡಲಾಗುತ್ತಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜರಾಯರೆಡ್ಡಿಯವರು ತಿಳಿಸಿದ್ದಾರೆ.

ಕೌಶಲ್ಯ ಅಭಿವೃದ್ಧಿ ಕೇಂದ್ರ
ರಾಜ್ಯದಲ್ಲಿ ಯುವಕರಿಗೆ ಉದ್ಯೋಗವಕಾಶ ದೊರೆಯುವುದನ್ನು ಸುಧಾರಿಸಲು ೫೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ದಾಂಡೇಲಿಯಲ್ಲಿ ಸ್ಥಾಪಿಸಲಾಗಿದೆ.

ಹೆಣ್ಣು ಮಕ್ಕಳಿಗಾಗಿ ಉಚಿತ ವಿನಾಯತಿ:
ರಾಜ್ಯದಲ್ಲಿರುವ ವಿದ್ಯಾರ್ಥಿನಿಯರಿಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡಲು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ೧.೧೯ ಲಕ್ಷ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮತ್ತು ಪ್ರಾಯೋಗಿಕ ಶುಲ್ಕದಲ್ಲಿ ಸಂಪೂರ್ಣ ಉಚಿತ ವಿನಾಯತಿಯನ್ನು ನೀಡಲಾಗಿದೆ.

ಉನ್ನತ ಶಿಕ್ಷಣ ಸಂಸ್ಥೆ
ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಯನ್ನು ಧಾರವಾಡದಲ್ಲಿ ಪ್ರಾರಂಭಿಸಿದೆ. ಈ ಸಂಸ್ಥೆಯು ಅಧ್ಯಾಪಕ ವರ್ಗ ಮತ್ತು ಅಧ್ಯಾಪಕೇತರ ಸಿಬ್ಬಂದಿ ವರ್ಗದವರಿಗೆ, ಹಿರಿಯ ಶ್ರೇಣಿ ಹಾಗೂ ಪ್ರಾಂಶುಪಾಲರಾಗಿ ಬಡ್ತಿ ಹೊಂದಲಿರುವವರಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಬಗ್ಗೆ ವಿಶೇಷವಾದ ಧ್ಯೇಯೋದ್ದೇಶವನ್ನು ಹೊಂದಿದೆ. ಈ ಧ್ಯೇಯೋದ್ದೇಶವು ಮಾನವ ಸಂಪನ್ಮೂಲದ ಬೆಳವಣಿಗೆ, ಕಲಿಕೆಯ ತಂತ್ರದಲ್ಲಿ ಸುಧಾರಣೆ, ಗುಣಮಟ್ಟದ ಶಿಕ್ಷಣ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುವುದಾಗಿದೆ. ಸರ್ಕಾರದಿಂದ ಕಾರ್ಯರೂಪಕ್ಕೆ ಬಂದಂತಹ ನೂತನ ಶಿಕ್ಷಣ ನೀತಿಯ ಬಗ್ಗೆ ಪ್ರಾಂಶುಪಾಲರುಗಳಿಗೆ ತರಬೇತಿಯನ್ನು ನೀಡಲಾಗುವುದು.

ಭಾರತದ ಕರ್ನಾಟಕ ಕಾನೂನು ಶಾಲೆ (ಕರ್ನಾಟಕ ಲಾ ಸ್ಕೂಲ್ ಆಫ್ ಇಂಡಿಯ) ಮಸೂದೆ ೨೦೧೭
ರಾಜ್ಯ ಸಚಿವ ಸಂಪುಟವು ಈ ಮಸೂದೆಯನ್ನು ಜಾರಿಗೊಳಿಸಿದ್ದು, ಇದರ ಅನ್ವಯ ಬೆಂಗಳೂರಿನ ಪ್ರಖ್ಯಾತ ಕಾನೂನು ಶಿಕ್ಷಣ ಸಂಸ್ಥೆಯಾದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯದಲ್ಲಿರುವ ವಿದ್ಯಾರ್ಥಿಗಳಿಗೆ ಶೇಕಡಾ ೫೦ರಷ್ಟು ಹಂಚಿಕೆಯನ್ನು ನೀಡಲಾಗಿದೆ.

ವಿದ್ಯಾರ್ಥಿನಿಲಯಗಳ ನಿರ್ಮಾಣ
ರಾಜ್ಯದಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲಾ ರಿತಿಯ ಸೌಲಭ್ಯವನ್ನು ಕಲ್ಪಿಸುವುದು ಇಲಾಖೆಯ ಒಂದು ಬಹು ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ೧೦ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಲಯ, ೧೦ ಸಾಮಾಜಿಕ ವಿದ್ಯಾರ್ಥಿನಿಲಯ, ೩ ಮಹಿಳಾ ವಸತಿನಿಲಯವನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ೪೭ ಎಸ್‌ಸಿ/ಎಸ್‌ಟಿ ವಿದ್ಯಾಥಿನಿಲಯವನ್ನು ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಿರ್ಮಿಸಲಾಗಿದೆ.

ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರ
ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರವು ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಹಾಗೂ ಡಾ. ಯು.ಆರ್. ಅನಂತಮೂರ್ತಿ ಸ್ಟಡಿ ಛೇರ್‌ನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಂಜೂರು ಮಾಡಿದೆ.

ನೇಮಕಾತಿ
ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಅನುಪಾತವನ್ನು ಕಡಿಮೆ ಮಾಡಲು ಇಲಾಖೆಯು ೨೦೩೪ ಸಹಾಯಕ ಪ್ರಾಧ್ಯಾಪಕರನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನೇಮಕಾತಿ ಮಾಡಿದೆ.

ಹೈದರಾಬಾದ್ - ಕರ್ನಾಟಕ ವಲಯಕ್ಕೆ ನೂತನ ವಿಶ್ವವಿದ್ಯಾನಿಲಯ
ಹೈದರಾಬಾದ್ - ಕರ್ನಾಟಕ ವಲಯದಲ್ಲಿ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಲಾಖೆಯು ರಾಯಚೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಪ್ರಾಮುಖ್ಯತೆಯನ್ನು ನೀಡಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳನ್ನು ಈ ವಿಶ್ವವಿದ್ಯಾನಿಲಯಕ್ಕೆ ಸೇರಿಸಲಾಗುವುದು.

ಉಚಿತ ಗಣಕಯಂತ್ರ
ರಾಜ್ಯದಲ್ಲಿನ ವಿದ್ಯಾರ್ಥಿಗಳಲ್ಲಿ ಅಂತರವನ್ನು ಕಡಿಮೆ ಮಾಡಲು ಸೇತುವೆ ಹಾಗೂ ಉತ್ತಮವಾದ ಮೈದಾನ ಕ್ಷೇತ್ರವನ್ನು ನಿರ್ಮಿಸಲು ಸರ್ಕಾರವು ಸರ್ಕಾರ ಅನುದಾನಿತ ಪಾಲಿಟೆಕ್ನಿಕ್, ಪದವಿ, ಇಂಜಿನಿಯರಿಂಗ್ ಮತ್ತು ಮತ್ತು ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಗಣಕಯಂತ್ರವನ್ನು ೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ೨೦೧೭-೧೮ನೇ ಶೈಕ್ಷಣಿಕ ವರ್ಷದಿಂದ ನೀಡಲು ತೀರ್ಮಾನಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ನೂತನ ಪಾಲಿಟೆಕ್ನಿಕ್‌ಗಳು
ಗ್ರಾಮೀಣ ಪ್ರದೇಶದ, ಹಿಂದುಳಿದ ಮತ್ತು ಆರ್ಥಿಕವಾಗಿ ಬಡತನದಲ್ಲಿರುವ ವಿದ್ಯಾರ್ಥಿಗಳು ತಂತ್ರಜ್ಞಾನದ ಶಿಕ್ಷಣ ಪಡೆಯುವುದನ್ನು ಪ್ರೋತ್ಸಾಹಿಸಲು ೨೫ ಹೊಸ ಸರ್ಕಾರಿ ಪಾಲಿಟೆಕ್ನಿಕ್‌ಗಳನ್ನು ೪ ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಾಜ್ಯಾದ್ಯಂತ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಿದೆ.

ಒಟ್ಟು ದಾಖಲಾತಿ ಅನುಪಾತ (ಜಿ.ಇ.ಆರ್.)
ಹೆಣ್ಣು ಮಕ್ಕಳ ಒಟ್ಟು ದಾಖಲಾತಿ ಅನುಪಾತವನ್ನು ಹೆಚ್ಚಿಸಲು ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ೨೩ ವಿದ್ಯಾರ್ಥಿನಿ ನಿಲಯವನ್ನು ಹಂತ ಹಂತವಾಗಿ ಪ್ರತಿಯೊಂದಕ್ಕೆ ೨ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಮಾದರಿ ವಸತಿ ಶಾಲೆ
ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗದವರನ್ನು ಸಬಲೀಕರಿಸಲು ವಿದ್ಯಾರ್ಥಿನಿ / ವಿಧ್ಯಾರ್ಥಿನಿಲಯಗಳನ್ನೊಳಗೊಂಡ ೧೦ ಮಾದರಿ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ಮಾದರಿ ವಸತಿ ಪ್ರಥಮದರ್ಜೆ ಕಾಲೇಜುಗಳನ್ನು ರಾಜ್ಯಾದ್ಯಂತ ನಿರ್ಮಿಸಲಾಗುವುದು.

ಮೂಲಸೌಕರ್ಯದ ಅಭಿವೃದ್ಧಿ
ಬೆಂಗಳೂರಿನ ಶತಮಾನ ಕಾಲದ ವಿಶ್ವವಿದ್ಯಾನಿಲಯವಾದ ವಿಶ್ವೇಶ್ವರಯ್ಯ ತಂತ್ರಜ್ಞಾನ ಕಾಲೇಜಿಗೆ (ಯುವಿಸಿಇ) ೨೫ ಕೋಟಿ ರೂಪಾಯಿ, ಧಾರವಾಡ ಕರ್ನಾಟಕ ಕಾಲೇಜಿಗೆ ೫ ಕೋಟಿ ರೂಪಾಯಿ iತ್ತು ೨೫ ಕೋಟಿ ರೂಪಾಯಿಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ನೀಡಲಾಗುತ್ತಿದೆ.

ಅಧ್ಯಯನ ಪೀಠ
ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯನ್ನು ಸಾಮಾಜಿಕ ನ್ಯಾಯಕ್ಕಾಗಿ ಪರಿಚಯಿಸಿದ ಕ್ರಾಂತಿಕಾರಿ ರಾಜಶ್ರೀ ಸಾಹು ಮಹರಾಜ್‌ರವರ ಹೆಸರಿನಲ್ಲಿ ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಹಾಗು ಕರ್ನಾಟಕ ವಿಶ್ವವಿದ್ಯಾ ನಿಲಯದಲ್ಲಿ ಮಹಾಯೋಗಿ ವೀಮಣ್ಣ ಪೀಠ ನಿರ್ಮಾಣಕ್ಕೆ ೩ ಕೋಟಿ ರೂಪಾಯಿಗಳ ಅನುದಾನವನ್ನು ಕಲ್ಪಿಸಲಾಗಿದೆ.

ಆರ್ಥಿಕ ಯೋಜನೆ
ನಮ್ಮ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಯುವಜನತೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಉತ್ತಮವಾದ ಮೂಲಭೂತ ಸೌಕರ್ಯವನ್ನು ಹೊಂದಿರಬೇಕಾದುದು ಅವಶ್ಯಕವಾಗಿದೆ. ಮೂಲಭೂತ ಸೌಕರ್ಯಗಳ ಅಂತರವನ್ನು ಭರಿಸಲು ಮಧ್ಯಮ ಕಾಲದ ಆರ್ಥಿಕ ಯೋಜನೆಯನ್ನು ರೂಪುಗೊಳಿಸಿ ಅನುಷ್ಠಾನಗೊಳಿಸಲಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-for-Higher-Education-Department