/ departments

ಗೃಹ ಸಚಿವಾಲಯ - ಆರು ಕೋಟಿಗೂ ಅಧಿಕ ಜನರ ರಕ್ಷಣೆಯಲ್ಲಿ

ಗೃಹ ಇಲಾಖೆಯು 1952 ರಿಂದ ರಾಜ್ಯದ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯೊಂದಿಗೆ ಆಡಳಿತ ವ್ಯವಸ್ಥೆ ಮತ್ತು ಹೊರಗಿನ ಆತಂಕಕಾರೀ ಸವಾಲುಗಳನ್ನು ಹತ್ತಿಕ್ಕುವ ಜವಾಬ್ದಾರಿಯನ್ನೂ ಸಹ ಹೊಂದಿದೆ. ಇಷ್ಟೇ ಅಲ್ಲದೇ ಗೃಹ ಇಲಾಖೆಯು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಬಂಧೀಖಾನೆ, ಗೃಹ ರಕ್ಷಕ ದಳದಂತಹ ಜನೋಪಯೋಗಿ ಸೇವೆಯನ್ನು ಒಳಗೊಂಡಿದೆ. ಗೃಹ ಇಲಾಖೆಯು ಕರ್ನಾಟಕದ ಅತ್ಯಂತ ಹಳೆಯ ಇಲಾಖೆಯಾಗಿದ್ದು ಇದು ಕಾನೂನು ಸುವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಿಸಿ ಸಾರ್ವಜನಿಕರ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನು ರಕ್ಷಿಸುವ ಭದ್ರತೆಯನ್ನು ಹೊಂದಿದೆ.

ನಮ್ಮ ಸರ್ಕಾರವು ಗೃಹ ಸಚಿವರಾದ ಶ್ರೀ.ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಸಾರ್ವಜನಿಕ ಜನ ಜೀವನದ ಸುರಕ್ಷತೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು ಅತ್ಯಂತ ಬದ್ಧತೆಯಿಂದ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹಗಲಿರುಳೂ ಸಹ ಶ್ರಮಿಸುತ್ತಿದೆ.

ಗೃಹ ಸಚಿವರು ಗೃಹ ಇಲಾಖೆಯ ಮುಖ್ಯಸ್ಥರಾಗಿದ್ದು, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯ ನಿರ್ವಾಹಕರು/ಪ್ರಿನ್ಸಿಪಲ್ ಸೆಕ್ರೆಟರಿಯವರು ಇದರ ಮುಖ್ಯಸ್ಥರಾಗಿದ್ದು ಇಲಾಖೆಯ ಒಟ್ಟಾರೆ ನೀತಿ ನಿಯಮಗಳು ಮತ್ತು ಪೊಲೀಸ್ ಇಲಾಖೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

20108331_1656616321015718_782482142915944160_n

ಸಾರ್ವಜನಿಕರ ಭಧ್ರತೆ ಹಾಗೂ ಅವರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಗೃಹ ಸಚಿವಾಲಯವು ಸಾಕಷ್ಟು ರೀತಿಯ ಕಾರ್ಯಕ್ರಮಗಳನ್ನು ರೂಪಿಸಿರುತ್ತದ್ದು ಅವು ಈ ಕೆಳಕಂಡಂತಿವೆ:

ಪೊಲೀಸ್ (ಬಡ್ತಿ ಮತ್ತು ನೇಮಕಾತಿ)
ನೈತಿಕತೆ ಮತ್ತು ಸಿಬ್ಬಂದಿಗಳ ಸೇವೆಯನ್ನು ಉತ್ತೇಜಿಸುವ ಸಲುವಾಗಿ ನಮ್ಮ ಸರ್ಕಾರವು ಪೊಲೀಸ್ ಇಲಾಖೆಯ ಒಟ್ಟು 12,000 ಜನ ಸಿಬ್ಬಂದಿಗಳಿಗೆ ಬಡ್ತಿಯನ್ನು ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 20,487 ಪಿ.ಎಸ್.ಐ ಹಾಗು ಪಿ.ಸಿ. ಹುದ್ದೆಗಳನ್ನು ಭರ್ತಿ ಮಾಡಿದ್ದು ಇನ್ನೂ 3,274 ಹುದ್ದೆಗಳ ಸೃಷ್ಟಿಸುವ ಕೆಲಸವು ಪ್ರಗತಿಯಲ್ಲಿದೆ.

ಪೊಲೀಸರಿಗೆ ಗೃಹ ಸೌಲಭ್ಯ 2020
1985 ರಲ್ಲಿ ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಅನ್ನು ಸ್ಥಾಪಿಸಲಾಗಿದ್ದು ರಕ್ಷಣಾ ಸಿಬ್ಬಂದಿಗೆ ಸೂಕ್ತವಾದ ವಸತಿ ಸೌಲಭ್ಯವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ. ಈವರೆಗೂ 182 ವಸತಿ ಕಟ್ಟಡಗಳನ್ನು ನಿರ್ಮಿಸಿ ಅದರಲ್ಲಿ 20000 ಕ್ಕೂ ಹೆಚ್ಚಿನ ಸಿಬ್ಬಂದಿಗೆ ಕ್ವಾಟ್ರಸ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಎರಡು ಹಂತಗಳಲ್ಲಿ ಒಟ್ಟು 2020 ಪೊಲೀಸ್ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಹಂತ-1 : ಇದರ ಉದ್ದೇಶವು ಶೇಕಡಾ 90 ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗೆ ಸೂಕ್ತವಾದ ವಸತಿಯನ್ನು ಕಲ್ಪಿಸುವುದಾಗಿದ್ದು ಈಗಾಗಲೇ ಮೊದಲ ಹಂತದಲ್ಲಿ 479.44 ಕೋಟಿಗಳ ರೂಪಾಯಿಯಲ್ಲಿ 2782 ವಸತಿಗಳನ್ನು ನಿರ್ಮಿಸಲಾಗಿದೆ.
ಹಂತ -2 : “ಪೊಲೀಸ್ ಗೃಹ-2020’ ಯೋಜನೆಯಡಿಯಲ್ಲಿ 4,016 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು ಉಳಿದ 4198 ವಸತಿ ಗೃಹಗಳ ನಿರ್ಮಾಣವು ಎರಡನೇ ಹಂತದಲ್ಲಿ ಪ್ರಗತಿಯಲ್ಲಿವೆ.
ವೈದ್ಯಕೀಯ ಶಿಬಿರಗಳು
ಪೊಲೀಸ್ ಸಿಬ್ಬಂದಿಗಳು ಸದಾ ಸಾರ್ವಜನಿಕರ ಭದ್ರತೆಗಾಗಿ ಹಗಲಿರುಳೂ ಸಹ ಶ್ರಮಿಸುತ್ತಾರೆ. ಹೀಗಾಗಿ ಅಂತವರ ಆರೋಗ್ಯದ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ. ಈಗಾಗಲೇ 90% ಗಿಂತ ಅಧಿಕ ಪೊಲೀಸರು ಮತ್ತು ಅಧಿಕಾರಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಲಾಗಿದ್ದು ದೀರ್ಘ ಕಾಲದವರೆಗೆ ವಿವಿಧ ಖಾಯಿಲೆಗಳಿಂದ ಅವರ ಅರೋಗ್ಯವನ್ನು ಕಾಪಾಡುವ ಗುರಿಯನ್ನು ಹೊಂದಲಾಗಿದೆ.

ಪ್ರೋತ್ಸಾಹ ಧನ
ಇಲಾಖೆಯ ವತಿಯಿಂದ ಪೊಲೀಸ್ ಪೇದೆ ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಮಾಸಿಕ 2,000 ರೂಪಾಯಿಗಳ ವರೆಗೆ ಹೆಚ್ಚಿಸಲಾಗಿದೆ.

19095408_1608314442512573_4292288720073367251_o

ಮಹಿಳಾ ತಂಡಗಳು
ಮಹಿಳೆಯರ ಮೇಲಿನ ಅಪರಾಧಗಳನ್ನು ಕಡಿಮೆಗೊಳಿಸಲು 2 ನೂತನ ಮಹಿಳಾ ತಂಡಗಳನ್ನು ರಚಿಸಲಾಗಿದೆ. 51 ಹೊಸ “ಪಿಂಕ್ ಹೋಯ್ಸಳ” ವಾಹನಗಳನ್ನು ಪರಿಚಯಿಸಲಾಗಿದ್ದು ಈಗಾಗಲೇ ಬೆಂಗಳೂರಿನಾದ್ಯಂತ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ 221 ಹೋಯ್ಸಳ ವಾಹನಗಳು ಕೆಲಸ ಮಾಡುತ್ತಿವೆ. ಮಹಿಳಾ ಪೊಲೀಸರ ತರಬೇತಿಗೆ ಮತ್ತು ಅವರ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿಗಳ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಿದ್ದು ಮಹಿಳೆಯರ ಸಬಲೀಕರಣಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.

ಪೊಲೀಸ್ ಸೌಲಭ್ಯಗಳ ಆಧುನೀಕರಣ
24.87 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ರಾಜ್ಯ ಸರ್ಕಾರವು 20 ಪೊಲೀಸ್ ಸ್ಟೇಷನ್ ಗಳನ್ನು ನಿರ್ಮಿಸಲಾಗಿದೆ. ಮಡಿಕೇರಿಯಲ್ಲಿ 1.10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎಸ್ ಡಿ ಪಿಓ ಕಛೇರಿಯನ್ನು ನಿರ್ಮಿಸಲಾಗಿದೆ. ಅಲ್ಲದೇ ರಿಚ್ ಮಂಡ್ ರಸ್ತೆ, ಕೂಡ್ಲು ಬೆಂಗಳೂರು, ಚಾಮರಾಜ ನಗರ ಮತ್ತು ಮುನಿರಾಬಾದ್ ನಲ್ಲಿ 6 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಸ್ತ್ರಾಸ್ತ್ರ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಡೌನ್ಲೋಡ್ ಮಾಡಬಹುದಾದ ಅಪ್ಲಿಕೇಶನ್ ಗಳನ್ನು ಬಳಸಿಕೊಳ್ಳುವ ಮೂಲಕ ತೊಂದರೆಗೆ ಸಿಲುಕಿದವರಿಗೆ ಶೀಘ್ರವಾಗಿ ಸ್ಪಂದನೆಯನ್ನು ನೀಡುವ ಗುರಿಯನ್ನು ಇಲ್ಲಿ ಹೊಂದಲಾಗಿದೆ.

ಸುರಕ್ಷಾ ಆ್ಯಪ್
ಕರ್ನಾಟಕ ಪೊಲೀಸರು ಇದೀಗ ಅಪ್ಲಿಕೇಶನ್ ಆಧಾರಿತವಾಗಿಯೂ ಸಹ ತ್ವರಿತ ಸಾರ್ವಜನಿಕ ಸೇವೆಗಳನ್ನು ನೀಡಲು ಆರಂಭಿಸಿದ್ದು ಇದನ್ನು ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಬಳಸಬಹುದಾಗಿದೆ. ಈ ಆ್ಯಪ್ ಬಳಸಿ ನೀವು ತುರ್ತು ಸಂದರ್ಭದಲ್ಲಿ ಸಂದೇಶವನ್ನು ಕಳಿಸುವುದರಿಂದ ಪೊಲೀಸ್ ಪಡೆಯ ಕೇಂದ್ರಗಳಿಗೆ ಶೀಘ್ರವಾಗಿ ಸಿಗ್ನಲ್ ಗಳು ತಲುಪಿ ನೀವು ಇರುವ ಸ್ಥಳವನ್ನು ಗುರುತಿಸಿ ಪೊಲೀಸರು ನಿಮಗೆ ಸಹಾಯ ಮಾಡಲು ಅನುಕೂಲವಾಗುತ್ತದೆ. ಇಷ್ಟೇ ಅಲ್ಲದೇ ಈ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಳಸಿ ಹತ್ತಿರದ ಪೊಲೀಸ್ ಠಾಣೆ ಅಥವಾ ಹೋಯ್ಸಳ ಗೆ ಕರೆ ಮಾಡಿ ಸಹಾಯ ಹಸ್ತವನ್ನು ನೀಡಲು ಪೊಲೀಸರು ಕೋರಹುದಾಗಿದೆ.

1-1

ಹೊಸ ಅಗ್ನಿಶಾಮಕ ಠಾಣೆಗಳು
ಒಂದು ವೇಳೆ ಅಗ್ನಿ ಅನಾಹುತಗಳೇನಾದರೂ ಸಂಭವಿಸಿದರೆ ಅದನ್ನು ಪರಿಹರಿಸಲು ಬಹಳಷ್ಟು ಸಹಕಾರಿಯಾದ ಅಗ್ನಿಶಾಮಕ ವಾಹನಗಳನ್ನು ಸರ್ಕಾರವು ನಿರ್ವಹಿಸುತ್ತಿದ್ದು ಇತ್ತೀಚಿಗೆ 27 ಹೊಸ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಲಾಗಿದ್ದು 2013 ರಿಂದ ಇಲ್ಲಿಯವರೆಗೆ ಒಟ್ಟು 40 ಹೊಸ ಅಗ್ನಿಶಾಮಕ ಠಾಣೆಗಳು ನಿರ್ಮಾಣಗೊಂಡಿದ್ದು 308 ಅಗ್ನಿಶಾಮಕ ವಾಹನಗಳನ್ನು ತುರ್ತು ಸೇವೆಗೆ ಬಳಸಿಕೊಳ್ಳಲಾಗಿದೆ.
ಕೆ-ಸುರಕ್ಷಾ ಯೋಜನೆಯಡಿಯಲ್ಲಿ, 27.76 ಕೋಟಿ ರೂಪಾಯಿಗಳ ವೆಚ್ಚದಲ್ಲಿ 138 ಫೈರ್ ಮೆನ್ ವಸತಿ ಗೃಹ, 1 ಸಿಎಫ್ ಓ ವಸತಿ ಗೃಹ, 6 ಜೆಎಫ್ ಓ ವಸತಿ ಗೃಹ ಮತ್ತು 5 ಹೊಸ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಲಾಗಿದೆ.
ಧಾರವಾಡ, ಬೆಂಗಳೂರು ಕಂಟ್ರೋಲ್ ರೂಂ, ದೇವರ ಬೆಳಕೆರೆ, ಹರಿಹರದದಲ್ಲಿ ಗೃಹ ರಕ್ಷಕ ದಳ ಮತ್ತು ಸಿವಿಲ್ ಡಿಫೆನ್ಸ್ ದಳದವರಿಗೆ ತರಬೇತಿ ನೀಡುವ ಕೇಂದ್ರದ ದುರಸ್ತಿ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
2013 ರಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಘಟಕವನ್ನು ಸ್ಥಾಪನೆ ಮಾಡಲಾಗಿದ್ದು ಅಗತ್ಯ ಸಂದರ್ಭದಲ್ಲಿ ಮತ್ತು ತುರ್ತು ಸಂದರ್ಭದಲ್ಲಿ ಹಾಗೂ ಇನ್ನಿತರೆ ಸಂದರ್ಭದಲ್ಲಿ ಈ ಘಟಕವು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆ ಎಸ್ ಆರ್ ಪಿ)
ಮೀಸಲು ಪೊಲೀಸ್ ಪಡೆ ವಿಭಾಗದಲ್ಲಿ ಸುಧಾರಣೆಯನ್ನು ಕೈಗೊಳ್ಳುವ ಸಲುವಾಗಿ 1,181 ಹುದ್ದೆಗಳನ್ನು ಪೇದೆಯಿಂದ ಮುಖ್ಯ ಪೇದೆಗೆ ಬಡ್ತಿ ನೀಡಲಾಗಿದ್ದು 732 ಮುಖ್ಯ ಪೇದೆ ಹುದ್ದೆಗಳನ್ನು ಸಶಸ್ತ್ರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ನೇಮಕ ಮಾಡಲಾಗಿದೆ. ಮೊಟ್ಟ ಮೊದಲ ಬಾರಿಗೆ 95 ಫಾಲೋವರ್ ಹುದ್ದೆಗಳನ್ನು ನವೀಕರಿಸಲಾಗಿದ್ದು 106 ಫಾಲೋವರ್ ಗಳಿಗೆ ಮುಂಬಡ್ತಿಯನ್ನು ನೀಡಲಾಗಿದೆ. ಕೆ ಎಸ್ ಆರ್ ಪಿ ಮತ್ತು ಭಾರತೀಯ ಮೀಸಲು ಪಡೆಗಾಗಿ ಬೆಳಗಾವಿಯಲ್ಲಿ ಹೊಸದಾಗಿ ತರಬೇತಿ ಶಾಲೆಯನ್ನು ಸ್ಥಾಪಿಸಲಾಗಿದೆ. ಇಷ್ಟೇ ಅಲ್ಲದೇ ಹಾಸನ, ಮುನಿರಾಬಾದ್ ಮತ್ತು ಬಿಜಾಪುರ ಬೆಟಾಲಿಯನ್ ನಲ್ಲಿ ಭಾರೀ ಪ್ರಮಾಣದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಲಾಗುತ್ತಿದೆ. 2015 ನೇ ವರ್ಷವು ಕೆ ಎಸ್ ಆರ್ ಪಿ ಪಾಲಿಗೆ ಮಹತ್ವದ ವರ್ಷವಾಗಿದ್ದು ಈ ಅವಧಿಯಲ್ಲಿ ಹಾಸನ, ಧಾರವಾಡ, ಥಣಿಸಂದ್ರ, ಐಮಂಗಲ, ಕಡೂರು ಮತ್ತು ಮೈಸೂರಿನಲ್ಲಿ ನೂತನ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಪೈಕಿ ಧಾರವಾಡ ಮತ್ತು ಮೈಸೂರಿನ ತರಬೇತಿ ಕೇಂದ್ರಗಳು ಸಂಪೂರ್ಣ ಕಾರ್ಯ ನಿರತವಾಗಿದ್ದು ಉಳಿದ ಕೇಂದ್ರಗಳೂ ಸಹ ಅದೇ ಹಾದಿಯಲ್ಲಿ ಮುನ್ನಡೆಯುತ್ತಿವೆ.

ಬಂಧೀಖಾನೆಗಳ ಆಧುನೀಕರಣ
ಬಂಧೀಖಾನೆಗಳ ಆಧುನೀಕರಣ ಕಾರ್ಯಕ್ರಮದಡಿಯಲ್ಲಿ ಸಿಸಿ ಟಿವಿ, ಸೋಲಾರ್ ದೀಪಗಳು, ಮೊಬೈಲ್ ಜಾಮರ್, ಸೆರೆವಾಸಿಗಳ ಮಾಹಿತಿ ಪುಸ್ತಿಕೆ, ಸೆರೆವಾಸಿಗಳ ಕರೆ ವ್ಯವಸ್ಥೆ, ವೀಡಿಯೋ ಸಂಭಾಷಣೆ ಸೌಲಭ್ಯ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗಿದೆ
ಇಷ್ಟೇ ಅಲ್ಲದೇ ಕಾರವಾರ, ತಿಪಟೂರು, ಶಿವಮೊಗ್ಗ, ವಿರಾಜಪೇಟೆ, ಗಂಗಾವತಿ, ಬೀದರ್ ಮತ್ತು ತರೀಕೆರೆಯಲ್ಲಿ ಹೊಸ ಬಂಧೀಖಾನೆಗಳನ್ನು ನಿರ್ಮಿಸಲಾಗಿದೆ.
ಇಷ್ಟೇ ಅಲ್ಲದೇ ಎಫ್ ಜಿ-1 ಭದ್ರತಾ ಪೋಲ್ ಗಳನ್ನು ಎಂಟು ಕೇಂದ್ರ ಕಾರಾಗೃಹದಲ್ಲಿ ರೂಪಿಸಲಾಗಿದ್ದು ಮೆಟಲ್ ಡಿಟೆಕ್ಟರ್, ಡೋರ್ ಫ್ರೇಂ ಡಿಟೆಕ್ಟರ್ ಮತ್ತು ಪ್ರಾಥಮಿಕ ಆರೋಗ್ಯ ತಪಾಸಣಾ ಸಲಕರಣೆಗಳನ್ನು ಎಲ್ಲಾ ಜಿಲ್ಲಾ ಕೇಂದ್ರ ಕಾರಾಗೃಹಗಳಿಗೆ ಒದಗಿಸಲಾಗಿದೆ.

19023440_475086899492402_2219035929653491115_o

ಗೃಹರಕ್ಷಕ ದಳ ಸಿಬ್ಬಂದಿ ವರ್ಗ
ಕರ್ನಾಟಕದಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು 25,000 ದಿಂದ 30,000 ದ ವರೆಗೆ ಏರಿಸಲಾಗಿದ್ದು ಅವರಿಗೆ ನೀಡಲಾಗುತ್ತಿದ್ದ ದೈನಂದಿನ ಪ್ರೋತ್ಸಾಹ ಧನವನ್ನು ಬೆಂಗಳೂರಿನಲ್ಲಿ ದಿನಕ್ಕೆ 300 ರಿಂದ 400 ರೂಪಾಯಿಗಳ ವರೆಗೆ ಹೆಚ್ಚಿಸಲಾಗಿದ್ದು ಬೆಂಗಳೂರಿನಿಂದ ಹೊರಗೆ 250 ರಿಂದ 325 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

100 ಕ್ಕೆ ಕರೆಮಾಡಿ
100 ಕ್ಕೆ ಕರೆ ಮಾಡುವ ಎವಿಎಲ್ ಎಸ್ ವ್ಯವಸ್ಥೆಯು ಬೆಂಗಳೂರು ನಗರ, ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ, ಮಂಗಳೂರು ನಗರ ಮತ್ತು ಬೆಳಗಾವಿ ಕಮೀಷನರ್ ಕಚೇರಿ ವ್ಯಾಪ್ತಿಯಲ್ಲಿ ರೂಪಿಸಲಾಗಿದೆ.
“ನಮ್ಮ 100” ಕಾಲ್ ಸೆಂಟರ್ ಗಳು ಬಹಳಷ್ಟು ಕಡೆ ಇದ್ದು ಅತಿ ಕಡಿಮೆ ಅವಧಿಯಲ್ಲಿ 221 ಹೋಯ್ಸಳ ವಾಹನಗಳ ಮೂಲಕ ತೊಂದರೆಯಲ್ಲಿ ಸಿಲುಕಿದವರಿಗೆ ಸಹಾಯವನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಇಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದೂ ಸಹ ಸಾರ್ವಜನಿಕರ ತೊಂದರೆಗಳಿಗೆ ತತಕ್ಷಣದ ಪರಿಹಾರಗಳನ್ನು ನೀಡಲು ಸಹಕಾರಿ ಆಗಬಲ್ಲದು.

2-1

ಫೋರೆನ್ಸಿಕ್ ಲ್ಯಾಬೋಲೇಟರಿಗಳ ಆಧುನೀಕರಣ
ಅಪರಾಧ ದರವನ್ನು ಗಣನೀಯವಾಗಿ ತಗ್ಗಿಸುವ ದೃಷ್ಟಿಯಿಂದ ಫೋರೆನ್ಸಿಕ್ ಲ್ಯಾಬೋಲೇಟರಿಗಳನ್ನು ಗಣನೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ 20 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

ಬಹುಮಹಡಿ ಕಟ್ಟಡ ಮತ್ತು ಸಂಚಾರ ನಿರ್ವಹಣಾ ಕೇಂದ್ರಗಳು
ಸಂಚಾರ ದಟ್ಟಣೆಯನ್ನು ಸೂಕ್ತವಾಗಿ ನಿರ್ವಹಿಸುವ ಉದ್ದೇಶದಿಂದ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯನ್ನು ಬೆಂಗಳೂರು, ಮೈಸೂರು, ಕಲ್ಬುರ್ಗಿ ಹಾಗೂ ತುಮಕೂರು ನಗರಗಳಿಗೆ ವಿಸ್ತರಿಸಲಾಗಿದೆ. ಇಷ್ಟೇ ಅಲ್ಲದೇ ಶಾಸಕಾಂಗ ಸಭೆಯ ಅಧಿವೇಶನಗಳ ಸಂದರ್ಭದಲ್ಲಿ ಸಿಬ್ಬಂದಿ ವರ್ಗಗಳು ಉಳಿದುಕೊಳ್ಳಲು ಬೆಳಗಾವಿಯಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಬಹು ಮಹಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Home-Affairs