/ department

ತೋಟಗಾರಿಕೆ ಇಲಾಖೆ

ಕರ್ನಾಟಕ ತೋಟಗಾರಿಕಾ ವಲಯದ ಸಾಮಥ್ರ್ಯವನ್ನು ಗುರುತಿಸಿ ರೈತರಿಗೆ ಸಮೃದ್ಧಿಯನ್ನು ಕೊಡುತ್ತಿರುವ ದೇಶದ ಮೊದಲ ರಾಜ್ಯವಾಗಿದೆ. ಈ ವಲಯಕ್ಕೆ ಹೆಚ್ಚಿನ ಗಮನ ಹರಿಸಲು ರಾಜ್ಯವು ದೇಶದಲ್ಲೇ ಮೊದಲನೆಯದಾಗಿ ತೋಟಗಾರಿಕೆ ಇಲಾಖೆಯನ್ನು ಸ್ಥಾಪಿಸಿದ್ದು ಇತರ ರಾಜ್ಯಗಳು ಇದೇ ಉದಾಯರಣೆಯನ್ನು ಅನುಸರಿಸಿವೆ. ಪ್ರಸ್ತುತ ಕರ್ನಾಟಕ ರಾಜ್ಯವು ತೋಟಗಾರಿಕ ಪ್ರದರ್ಶನದಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಪಡೆದು 2015ರಲ್ಲಿ “ತೋಟಗಾರಿಕೆಯಲ್ಲಿ ಅತ್ಯುತ್ತಮ ರಾಜ್ಯ” ಎಂಬ ಪ್ರಶಸ್ತಿಯನ್ನು ಪಡೆದಿದೆ. ಕರ್ನಾಟಕವು ಗೋಡಂಬಿ, ಗುಲಾಬಿ, ಗುಲಾಬಿ ಈರುಳ್ಳಿ, ಮಸಾಲೆ ಮತ್ತು ಇತರೆ ಸಾಮಗ್ರಿಗಳನ್ನು ಹೆಚ್ಚಾಗಿ ರಫ್ತು ಮಾಡುವ ರಾಜ್ಯವಾಗಿದೆ.

ಕರ್ನಾಟಕ ರಾಜ್ಯದ ತೋಟಗಾರಿಕಾ ಮಂತ್ರಿಯಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ರಾಜ್ಯವು ಅನೇಕ ರಂಗಗಳಲ್ಲಿ ಉತ್ಪಾದನೆ, ಶೇಖರಣೆ, ಪ್ಯಾಂಕಿಂಗ್, ಮತ್ತು ಹಣ್ಣು, ತರಕಾರಿ, ಹೂ ಮತ್ತು ತೋಟದ ಬೆಳೆಗಳ ಮಾರಾಟಗಾರಿಯೆಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ.

Namma-Karntaka-Post_horticulture_png-2

ಸಚಿವಾಲಯದ ಹಲವು ಉಪಕ್ರಮಗಳು ಮತ್ತು ಯೋಜನೆಗಳು

ತೋಟಗಾರಿಕೆ ಅಭಿವೃದ್ಧಿ ಯೋಜನೆ
ಕರ್ನಾಟಕ ರಾಜ್ಯವು ಕಳೆದ ನಾಲ್ಕು ವರ್ಷದಿಂದ ಬರ ಪೀಡಿತವಾಗಿದ್ದರೂ ದಣಿವಿಲ್ಲದೆ ರೈತರಿಗೆ ಉತ್ತೇಜನ ನೀಡಿ ಹೆಚ್ಚಿನ ಬೆಳೆ ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಇದರ ಫಲಿತಾಂಶವಾಗಿ ತೋಟಗಾರಿಕೆ ಬೆಳೆಯಯ ಪ್ರದೇಶವು 18.35 ಲಕ್ಷ ಹೆಕ್ಟೇರ್‍ನಿಂದ 21.36 ಲಕ್ಷ ಹೆಕ್ಟೇರ್‍ಗೆ ಏರಿಕೆಯಾಗಿದ್ದು ಉತ್ಪಾದನೆಯಲ್ಲಿ 149.6 ಲಕ್ಷ ಟನ್‍ನಿಂದ 178.6 ಲಕ್ಷ ಟನ್‍ನಷ್ಟು ಹೆಚ್ಚಾಗಿದೆ.

ಹನಿ ನೀರಾವರಿಗೆ ಉತ್ತೇಜನ
ನವೀಕರಿಸಲಾಗದ ನೀರಿನ ಸಂಪನ್ಮೂಲವನ್ನು ಅತ್ಯುತ್ತಮವಾಗಿಸಲು ತೋಟಗಾರಿಕೆ ಇಲಾಖೆಯು ರೈತರಿಗೆ ಹನಿ ನೀರಾವರಿ ಕೃಷಿಯನ್ನು ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡಲು ಸಹಾಯ ಮಾಡುತ್ತಿದೆ. ಕರ್ನಾಟಕ ರಾಜ್ಯವು ಹನಿ ನೀರಾವಿ ಪದ್ಧತಿ ಅನುಸರಿಸುತ್ತಿರುವ ರೈತರಿಗೆ ಶೇ. 90ರಷ್ಟು ಅನುದಾನವನ್ನು ನೀಡಿದ್ದು, ಇದರ ಫಲಿತಾಂಶವಾಗಿ 1.3 ಲಕ್ಷ ಹೆಕ್ಟೇರ್ ಪ್ರದೇಶವು ನೀರಾವರಿಯಾಗಿ ಪರಿಣಮಿಸಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು 2017-18ನೇ ಸಾಲಿನಲ್ಲಿ 233 ಕೋಟಿ ರೂಪಾಯಿಗಳ ಅನುದಾನವನ್ನು ಪ್ರತ್ಯೇಕವಾಗಿ ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ ನೀಡಿದ್ದಾರೆ.

ಪುನರುಜ್ಜೀವನ ಯೋಜನೆ
ಒಟ್ಟು 77.5 ಲಕ್ಷ ತೋಟಗಾರಿಕ ಬೆಳೆಯ ವಿವಿಧ ತಳಿಯ ಸಸಿ, ಕಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಲಾಗಿದೆ. ತೋಟಗಾರಿಕೆ ಇಲಾಖೆಯು ಕಳೆದ ನಾಲ್ಕು ವರ್ಷಗಳಲ್ಲಿ ಯಶಸ್ವಿಯಾಗಿ 36,094 ಹೆಕ್ಟೇರ್ ತೋಟಗಾರಿಕ ಬೆಳೆಯನ್ನು ಪುನರುಜ್ಜೀವನಗೊಳಿಸಿದೆ ಮತ್ತು 8 ಲಕ್ಷ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿಯಲ್ಲಿ 2,500 ಕೋಟಿ ರೂಪಾಯಿಗಳನ್ನು ಸಹಾಯಧನವಾಗಿ ನೀಡಿದೆ.

ರೈತರ ಉತ್ಪಾದನಾ ಸಂಸ್ಥೆ (ಎಫ್.ಪಿ.ಒ)
ತೋಟಗಾರಿಕಾ ಬೆಳೆಯ ಉತ್ಪಾದನೆ ಮತ್ತು ವ್ಯವಹಾರ ಚಟುವಟಿಕೆಯನ್ನು ಹೆಚ್ಚಿಸಲು 87,000 ಕೃಷಿಕರನ್ನೊಳಗೊಂಡ 87 ರೈತರ ಉತ್ಪಾದನಾ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಈ ಸಂಸ್ಥೆಗಳು ಆಂತರೀಕ ವ್ಯವಹಾರ, ಬಾಹ್ಯ ವ್ಯವಹಾರ ಮತ್ತು ಕೂಲಿ ವ್ಯವಹಾರ ಪದ್ಧತಿಯನ್ನು ಪ್ರಾರಂಭಿಸಿದೆ.
ಸಂಯೋಜಿತ ತೋಟಗಾರಿಕ ಬೆಳವಣಿಗೆ - ಸಾರ್ವಜನಿಕ ಖಾಸಗಿ ಪಾಲುದಾರಿಕೆ
ಮುಖ್ಯ ತೋಟಗಾರಿಕಾ ಬೆಳೆಯ ಮೌಲ್ಯದ ಸರಪಳಿಯನ್ನು ಸುಧಾರಿಸುವ ಪರಿಕಲ್ಪನೆ ಈ ಯೋಜನೆಯದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ರೈತರ ಗುಂಪನ್ನು ದೊಡ್ಡ ಆಹಾರ ಸಂಸ್ಕರಣಾ ಕಂಪನಿಯೊಂದಿಗೆ ಕೈಗೂಡಿಸಿ ಅವರಿಗೆ ಉತ್ತಮ ಗುಣಮಟ್ಟದ ಬೀಜಗಳು, ಗೊಬ್ಬರಗಳು ಮತ್ತು ಪ್ಯಾಕೇಜಿಂಗ್ ಅಭ್ಯಾಸದ ಬಗ್ಗೆ ಮಾಹಿತಿ ನೀಡಿ ಸಬಲೀಕರಣ ಗೊಳಿಸುವುದಾಗಿದೆ. ಇದರ ಪರಿಣಾಮವಾಗಿ ವಿಂಗಡಣೆ, ವರ್ಗೀಕರಣ, ಶಿಥಿಲೀಕರಣ ಮತ್ತು ಪ್ಯಾಕ್ ಮಾಡುವ ಪ್ರಕ್ರಿಯೆ ಕೃಷಿಕರಿಗೆ ಮತ್ತು ಪ್ರಕ್ರಿಯೆದಾರರಿಬ್ಬರಿಗೂ ಅಪಾರ ಮೌಲ್ಯವನ್ನು ಒದಗಿಸಲಿದೆ. ತೋಟಗಾರಿಕಾ ಇಲಾಖೆಯು ಹೆಸರಾಂತ ಕಂಪನಿಗಳಾದ ಐ.ಟಿ.ಸಿ, ಲಾರೆನ್ಸ್‍ಡ್ಲೆ, ವಿಕ್ರಮ್ ಗ್ಲೋಬಲ್ ಕೊಮೊಡಿಟಿಸ್, ಸಂಜೀವಿನಿ ಆಗ್ರೋ ಮತ್ತು ವೆಜಿಫ್ರೆಶ್ ಆಗ್ರೋ ಎಕ್ಸ್‍ಪೋಟ್ರ್ಸ್‍ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ವಿವಿಧ ತೋಟಗಾರಿಕಾ ಬೆಳೆಗಳ ಮೌಲ್ಯಿದ ಸರಪಳಿಯ ಬೆಳವಣಿಗೆಗೆ ಈ ಯೋಜನೆಯು ಪೂರಕವಾಗಿದೆ. ಎಂ.ಟಿ.ಆರ್, ಕ್ಯಾಮ್‍ಸನ್ ಆಗ್ರೋ, ಸಿಂಥೈಟ್ ಮತ್ತು ಸಿದ್ಧಿವಿನಾಯಕ ಕಂಪನಿಗಳು ಸಂಯೋಜಿತ ತೋಟಗಾರಿಕ ಬೆಳವಣಿಗೆಯ ಒಂದು ಭಾಗವಾಗುವುದಕ್ಕೆ ಆಸಕ್ತಿ ವ್ಯಕ್ತಪಡಿಸಿವೆ.

14089232_1288674831143204_4480553328382937804_n

ಕೃಷಿ ಭಾಗ್ಯ
ಕೃಷಿ ಭಾಗ್ಯ ಯೋಜನೆಯನ್ನು ಮೊಟ್ಟಮೊದಲ ಬಾರಿಗೆ ತೋಟಗಾರಿಕ ಬೆಳೆಗೆ ವಿಸ್ತರಿಸಲಾಗಿದ್ದು ಮುಖ್ಯ ಮಂತ್ರಗಳಾದ ಸಿದ್ದರಾಮಯ್ಯನವರು 200 ಕೋಟಿ ರೂಪಾಯಿಗಳನ್ನು ಈ ಯೋಜನೆಗೆ 2017-18ನೇ ಸಾಲಿನ ಹಣಕಾಸು ವರ್ಷದಲ್ಲಿ ನೀಡಿದ್ದಾರೆ.

ಸುಗ್ಗಿಯ ನಂತರದ ನಿರ್ವಹಣೆ
ಪೌಷ್ಠಿಕತೆಯನ್ನು ಉಳಿಸಿಕೊಳ್ಳುವ ಮತ್ತು ಹಾನಿಗೊಳಗಾಗುವ ಉತ್ಪನ್ನಗಳ ಹೆಚ್ಚಿನ ಸಮಯದವರೆಗೆ ಕೆಡದಂತೆ ಸುಧಾರಣೆಗೊಳಿಸುವುದು ಮುಖ್ಯ ಸವಾಲಾಗಿದೆ. ಕೃಷಿಕರು ತಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಪಡೆಯಲು ತೋಟಗಾರಿಕೆ ಇಲಾಖೆಯು ಸುಗ್ಗಿಯ ನಂತರದ ನಿರ್ವಹಣೆಗಳಾದ ಪ್ಯಾಕ್ ಹೌಸ್, ಕಡಿಮೆ ವೆಚ್ಚದ ಶೇಖರಣಾ ಮತ್ತು ಸಂರಕ್ಷಣಾ ಘಟಕ, ಪೂರ್ವ ಶಿಥಿಲಿಕರಣ ಘಟಕ, ಹಣ್ಣು ಮಾಡುವ ಘಟಕ ಮತ್ತು ಪ್ರಾಥಮಿಕ ಪ್ರಕ್ರಿಯೆ ಘಟಕಗಳನ್ನು ಸ್ಥಾಪಿಸುವ ಕ್ರಮ ಕೈಗೊಂಡಿದೆ.

ಇಲಾಖೆಯ ಕೃಷಿ ಕ್ಷೇತ್ರ ಬೆಳವಣಿಗೆ
ತೋಟಗಾರಿಕೆ ಇಲಾಖೆಯು 16,000 ಎಕರೆಗೂ ಹೆಚ್ಚಿನ 418 ಕೃಷಿ ಕ್ಷೇತ್ರವನ್ನು ಹೊಂದಿದ್ದು ಇದರ ಸುಧಾರಣೆಯ ಅಗತ್ಯವಿದೆ. ರಾಜ್ಯ ಸರ್ಕಾರವು ಈ ಕೃಷಿ ಕ್ಷೇತ್ರವನ್ನು ಮಾದರಿ ಕೃಷಿ ಕ್ಷೇತ್ರವನ್ನಾಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಗೋಡಂಬಿ ಅಭಿವೃದ್ಧಿ ಮಂಡಳಿ
ಕರ್ನಾಟಕ ಸರ್ಕಾರವು 10,000 ಹೆಕ್ಟೇರ್ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಗೋಡಂಬಿ ತೋಟದ ಅಭಿವೃದ್ಧಿಗಾಗಿ “ಗೋಡಂಬಿ ಅಭಿವೃದ್ಧಿ ಮಂಡಳಿ”ಯನ್ನು ಸ್ಥಾಪಿಸಿದೆ. ಇದರಿಂದ ರಾಜ್ಯದ ಸುಮಾರು 10,000 ಕೃಷಿಕರಿಗೆ ಪ್ರಯೋಜನವಾಗಲಿದೆ.

ತೆಂಗು ಮತ್ತು ಮಾವಿನ ತೋಟಗಳ ಪುನರುಜ್ಜೀವನ
ತೋಟಗಾರಿಕೆ ಇಲಾಖೆಯು ರಾಜ್ಯದಲ್ಲಿ ತೆಂಗು ಮತ್ತು ಮಾವಿನ ತೋಟದ ಉತ್ಪಾದನೆಯನ್ನು ಹೆಚ್ಚಿಸಲು ಪುನರುಜ್ಜೀವನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಿಂದ 15,000 ಕೃಷಿಕರಿಗೆ ಪ್ರಯೋಜನವಾಗಲಿದೆ.
ಚಿಂತಾಮಣಿಯಲ್ಲಿ ಮಾವು ಬೆಳವಣಿಗೆ ಮತ್ತು ಸಂಸ್ಕರಣಾ ಕೇಂದ್ರದ ಸ್ಥಾಪನೆ ರಾಜ್ಯದಲ್ಲಿ ಮೊಟ್ಟ ಮೊದಲನೆಯದಾಗಿದೆ. ಈ ಕೇಂದ್ರವು ವಿಂಗಡಣೆ, ವರ್ಗೀಕರಣ, ತೊಳೆಯುವ, ಬಿಸಿನೀರಿನ ಉಪಚರಣೆ, ಮಾಗಿಸುವಿಕೆ, ಪ್ಯಾಕಿಂಗ್ ಮತ್ತು ಸಂಸ್ಕರಿಸುವ ತಂತ್ರಜ್ಞಾನವನ್ನು ಹೊಂದಿದ್ದು ಆಸ್ಟ್ರೇಲಿಯಾ ದೇಶದಂತಹ ರಫ್ತು ಮಾದರಿಯನ್ನು ತಲುಪುವ ಸೌಕರ್ಯವನ್ನು ಹೊಂದಿದೆ.

ನೀರ ನೀತಿ
ತೆಂಗು ಬೆಳೆಗಾರರನ್ನು ಬೆಂಬಲಿಸಲು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು “ನೀರ ನೀತಿ”ಯನ್ನು ಮಂಜೂರು ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ನೀರಾವನ್ನು ಒಂದು ಪೌಷ್ಠಿಕ ಪೇಯವನ್ನಾಗಿಸಲು ಅಬಕಾರಿ ಕಾಯಿದೆಯನ್ನು ತಿದ್ದುಪಡಿ ಮಾಡಿ ತೆಂಗು ಉತ್ಪಾದಿಸುವ ಸಂಸ್ಥೆ ಮತ್ತು ಕೃಷಿಕರ ಉತ್ಪಾದನಾ ಸಂಸ್ಥೆಗಳನ್ನು ಆಯ್ಕೆ ಮಾಡಲು ಪರಾವನೆ ನೀಡಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Horticulture