/ department

ವಸತಿ ಇಲಾಖೆ

ಗೃಹ ಮತ್ತು ನಗರಾಭಿವೃದ್ಧಿ ಇಲಾಖೆಯನ್ನು 1995 ರಲ್ಲಿ ರೂಪಿಸಲಾಯಿತು. ತದನಂತರ ಇದು ಸ್ವತಂತ್ರ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಇಲಾಖೆಯು ಗ್ರಾಮೀಣ ಮತ್ತು ನಗರ ಭಾಗದಲ್ಲಿ ಹಿಂದುಳಿದ ಮತ್ತು ಬಡ ಸಾರ್ವಜನಿಕರಿಗೆ ಮತ್ತು ಶ್ರಮಿಕ ವರ್ಗಕ್ಕೆ ವಸತಿ ಸೌಲಭ್ಯವನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ. ಇಷ್ಟೇ ಅಲ್ಲದೇ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ವಸತಿಗಳನ್ನು ಕಲ್ಪಿಸುವುದೂ ಸಹ ಇದರ ಉದ್ದೇಶವಾಗಿದೆ.

ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವುದು ಸಿದ್ದರಾಮಯ್ಯ ಸರ್ಕಾರದ ಜನಪರವಾದಂತಹ ಉದ್ದೇಶವಾಗಿದ್ದು ಈಗಾಗಲೇ 11 ಲಕ್ಷ ಮನೆಗಳನ್ನು ಬಡವರಿಗಾಗಿ ನಿರ್ಮಿಸಿಕೊಡಲಾಗಿದ್ದು ಮಾರ್ಚ್ 2018 ರ ವೇಳೆಗೆ ಇನ್ನೂ 15.5 ಲಕ್ಷ ಮನೆಗಳ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ. ಈಗಾಗಲೇ ಗೃಹ ನಿವೇಶನ ಯೋಜನೆಯಡಿಯಲ್ಲಿ ಈಗಾಗಲೇ 44,500 ಗೃಹ ನಿವೇಶನಗಳನ್ನು ಒದಗಿಸಲಾಗಿದೆ. ಇಷ್ಟೇ ಅಲ್ಲದೇ ಸರ್ಕಾರವು ಆಶ್ರಯ ಯೋಜನೆಯಡಿಯಲ್ಲಿ 10.84 ಲಕ್ಷ ಫಲಾನುಭವಿಗಳ ಒಟ್ಟು 2,488 ಕೋಟಿ ರೂಪಾಯಿಗಳಷ್ಟು ಸಾಲ ಹಾಗೂ 1,030 ಕೋಟಿ ರೂಪಾಯಿಗಳ ಬಡ್ಡಿಯನ್ನು ಮನ್ನಾ ಮಾಡಲಾಗಿದ್ದು ಎಲ್ಲರಿಗೂ ಸಾಲ ಮನ್ನಾ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ.

ಗೃಹ ಯೋಜನೆಗಳಿಗೆ ಸರ್ಕಾರದಿಂದ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನು 1.2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 1.5 ಲಕ್ಷ ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇಷ್ಟೇ ಅಲ್ಲದೇ ನಮ್ಮ ಸರ್ಕಾರವು ಕೊಳಗೇರಿ ಅಭಿವೃದ್ಧಿ ನೀತಿ ಹಾಗೂ ಕೈಗೆಟುಕುವ ಬೆಲೆಯಲ್ಲಿ ಗೃಹ ನಿರ್ಮಾಣ ನೀತಿಯನ್ನು ಅನುಷ್ಠಾನಗೊಳಿಸಿರುತ್ತದೆ. ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ 7 ಲಕ್ಷ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿರುತ್ತದೆ. ಈ ಪೈಕಿ 6 ಲಕ್ಷ ಮನೆಗಳು ಗ್ರಾಮೀಣ ಭಾಗಕ್ಕೂ ಮತ್ತು 1 ಲಕ್ಷ ಮನೆಗಳು ನಗರ ಭಾಗಕ್ಕೂ ಸೀಮಿತವಾಗಿವೆ. ಡಾ.ಬಿ.ಆರ್, ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯ ಅಂಗವಾಗಿ ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಗೃಹ ಸೌಲಭ್ಯಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಮನೆಗಳನ್ನು ನೀಡಲಾಗಿದೆ. “ಇಂದಿರಾ ಗ್ರಾಮೀಣ ಗೃಹ ನಿವೇಶನಯೋಜನೆ” ಅಡಿಯಲ್ಲಿ ಖಾಸಗೀ ಸಹಭಾತ್ವದಲ್ಲಿ (60:40 ಅನುಪಾತದಲ್ಲಿ) ಗೃಹ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಲಾಗಿದ್ದು ಕೊಳಗೇರಿ ಪ್ರದೇಶಗಳಿಗೆ 50,000 ಮನೆಗಳನ್ನು ನಿರ್ಮಿಸಿಕೊಡುವ ಗುರಿಯನ್ನು ಹೊಂದಲಾಗಿದೆ.

ಈ ಇಲಾಖೆಯ ಅಡಿಯಲ್ಲಿ ಮೂರು ಸಂಸ್ಥೆಗಳು ಸಮಾಜದಲ್ಲಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದು ಅವರು ಈ ಕೆಳಕಂಡಂತಿವೆ:

ರಾಜೀವ್ ಗಾಂಧೀ ಗ್ರಾಮೀಣ ಗೃಹ ನಿಗಮ ನಿಯಮಿತ
ಸಮಾಜದಲ್ಲಿ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ವಸತಿಯನ್ನು ಕಲ್ಪಿಸುವ ಮಹತ್ತರವಾದ ಕೆಲಸವನ್ನು ಈ ನಿಗಮವು ಮಾಡುತ್ತಿದ್ದು ಇದು ಕಂಪನಿ ಕಾಯ್ದೆಗಳ ಅಡಿಯಲ್ಲಿ 2000 ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಗೊಂಡಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ದುರ್ಬಲ ವರ್ಗಗಳಿಗೆ ಗೃಹ ಸೌಲಭ್ಯವನ್ನು ಒದಗಿಸುವುದು ಇದರ ಕೆಲಸವಾಗಿದ್ದು ಇದರ ಪ್ರಮುಖವಾದ ಗುರಿಗಳು ಇಂತಿವೆ:
• ಗೃಹ ನಿರ್ಮಾಣ ಕ್ಷೇತ್ರದಲ್ಲಿ ಕಡಿಮೆ-ವೆಚ್ಚದ, ಪರಿಸರ ಸ್ನೇಹಿಯಾದ ಮತ್ತು ಅತ್ಯಾಧುನಿಕ ತಾಂತ್ರಿಕತೆಯನ್ನು ಅಳವಡಿಸುವುದು.
• ಮನೆಯ ವಿನ್ಯಾಸ ಹಾಗೂ ವಸ್ತುಗಳ ಬಳಕೆ ಮತ್ತು ತಂತ್ರಜ್ಞಾದಲ್ಲಿ ಜನರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವುದು
• ವಿಧವೆಯರು, ಕುಷ್ಟ ರೋಗ ಪೀಡಿತರು, ಹೆಚ್ ಐವಿ ಸೋಂಕಿತರು, ದೇವದಾಸಿಗಳು , ಬುಡಕಟ್ಟು ಜನರು, ಅಲೆಮಾರಿ ಸಮುದಾಯದ ಜನರು ಹಾಗೂ ಇನ್ನಿತರೆ ಹಿಂದುಳಿದ ಸಮುದಾಯಗಳಿಗೆ ಯೋಜನೆಗಳನ್ನು ರೂಪಿಸುವುದು .
• ಕಲೆಗಾರರು, ನೇಕಾರರು , ಬೀಡಿ ಕಾರ್ಮಿಕರು ಮತ್ತು ಇನ್ನಿತರೆ ಶ್ರಮಿಕ ಸಮುದಾಯಗಳಿಗೆ ಮನೆಗಳನ್ನು ನಿರ್ಮಿಸಿಕೊಡುವುದು
• ಸರ್ಕಾರೀ ಯೋಜನೆಗಳ ಸಮರ್ಥ ಅನುಷ್ಠಾನಕ್ಕಾಗಿ ಮಾಹಿತಿ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವುದು
ಈ ಯೋಜನೆಯಡಿಯಲ್ಲಿ ಈ ವರ್ಷ ಒಟ್ಟು ಆರು ಲಕ್ಷಕ್ಕೂ ಹೆಚ್ಚಿನ ಜನರಿಗೆ ಮನೆಗಳಿಗಾಗಿ ಹಣಕಾಸಿನ ನೆರವನ್ನು ನೀಡಲಾಗಿದ್ದು “ಇಂದಿರಾ ಮನೆ” ಮತ್ತು “ಕನಸಿನ ಮನೆ” ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಗಳ ಮುಖಾಂತರ ಸ್ಮಾರ್ಟ್ ಫೋನ್ ಅನ್ನು ಹೊಂದದೇ ಇರುವಂತಹ ಬಡ ಜನರಿಗೆ ಮಾಹಿತಿಯನ್ನು ಒದಗಿಸಬಹುದಾಗಿದೆ.

ಈ ಯೋಜನೆಯ ಅಡಿಯಲ್ಲಿ ನಗರ ಪ್ರದೇಶದಲ್ಲಿ ಹಿಂದುಳಿದ ಬಡ ಸಮುದಾಯಗಳ ಫಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ ವಾರ್ಷಿಕ ಆದಾಯ 32,000 ಕ್ಕಿಂತಲೂ ಕಡಿಮೆ ಉಳ್ಳ ಮತ್ತು ನಗರ ಪ್ರದೇಶದಲ್ಲಿ 87,600 ರೂಗಳಿಗಿಂತಲೂ ಕಡಿಮೆ ಆದಾಯ ಉಳ್ಳವರಿಗೆ ಮನೆ ನಿರ್ಮಾಣಕ್ಕೆ 1.2 ಲಕ್ಷ ಸಬ್ಸಿಡಿ ಮತ್ತು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶೌಚಾಲಯಕ್ಕೆ 12,000 ರೂಪಾಯಿಗಳ ಅನುದಾನವನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 1.5 ಲಕ್ಷ ರೂಪಾಯಿಗಳ ವರೆಗೆ ಅನುದಾನವನ್ನು ನೀಡಲಾಗುತ್ತಿದೆ. ಒಟ್ಟು ಐದು ಹಂತಗಳಲ್ಲಿ ಹಣವನ್ನು ಬಿಡುಗಡೆಗೊಳಿಸುವಂತಹ ವ್ಯವಸ್ಥೆ ಇದ್ದು ಪ್ರತಿ ಹಂತಕ್ಕೂ 30,000 ರೂಪಾಯಿಗಳು ಮತ್ತು ಶೌಚಾಲಯ ನಿರ್ಮಾಣದ ವ್ಯವಸ್ಥೆಯು ಪ್ರತ್ಯೇಕವಾಗಿ ಕಲ್ಪಿಸಿದೆ.

ಪ್ರತಿ ಹಂತದ ಕಾಮಗಾರಿ ಪೂರ್ಣವಾದಾಗಲೂ ಸಹ ಸ್ಥಿತಿಗತಿ ವರದಿಯನ್ನು ಇಲಾಖೆಗೆ ಕಳುಹಿಸಬೇಕು. ನಂತರದ ಅನುದಾನ ಬಿಡುಗಡೆಗೆ ಏನಾದರೂ ಸಮಸ್ಯೆಗಳು ಉಂಟಾದರೆ ಅದರ ಕುರಿತಂತೆ ದೂರುಗಳನ್ನು ಆ್ಯಪ್ ಮೂಲಕ ಸಲ್ಲಿಕೆ ಮಾಡಬಹುದು. ಸ್ಮಾರ್ಟ್ ಫೋನ್ ಉಳ್ಳಂತವರು ಮನೆಯ ಚಿತ್ರವನ್ನು ತೆಗೆದು ಕಾಮಗಾರಿಯ ಸ್ಥಿತಿಗತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಕಳುಹಿಸಬಹುದಾಗಿದ್ದು ಇಲ್ಲಿ ಯಾವುದೇ ಮಧ್ಯವರ್ತಿಯ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ.

Namma-Karntaka-vasathi_bhagya

ಕರ್ನಾಟಕ ಗೃಹ ಮಂಡಳಿ (ಹೌಸಿಂಗ್ ಬೋರ್ಡ್)
ಕರ್ನಾಟಕ ಗೃಹ ಮಂಡಳಿ ಕಾಯ್ದೆ 1962 ರಡಿ ಈ ಮಂಡಳಿಯನ್ನು ಸ್ಥಾಪಿಸಲಾಗಿದ್ದು ವಸತಿಯ ಅವಶ್ಯಕತೆಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ. ಕರ್ನಾಟಕದ ಜನತೆಗೆ ಕೈಗೆಟುಕುವ ದರದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ಕರ್ನಾಟಕ ಕೊಳಗೇರಿ ಪ್ರದೇಶಗಳ ಕಾಯ್ದೆ 1973 (ಸುಧಾರಣೆ) ಅಡಿಯಲ್ಲಿ 1975 ರಲ್ಲಿ ಈ ಮಂಡಳಿಯು ರೂಪುಗೊಂಡಿತು. ಈ ಮಂಡಳಿಯು ಐದು ಜನ ನಾಮನಿರ್ದೇಶಿತ ಅನಧಿಕೃತ ಸದಸ್ಯರು ಮತ್ತು ಎಂಟು ಜನ ಅಧಿಕೃತ ಸದಸ್ಯರಿದ್ದು ಈ ಮಂಡಳಿಗೆ ಒಬ್ಬ ಚೇರ್ ಮನ್ ಇರುತ್ತಾರೆ. ಈ ಮಂಡಳಿಯ ಕಮೀಷನರ್ ಅವರು ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿಗಳಾಗಿದ್ದು ಅವರು ಮಂಡಳಿಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಈ ಮಂಡಳಿಯ ಉದ್ದೇಶವು ಕೊಳಗೇರಿಯಲ್ಲಿರುವಂತಹ ಜನರಿಗೆ ಮೂಲ ಸೌಕರ್ಯಗಳು ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸುವುದಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Housing