/ Article371j

371(ಜೆ) ವಿಧಿಯಡಿಯಲ್ಲಿ ಹೈದರಾಬಾದ್-ಕರ್ನಾಟಕದ ಸಮಗ್ರ ಅಭಿವೃದ್ಧಿ

ಹಲವಾರು ವರ್ಷಗಳ ಹೋರಾಟದ ಫಲವಾಗಿ ಯುಪಿಎ ಸರ್ಕಾರವು 2012 ರಲ್ಲಿ ಸಂವಿಧಾನದಲ್ಲಿ ತಿದ್ದುಪಡಿಯನ್ನು ತಂದು 371(ಜೆ) ವಿಧಿಯನ್ನು ಜಾರಿಗೊಳಿಸಿತು. ಹೈದರಾಬಾದ್–ಕರ್ನಾಟಕದ ಅಭಿವೃದ್ಧಿಯ ಸಲುವಾಗಿ ಜಾರಿಗೊಂಡ ಈ ಕಾಯ್ದೆಯ ಜಾರಿಗಾಗಿ ದಿವಂಗತ.ಧರಂ ಸಿಂಗ್ ಮತ್ತು ಶ್ರೀ.ಮಲ್ಲಿಕಾರ್ಜುನ್ ಖರ್ಗೆ ಹಾಗೂ ಇನ್ನಿತರೆ ಕಾಂಗ್ರೆಸ್ ನ ನಾಯಕರು ಸೇರಿ ಅವಿರತವಾಗಿ ಶ್ರಮಿಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗುಲ್ಬರ್ಗದ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿ, ಗುಲ್ಬರ್ಗಾ ನಗರ ಪಾಲಿಕೆಯನ್ನು, ಮಹಾನಗರ ಪಾಲಿಕೆಯನ್ನಾಗಿಸಿದ್ದು, ಗುಲ್ಬರ್ಗಾದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯ ಪೀಠವನ್ನು ಸ್ಥಾಪಿಸಿ, ಬೀದರ್–ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ ಬೀದರ್ ಹಾಗೂ ಕಲ್ಬುರ್ಗಿ ಪ್ರಾಂತ್ಯಗಳಿಗೆ ಸಾಕಷ್ಟು ರೀತಿಯ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಯಿತು.

1

ಸಂವಿಧಾನಾತ್ಮಕವಾಗಿ ಜಾರಿಗೆ ತಂದ 371 ಜೆ ವಿಧಿಯನುಸಾರವಾಗಿ ಉತ್ತರ ಕರ್ನಾಟಕದ ಆರು ಪ್ರಮುಖ ಹಿಂದುಳಿದ ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಲಾಯಿತು- ಗುಲ್ಬರ್ಗಾ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿ. ಈ ವಿಶೇಷ ಸ್ಥಾನಮಾನವು ಉತ್ತರ ಕರ್ನಾಟಕದ ಈ ಪ್ರದೇಶಗಳಿಗೆ ವರದಾನವಾಗಿ ಪರಿಣಮಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದರು. ಹೈದರಾಬಾದ್-ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಯು ಈ ಮಂಡಳಿಯ ಉದ್ದೇಶವಾಗಿದ್ದು ಅದಕ್ಕ ಪೂರಕವಾಗಿ ಈ ಮಂಡಳಿಗೆ ಕೆಲವೊಂದು ಸ್ವತಂತ್ರ ಅಧಿಕಾರಗಳನ್ನೂ ಸಹ ನೀಡಲಾಯಿತು.

2

ಹೈದರಾಬಾದ್ ಕರ್ನಾಟಕ ವಿಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೊದಲ 3 ವರ್ಷಗಳಲ್ಲಿ 830 ಕೋಟಿಗಳಷ್ಟು ಅನುದಾನವನ್ನು ಪ್ರಕಟಿಸಿದ್ದರು. ಇದೀಗ 2017 ರ ಕರ್ನಾಟಕ ಬಜೆಟ್ ನಲ್ಲಿ 2503 ಕೋಟಿಗಳಷ್ಟು ದಾಖಲೆಯ ಅನುದಾನವನ್ನು ಹೈದರಾಬಾದ್–ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ನೀಡಿದ್ದಾರೆ. ನುಡಿದಂತೆ ನಡೆದ ಸಿದ್ದರಾಮಯ್ಯ ಸರ್ಕಾರವು ಹೈದರಾಬಾದ್ –ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬದ್ದವಾಗಿರುವುದು ಈ ಮೂಲಕ ಸಾಬೀತಾಗಿದೆ.

3

371ಜೆ ವಿಧಿಯನುಸಾರವಾಗಿ ಹೈದರಾಬಾದ್–ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೆಡಿಕಲ್, ಡೆಂಟಲ ಹಾಗೂ ಇಂಜಿನಿಯರಿಂಗ್ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸೀಟು ಹಂಚಿಕೆಯಲ್ಲಿ 70% ಮೀಸಲಾತಿಯನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅಲ್ಲದೇ ಕರ್ನಾಟಕದ ಇತರೆ ಭಾಗದಲ್ಲಿಯೂ ಸಹ 8% ಮೀಸಲಾತಿಯನ್ನು ಈ ಭಾಗದ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇಷ್ಟೇ ಅಲ್ಲದೇ ಕರ್ನಾಟಕ ಸರ್ಕಾರವು ಈ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ 12,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ.

dsc-0767-copy-2000x1329-7-2

ಹೈದರಾಬಾದ್–ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬದ್ದರಾಗಿ ನಡೆದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಭಾಗದಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿಗಾಗಿ ರಾಯಚೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗಾಗಿ 2017 ರ ಬಜೆಟ್ ನಲ್ಲಿ ಘೋಷಣೆಯನ್ನು ಮಾಡಿದ್ದಾರೆ. ಇದರಿಂದ ರಾಯಚೂರು ಮತ್ತು ಯಾದಗಿರಿಯ ಎಲ್ಲಾ ಕಾಲೇಜುಗಳು ಈ ಹೊಸ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಸೇರಲಿವೆ.

ಇಷ್ಟೇ ಅಲ್ಲದೇ ವಿದ್ಯಾಸಿರಿ ಯೋಜನೆಯಡಿಯಲ್ಲಿ 2016-17 ರ ಸಾಲಿನಲ್ಲಿ ರಾಯಚೂರು ಜಿಲ್ಲೆಯೊಂದಕ್ಕೇ 3 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಿದ್ದು ಇದು ಹಲವಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ.