/ bangalore

ಇಂದಿರಾ ಕ್ಯಾಂಟೀನ್

ಹಸಿವು ಮುಕ್ತಗೊಳಿಸುವ ಮಹತ್ತರ ಉದ್ದೇಶವಿಟ್ಟುಕೊಂಡು ಬಂದ ಸಿದ್ದರಾಮಯ್ಯ ಸರ್ಕಾರದ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳ ಪೈಕಿ ಇಂದಿರಾ ಕ್ಯಾಂಟೀನ್ ಯೋಜನೆಯೂ ಸಹ ಅತ್ಯಂತ ಮಹತ್ತರವಾದಂತಹ ಯೋಜನೆಯಾಗಿದೆ. ಈ ಸದ್ಯ ಬೆಂಗಳೂರು ನಗರದ ಬಡವರು, ಶ್ರಮಿಕರು, ಕಾರ್ಮಿಕರು ಹಾಗು ವಿದ್ಯಾರ್ಥಿಗಳನ್ನು ಉದ್ದೇಶವಾಗಿಟ್ಟುಕೊಂಡು ಜಾರಿಗೊಳಿಸಲಾದ “ಇಂದಿರಾ ಕ್ಯಾಂಟೀನ್ “ ಯೋಜನೆಗೆ ಅಭೂತಪೂರ್ವ ಯಶಸ್ಸು ದೊರಕಿದ್ದು, ಕಡಿಮೆ ಬೆಲೆಗೆ ಹಸಿವು ನೀಗಿಸುವ ಇದರ ಉದ್ದೇಶ ಭಾರೀ ಸಫಲತೆಯನ್ನು ಕಂಡಿದೆ.

ಹಸಿವುಮುಕ್ತ ಕರ್ನಾಟಕ ಮಾಡಬೇಕೆಂಬ ಸಿಎಂ ಸಿದ್ದರಾಮಯ್ಯನವರ ಕಲ್ಪನೆಯ ಕೂಸಿದು. ಅವರ ಕಲ್ಪನೆಯನ್ನು ಸಾಕಾರಗೊಳಿಸಲು ಅವರ ಸಂಪುಟದ ಹಲವು ಸಚಿವರು ಈ ಕನಸನ್ನು ನನಸಾಗಿಸಲು ಶ್ರಮಿಸುತ್ತಿದ್ದಾರೆ. ಹೀಗಾಗಿಯೇ ರಾಜ್ಯದಲ್ಲಿ ‘ಅನ್ನ ಭಾಗ್ಯ’, ‘ಕ್ಷೀರಭಾಗ್ಯ’ ‘ಮಾತೃಪೂರ್ಣ’ ಮುಂತಾದ ಯೋಜನೆಗಳು ರೂಪುಗೊಂಡು ಯಶಸ್ವಿಯಾಗಿ ಅನುಷ್ಠಾನವಾಗಿದೆ.

ಅದೇ ರೀತಿ ಸರ್ಕಾರದ, ಅನುದಾನಿತ ಹಾಗೂ ಬೇಡಿಕೆ ಬರುವ ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಂಗನವಾಡಿಗಳಲ್ಲಿ ಮೊಟ್ಟೆ ವಿತರಣೆಯು ಅಪೌಷ್ಠಿಕತೆಯನ್ನು ದೂರಮಾಡಿಸುತ್ತಿವೆ. ಬೆಳಗಿನ ಉಪಹಾರವನ್ನು 7.30ರಿಂದ 10ಗಂಟೆಯವರೆಗೂ, ಮಧ್ಯಾಹ್ನದ ಊಟವನ್ನು 12.30ರಿಂದ 3 ಗಂಟೆಯವರೆಗೂ, ರಾತ್ರಿಯ ಊಟವನ್ನು 7.30ರಿಂದ 9ಗಂಟೆಯವರೆಗೂ ವಿತರಿಸಲಿದೆ.

20900739_1132918260171571_8636829651921474135_o

ಬಿಸಿಬೇಳೆಬಾತ್, ಪೊಂಗಲ್ ಅಥವಾ ಪಲಾವ್‍ಗಳು ಬೆಳಗಿನ ಉಪಹಾರವಾಗಿಇಂದಿರಾ ಕ್ಯಾಂಟೀನ್‍ನಲ್ಲಿ ರೂ. 5ಕ್ಕೆ ಲಭ್ಯವಾಗಲಿದೆ. ಮಧ್ಯಾಹ್ನದ ಊಟಕ್ಕೆ ಅನ್ನಸಾಂಬಾರ್, ಪಲ್ಯ ಹಾಗೂ ಮೊಸರನ್ನ ಇವೆಲ್ಲವೂ ಕೇವಲ ರೂ. 10ಕ್ಕೆ ಲಭ್ಯ. ಇದೇ ಶುಲ್ಕಕ್ಕೆ ರಾತ್ರಿಯ ಊಟವೂ ಸಹ ಲಭ್ಯವಿದೆ.

ಸಿಎಂ ಸಿದ್ದರಾಮಯ್ಯನವರು 2017-18ನೇ ಸಾಲಿನ ಬಜೆಟ್‍ನಲ್ಲಿ ಇಂದಿರಾಕ್ಯಾಂಟೀನ್‍ನ ಯೋಜನೆಗೆ ರೂ. 100 ಕೋಟಿ ಮೊತ್ತವನ್ನು ಮೀಸಲಿಟಿದ್ದಾರೆ.ಉದ್ಯೋಗ ಸೃಷ್ಟಿಗೆ ಇಂದಿರಾ ಕ್ಯಾಂಟೀನ್ ನೆರವಾಗಲಿದೆ. 27 ಅಡುಗೆ ಕೇಂದ್ರಗಳು (ಕಿಚನ್‍ಗಳ) ಇರಲಿದೆ. ಇಲ್ಲಿ ಹಲವರಿಗೆ ಉದ್ಯೋಗ ದೊರೆಯಲಿದೆ. 27 ಕೇಂದ್ರಗಳಲ್ಲಿ 5ನ್ನು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಮೀಸಲಿರಿಸಲಾಗಿದೆ.

indira-canteen

ಇಂದಿರಾ ಕ್ಯಾಂಟಿನ್‍ಗಳು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್‍ಗಳಲ್ಲೂ ಸ್ಥಾಪಿಸಲಾಗುವುದು.
ಕ್ಯಾಂಟೀನ್ ಮಾಹಿತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಗಳ ಸಂಖ್ಯೆಯ ಆಧಾರದಲ್ಲಿ ಕ್ಯಾಂಟೀನ್ ಮಾಡಲಾಗಿದೆ. ಸಿವಿ ರಾಮನ್ ನಗರ 7, ಹೆಬ್ಬಾಳ 8, ಪುಲಿಕೇಶಿ ನಗರ 7, ಸರ್ವಜ್ಞ ನಗರ 8, ಶಾಂತಿನಗರ 7, ಶಿವಾಜಿ ನಗರ 7, ಚಾಮರಾಜ ಪೇಟೆ 7, ಗಾಂಧಿನಗರ 7, ಗೋವಿಂದರಾಜನಗರ 9, ಮಹಾಲಕ್ಷ್ಮಿ ಲೇಔಟ್ 7, ಮಲ್ಲೇಶ್ವರ 7, ರಾಜಾಜಿನಗರ 7, ಬಿಟಿಎಂ ಲೇಔಟ್ 8, ಬಸವನಗುಡಿ 6, ಚಿಕ್ಕಪೇಟೆ 7, ಜಯನಗರ 7, ಪದ್ಮನಾಭನಗರ 8, ವಿಜಯನಗರ 8, ಕೆಆರ್ ಪುರಂ 9, ಮಹದೇವಪುರ 8, ರಾಜರಾಜೇಶ್ವರಿ ನಗರ 9, ಯಶವಂತಪುರ 5, ಬ್ಯಾಟರಾಯನಪುರ 7, ಯಲಹಂಕ 4, ಬೆಂಗಳೂರು ದಕ್ಷಿಣ 8, ಬೊಮ್ಮನಹಳ್ಳಿ 8, ದಾಸರಹಳ್ಳಿ 8.

ಈಗಾಗಲೇ ಸಾರ್ವಜನಿಕರಿಗೆ ಇದರಿಂದ ಬಹಳಷ್ಟು ಪ್ರಯೋಜನ ಆಗುತ್ತಿದ್ದು ಜಿಎಸ್ ಟಿ ಹೊರೆಯಿಂದ ಕಂಗೆಟ್ಟು ಹೋಗಿದ್ದ ಬಡವರಿಗೆ ಆಹಾರದ ಭದ್ರತೆಯು ದೊರೆತಿದೆ. ಉದಾಹರಣೆಗೆ ದಿನಕ್ಕೆ ಆಹಾರಕ್ಕಾಗಿ 100 ರಿಂದ 250 ರೂಪಾಯಿಗಳನ್ನು ಖರ್ಚು ಮಾಡಬೇಕಾದ ಜಾಗದಲ್ಲಿ ಕೇವಲ 25-30 ರೂಪಾಯಿಯ ಒಳಗೇ ಆಹಾರದ ವೆಚ್ಚವು ಮುಗಿಯುತ್ತಿದ್ದು ಬಡವರ ಆರ್ಥಿಕತೆಯಲ್ಲಿ ನಿಜಕ್ಕೂ ಒಂದಷ್ಟು ಸುಧಾರಣೆಗಳು ಆಗುತ್ತಿದೆ. ಒಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಬಡವರ ಪಾಲಿಗೆ ವರದಾನವಾಗಿದ್ದು ಹಸಿವು ನೀಗಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದೆ.