/ department

ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆ

ಮೂಲ ಸೌಕರ್ಯಗಳ ಅಭಿವೃದ್ಧಿ ಇಲಾಖೆಯು ವಾಯು, ರೈಲು ಮತ್ತು ರಸ್ತೆ ಮಾರ್ಗದ ಅಭಿವೃದ್ಧಿಯಲ್ಲಿ ಮಹತ್ತರವಾದಂತಹ ಪಾತ್ರವನ್ನು ವಹಿಸಿದ್ದು ಸಾರ್ವಜನಿಕರ ಸಂಪರ್ಕ ವ್ಯವಸ್ಥೆಗೆ ಅವಿರತವಾದ ಕೊಡುಗೆಯನ್ನು ನೀಡಿದೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಖಾಸಗೀ ಹೂಡಿಕೆಯನ್ನು ಉತ್ತೇಜಿಸುವ ಕೆಲಸವನ್ನು ಸರ್ಕಾರವು ಮಾಡಿದೆ.

ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ.ಆರ್.ವಿ.ದೇಶಪಾಂಡೆ ಅವರ ಬದ್ದತೆಯಿಂದಾಗಿ ರಾಜ್ಯದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯು ಬಹಳಷ್ಟು ಹೆಚ್ಚಾಗಿದ್ದು ಜನಸಂಖ್ಯೆಯ ಪ್ರಮಾಣಕ್ಕೆ ಆಧಾರವಾಗಿ ಮೂಲ ಸೌಕರ್ಯಗಳನ್ನು ರೂಪಿಸಲು ಯಶಸ್ವಿಯಾಗಿದ್ದು ಹಲವಾರು ಕಾರ್ಯಕ್ರಮಗಳನ್ನು ಈ ಕೆಳಕಂಡತೆ ರೂಪಿಸಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ನೀತಿ 2007 ರ ತಿದ್ದುಪಡಿ
ಸಾವರ್ಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರವು ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಗಮನವನ್ನು ಹರಿಸಿದ್ದು ಮೂಲಸೌಕರ್ಯ ಅಭಿವೃದ್ಧಿ ನೀತಿ 2007 ಕ್ಕೆ ತಿದ್ದುಪಡಿ ತಂದಿದ್ದು ರಾಜ್ಯದ ಪ್ರಾಥಮಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದೆ.

ರೈಲಿನ ಮೇಲು ಮತ್ತು ಕೆಳ ಬ್ರಿಡ್ಜ್
ಕಳೆದ ನಾಲ್ಕು ವರ್ಷಗಳಲ್ಲಿ ರೈಲು ಮಾರ್ಗದಿಂದ ಉಂಟಾಗುವ ವಾಹನ ದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ಮತ್ತು ರಸ್ತೆಮಾರ್ಗದ ವಾಹನ ದಟ್ಟಣೆಯನ್ನು ತಪ್ಪಿಸಲು ಸರ್ಕಾರವು ಮೇಲು ಮತ್ತು ಕೆಳ ಬ್ರಿಡ್ಜ್ ಗಳನ್ನು ನಿರ್ಮಾಣ ಮಾಡಿದ್ದು ಇದಕ್ಕಾಗಿ 1637 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿರುತ್ತದೆ

ರೈಲ್ವೇ ವ್ಯಾಗನ್ ಫ್ಯಾಕ್ಟರಿ
ವ್ಯಾಗನ್ ಫ್ಯಾಕ್ಟರಿಗಾಗಿ ಯಾದಗಿರಿಯಲ್ಲಿ ಸರ್ಕಾರವು ಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿದ್ದು ಇದಕ್ಕಾಗಿ 15 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿರುತ್ತದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇಕಡಾ 50:50 ಹಣವನ್ನು ವಿನಿಯೋಗಿಸಿದ್ದು ಅಕ್ಟೋಬರ್ 2017 ರಂದು ಯಾದಗಿರಿ ಕೋಚ್ ಫ್ಯಾಕ್ಟರಿಯು ಉದ್ಘಾಟನೆಗೊಂಡಿರುತ್ತದೆ.

ರೈಲ್ವೇ ಮಾರ್ಗಗಳು
. ಪ್ರಯಾಣದ ಅವಧಿಯನ್ನು ತಗ್ಗಿಸಲು ಹಾಸನ ಮತ್ತು ಬೆಂಗಳೂರು ರೈಲ್ವೇ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
. ಬೀದರ್ –ಕಲ್ಬುರ್ಗಿ ಮತ್ತು ರಾಮನಗರ-ಮೈಸೂರು ಎರಡು ಸಾಲಿನ ರಸ್ತೆಯ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ
. 27 ಕಿಮಿ ಯ ಮುನಿರಾಬಾದ್-ಮೆಹಬೂಬ್ ನಗರ ರೈಲ್ವೇ ಮಾರ್ಗವು ಇದೇ ವರ್ಷ ಆರಂಭಗೊಳ್ಳಲಿದೆ.
. ಕುಡಚಿ-ಬಾಗಲಕೋಟೆಯ ನಡುವಿನ 30 ಕಿಮೀ ರೈಲ್ವೇ ಮಾರ್ಗವು ಪೂರ್ಣಗೊಂಡಿದೆ.
. 154 ಕಿಮೀ ಉದ್ದದ ಗದಗ –ವಾಡಿ ರೈಲ್ವೇ ಮಾರ್ಗವು ಪ್ರಗತಿಯಲ್ಲಿದ್ದು ಇದಕ್ಕಾಗಿ ರಾಜ್ಯ ಸರ್ಕಾರವು 1,922 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿರುತ್ತದೆ.

Infrastructure-Development

ವಿಮಾನ ನಿಲ್ದಾಣಗಳ ನವೀಕರಣ
ರಾಜ್ಯ ಸರ್ಕಾರವು ಹುಬ್ಬಳ್ಳಿಯ ವಿಮಾನ ನಿಲ್ದಾಣಗಳ ನವೀಕರಣಕ್ಕಾಗಿ 588 ಎಕರೆ ಭೂಮಿ ಮತ್ತು ಬೆಳಗಾವಿಯ ವಿಮಾನ ನಿಲ್ದಾಣಗಳ ನವೀಕರಣಕ್ಕಾಗಿ 370 ಎಕರೆ ಭೂಮಿಯನ್ನು ನೀಡಿರುತ್ತದೆ.

ಅನಿಲ (ಗ್ಯಾಸ್) ವಿತರಣಾ ಯೋಜನೆ
ಬೆಂಗಳೂರು ನಗರ ಅನಿಲ ವಿತರಣಾ ಯೋಜನೆಯು ಮುಕ್ತಾಯದ ಹಂತದಲ್ಲಿದೆ. ಈ ಯೋಜನೆಯಡಿಯಲ್ಲಿ ಎಲ್ ಪಿ ಜಿ ಅನಿಲವನ್ನು ನಗರದ ಕೈಗಾರಿಕೆಗಳು, ಸಾರಿಗೆ ಮತ್ತು ಸ್ಥಳೀಯ ಗ್ರಾಹಕರಿಗೆ ಪೈಪ್ ಗಳ ಮೂಲಕ ಪೂರೈಕೆ ಮಾಡಲಾಗುತ್ತದೆ.

ರನ್ ವೇ ಮತ್ತು ಏರ್ ಸ್ಟ್ರಿಪ್ ಗಳ ಅಭಿವೃದ್ಧಿ
ಪ್ರಯಾಣಿಕರ ಹರಿವಿಗೆ ಸಂಬಂಧಿಸಿದಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದಲ್ಲೇ ಮೂರನೇ ದೊಡ್ಡ ವಿಮಾನ ನಿಲ್ದಾಣವಾಗಿದೆ. ದಟ್ಟಣೆಯನ್ನು ತಪ್ಪಿಸಿ, ಸಮಯ ಪಾಲನೆಯು ಸುಲಭವಾಗುವಂತೆ ಎರಡನೇ ರನ್ ವೇ ಯನ್ನು ನಿರ್ಮಿಸಲಾಗುತ್ತಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗಾಗಿ 286 ಎಕರೆ ಭೂಪ್ರದೇಶದ ಸ್ವಾಧೀನಕ್ಕಾಗಿ ಭಾರತೀಯ ವಾಯು ವಿಮಾನ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ವಿಸ್ತರಣಾ ಕೆಲಸಕ್ಕೆ ಸೂಕ್ತವಾದ ಬೆಂಬಲವನ್ನೂ ಸಹ ನೀಡಲಾಗುತ್ತಿದೆ.
ತಡದಿ ಬಂದರು ನಿರ್ಮಾಣ ಯೋಜನೆಯನ್ನು ಸಾರ್ವಜನಿಕ-ಖಾಸಗೀ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ.

ಮೂಲಸೌಕರ್ಯಗಳ ಅಭಿವೃದ್ಧಿಗೆ ನೀಡಲಾದ ಅನುದಾನದ ವಿವರಗಳು:
Department-of-Infrastructure-Development