/ CM

ಕಲಬುರಗಿ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕಲಬುರಗಿ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಹಲವಾರು ವಿವಾದಗಳ ಸುಳಿಯಲ್ಲಿ ಸಿಲುಕಿ ನೆನೆಗುದಗಿಗೆ ಬಿದ್ದಿದ್ದ ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಲೊಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಇದಕ್ಕಾಗಿ ಹೆಚ್.ಕೆ.ಆರ್.ಡಿ.ಬಿ. ತನ್ನ ಪಾಲಿನ 55 ಕೋಟಿ ರೂ.ಗಳನ್ನು ನೀಡಿದೆ.
 2. ರಾಜ್ಯ ಸರ್ಕಾರದ ವತಿಯಿಂದ 195 ಕೋಟಿ ರೂ.ಗಳ ವೆಚ್ಚದಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣವು ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.
 3. ತುರ್ತು ಚಿಕಿತ್ಸೆಗಾಗಿ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ವಿಭಾಗವನ್ನು ಕಲಬುರಗಿಯಲ್ಲಿ ಪಾರಂಭಿಸಲಾಗಿದೆ. 25 ಕೋಟಿ ರೂ.ಗಳಲ್ಲಿ ಪ್ರಾರಂಭವಾದ ಈ ಆಸ್ಪತ್ರೆ ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿದೆ.

Kalaburagi_Gok-1

 1. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿಭಾಗಕ್ಕೆ ಮರುಜೀವ ನೀಡಿ, ಈ ಭಾಗದ ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಕಲ್ಪಿಸಲು 75 ಕೋಟಿ ರೂ.ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಅಳವಡಿಸಲಾಗಿದೆ.
 2. ಸೇಡಂ ಮತ್ತು ಆಳಂದ ತಾಲೂಕಿನಲ್ಲಿ ತಲಾ 10 ಕೋಟಿ ರೂಗಳಲ್ಲಿ ಹಾಗೂ ಚಿತ್ತಾಪೂರ ತಾಲೂಕಿನಲ್ಲಿ 14 ಕೋಟಿ ರೂ.ವೆಚ್ಚದಲ್ಲಿ ಮಿನಿ ವಿಧಾನ ಸೌಧಗಳ ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗಿದೆ.
 3. ಜೇವರ್ಗಿ ಏತ ನೀರಾವರಿ ಯೋಜನೆಯಡಿ ಈಗಾಗಲೇ 3026 ಹೆಕ್ಟೇರ್ ಪ್ರದೇಶಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಜೇವರ್ಗಿ, ಮುಡಬಾಳ ಹಾಗೂ ಶಹಾಪುರ ಕೆನಾಲ್‍ಗಳೆಂಬ ಮೂರು ಏತ ನೀರಾವರಿಗಳಿದ್ದು ರೈತರಿಗೆ ಇದರಿಂದ ಅನುಕೂಲವಾಗಿದೆ.

Gulbarga-INCK-1

 1. ಬೆಣ್ಣೆತೋರಾ ನೀರಾವರಿ ಯೋಜನೆಗೆ ಸರ್ಕಾರದಿಂದÀ 174.15 ಕೋಟಿ ರೂ. ಗಳನ್ನು ನೀಡುವ ಮೂಲಕ ಕಾಲುವೆಗಳ ದುರಸ್ತಿ ಮತ್ತು ನವೀಕರಣ ಮಾಡಿ 47744 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.
 2. ಕಲಬುರಗಿಯಿಂದ ಬೀದರ್‍ವರೆಗೆ 125ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣವನ್ನು ರಾಜ್ಯದ ಅನುದಾನದ ಪಾಲು 750 ಕೋಟಿ ರೂಪಾಯಿಗಳನ್ನು ನೀಡುವುದರ ಮೂಲಕ ಪೂರ್ಣಗೊಳಿಸಲಾಗಿದೆ.
 3. 517 ಕೋಟಿ ರೂಪಾಯಿ ವೆಚ್ಚದಲ್ಲಿ 438 ಕಿ.ಮೀ ಉದ್ದದ ಮುಖ್ಯ ಜಿಲ್ಲಾ ರಸ್ತೆಯನ್ನು ಹಾಗೂ 68.1 ಕಿ.ಮೀ ರಾಜ್ಯ ಹೆದ್ದಾರಿ ಹಾಗೂ 132 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

Gulbarga

 1. NKUSIP (ADB) ಯೋಜನೆ ಅಡಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 40 ಒಐಆ ನೀರು ಶುದ್ಧೀಕರಣ ಘಟಕವನ್ನು 4730 ಲಕ್ಷಗಳಲ್ಲಿ ನಿರ್ಮಾಣ ಮಾಡಲಾಗಿದೆ.
 2. ಕಲಬುರಗಿ ನಗರದ ನಾಲ್ಕನೇ ಹಂತದ ಒಳಚರಂಡಿ ಯೋಜನೆಗಾಗಿ ಅಂದಾಜು 14,130.00 ಲಕ್ಷ ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆಯನ್ನು ನೀಡಲಾಗಿದೆ.

#NavaKarnatakaNirmana

1

2

3

4

5

6

7

8

9

10

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ