/ department

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರವು ತನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿಯನ್ನು ಕಾಪಾಡುವ ಕೆಲಸವನ್ನು ಮಾಡಿದೆ. ಸಚಿವೆ ಶ್ರೀಮತಿ.ಉಮಾಶ್ರೀ ಅವರ ನೇತೃತ್ವದಲ್ಲಿ ಕರ್ನಾಟಕದ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉತ್ತೇಜಿಸುವ ಮತ್ತು ಬೆಳೆಸುವ ಕೆಲಸವನ್ನು ಕರ್ನಾಟಕ ಸರ್ಕಾರವು ಬಹು ಮುತುವರ್ಜಿ ವಹಿಸಿ ಮಾಡಿರುತ್ತದೆ.

“ ಇಂದು ಎಲ್ಲಾ ಕನ್ನಡಿಗರು ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳಬೇಕು. ಈ ರಾಜ್ಯವು ಅಭಿವೃದ್ಧಿಯಾಗಲು ನಾವು ಸಹಕರಿಸಬೇಕು. ಇದು ನಮ್ಮ ಜವಾಬ್ದಾರಿಯಾಗಿದೆ”.
- ಸಿ.ಎಂ. ಸಿದ್ದರಾಮಯ್ಯ

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ
1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರೀ ಉದ್ಯೋಗಗಳಲ್ಲಿ 5% ನಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ ಪರೀಕ್ಷೆಗಳ ನಿಯಮ -1977 ಕ್ಕೆ 2017 ರ ಜುಲೈ ನಲ್ಲಿ ಕೆಲ ಅವಶ್ಯಕ ಬದಲಾವಣೆಗಳನ್ನು ತರಲಾಗಿದೆ.

ಕರ್ನಾಟಕದಲ್ಲಿ ಕನ್ನಡವೇ ಮೊದಲು
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಮೊದಲ ಆದ್ಯತೆ ನೀಡಿರುವ ಸರ್ಕಾರವು ಶಾಲಾ ಮಟ್ಟದಲ್ಲಿ 2015-16 ರಿಂದ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಿದ್ದು ಎಲ್ಲಾ ಖಾಸಗೀ ಮತ್ತು ಸಾರ್ವಜನಿಕ ಶಾಲೆಗಳಿಗೆ ಈಗಾಗಲೇ ಆದೇಶವನ್ನು ನೀಡಲಾಗಿದೆ. ಸೂಚನಾ ಫಲಕ ಹಾಗೂ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ತಡೆಯಲಾಗಿದ್ದು ಮಾನ್ಯ ಮುಖ್ಯಮಂತ್ರಿಗಳು ಸಂವಿಧಾನದ 8ನೇ ಶೆಡ್ಯೂಲ್ ಅಡಿಯಲ್ಲಿ ಬ್ಯಾಂಕಿಂಗ್ ಹಾಗು ಇನ್ನಿತರೆ ಸ್ಪರ್ಧಾ ಪರೀಕ್ಷೆಗಳನ್ನು ಎಲ್ಲಾ 22 ಭಾಷೆಯಲ್ಲಿ ಕೈಗೊಳ್ಳಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಬರಹ ಸಂಪುಟಗಳು
ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮಶತಮಾನೋತ್ಸವದ ಅಂಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳನ್ನು 22 ಸಂಪುಟಗಳನ್ನು ಕುವೆಂಪು ಭಾಷಾ ಭಾರತಿ ಸಂಸ್ಥೆಯ ಮೂಲಕ ಮುದ್ರಿಸಲಾಗಿದ್ದು ರಾಜ್ಯದ ಎಲ್ಲಾ ಹಾಸ್ಟೆಲ್ ಗಳಿಗೆ ಇದನ್ನು ಉಚಿತವಾಗಿ ವಿತರಿಸಲಾಗಿದೆ.

ಎಂ.ಎಂ.ಕಲ್ಬುರ್ಗಿ ಬರಹ ಸಂಪುಟಗಳು
ಕನ್ನಡದ ಪ್ರಮುಖ ಸಂಶೋಧಕರಾದ ಡಾ.ಎಂ.ಎಂ. ಕಲ್ಬುರ್ಗಿ ಅವರ ನೆನಪಿನಾರ್ಥವಾಗಿ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರದ ವತಿಯಿಂದ ಕಲ್ಬುರ್ಗಿ ಅವರ ಎಲ್ಲಾ ಬರಹಗಳನ್ನು ಪ್ರಕಟಿಸಲಾಗಿದೆ.

ದೆಹಲಿಯ ಜೆ ಎನ್ ಯು ನಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆ
ಕನ್ನಡದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎಲ್ಲೆಡೆ ಪಸರಿಸುವ ದೃಷ್ಟಿಯಿಂದ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಿದ್ದು ಇದಕ್ಕಾಗಿ 5 ಕೋಟಿ ರೂಪಾಯಿಗಳ ಅನುದಾನವನ್ನೂ ಸಹ ನೀಡಲಾಗಿದೆ.

dept_kannada_culture

ಇ-ಕಛೇರಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪೂರ್ಣ ಪ್ರಮಾಣದಲ್ಲಿ ಕಾಗದ ರಹಿತ ಕಛೇರಿ (ಇ-ಕಛೇರಿ) ಎಂದು ಮಾರ್ಪಟ್ಟ ಮೊದಲ ಇಲಾಖೆಯಾಗಿದೆ. ಇಲ್ಲಿ ಎಲ್ಲಾ ಹಣಕಾಸಿನ ನೆರವು, ಅನುದಾನ, ಸನ್ಮಾನ ಹಾಗೂ ಇನ್ನಿತರೆ ಸರ್ಕಾರೀ ಕಾರ್ಯಕ್ರಮಗಳ ನಡೆಯುವಿಕೆಯು ಆನ್ ಲೈನ್ ಮುಖಾಂತರವೇ ನಡೆಯುತ್ತಿದ್ದು, ಅಧಿಕ ಮಟ್ಟದಲ್ಲಿ ಪಾರದರ್ಶಕತೆಯನ್ನು ನಿರ್ವಹಿಸಲು ಇದು ಸಹಕಾರಿಯಾಗಿದೆ.

ಗಡಿ ಪ್ರದೇಶ ಅಭಿವೃದ್ಧಿ ಮಂಡಳಿ
ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಮ್ಮ ಸರ್ಕಾರವು ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ 103 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಿದ್ದು ಕನ್ನಡ ಮಾಧ್ಯಮ ಶಾಲೆಗಳ ಸ್ಥಾಪನೆ, ಕನ್ನಡ ದಿನ ಪತ್ರಿಕೆಗಳ ಪೂರೈಕೆ, ಸಾಪ್ತಾಹಿಕ ಮತ್ತು ಮಾಸಿಕ ಪತ್ರಿಕೆಗಳ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿವೆ.

ವಚನಗಳ ಡಿಜಿಟಲೀಕರಣ
12 ನೇ ಶತಮಾನದ ಒಟ್ಟು 259 ವಚನಕಾರರ 21,644 ವಚನಗಳನ್ನು ಡಿಜಿಟಲೀಕರಣಗೊಳಿಸುವ ಮಹತ್ತರ ಕೆಲಸವನ್ನು ಮಾಡಲಾಗಿದ್ದು, ಇದು ಬಳಕೆದಾರ ಸ್ನೇಹಿಯಾಗಿದ್ದು ಈಗಾಗಲೇ 1000 ಕ್ಕೂ ಹೆಚ್ಚಿನ ವಚನಗಳು http://vachanasahitya.kannadasiri.co.in/default.asp ವೆಬ್ ಸೈಟ್ ನಲ್ಲಿ ಲಭ್ಯವಿದೆ. ಈ ಮೂಲಕ ಸ್ಮಾರ್ಟ್ ಜಗತ್ತಿಗೆ ಹೊಂದಿಕೊಂಡಿರುವ ಯವಕರಿಗೆ ವಚನದ ತತ್ವಗಳ ಮಹತ್ವವನ್ನು ಸಾರಲು ಇದು ಅನುಕೂಲಕಾರಿಯಾಗಿದೆ.

ತಳ ವರ್ಗದವರ ಅಧ್ಯಯನ ಸಂಪುಟಗಳು (ಸಬಾಲ್ಟರ್ನ್ ಅಧ್ಯಯನ)
ಕನ್ನಡ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲೇ ಹಿಂದೆಂದೂ ಆಗಿರದಂತಹ ವಿಶಿಷ್ಟವಾದ ಕೆಲಸವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾಗಿದ್ದು, ಕೆಳ ಸಮುದಾಯಗಳ ಕುರಿತಂತೆ ಅಧ್ಯಯನವನ್ನು ರೂಪಿಸಲಾಗಿದೆ. ವಿವಿಧ ಉಪ ಸಂಪಾದಕರ ನೇತೃತ್ವದಲ್ಲಿ ಕೆಳವರ್ಗದ ಸಮುದಾಯಗಳ ಕುರಿತಂತೆ ಆರು ವಿಭಾಗಗಳಲ್ಲಿ ಈ ಅಧ್ಯಯನ ಪ್ರಕಟಣೆಗಳನ್ನು ಮಾಡಲಾಗಿದ್ದು (ತಾತ್ವಿಕತೆ, ರೈತ ಮತ್ತು ಬಂಡಾಯ, ಮಹಿಳಾ ಅಧ್ಯಯನ, ದಲಿತರ ಅಧ್ಯಯನ, ಪೌರ ಕಾರ್ಮಿಕರ ಅಧ್ಯಯನ ಮತ್ತು ಶ್ರಮಿಕರ ಅನುಭವ ನಿರೂಪಣೆಗಳು.) ಇವು ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯ ರಚನೆಗೆ ಹಾಗೂ ಹೊಸ ರೀತಿಯಲ್ಲಿ ಸಾಹಿತ್ಯದ ರಚನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅದರಲ್ಲೂ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹ ವಿನೂತನ ಪ್ರಯತ್ನವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾಡಲಾಗಿದ್ದು ಕರ್ನಾಟಕದ ಪ್ರಮುಖ ವಿದ್ವಾಂಸರುಗಳಲ್ಲಿ ಒಬ್ಬರಾದ ಡಾ.ಮೇಟಿ ಮಲ್ಲಿಕಾರ್ಜುನ ಅವರ ಪ್ರಧಾನ ಸಂಪಾದಕತ್ವದಲ್ಲಿ ಈ ಯೋಜನೆಯು ಪೂರ್ಣಗೊಂಡಿರುತ್ತದೆ.

ದಾಸ ಸಾಹಿತ್ಯದ ಡಿಜಿಟಲೀಕರಣ
16 ನೇ ಶತಮಾನದ ಒಟ್ಟು 157 ಹರಿದಾಸರ 13967 ಕೀರ್ತನೆಗಳನ್ನು ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸಲಾಗಿದ್ದು http://dasasahitya.kannadasiri.co.in/home.asp ವೆಬ್ ಸೈಟ್ ಮೂಲಕ ಅವುಗಳನ್ನು ನೋಡಬಹುದಾಗಿದೆ. ಅಲ್ಲದೇ 50 ಸಂಪುಟಗಳಲ್ಲಿ ಕನಕ ದಾಸ ಅಧ್ಯಯನ ಪೀಠದಿಂದ ತತ್ವ ಪದಗಳ ಸಂಗ್ರಹಣೆ ಮತ್ತು ಪ್ರಕಟಣೆಗಳನ್ನು ವಿವಿಧ ಹಂತಗಳಲ್ಲಿ ಮಾಡಲಾಗಿದೆ.

ಯುವ ನಾಟಕಕಾರರು ಮತ್ತು ಕಲಾವಿವದರಿಗೆ ಪ್ರೋತ್ಸಾಹ
ರಂಗಭೂಮಿಯಲ್ಲಿ ತಮ್ಮ ವಿಶಿಷ್ಟ ನಟನೆ ಮತ್ತು ರಂಗ ಚಟುವಟಿಕೆಗಳ ಮೂಲಕ ವಿಶಿಷ್ಟವಾದ ಸಾಧನೆಗೈದಂತವರಿಗೆ ಬಿ.ವಿ.ಕಾರಂತರ ಹೆಸರಿನಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಯುವ ನಾಟಕ ಬರಹಗಾರನ್ನು ಉತ್ತೇಜಿಸಲು 3 ಕೋಟಿ ರೂಪಾಯಿ ವೆಚ್ಚದಲ್ಲಿ ವೇದಿಕೆಯನ್ನು ಒದಗಿಸಲಾಗಿದೆ.

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ
ಚಾಲುಕ್ಯರ ರಾಜಧಾನಿ ಮತ್ತು ಕನ್ನಡ ಸಾಹಿತ್ಯದ ಮೇರು ಪ್ರತಿಭೆ ಅತ್ತಿಮಬ್ಬೆ ಅವರ ಜನ್ಮ ಸ್ಥಳವಾದ ಲಕ್ಕುಂಡಿಯ ಅಭಿವೃದ್ಧಿಗಾಗಿ 3 ಕೋಟಿ ರೂಪಾಯಿಗಳಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ.

ಸಿಎವಿಎ ನಲ್ಲಿ ಹೊಸ ತರಗತಿಗಳು
ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ಆಡಿಯೋ ವೀಡಿಯೋ ಕಾಲೇಜು, ಮೈಸೂರು ಇಲ್ಲಿ ಸುಮಾರು 10.96 ಕೋಟಿ ರೂಪಾಯಿಗಳ ವೆಚ್ಚದಲ್ಲಿ 6 ಸುಸಜ್ಜಿತ ತರಗತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಸ್ವಾತಂತ್ರ ಹೋರಾಟಗಾರರ ನೆನಪಿನ ಸ್ಮಾರಕ
ಸ್ವಾತಂತ್ರ ಹೋರಾಟಗಾರ ಶ್ರೀ ಕೊಲ್ಲೂರು ಮಲ್ಲಪ್ಪನವರ ನೆನಪನ್ನು ಅಮರವಾಗಿಸಲು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಯಾದಗಿರಿ ಯಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದ್ದು ಶ್ರೀ.ಕೆ.ಸಿ.ರೆಡ್ಡಿ ಅವರ ಸ್ಮಾರಕವನ್ನು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಕೇಂದ್ರ
ಕೆಳ ಸಮುದಾಯಗಳ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ ಸಂತರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಂತಹ ಜಾನಪದ ನಾಯಕರ ತತ್ವಗಳನ್ನು ಇನ್ನಷ್ಟು ವಿಸ್ತಾರವಾಗಿ ಹರಡುವ ದೃಷ್ಟಿಯಿಂದ ಇವರ ಅಧ್ಯಯನ ಕೇಂದ್ರಗಳನ್ನು ಸರ್ಕಾರವು ಸ್ಥಾಪಿಸಿದೆ.

ಶಹಾಜಿ ಮಹರಾಜರ ಗೋರಿ
ಛತ್ರಪತಿ ಶಿವಾಜಿ ಅವರ ತಂದೆಯಾದ ಶಹಾಜಿ ಮಹರಾಜ್ ಅವರ ನೆನಪಿಗಾಗಿ ಚನ್ನಗಿರಿಯ ಹೊದಿಗೆರೆಯ ಬಳಿಯಲ್ಲಿ 2 ಕೋಟಿ ವೆಚ್ಚದಲ್ಲಿ ಗೋರಿಯನ್ನು ನಿರ್ಮಿಸಲಾಗಿದ್ದು ಇದೊಂದು ಪ್ರವಾಸೀ ತಾಣವೂ ಸಹ ಆಗಿದೆ.

ಕನ್ನಡ ಸಂಸ್ಕೃತಿ ಇಲಾಖೆಯಿಂದ ನೀಡಲಾದ ಅನುದಾನ

Department-of-Kannada-and-Culture