/ CM

ಕೋಲಾರ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೋಲಾರ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಕರ್ನಾಟಕದಲ್ಲೇ ಅತ್ಯುತ್ತಮ ಬ್ಯಾಂಕ್ ಆಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಒಟ್ಟು 9,062 ಸ್ವ ಸಹಾಯಕ ಸಂಘಗಳ 1,08,744 ಸದಸ್ಯರು 634.28 ಕೋಟಿ ಸಾಲ ಪಡೆದಿದ್ದಾರೆ. ಅದರೊಂದಿಗೆ ಸರ್ಕಾರದಿಂದ 7,908 ಫಲಾನುಭವಿಗಳ ಒಟ್ಟು 37.76 ಕೋಟಿ ಸಾಲ ಮನ್ನಾ ಮಾಡಲಾಗಿದೆ.
 2. ಸರ್ಕಾರದ ಕೃಷಿ ಹೊಂಡ ಯೋಜನೆಯಡಿಯಲ್ಲಿ 81.32ಕೋಟಿ ರೂಗಳ ವೆಚ್ಚದಲ್ಲಿ 10,954 ಕೃಷಿಹೊಂಡಗಳನ್ನು ನಿರ್ಮಿಸಲಾಗಿದ್ದು 151 ಪಾಲಿಹೌಸ್/ನೆರಳುಪರದೆ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.
 3. ಹಾಲು ಉತ್ಪಾದಕರಿಗೆ ಪ್ರತಿ ಲೀಗೆ ರೂ.4/- ರ ಪ್ರೋತ್ಸಾಹದನ ರೂ.5/-ಗೆ ಹೆಚ್ಚಿsಸಲಾಗಿದ್ದು, ಪ್ರತಿನಿತ್ಯ 10 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಕೋಲಾರ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ.
 4. ಜಿಲ್ಲೆಯಲ್ಲಿ 2,99,358 ಪಡಿತರ ಚೀಟಿದಾರರು ಇದ್ದು, ಒಟ್ಟು 10,34,752 ಫಲಾನುಭವಿಗಳು ಇರುತ್ತಾರೆ. ಪ್ರತಿ ಮಾಹೆಗೆ 7 ಕಿಲೋ ಅಕ್ಕಿ ಹಾಗೂ 1 ಕಿಲೋ ತೊಗರಿಬೇಳೆಯಂತೆ ಪ್ರತಿ ತಿಂಗಳು 74,000 ಕ್ಷಿಂಟಾಲ್ ಅಕ್ಕಿ ಹಾಗೂ 3,000 ಕ್ವಿಂಟಾಲ್ ಬೇಳೆ ವಿತರಣೆಯಾಗುತ್ತಿದ್ದು ತಿಂಗಳಿಗೆ ಸರಾಸರಿ 27 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದ್ದು 332 ನ್ಯಾಯಬೆಲೆ ಅಂಗಡಿಗಳಲ್ಲಿ ಪಿ.ಓ.ಎಸ್ ಯಂತ್ರಗಳ ಅಳವಡಿಕೆಯಾಗಿದೆ.

Kolar

 1. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಂದಾಜು 3750 ಶಾಲೆಗಳ 124965 ಮಕ್ಕಳು ಮತ್ತು 4000 ಅಂಗನವಾಡಿಗಳ 1.95 ಲಕ್ಷ ಮಕ್ಕಳು ಕ್ಷೀರಭಾಗ್ಯ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದಾರೆ.
 2. ಇಲ್ಲಿಯವರೆಗೆ 765 ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಪೂರ್ಣಗೊಳಿಸಲಾಗಿದ್ದು ಸುಮಾರು 7.00 ಲಕ್ಷಕ್ಕೂ ಅಧಿಕ ಜನರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
 3. ಜಿಲ್ಲಾ ಆಸ್ಪತ್ರೆ ಯಲ್ಲಿ ಜನ ಔಷಧಿ ಕೇಂದ್ರವನ್ನು ನಿರ್ಮಿಸಿದ್ದು ಇದರ ಮುಖಾಂತರ ಬಡರೋಗಿಗಳಿಗೆ ಶೇ. 60% ರಿಂದ 65% ರಿಯಾಯಿತಿ ಧರದಲ್ಲಿ ಔಷಧಿಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
 4. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದಲ್ಲಿ ನಗರ ಪ್ರದೇಶದ ಬಡಜನರಿಗೆ ಅನುಕೂಲವಾಗುವಂತೆ “ಮೊಹಲ್ಲ ಕ್ಲಿನಿಕ್” ನ್ನು ಸ್ಥಾಪಿಸಲಾಗಿದೆ. ಬೆಳಿಗ್ಗೆ 8-00 ರಿಂದ 1-00 ಗಂಟೆವರೆಗೆ ಮತ್ತು ಸಂಜೆ 4-00 ರಿಂದ 7-00 ಗಂಟೆವರೆಗೆ ಈ ಮೊಹಲ್ಲ ಕ್ಲಿನಿಕ್‍ಗಳು ಕಾರ್ಯನಿರ್ವಹಿಸಲಿವೆ.
 5. 2017-18ನೇ ಸಾಲಿನ ದಿನಾಂಕ 14.09.2017 ರವರಿಗೆ 5596 ಮನೆಗಳು ನಿರ್ಮಿಸಿದ್ದು ಕೋಲಾರ ಜಿಲ್ಲೆಯು ಮೊದಲನೇ ಸ್ಥಾನದಲ್ಲಿರುತ್ತದೆ.

Kolar-INCK

 1. ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಈವರೆಗೂ ಸೌಲಭ್ಯ ಪಡೆದುಕೊಂಡಿರುವ ಫಲಾನುಭವಿಗಳ ಸಂಖ್ಯೆ ಈ ಕೆಳಕಂಡಂತಿರುತ್ತದೆ. ವೃದ್ಯಾಪ ವೇತನ-37584 ವಿಧವಾ ವೇತನ – 98204, ಅಂಗವಿಕಲರ ವೇತನ – 23473, ಸಂಧ್ಯಾ ಸುರಕ್ಷಾ ವೇತನ -83072 ಮನಸ್ವಿನಿ-1077, ಮೈತ್ರಿ-19, ರಾಷ್ಟ್ರೀಯ ಕುಟುಂಬ ನೆರವು ಯೋಜನೆ-6178, ಅಂತ್ಯ ಸಂಸ್ಕಾರ-4844 ರೈತರ ವಿಧವಾ ವೇತನ-20, ಆಸಿಡ್‍ದಾಳಿ ಯೋಜನೆ-1 ಮಂಜೂರು ಮಾಡಲಾಗಿದೆ.
 2. “ನಮ್ಮ ಗ್ರಾಮ-ನಮ್ಮ ರಸ್ತೆ” ಹಂತ-3ರ 2015-16ನೇ ಸಾಲಿನಲ್ಲಿ ಮಂಜೂರಾಗಿರುವಂತೆ ಅಂದಾಜು ಮೊತ್ತ ರೂ. 7204.64 ಲಕ್ಷಗಳಲ್ಲಿ 124.48 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಪಡಿಸುವ 65 ಕಾಮಗಾರಿಗಳು ಅನುಮೋದನೆಯಾಗಿದ್ದು, 2017-18 ಸಾಲಿನವರೆಗೂ ಒಟ್ಟಾರೆ ರೂ. 5586.29 ಲಕ್ಷಗಳನ್ನು ವೆಚ್ಚ ಮಾಡಿ 121.81 ಕಿ.ಮೀ. ಉದ್ದದ 62 ರಸ್ತೆ ಕಾಮಗಾರಿಗಳಿಗೆ ಡಾಂಬರೀಕರಣ ಮಾಡಲಾಗಿದೆ.

K

 1. 2017-18ನೇ ಸಾಲಿನಲ್ಲಿ ಗ್ರಾಮೀಣ ಮೀಸಲು ಕ್ಷೇತ್ರಗಳಾದ ಬಂಗಾರಪೇಟೆ, ಕೆ.ಜಿ.ಎಫ್. ಮತ್ತು ಮುಳಬಾಗಿಲು ವಿಧಾನ ಸಭಾ ಕ್ಷೇತ್ರದಡಿ ಅಂದಾಜು ಮೊತ್ತ ರೂ. 482.44 ಲಕ್ಷಗಳಲ್ಲಿ 6.00 ಕಿ.ಮೀ ಉದ್ದದ ಮೂರು ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದ್ದು ರೂ. 105.05 ಲಕ್ಷಗಳ ವೆಚ್ಚವಾಗಿದೆ.
 2. ಸುಮಾರು 10 ಎಕರೆ ಪ್ರದೇಶದಲ್ಲಿ ರೂ 30.00 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಾಗಿದ್ದು ಕಟ್ಟಡದ ಒಟ್ಟು ವಿಸ್ತೀರ್ಣ ಸುಮಾರು 12,069 ಚದರ ಮೀಟರ್ ಆಗಿದೆ. ನೆಲ ಮಹಡಿಯು 3,874 ಚದರ ಮೀ, ಮೊದಲನೇ ಮಹಡಿ 3,426 ಚ.ಮೀ, ಎರಡನೇ ಮಹಡಿ 3,619 ಚ.ಮೀ, ಶೋತೃಭವನ 1,150 ಚ.ಮೀ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.
 3. ರೂ. 7 ಕೋಟಿಗಳ ವೆಚ್ಚದಲ್ಲಿ ಶ್ರೀನಿವಾಸಪುರ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು ರೂ. 2.70 ಕೋಟಿ ವೆಚ್ಚದಲ್ಲಿ ಮುಳಬಾಗಿಲು ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

#NavaKarnatakaNirmana

DSRaUeTU8AAuUBE

DSRnkFaVoAE9h0r

DSS01V2VAAAv7J4

DSSIRnjU8AEx94b

DSSoFXUVAAA0pCg

DSTK4UCVAAEenOQ

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ