/ Kirshi Yantra Dhare

ಅನ್ನದಾತರಿಗೆ ಆಸರೆಯಾದ ‘ಕೃಷಿ ಯಂತ್ರಧಾರೆ’

ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ರೈತರು ಶ್ರಮ ಜೀವಿಗಳು. ಬಡ ರೈತರು ಎಲ್ಲದಕ್ಕೂ ಕೂಲಿಕಾರರನ್ನೇ ಅವಲಂಬಿಸುವ ಎನ್ನುವ ಪರಿಸ್ಥಿತಿ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಕೇವಲ ಶ್ರೀಮಂತ ರೈತರು ಮಾತ್ರ ಉಪಯೋಗಿಸಲು ಸಾಧ್ಯ ಎನ್ನುವ ಮಾತು ಈ ಮೊದಲು ಇತ್ತು. ಆದರೆ ಇದೀಗ ಕಾಲ ಬದಲಾಗಿದೆ. ಬಡ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧರದಲ್ಲಿ ಒದಗಿಸುವ “ಕೃಷಿ ಯಂತ್ರಧಾರೆ” ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಸಣ್ಣ ರೈತರ ಅನುಕೂಲಕ್ಕಾಗಿ ಕೃಷಿ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆ ನೀಡುವುದು, ರೈತರು ಸಮನ್ವಯದಿಂದ ಸದುಪಯೋಗ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವುದು ಈ ಯೋಜನೆಯ ಗುರಿಯಾಗಿದೆ.

490 ಹೋಬಳಿಗಳಲ್ಲಿ ಯಂತ್ರಧಾರೆ
‘ಕೃಷಿ ಯಂತ್ರಧಾರೆ’ ಯೋಜನೆಯಡಿ 490 ಹೋಬಳಿಗಳಲ್ಲಿ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಹೋಬಳಿಗಳಲ್ಲಿ ಹೆಚ್ಚು ಕೇಂದ್ರಗಳ ಸ್ಥಾಪನೆಗೆ 122 ಕೋಟಿ ರೂ ಮೀಸಲಾಗಿಟ್ಟಿದೆ. ಬೇಸಾಯದ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಸುಧಾರಿತ ತಾಂತ್ರಿಕತೆಗಳ ಅಳವಡಿಕೆಯನ್ನು ಉತ್ತೇಜಿಸಲು ಸರ್ಕಾರ 100 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಕೃಷಿಯಂತ್ರ ಬಳಕೆಯನ್ನು ಪ್ರೋತ್ಸಾಹಿಸಿಲು 174 ತಾಲ್ಲೂಕುಗಲ್ಲಿ ‘ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರ’ಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ.
ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಅತ್ಯಲ್ಪ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಟಿಲ್ಲರ್, ಟ್ರಾಕ್ಟರ್, ನಾಟಿಯಂತ್ರ, ಸ್ಪೇಯರ್, ಕಳೆ ನಿಯಂತ್ರಣ ಯಂತ್ರ, ಒಕ್ಕಣೆ ಯಂತ್ರ (ನೇಜಿ ಕಟಾವು ಯಂತ್ರ) ಮ್ತತಿತರ ಯಾಂತ್ರೀಕೃತ ಉಪಕರಣಗಳನ್ನು ರೈತರು ಬಾಡಿಗೆ ಮೂಲಕ ಕೊಂಡೊಯ್ಯಬಹುದಾಗಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ.

ಕೃಷಿ ಯಂತ್ರಧಾರೆ ಯೋಜನೆಯಡಿ ಕಳೆದ 2 ವರ್ಷಗಳಲ್ಲಿ ರೂ. 341.15 ಲಕ್ಷ ಅನುದಾನದಲ್ಲಿ ಜಿಲ್ಲೆಯ 11 ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ರೈತರಿಗೆ ಆಧುನಿಕ ಕೃಷಿ ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗುತ್ತಿದೆ. ಇದಲ್ಲದೇ, ಯಂತ್ರಗಳ ಮೂಲಕ ಭತ್ತದ ನಾಟಿ ಮಾಡುವ ರೈತರಿಗೆ ಪ್ರತೀ ಎಕರೆಗೆ ರೂ. 1600 ರಂತೆ ರಾಜ್ಯ ಸರಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 8497 ರೈತರು ಕೃಷಿ ಯಂತ್ರಧಾರೆ ಪ್ರಯೋಜನ ಪಡೆದಿರುತ್ತಾರೆ. ಸರಕಾರೇತರ ಸಂಘ ಸಂಸ್ಥೆಗಳ ಮೂಲಕ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ. ಇದಲ್ಲದೇ, ವಿಟ್ಲದಲ್ಲಿ ರೈತರೊಬ್ಬರು ಕೃಷಿ ಯಂತ್ರಧಾರೆ ಕೇಂದ್ರವನ್ನು ನಿರ್ವಹಿಸುತ್ತಿದ್ದಾರೆ.
ಕೋಟ್

“ ಸಣ್ಣ ರೈತರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಪ್ರತಿವೊಂದು ಹೋಬಳಿಯಲ್ಲಿ ಬಾಡಿಗೆಯಾಧಾರಿತ ಕೃಷಿ ಯಂತ್ರ ಧಾರೆಯನ್ನು ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಈಗಗಾಲೇ 175 ಹೋಬಳಿಗಳಲ್ಲಿ ವಿವಿಧ ಸಂಘಗಳ ಸಹಯೋಗದಲ್ಲಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ . ಇದರಿಂದಾಗಿ ಭವಿಷ್ಯದ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಭಾವನೆ ಕೃಷಿಕರಲ್ಲಿ ಬರುತ್ತಿದೆ. ದೇಶದಲ್ಲಿ ಹೇರಳವಾದ ಜನಸಂಖ್ಯೆ ಹೊಂದಿದ್ದರು, ಕೂಲಿಕಾರ್ಮಿಕರ ಕೊರತೆಯಿಂದಾಗಿ ಕೃಷಿ ಕ್ಷೇತ್ರ ನಲುಗಿದೆ. ಕೃಷಿ ಕಾರ್ಮಿಕರ ಸಂಬಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದೇಶದ ಪ್ರಗತಿದಾಯಕ. ಆದರೆ ಅನ್ನದಾತರು ಇಷ್ಟೊಂದು ಹಣ ನೀಡಲು ಸಾಧ್ಯವಾಗುತ್ತಿಲ್ಲ. ಭವಿಷ್ಯತ್ತಿನಲ್ಲಿ ಕೃಷಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂತಹ ಯೋಜನೆ ಜಾರಿಗೆ ತಂದಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.”
- ಕೃಷ್ಣ ಬೈರೇಗೌಡ, ಕೃಷಿ ಸಚಿವರು