/ #schemes

ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಿದ ‘ಕ್ಷೀರ ಭಾಗ್ಯ’

ರಾಜ್ಯ ಕಾಂಗ್ರೆಸ್ ಸರ್ಕಾರವು 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ ಮತ್ತು ಅಂಗನವಾಡಿಯ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ ಹಾಲನ್ನು ವಾರದಲ್ಲಿ 6 ದಿನ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಿದ್ದು, ಕ್ಷೀರಭಾಗ್ಯ ಯೋಜನೆಗೆ ಕರ್ನಾಟಕ ಹಾಲು ಮಹಾಮಂಡಳಿಯು ಕಾರ್ಯಕ್ರಮಕ್ಕೆ ಅಗತ್ಯ ಕೆನೆಭರಿತ ಹಾಲಿನ ಪುಡಿಯನ್ನು ಶಾಲಾ ಬಾಗಿಲಿಗೆ ಸರಬರಾಜು ಮಾಡುತ್ತದೆ.

ಅಪೌಷ್ಟಿಕತೆ ದೂರ
ದಕ್ಷಿಣ ಭಾರತದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಡತನ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ನಿವಾರಿಸುವ ಉದ್ದೇಶದಿಂದಲೇ ಈ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಗಿದೆ. ಕಪಟತನ ಅರಿಯದ ಮಕ್ಕಳು ದೇವರ ಸಮಾನ, ಹಾಲು ಅಮೃತಕ್ಕೆ ಸಮಾನ ಹಾಗೂ ತಾಯಿಯ ಎದೆ ಹಾಲು ಮಕ್ಕಳಿಗೆ ಸಂಜೀವಿನಿಯಂತೆ ಎಂದು ಹೇಳಲಾಗುತ್ತದೆ. ಅದರಲ್ಲೂ ವಿಶ್ವ ಸ್ತನ್ಯ ಪಾನ ದಿನಾಚರಣೆಯಂದೆ ಈ ಯೋಜನೆಗೆ ಚಾಲನೆ ನೀಡಿರುವುದು ಒಳ್ಳೆಯ ಸಂಗತಿ ಎಂದೇ ಹೇಳಬಹುದು.

ಹಾಜರಾತಿ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ
ರಾಜ್ಯ ಸರ್ಕಾರ ಅಕ್ಷರ ದಾಸೋಹ ಹಾಗೂ ಕ್ಷೀರ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಕಂಡುಬರುತ್ತಿದೆ. ಮಹತ್ವಾಕಾಂಕ್ಷೀ ಕ್ಷೀರಭಾಗ್ಯ ಯೋಜನೆಯನ್ನು ವಿಸ್ತರಣೆ ಮಾಡಲು ಯೋಜಿಸಿರುವ ರಾಜ್ಯ ಸರ್ಕಾರ ಅಂಗನವಾಡಿಗಳೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಕೋಟಿ ಐದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ವಾರಕ್ಕೆ ಮೂರು ದಿನಗಳ ಬದಲಿಗೆ ಆರು ದಿನಗಳ ಕಾಲ ಹಾಲನ್ನು ಕೊಡಲಾಗುತ್ತಿದೆ.

19400642_706065226263179_1983145303150385535_o

ಮಕ್ಕಳು ಮತ್ತು ಪೋಷಕರಿಂದ ಉತ್ತಮ ಅಭಿಪ್ರಾಯ
ರಾಜ್ಯ ಸರ್ಕಾರ ಮೂರು ವರ್ಷಗಳು ಪೂರ್ಣಗೊಳಿಸಿದ ಸುಸಂದರ್ಭದಲ್ಲಿ ನಾಲ್ಕನೇ ವರ್ಷದಡಿಗೆ ಭರವಸೆಯ ನಡಿಗೆ ಜನಮನ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಕ್ಷೀರಭಾಗ್ಯ ಕುರಿತಂತೆ ಮಕ್ಕಳು ಮತ್ತು ಪೋಷಕರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಪೌಷ್ಠಿಕತೆ ಕಡಿಮೆ ಮಾಡುತ್ತಿರುವ, ಶಾಲೆಯ ಹಾಜರಾತಿಯನ್ನು ಹೆಚ್ಚಿಸುತ್ತಿರುವ ಈ ಯೋಜನೆಯಲ್ಲಿ ತೊಡಗಿಸುವ ಹಣ ವ್ಯರ್ಥವಾಗುತ್ತಿಲ್ಲ. ಮಾನವ ಸಂಪನ್ಮೂಲವನ್ನೂ ವೃದ್ಧಿಗೊಳಿಸಲು ಈ ಯೋಜನೆಯು ಸಹಕಾರಿಯಾಗಲಿದೆ. ಕ್ಷೀರಭಾಗ್ಯದಿಂದ ಹಾಲು ಉತ್ಪಾದಕರಿಗೂ ಮಾರುಕಟ್ಟೆ ದೊರೆತಿದೆ. ಇದರಿಂದ ಹಾಲು ಕೃಷಿಕರಿಗೆ ಪ್ರತಿ ಲೀಟರ್ ಹಾಲಿಗೆ ನಾಲ್ಕು ರೂ ಪ್ರೋತ್ಸಾಹ ಧನ ನೀಡುವ ಕೀರಧಾರೆ ಯೋಜನೆಯೂ ಯಶಸ್ಸು ಗಳಿಸಿ, ರಾಜ್ಯದಲ್ಲಿ ಪ್ರತಿ ದಿನದ ಹಾಲು ಉತ್ಪಾದನಾ ಪ್ರಮಾಣ 72 ಲಕ್ಷ ಲೀಟರ್ ತಲುಪಿದೆ.

DC2gf5jVoAAsZ80

'ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಬಡತನ ಪ್ರಮಾಣ ಕೇರಳದಲ್ಲಿ ಶೇ.7, ತಮಿಳುನಾಡಿನಲ್ಲಿ ಶೇ.9, ಆಂಧ್ರಪ್ರದೇಶದಲ್ಲಿ ಶೇ.11 ಮತ್ತು ರಾಜ್ಯದಲ್ಲಿ ಶೇ.20ಕ್ಕೂ ಹೆಚ್ಚಿದೆ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಅಧಿಕವಾಗಿದೆ. ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಹಾಲು ನೀಡುವುದರಿಂದ ಅಪೌಷ್ಟಿಕತೆ ಪ್ರಮಾಣ ನೀಗಿಸಿ, ಹಸಿವು ತೊಲಗಿಸಿದಂತಾಗುತ್ತದೆ.

ksheera-bhagya-scheme

ದಕ್ಷಿಣ ಭಾರತದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಡತನ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ನಿವಾರಿಸುವ ಉದ್ದೇಶದಿಂದಲೇ ಈ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಗಿದೆ”
- ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು