/ #schemes

ಹೈನುಗಾರಿಕೆಗೆ ಜೀವಕಳೆತಂದ ‘ಕ್ಷೀರಧಾರೆ’

ರಾಜ್ಯ ಕಾಂಗ್ರೆಸ್ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಕ್ಷೀರಧಾರೆ ಕೂಡ ಒಂದು. ಹಾಲು ಉತ್ಪಾದನೆ ಮಾಡುವ ರೈತರಿಗೆ ಒಂದು ಲೀಟರ್‌ ಹಾಲಿಗಿದ್ದ ಸಬ್ಸಿಡಿಯನ್ನು ರೂ. 5 ಕ್ಕೆ ಏರಿಸಿ ಕ್ಷೀರಧಾರೆ ಯೋಜನೆ ಮೂಲಕ ನೀಡಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವರ್ಷಕ್ಕೆ ₹ 1200 ಕೋಟಿ ಖರ್ಚು ಮಾಡುತ್ತಿದೆ.

ಕ್ಷೀರಧಾರೆ ಯೋಜನೆ ಜಾರಿಬಳಿಕ ಸೊರಗಿದ್ದ ಹೈನೋದ್ಯಮ ಚೇತರಿಕೆ ಕಂಡಿದೆ. ಇದರ ಮೂಲ ಉದ್ದೇಶ ರೈತರಿಗೆ ಆಶ್ರಯವಾಗುವುದು. ಇದು ಯಶಸ್ವಿಯಾಗಿದೆ. ಹಾಲು ಉತ್ಪಾದಕರಿಗೆ ರೂ. 5 ಪ್ರೋತ್ಸಾಹಧನ ನೀಡುತ್ತಿರುವುದರಿಂದ ನಿತ್ಯ 30 ಲಕ್ಷ ಲೀಟರ್‌ ಉತ್ಪಾದನೆ¬ಯಾಗುತ್ತಿದ್ದ ಹಾಲು 63 ಲಕ್ಷ ಲೀಟರ್‌ಗೆ ಹೆಚ್ಚಳವಾಯಿತು. ಹೆಚ್ಚುವರಿ ಹಾಲನ್ನು ಶಾಲಾ ಮಕ್ಕಳಿಗೆ ನೀಡಲು ಸರ್ಕಾರ ನಿರ್ಧರಿಸಿತು.

1

ಅಪೌಷ್ಟಿಕತೆ¬ಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗಲೆಂದು ಕ್ಷೀರಭಾಗ್ಯ ಯೋಜನೆ ತರಲಾಯಿತು. ಮಕ್ಕಳು ಆರೋಗ್ಯವಂತ¬ರಾಗಿದ್ದರೆ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಕ್ಷೀರಭಾಗ್ಯ ಯೋಜನೆಗೆ ಸರ್ಕಾರ ವಾರ್ಷಿಕ ರೂ. 4,800 ಕೋಟಿ ಖರ್ಚು ಮಾಡುತ್ತಿದೆ.

ಕ್ಷೀರಧಾರೆ ಯೋಜನೆಯನ್ನು ಬಳಸಿಕೊಳ್ಳಲು ರೈತರು ಕೃಷಿಭಾಗ್ಯದಡಿ ಹಸುಗಳನ್ನು ಸಾಕಿ ಆರ್ಥಿಕಾಭಿವೃದ್ಧಿಯನ್ನು ಸಾಧಿಸುತ್ತಿದ್ದಾರೆ. ಜೊತೆಗೆ ಸ್ವಾವಲಂಬಿಗಳಾಗಿ ಬದುಕು ನಡೆಸುತ್ತಿದ್ದಾರೆ. ನಿರೋದ್ಯಿಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ನೆಮ್ಮದಿಯ ಬದುಕನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೆ ಕ್ಷೀರಧಾರೆ, ಕೃಷಿಭಾಗ್ಯ ಮುಂತಾದ ಯೋಜನೆಗಳು ಬೆನ್ನಲುಬಾಗಿ ನಿಂತಿವೆ.

ಕ್ಷೀರಧಾರೆಯನ್ನು ಬಹುಪಾಲು ಮಹಿಳೆಯರು ಉಪಯೋಗವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ಸಾಮನ್ಯ ಜನರಲ್ಲಿ ಒಂದು ರೀತಿಯ ಧೈರ್ಯ ಬಂದಿದ್ದು, ಯಾವುದೇ ಹಾಳು ಮುಳು ಕೆಲಸಕ್ಕೆ ಕೈ ಹಾಕದೇ ಹೈನೋದ್ಯಮವನ್ನೇ ಬಂಡವಾಳವಾಗಿಸಿಕೊಂಡು ಉತ್ತಮ ರೀತಿಯಲ್ಲಿ ಹೈನು ಗಾರಿಕೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.

“ಹಳ್ಳಿಯ ಹಾಲು ಪಟ್ಟಣಕ್ಕೆ, ಪಟ್ಟಣದ ಸಾರಾಯಿ ಹಳ್ಳಿಗೆ ಎಂಬ ಮಾತಿದೆ. ಇದು ಸತ್ಯ ಸಂಗತಿ. ಹಾಲು ಉತ್ಪಾದಿಸುವ ರೈತರು ಬಡತನದಿಂದಾಗಿ ಮನೆಯಲ್ಲಿ ಮಕ್ಕಳಿಗೆ ಹಾಲು ನೀಡದೆ ಅದನ್ನು ಹಾಲು ಉತ್ಪಾದಕರ ಸಂಘಕ್ಕೆ ಮಾರುತ್ತಾರೆ. ಮತ್ತೊಂದೆಡೆ ಹಿಂದಿನ ಸರ್ಕಾರ ಕಡಿಮೆ ದರದಲ್ಲಿ ದೊರೆಯುತ್ತಿದ್ದ ಸಾರಾಯಿಯನ್ನು ನಿಲ್ಲಿಸಿ, ಹೆಣ್ಣುಮಕ್ಕಳ ಕಣ್ಣೀರನ್ನು ನಿಲ್ಲಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿತ್ತು. ಆದರೆ ವಾಸ್ತವದಲ್ಲಿ ಹಳ್ಳಿ ಜನರು ಸಾರಾಯಿ ಬಿಟ್ಟು ಹೆಚ್ಚಿನ ಬೆಲೆಯ ಮದ್ಯದ ಮೊರೆ ಹೋಗಿದ್ದಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿದಿದ್ದು, ಹೆಣ್ಣು ಮಕ್ಕಳ ಸಂಕಟ ಮತ್ತಷ್ಟು ಹೆಚ್ಚಾಗಿದೆ. ಆದರೆ ಇಂಥ ಹಲವಾರು ಸಮಸ್ಯೆಗಳಿಗೆ ಕ್ಷೀರಧಾರೆಯಂಥ ಯೋಜನೆಗಳು ಪರಿಹಾರವಾಗಿವೆ.”
- ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿ
-