/ articles

ಲ್ಯಾಪ್ ಟಾಪ್ ಭಾಗ್ಯ

ರಾಜ್ಯ ಸರ್ಕಾರದ ಮತ್ತೊಂದು ಕೊಡುಗೆ ಇಂದಿನಿಂದ ಅನುಷ್ಠಾನಕ್ಕೆ

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲ್ಯಾಪ್‌ಟಾಪ್ ವಿತರಿಸಿದರು.

26168262_1900559173521969_5734508894140838794_n

ಇದು ಸಾಂಕೇತಿಕ ಉದ್ಘಾಟನಾ ಸಮಾರಂಭವಾಗಿದ್ದು, ರಾಜ್ಯಾದ್ಯಾಂತ ಶೀಘ್ರದಲ್ಲೇ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೈ ಸೇರಲಿದೆ.

ಆ ಮೂಲಕ ಶೋಷಿತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಾಜ್ಯ ಸರ್ಕಾರ ನೆರವಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಮತ್ತೊಂದು ಕೊಡುಗೆ ಇಂದಿನಿಂದ ಅನುಷ್ಠಾನಕ್ಕೆ ಬಂದಂತಾಗಿದೆ. ರಾಜ್ಯದ
ಇತಿಹಾಸದಲ್ಲಿ ಉಚಿತ ಲ್ಯಾಪ್ ಟಾಪ್ ವಿತರಣೆ ಇದೇ ಮೊದಲು.

26165873_1900559203521966_6658306045444602814_n

ಬಜೆಟ್ ನ ಘೋಷಣೆ/ಸಂಪುಟ ಸಭೆಯ ತೀರ್ಮಾನ: 15ನೇ ಮಾರ್ಚಿ 2017ರಂದು ಸಿ.ಎಂ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ಲ್ಯಾಪ್ ಟಾಪ್ ವಿತರಿಸುವುದಾಗಿ ಪ್ರಕಟಿಸಿದ್ದರು. ಈ ಮುನ್ನ 15ನೇ ಫೆಬ್ರವರಿ 2017ರಂದು ಲ್ಯಾಪ್ ಟಾಪ್ ವಿತರಣೆಯ ಕುರಿತು ಸಚಿವ ಸಂಪುಟದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು.

26168729_1900559180188635_8382941772146929691_n

ಪರಿಶಿಷ್ಟರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್. ಸಿ. ಪಿ-ಟಿ. ಎಸ್. ಪಿ. ಯೋಜನೆಯಲ್ಲಿ ಹಣ ಬಿಡುಗಡೆ ಮಾಡುವ ಕುರಿತು ಬಜೆಟ್ ನಲ್ಲಿ ಉಲ್ಲೇಖ ಸಹ ಮಾಡಿದ್ದರು. ಅದರಂತೆ ಇದೀಗ ಜಾರಿಗೆ ಬಂದಿದೆ.

ಸುಮಾರು 12,854 ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ದೊರೆಯಲಿದೆ. ಈ ಉಡುಗೊರೆ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಂದಾಜು ₹37 ಕೋಟಿ ವೆಚ್ಚಮಾಡಲಿದೆ.

26195389_1900559116855308_2537973856158979131_n