/ department

ಕಾನೂನು ಮತ್ತು ನ್ಯಾಯಾಲಯಗಳ ಇಲಾಖೆ

“ನಮ್ಮ ಸರ್ಕಾರವು ಕಾನೂನು ವ್ಯವಸ್ಥೆಯ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಸತತವಾಗಿ ಶ್ರಮಿಸುತ್ತಿದೆ”.
ಕಾನೂನು ಇಲಾಖೆಯು ವಿಭಿನ್ನ ಮಾರ್ಗವಾಗಿ ನ್ಯಾಯ ನೀಡುವ ವ್ಯವಸ್ಥೆಯನ್ನು ರೂಪಿಸಿದೆ.
ಕಾನೂನು ಇಲಾಖೆಯು ಸರ್ಕಾರದ ಪ್ರಕರಣಗಳನ್ನು ಇತ್ಯರ್ಥ ಪಡಿಸುವುದಲ್ಲದೇ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಆಡಳತದ ಅವಧಿಯಲ್ಲಿ ಉಂಟಾಗುವ ತೊಂದರೆಗಳಿಗೆ ಕಾನೂನಾತ್ಮಕ ಸಲಹೆಗಳನ್ನು ನೀಡುತ್ತದೆ.
ಈ ಇಲಾಖಾ ಸಂಸ್ಥೆಯು ಆಡಳಿತ, ದಾವೆ, ಅಭಿಪ್ರಾಯ ಮತ್ತು ಕಾವೇರಿ ನೀರಿನ ವಿವಾದ ಪರಿಹಾರ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಕಾನೂನು ಇಲಾಖೆಯ ಮುಖ್ಯ ಉದ್ದೇಶವು ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೊಕ್ಕವರಿಗೆ ಶೀಘ್ರವಾಗಿ ನ್ಯಾಯ ಒದಗಿಸುವುದು ಇದರ ಗುರಿಯಾಗಿದೆ. ಈ ಗುರಿಯನ್ನು ಸಾಧಿಸುವ ಸಲುವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ.ಟಿ.ಬಿ.ಜಯಚಂದ್ರ ಅವರು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ.

ಹೊಸ ಮತ್ತು ವಿಶೇಷ ನ್ಯಾಯಾಲಯಗಳು
ನ್ಯಾಯಾಲಯಗಳ ಮೇಲಿದ್ದ ಕಲ್ಪನೆಗಳನ್ನು ಬದಲಾಯಿಸಲು ವೇಗವಾಗಿ ನ್ಯಾಯವನ್ನು ಒದಗಿಸುವ ಸಲುವಾಗಿ ಇಲಾಖೆಯ ಅವಿರತವಾದ ಶ್ರಮದಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ನ್ಯಾಯಾಲಯಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿವಿಧ ವಿಭಾಗಗಳ ಒಟ್ಟು 252 ಹೊಸ ನ್ಯಾಯಾಲಯಗಳನ್ನು ನಿರ್ಮಿಸಲಾಗಿದೆ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲಾಗುತ್ತಿದೆ.

ಲೋಕ್ ಅದಾಲತ್
ಇದು ರಾಜ್ಯ ಕಾನೂನು ಇಲಾಖೆಯು ಪರಿಚಯಿಸಿದ ವಿಭಿನ್ನವಾದ ನ್ಯಾಯ ವೇದಿಕೆಯಾಗಿದ್ದು, ಪ್ರಕರಣದಲ್ಲಿ ಭಾಗಿಯಾದವರ ನಡುವೆ ಪರಸ್ಪರ ಒಪ್ಪಿಗೆಯ ಮೂಲಕ ನ್ಯಾಯ ಹಂಚಿಕೆ ಮಾಡುವ ವ್ಯವಸ್ಥೆಯಾಗಿದೆ. ಈ ಅದಾಲತ್ ಗಳು ನಿಯಮಿತವಾಗಿ ನಡೆಯುತ್ತಿದ್ದು ನವಂಬರ್ 2016 ರ ಕೊನೆಗೆ ಅದಾಲತ್ ಮೂಲಕ 21 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ಹೊಸ ನೋಟರಿ
176 ರೆವಿನ್ಯೂ ತಾಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ ಸರಾಸರಿ 1 ನೋಟರಿಯಂತೆ ಸುಮಾರು 200 ಹೆಚ್ಚುವರಿ ನೋಟರಿ ಹುದ್ದೆಗಳನ್ನು ನೇಮಕ ಮಾಡಲಾಗಿದೆ.

ಪ್ರೋತ್ಸಾಹಧನದಲ್ಲಿ ಹೆಚ್ಚಳ
ವಕೀಲ ವಿದ್ಯಾರ್ಥಿಗಳಿಗೆ ಕಾನೂನು ಇಲಾಖೆಯಿಂದ ಮಾಸಿಕವಾಗಿ ನೀಡಲಾಗುತ್ತಿದ್ದ 1000 ರೂಪಾಯಿ ಪ್ರೋತ್ಸಾಹ ಧನವನ್ನು 2015-16 ರಿಂದ 2,000 ರೂಪಾಯಿಗೆ ಏರಿಸಲಾಗಿದೆ.

ಬಾರ್ ಕೌನ್ಸಿಲ್ ಗೆ ಅನುದಾನ
ಬಾರ್ ಕೌನ್ಸಿಲ್ ಗೆ ನೀಡಲಾಗುತ್ತಿದ್ದ ಅನುದಾನವನ್ನು 2 ಕೋಟಿ ರೂಪಾಯಿಗಳಿಂದ 5 ಕೋಟಿ ರೂಪಾಯಿಗಳ ವರೆಗೆ ಹೆಚ್ಚಿಸಲಾಗಿದೆ.

Namma-Karntaka-Law

ಸಮಗ್ರ ಕರ್ನಾಟಕ ಸರ್ಕಾರದ ಪ್ರಕರಣ ನಿರ್ವಹಣಾ ವ್ಯವಸ್ಥೆ (ಕೆಐಜಿಎಲ್ಎಂಎಸ್)
ಕರ್ನಾಟಕ ಸರ್ಕಾರದ ನ್ಯಾಯಾಂಗ ಇಲಾಖೆಯು ಕೆಐಜಿಎಲ್ಎಂಎಸ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಉದ್ದೇಶಿಸಿದ್ದು ಕಾನೂನು ಅಧಿಕಾರಿಗಳನ್ನು ಸರ್ಕಾರವೇ ಸೂಕ್ತವಾಗಿ ನಿರ್ವಹಣೆ ಮಾಡುತ್ತಿದೆ. ಇದು ನ್ಯಾಯಾಲಯದ ಪೋರ್ಟಲ್ ಗಳು, ಟ್ರಿಬ್ಯೂನಲ್ ಗಳು ಮತ್ತು ಬಾರ್ ಕೌನ್ಸಿಲ್ ಗಳನ್ನು ಸಮಗ್ರವಾಗಿ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕಗಳು
ರಾಜ್ಯ ಕಾನೂನು ಇಲಾಖೆಯು ಕೋರ್ಟ್ ಕಟ್ಟಡಗಳ ಆವರಣದಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದಕ್ಕಾಗಿ 8.12 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದ ಕೋರ್ಟ್ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು ಇದರಿಂದ ಸಾರ್ವಜನಿಕರು, ವಕೀಲರು ಮತ್ತು ನೌಕರರಿಗೆ ಅನುಕೂಲವಾಗಿದೆ.

ಸಂಸದೀಯ ವ್ಯವಹಾರಗಳು ಮತ್ತು ಶಾಸಕಾಂಗಕ್ಕೆ ನೆರವು
ಸರ್ಕಾರವು ಯಾವುದೇ ಕಾನೂನು ಕಟ್ಟಳೆಗಳನ್ನು ರೂಪಿಸುವ ಸಂದರ್ಭದಲ್ಲಿ ಕಾನೂನು ಇಲಾಖೆ ಸೂಕ್ತವಾಗಿ ಕಾನೂನು ರೀತಿ ಸಲಹೆಗಳನ್ನು ನೀಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಲು ನೆರವಾಗುತ್ತದೆ.

ಇ-ವಿಧಾನ ಮಂಡಲ
ಪರಿಸರ ಸ್ನೇಹಿ ಚಟುವಟಿಕೆಗಳನ್ನು ಉತ್ತೇಜಿಸಲು ಇಲಾಖೆಯು ಕಾಗದ ರಹಿತವಾಗುವ ಯೋಜನೆಯನ್ನು ಹಾಕಿಕೊಂಡಿದೆ. ಈ ಯೋಜನೆಯು ಎಲ್ಲಾ ನ್ಯಾಯಾಂಗ ಕಛೇರಿಗಳನ್ನು ಕಾಗದ ರಹಿತವನ್ನಾಗಿಸುವ ಗುರಿಯನ್ನು ಹೊಂದಿದ್ದು ಇದಕ್ಕಾಗಿ 60.84 ಕೋಟಿ ರೂಪಾಯಿಗಳ ಅನುದಾನವನ್ನು ನಿಗದಿಗೊಳಿಸಿದ್ದು ಈಗಾಗಲೇ ಮೊದಲ ಹಂತದಲ್ಲಿ 20 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ.

2017-18 ರಲ್ಲಿ ಒಟ್ಟು 256 ಕೋಟಿ ರೂಪಾಯಿಗಳನ್ನು ಸಂಸದೀಯ ಮತ್ತು ಶಾಸಕಾಂಗ ಇಲಾಖೆಗೆ ನೀಡಲಾಗಿದೆ.

ಕಾನೂನು ಇಲಾಖೆಗೆ ನೀಡಲಾದ ಅನುದಾನದ ವಿವರಗಳು

Department-of-Law-and-courts