/ #schemes

ಮಾತೃಪೂರ್ಣ ಯೋಜನೆ

1.2 ದಶಲಕ್ಷ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಮತ್ತು ತಾಯಿಯ ಆರೋಗ್ಯವನ್ನು ಸುಧಾರಿಸಲು, ಕರ್ನಾಟಕ ಸರ್ಕಾರವು ಮಾತೃ ಪೂರ್ಣ ಯೋಜನೆಯನ್ನು ಆರಂಭಿಸಿದೆ. ತಿಂಗಳಲ್ಲಿ 25 ದಿನಗಳ ಕಾಲ ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಈ ಸೌಲಭ್ಯ ದೊರೆಯಲಿದೆ. ಗರ್ಭಧರಿಸಿದ ದಿನದಿಂದ ಆರಂಭಿಸಿ ಹೆರಿಗೆ ನಂತರದ ಆರು ತಿಂಗಳ ಕಾಲ ಅನ್ನ, ತರಕಾರಿಗಳಿಂದ ಕೂಡಿದ ಸಾಂಬಾರ್, ಬೇಯಿಸಿದ ಮೊಟ್ಟೆ, 200 ಎಂ.ಎಲ್. ಹಾಲು, ಕಡಲೆ ಬೀಜ ಮತ್ತು ಬೆಲ್ಲದಿಂದ ಮಾಡಿದ ‘ಚಿಕ್ಕಿ’ ಸೇರಿದಂತೆ ಪರಿಪೂರ್ಣ ಆಹಾರವನ್ನು ಈ ಅವಧಿಯಲ್ಲಿ ನೀಡಲಾಗುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ರೂ. 302 ಕೋಟಿಗಳನ್ನು ರಾಜ್ಯ ಸರ್ಕಾರ ಬಿಡಗಡೆ ಮಾಡಿದೆ.

Namma-Karntaka-Post_Maathru-Poorna-1

‘ಮಧ್ಯಾಹ್ನದ ಬಿಸಿಯೂಟ ಯೋಜನೆಯು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರನ್ನು ಆರೋಗ್ಯವಾಗಿರಿಸುತ್ತದೆ. ದೇಶದಲ್ಲಿ ಕರ್ನಾಟಕದ ನಂತರ ಈ ಯೋಜನೆಯನ್ನು ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಜಾರಿಗೆ ತಂದಿವೆ’.
- ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಗರ್ಭಿಣಿ ತಾಯಿಯ ಆರೋಗ್ಯ ಸುಧಾರಣೆಗಳು ಮಗುವಿನ ಪೋಷಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಇದು ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಇದೊಂದು ಬೃಹತ್ ಯೋಜನೆ ಯಾಗಿದೆ’
- ಶ್ರೀಮತಿ ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು