/ CM

ಮಂಡ್ಯ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮಂಡ್ಯ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಅನ್ನಭಾಗ್ಯ ಯೋಜನೆಯಡಿ ಮಂಡ್ಯ ಜಿಲ್ಲೆಯ 4.46 ಲಕ್ಷ ಬಿಪಿಎಲ್ ಹಾಗೂ 40,000 ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದ್ದು ಜಿಲ್ಲೆಯ ಹಸಿವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ.
 2. ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಸರ್ಕಾರವು ಸಹಕಾರ ಸಂಸ್ಥೆಗಳಿಂದ ರೂ.50 ಸಾವಿರವರೆಗಿನ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಿದ್ದು, ಮಂಡ್ಯ ಜಿಲ್ಲೆಯಲ್ಲಿ 1.16 ಲಕ್ಷ ರೈತರ ರೂ. 429 ಕೋಟಿ ಬೆಳೆ ಸಾಲವನ್ನು ಮನ್ನಾ ಮಾಡಿ, ರೈತರಿಗೆ ಹೆಗಲು ನೀಡಿದೆ.
 3. 2016-17 ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯು ಬರ ಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದರಿಂದ ಜಿಲ್ಲೆಯ ಮುಂಗಾರು ಹಾಗೂ ಹಿಂಗಾರು ಬೆಳೆ ನಷ್ಟದ ಪರಿಹಾರ ಮೊತ್ತವನ್ನು ಸರ್ಕಾರದಿಂದಲೇ ಪಾವತಿಸಲಾಗಿದ್ದು 1.45 ಲಕ್ಷ ರೈತ ಫಲಾನುಭವಿಗಳಿಗೆ ರೂ.80 ಕೋಟಿ ಮುಂಗಾರು ಬೆಳೆ ನಷ್ಟ ಪರಿಹಾರ ಹಾಗೂ 42 ಸಾವಿರ ರೈತ ಫಲಾನುಭವಿಗಳಿಗೆ ರೂ. 15.50 ಕೋಟಿ ಹಿಂಗಾರು ಬೆಳೆ ನಷ್ಟ ಪರಿಹಾರವನ್ನು ನೀಡಲಾಗಿದೆ.
 4. ರೈತರಿಗಾಗಿ ರಾಜ್ಯ ಸರ್ಕಾರ 2014-15ನೇ ಸಾಲಿನಿಂದ ಕೃಷಿಭಾಗ್ಯ ಯೋಜನೆಯನ್ನು ಘೋಷಿಸಿದ್ದು, 2014-15 ನೇ ಸಾಲಿನಿಂದ ಈವರೆಗೆ ರೂ.45 ಕೋಟಿ ಸಹಾಯಧನವನ್ನು 4,251 ರೈತ ಫಲಾನುಭವಿಗಳಿಗೆ ನೀಡಲಾಗಿದೆ.
 5. ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಸದರಿ ಯೋಜನೆಯಡಿ ಇದುವರೆಗೂ ರೂ. 458 ಲಕ್ಷ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದ್ದು, 900 ಫಲಾನುಭವಿಗಳಿಗೆ ರೂ. 394 ಲಕ್ಷ ವೆಚ್ಚಭರಿಸಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ.
 6. ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 4554 ಫಲಾನುಭವಿಗಳು ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿದ್ದು, ಪಾಲಿಹೌಸ್ ಮತ್ತ್ತು ಪಾಲಿಹೌಸ್ ರಹಿತ ಮಾದರಿ ಅನುಷ್ಠಾನಗೊಳಿಸಿದ ರೈತರಿಗೆ ಇದುವರೆವಿಗೂ ಒಟ್ಟು ರೂ. 4647 ಲಕ್ಷ ಸಹಾಯಧನವನ್ನು ನೀಡಲಾಗಿದೆ.
 7. 2016-17ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 12,136 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 139 ನಿವೇಶನವನ್ನು ಹಂಚಲಾಗಿದೆ.

Mandya

 1. 2017-18ನೇ ಸಾಲಿನಲ್ಲಿ ಜಿಲ್ಲೆಗೆ ವಸತಿ ನಿಗಮದಿಂದ 10300 ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ನೀಡಲಾಗಿದ್ದು ಪ್ರಸ್ತುತ 3247 ಮನೆಗಳ ನಿರ್ಮಾಣವು ಪೂರ್ಣಗೊಂಡಿವೆ.
 2. ಸಕ್ಕರೆ ಜಿಲ್ಲೆ ಈಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿನ ಎಲ್ಲಾ 234 ಗ್ರಾಮ ಪಂಚಾಯಿತಿಗಳು 2012ರ ಬೇಸ್‍ಲೈನ್ ಸಮೀಕ್ಷೆಯಲ್ಲಿ ಗುರುತಿಸಿದ ಎಲ್ಲಾ ಕುಟುಂಬಗಳಿಗೂ ವೈಯಕ್ತಿಕ ಗೃಹ ಶೌಚಾಲಯ ಕಲ್ಪಿಸುವ ಮೂಲಕ ಶೇ 100ರಷ್ಠು ಸಾಧನೆ ಮಾಡಿದೆ.
 3. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಡೇರಿ ಆವರಣದಲ್ಲಿ ದಿನವಹಿ 12 ಲಕ್ಷ ಲೀಟರ್ ಸಾಮಥ್ರ್ಯದ ರೂ.227 ಕೋಟಿ ವೆಚ್ಚದ ನೂತನ ಮೆಗಾ ಡೈರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ.
 4. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಅಡಿಯಲ್ಲಿ ಮದ್ದೂರು ತಾಲ್ಲೂಕಿನ ಕೌಡ್ಲೆ ಗ್ರಾಮದಿಂದ ಮಂಡ್ಯ ನಗರದವರೆಗೆ 16.5 ಕಿ.ಮೀ ಉದ್ದದ ರಸ್ತೆ ನಿರ್ಮಿಸಲಾಗಿದ್ದು ರೂ.114 ಕೋಟಿ ವೆಚ್ಚದ ಮಂಡ್ಯ ಜಿಲ್ಲೆಯ ಮಳವಳ್ಳಿ, ಮದ್ದೂರು ಹಾಗೂ ಛತ್ರಲಿಂಗನದೊಡ್ಡಿವರೆÀಗೆ 35.76 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.
 5. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೂ.53 ಕೋಟಿ ವೆಚ್ಚದಲ್ಲಿ ಅರಳುಕುಪ್ಪೆ ಹಾಗೂ ಇತರೆ 62 ಗ್ರಾಮಗಳಿಗೆÀ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು ರೂಪಿಸಲಾಗಿದ್ದು 84,374 ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
 6. ಮಂಡ್ಯ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರೂ. 696 ಕೋಟಿ ವೆಚ್ಚದಲ್ಲಿ ಒಟ್ಟು 750 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು, ರೂ. 12 ಕೋಟಿ ವೆಚ್ಚದಲ್ಲಿ 13 ಸೇತುವೆಗಳು ಹಾಗೂ ರೂ. 51 ಕೋಟಿ ವೆಚ್ಚದಲ್ಲಿ 23 ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.

Mandya-INCK

 1. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಹಾಗೂ ಇತರೆ 128 ಗ್ರಾಮಗಳ ರೂ.154.62 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ನವೆಂಬರ್ 20 ರಂದು ಚಾಲನೆ ನೀಡಲಾಗಿದೆ.
 2. ಮಂಡ್ಯ ರೈತರ ಬೆನ್ನೆಲುಬಾದ ಮೈ ಷುಗರ್ ಸಕ್ಕರೆ ಕಾರ್ಖಾನೆಯ 2017-18 ನೇ ಸಾಲಿನ ಕಬ್ಬು ಅರೆಯುವ ಕಾರ್ಯವು ಜುಲೈ 07, 2017 ರಂದು ಆರಂಭಗೊಂಡಿದ್ದು, 82094 ಮೆ.ಟನ್ ಕಬ್ಬನ್ನು ಅರೆದು 54800 ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಅಲ್ಲದೇ ಈಗಾಗಲೇ ನುರಿಸಿರುವ ಕಬ್ಬಿಗೆ ರೂ.1282 ಲಕ್ಷವನ್ನು ಪಾವತಿಸಲಾಗಿದೆ. 2013-14 ರಿಂದ ಈವರೆಗೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ ರೂ.150 ಕೋಟಿ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಿದೆ.

mandya_rally_image_stitched

 1. ವಿಶ್ವೇಶ್ವರಯ್ಯ ನಾಲಾ ಜಾಲದ ಮೊದಲನೇ ಹಂತದ ಅಭಿವೃದ್ಧಿಯಲ್ಲಿ 5 ಪ್ಯಾಕೇಜ್‍ಗಳಿಂದ ಒಟ್ಟು 458 ಕಿ.ಮೀ. ಉದ್ದದ ನಾಲಾಗಳನ್ನು ಅಭಿವೃದ್ಧಿ ಪಡಿಸಲು ರೂ.330 ಕೋಟಿಗಳ ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನಾಲಾ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ.
 2. ಚಿಕ್ಕದೇವರಾಯಸಾಗರ ಅಣೆಕಟ್ಟು ನಾಲೆ 17ನೇ ಶತಮಾನದಲ್ಲಿ ಮಹಾರಾಜರ ಕಾಲದಲ್ಲಿ ನಿರ್ಮಿತವಾಗಿದ್ದು, 104 ಕಿ.ಮೀ. ಉದ್ದದ ನಾಲೆಯನ್ನು ರೂ.240 ಕೋಟಿಗಳಲ್ಲಿ ಅಭಿವೃದ್ಧಿಪಡಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
 3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 602 ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮಂಜೂರಾತಿ ನೀಡಲಾಗಿದ್ದು, 402 ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿದ್ದು ಇದಕ್ಕಾಗಿ ಸುಮಾರು ರೂ. 29.58 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

#NavaKarnatakaNirmana

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ