/ departments

ಅಲ್ಪಸಂಖ್ಯಾತರು ಮತ್ತು ಹಜ್ ಇಲಾಖೆ

ಕರ್ನಾಟಕದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು, ಸಿಖ್ ಮತ್ತು ಪಾರ್ಸಿ ಧರ್ಮದ ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳೆಂದು ಗುರುತಿಸಲಾಗಿದೆ. 2011 ನೇ ಜನಗಣತಿಯ ಪ್ರಕಾರವಾಗಿ ಕರ್ನಾಟಕದ ಒಟ್ಟು ಜನಸಂಖ್ಯೆ 6.1 ಕೋಟಿಗಳಲ್ಲಿ 16.28% ನಷ್ಟಿದೆ. ಹೀಗಾಗಿ ಇವರ ಜನಸಂಖ್ಯೆಗೆ ಅನುಗುಣವಾಗಿ ಈ ಸಮುದಾಯಗಳಿಗೆ ಅನುಕೂಲವಾಗುಂತಹ ಅಭಿವೃದ್ಧಿ ಕ್ರಮಗಳನ್ನು ನಮ್ಮ ಸರ್ಕಾರವು ರೂಪಿಸಿದ್ದು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ದಿ ಅನನ್ಯವಾದ ರೀತಿಯಲ್ಲಿ ಸಹಕಾರವನ್ನು ನೀಡಿ ಹಲವಾರು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದೆ.

ಕರ್ನಾಟಕದಲ್ಲಿ ದಿವಂಗತ ಖಮರುಲ್ ಇಸ್ಲಾಂ (2013-16) ಮತ್ತು ಶ್ರೀ.ತನ್ವೀರ್ ಸೇಠ್ (2016-18) ಇವರಿಂದ ಅಲ್ಪಸಂಖ್ಯಾತರ ಇಲಾಖೆಯಿಂದ ನೂತನ ಯೋಜನೆಗಳನ್ನು ಮಾಡಲಾಗಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆ
ಅಲ್ಪಸಂಖ್ಯಾತ ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನ ಸಹಾವಯನ್ನು ಒದಗಿಸುವ ದೃಷ್ಟಿಯಿಂದ ವರ್ಷಕ್ಕೆ 10 ತಿಂಗಳ ಕಾಲ ಮಾಸಿಕವಾಗಿ 1,500 ರೂಪಾಯಿಗಳ ಶಿಷ್ಯ ವೇತನವನ್ನು ನೀಡಲಾಗುತ್ತಿದೆ. ಈ ಸಹಾಯಧನವನ್ನು ಇ-ಪಾಸ್ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದೆ. 2013 ರಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಒಟ್ಟು 35,320 ವಿದ್ಯಾರ್ಥಿಗಳಿಗೆ 29.94 ಕೋಟಿ ರೂಪಾಯಿಗಳಷ್ಟು ಸಹಾಯಧನವನ್ನು ನೀಡಲಾಗಿದೆ.

ಮೆಟ್ರಿಕ್ ವಿದ್ಯಾರ್ಥಿ ವೇತನ ಮತ್ತು ಶುಲ್ಕ ಮರುಪಾವತಿ ಯೋಜನೆ
ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಉತ್ತೇಜಿಸಲು ಮತ್ತು ಅವರ ಮೇಲಿನ ಅತಿಯಾದ ಶುಲ್ಕ ಹೊರೆಯನ್ನು ತಪ್ಪಿಸಲು ಸರ್ಕಾರವು ಆನ್ ಲೈನ್ ಮೂಲಕ ಮೆಟ್ರಿಕ್ ವಿದ್ಯಾರ್ಥಿ ವೇತನ ಮತ್ತು ಶುಲ್ಕ ಮರುಪಾವತಿ ಯೋಜನೆಯನ್ನು ಜಾರಿಗೊಳಿಸಿದ್ದು 2013 ರಿಂದ ಇಲ್ಲಿಯ ತನಕ ವಿದ್ಯಾರ್ಥಿವೇತನ ಹಾಗು ಶುಲ್ಕ ಮರುಪಾವತಿಗಾಗಿ ಒಟ್ಟು 634.38 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು ಇದರಿಂದ ಇಲ್ಲಿಯ ತನಕ ಒಟ್ಟು 37.89 ಲಕ್ಷ ಮೆಟ್ರಿಕ್ ಪೂರ್ವ ಹಾಗು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಒಟ್ಟಿನಲ್ಲಿ ಶಿಕ್ಷಣಕ್ಕೆ ಬಹಳಷ್ಟು ಮಹತ್ವ ನೀಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರವು ಅಭಿವೃದ್ಧಿ ಅಂಶವಾಗಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡಿದೆ.

ಬಿದಾಯಿ ಯೋಜನೆ
2013 ರಲ್ಲಿ ಕರ್ನಾಟಕ ಸರ್ಕಾರವು ಅಲ್ಪ ಸಂಖ್ಯಾತ ಸಮುದಾಯದ ಜನರ ವಿವಾಹ ವೆಚ್ಚಗಳಿಗೆ ನೆರವಾಗುವ ದೃಷ್ಟಿಯಿಂದ ಬಿದಾಯಿ ಯೋಜನೆಯನ್ನು ಜಾರಿಗೆ ತಂದಿತು. ಬಡತನ ರೇಖೆಗಿಂತ ಕೆಳಗಿರುವ ಮತ್ತು 18 ವರ್ಷಕ್ಕೆ ಮೇಲ್ಪಟ್ಟ ಅವಿವಾಹಿತ, ವಿಚ್ಛೇದಿತ ಮತ್ತು ವಿಧವಾ ಮಹಿಳೆಯರಿಗೆ ಹೊಸದಾಗಿ ಮದುವೆ ಆಗುವಾಗ ಒಂದು ಬಾರಿ 50,000 ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಅವರ ಬಡತನಕ್ಕೆ ನೆರವಾಗುವಂತಹ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇಲ್ಲಿಯ ತನಕ ಈ ಯೋಜನೆಗಾಗಿ ಸರ್ಕಾರವು 208.26 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು 48,242 ಕಡು ಬಡವರ ಬದುಕಿನಲ್ಲಿ ಸಂತಸ ಕ್ಷಣಗಳು ಮತ್ತು ವಾತಾವರಣ ಏರ್ಪಡುವುದಕ್ಕೆ ಕಾರಣವಾಗಿದೆ.
ಇದನ್ನು ಬಹಳಷ್ಟು ಮೆಚ್ಚಿಕೊಂಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ನಜ್ಮಾ ಹೆಫ್ತುಲ್ಲಾ ಅವರು “ಕರ್ನಾಟಕದ ಈ ಯೋಜನೆ ದೇಶದ ಇತರೆ ರಾಜ್ಯಗಳಿಗೂ ಮಾದರಿಯಾಗಬೇಕು” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಸತಿ ನಿಲಯಗಳು
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದ ಹಿನ್ನಲೆಯಲ್ಲಿ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು ಸರ್ಕಾರ ಅಧಿಕಾರಕ್ಕೆ ಬಂದ 2013 ರಿಂದ ಇಲ್ಲಿಯವರೆಗೆ ಒಟ್ಟು 150 ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದ್ದು ಇದರಿಂದ ಒಟ್ಟು 16,300 ಜನ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. 2017 ನೇ ಸಾಲಿನಲ್ಲಿ 25 ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಸ್ಥಾಪಿಸಲಾಗಿದ್ದು 15 ಕ್ಕೂ ಹೆಚ್ಚಿನ ವಸತಿಯುಕ್ತ ಕಾಲೇಜುಗಳನ್ನು ಆರಂಭಿಸಲಾಗಿದೆ. ಶಿಕ್ಷಣವೇ ದೇಶದ ಶಕ್ತಿ ಎಂಬುದನ್ನ ನಮ್ಮ ಸರ್ಕಾರವು ಅರ್ಥೈಸಿಕೊಂಡಿದ್ದು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ
ಭಾರತೀಯ ವಿವಿಧ ಔದ್ಯೋಗಿಕ ಕ್ಷೇತ್ರಗಳಿಗೆ ಸೇರಿಕೊಳ್ಳಲು ಅನುಕೂಲವಾಗುವಂತೆ ಯುವ ಜನತೆಗೆ ಔದ್ಯೋಗಿಕ ತರಬೇತಿಯನ್ನು ನೀಡಲಾಗುತ್ತಿದ್ದು, 2017 ನೇ ಸಾಲಿನಲ್ಲಿ ಒಟ್ಟು 75,000 ಜನ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಇದರ ಪ್ರಯೋಜವಾಗಿದೆ.

3

ಶಾಲೆ ಮತ್ತು ಕಾಲೇಜುಗಳು
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಕೇವಲ 47 ಮೊರಾರ್ಜಿ ಶಾಲೆಗಳು ಮತ್ತು 3 ಪದವಿ ಪೂರ್ವ ಕಾಲೇಜುಗಳು ಅಸ್ತಿತ್ವದಲ್ಲಿದ್ದವು. ಕಳೆದ ನಾಲ್ಕು ವರ್ಷಗಳಲ್ಲಿ 40 ಹೊಸ ವಸತಿ ನಿಲಯ/ಕಾಲೇಜುಗಳನ್ನು ತೆರೆಯಲಾಗಿದ್ದು ಇದರಿಂದ 17,210 ವಿದ್ಯಾರ್ಥಿಗಳು ಇದರ ಪ್ರಯೋಜವನ್ನು ಪಡೆದುಕೊಳ್ಳುತ್ತಿದ್ದಾರೆ.
ಶಾಲೆ ಬಿಟ್ಟ ಬಡ ಅಲ್ಪಸಂಖ್ಯಾತ ಮಕ್ಕಳಿಗೆ ಪುನಃ ಶಾಲೆಗೆ ಕರೆತರುವ ಉದ್ದೇಶಕ್ಕಾಗಿ 200 ಮೌಲಾನ ಆಜಾದ್ ವಸತಿ ನಿಲಯಗಳನ್ನು ಸ್ಥಾಪಿಸಲಾಗಿದೆ.

ಮೂಲ ಸೌಕರ್ಯಗಳ ಅಭಿವೃದ್ಧಿ
ಮುಸ್ಲೀಮರು ಮೂಲ ನಿವಾಸಿಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶದ ಅಭಿವೃದ್ಧಿಗಾಘಿ ಸರ್ಕಾರವು ಯೋಜನೆಗಳನ್ನು ರೂಪಿಸಿದ್ದು ಇದಕ್ಕಾಗಿ 800 ಕೋಟಿ ರೂಪಾಯಿಗಳ ಯೋಜನೆಯನ್ನು ಗುರಿಯಾಗಿಸಿಕೊಂಡಿದೆ.

ಶಾದಿ ಮಹಲ್/ಸಮುದಾಯ ಭವನ
ಕಳೆದ ನಾಲ್ಕು ವರ್ಷಗಳಲ್ಲಿ 610 ಶಾದಿ ಮಹಲ್ / ಸಮುದಾಯ ಭವನಗಳನ್ನು ನಿರ್ಮಿಸಲು 137 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಒದಿಸಲಾಗಿದೆ. ಈ ಪೈಕಿ 50 ಕೋಟಿ ರೂಪಾಯಿಗಳನ್ನು ನೀಡಿ ಅಪೂರ್ಣಗೊಂಡಂತಹ 200 ಶಾದಿ ಮಹಲ್ / ಸಮುದಾಯ ಭವನಗಳನ್ನು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

1--1-

ಅರಿವು ಯೋಜನೆ
ಅರಿವು ಯೋಜನೆಯಡಿಯಲ್ಲಿ ವೃತ್ತಿಪರ ಕೋರ್ಸ್ ಗಳಾದ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಹಾಗೂ ಡಿಪ್ಲೋಮಾ, ನರ್ಸಿಂಗ್ ಹಾಗೂ ಫಾರ್ಮಾ, ಡಿ-ಫಾರ್ಮಾ, ಐಟಿಐ ಹಾಗೂ ಇತ್ಯಾದಿ ಕೋರ್ಸ್ ಗಳನ್ನು ಮಾಡುವ ಸಲುವಾಗಿ ಅಲ್ಪಸಂಖ್ಯಾತ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಅರಿವು ಯೋಜನೆಯಡಿಯಲ್ಲಿ 10 ರಿಂದ 75 ಸಾವಿರದ ವರೆಗಿನ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಯೋಜನೆಗಾಗಿ 230 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು ಇದರಿಂದ 78,365 ಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುತ್ತದೆ.

ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗ
ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮವು ಪರವಾನಿಗೆ ಹೊಂದಿದ 500 ಜನ ಅಲ್ಪಸಂಖ್ಯಾತ ಸಮುದಾಯದ ಬಡ ಅಭ್ಯರ್ಥಿಗಳಿಗೆ, ಟ್ಯಾಕ್ಸಿಯನ್ನು ಕೊಳ್ಳಲು 3 ಲಕ್ಷ ರೂಪಾಯಿಯ ವರೆಗೆ ಸಬ್ಸಿಡಿಯನ್ನು ನೀಡುತ್ತಿದೆ. ಉಳಿಕೆ ಹಣಕ್ಕಾಗಿ ಅವರಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯವನ್ನೂ ಸಹ ಕಲ್ಪಿಸಲಾಗಿದೆ.

ಯುವ ವಕೀಲರ ತರಬೇತಿಗೆ ಪ್ರೋತ್ಸಾಹ ಧನ
ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಕೀಲಿ ವೃತ್ತಿಯ ತರಬೇತಿಯನ್ನು ಪಡೆಲು ಮಾಸಿಕವಾಗಿ ನೀಡುತ್ತಿದ್ದ 2000 ಪ್ರೋತ್ಸಾಹ ಧನವನ್ನು 4000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ವೃತ್ತಿಪರ ಮಹಿಳಾ ಹಾಸ್ಟೆಲ್
ವಿವಿಧ ಶ್ರಮಿಕ ವೃತ್ತಿಯಲ್ಲಿ ತೊಡಗಿರುವಂತಹ ಮಹಿಳೆಯರಿಗೆ ಅದರಲ್ಲೂ ಅಲ್ಪಸಂಖ್ಯಾತ ಮಹಿಳೆಯರಿಗೆ ಇಲಾಖೆಯ ವತಿಯಿಂದ 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೆಂಗಳೂರು ಮತ್ತು ಇನ್ನಿತರೆ ಕಾರ್ಪೋರೇಷನ್ ಪ್ರದೇಶಗಳಲ್ಲಿ 10 ವಸತಿ ನಿಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಕ್ರೈಸ್ತ ಸಮುದಾಯದ ಅಭಿವೃದ್ಧಿ ಯೋಜನೆ
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕ್ರೈಸ್ತ ಸಮುದಾಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒಟ್ಟು 650 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿದ್ದು ಈ ಅನುದಾನವನ್ನು ಚರ್ಚು, ಸಮುದಾಯ ಭವನ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಅನಾಥಾಶ್ರಮ, ವಿದ್ಯಾಲಯ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ಉಪಯೋಗವಾಗಿದೆ.
2017-18 ನೇ ಸಾಲಿನಲ್ಲಿ 175 ಕೋಟಿ ರೂಪಾಯಿಗಳ ಅನುದಾನವನ್ನು ಕ್ರೈಸ್ತ ಸಮುದಾಯದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗಿದ್ದು ಕ್ರೈಸ್ತರ ಸ್ಮಶಾನಗಳಿಗೆ ಉತ್ತಮ ಸ್ವರೂಪವನ್ನು ನೀಡುವುದೂ ಸಹ ಇದರ ಒಂದು ಭಾಗವಾಗಿದೆ.

ಬೀದರ್ ನಲ್ಲಿ ಸಿಖ್ಖರ ಸಾಂಸ್ಕೃತಿಕ ಕೇಂದ್ರ ನಿರ್ಮಾಣ
ವಿಶ್ವದ ಎಲ್ಲಾ ಸಿಖ್ಖ್ ಬಾಂಧವರಿಗೆ ಯಾತ್ರಾ ಸ್ಥಳವಾದ ಬೀದರ್ ನ ಗುರುನಾನಕ್ ಜಿಹ್ರಾ ಗುರುದ್ವಾರವು ಕರ್ನಾಟಕದ ಹೆಮ್ಮೆಯ ಸ್ಥಳವಾಗಿದೆ. ಗುರು ಗೋವಿಂದ್ ಸಿಂಗ್ ಅವರ 350 ನೇ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ 5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೀದರ್ ಸಾಂಶ್ಕೃತಿಕ ಕೇಂದ್ರವನ್ನು ನಿರ್ಮಿಸಲಾಗಿದೆ. ಸಿಖ್ಖರ ಗುರುದ್ವಾರದ ನವೀಕರಣಕ್ಕಾಗಿ 10 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಗಿದೆ.

ವಕ್ಫ್ ಸ್ವತ್ತುಗಳ ಸಮೀಕ್ಷೆ
ಒಟ್ಟು 12,090 ವಕ್ಫ್ ಸ್ವತ್ತುಗಳ ಪೈಕಿ 8,129 ಸ್ವತ್ತುಗಳ ಸಮೀಕ್ಷೆಯನ್ನು ಮಾಡಲಾಗಿದ್ದು ಉಳಿದ ಸಮೀಕ್ಷೆಗಳು ಪ್ರಗತಿಯಲ್ಲಿವೆ. ರಾಜ್ಯದ ವಕ್ಫ್ ಸ್ವತ್ತುಗಳ ರಕ್ಷಣೆಗಾಗಿ ಇಲಾಖೆಯು 79 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ. ವಕ್ಫ್ ಸ್ವತ್ತುಗಳ ಸಂರಕ್ಷಣೆಯನ್ನು ಮಾಡಲು ಇಲಾಖೆಯು ಬೆಂಗಳೂರಿನಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಹಜ್ ಭವನ
ಹಜ್ ಭವನ ವೀಕ್ಷಣೆಗೆ ಸದಾ ಹೊರ ದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯನ್ನು ಹೊಂದಿರುವ ಮುಸ್ಲೀಮ್ ಸಮುದಾಯದ ಬಾಂಧವರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಜ್ ಭವನವನ್ನು ನಿರ್ಮಿಸಲಾಗುತ್ತಿದೆ, ಮಂಗಳೂರಿನಲ್ಲಿಯೂ ಸಹ ಇದೇ ಮಾದರಿಯಲ್ಲಿ ಹಜ್ ಭವನವನ್ನು ನಿರ್ಮಾಣ ಮಾಡಲು 10 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಮ್ಯೂಜಿನ್ಸ್ ಮತ್ತು ಪೇಶ್ ಇಮಾಮ್ ಸಹಾಯಧನ ಯೋಜನೆ
ಈ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 5111 ಇಮಾಮ್ ಗಳು ಹಾಗೂ 4,964 ಮ್ಯೂಜಿನ್ ಗಳಿಗೆ 108 ಕೋಟಿ ರೂಪಾಯಿಗಳ ಸಹಾಯ ಧನವನ್ನು ನೀಡಲಾಗಿದ್ದು 2017-18 ರಿಂದ ಈ ಅನುದಾನವನ್ನು ಇನ್ನುಮುಂದೆ 3,100 ರೂಪಾಯಿಗಳಿಂದ 4,000 ಕ್ಕೆ ಹಾಗೂ ಮ್ಯಾಜಿನ್ ಗಳಿಗೆ 2500 ರೂಪಾಯಿಗಳಿಂದ 3000 ರೂಗಳಿಗೆ ಏರಿಕೆ ಮಾಡಲಾಗಿದೆ.

ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ನೀಡಲಾದ ಅನುದಾನದ ಪ್ರಮಾಣ
Department-of-Minorities-Welfare-and-Haj