/ #schemes

ಮೈತ್ರಿ

ಶೋಷಿತ ಮತ್ತು ಹಿಂದುಳಿದ ವರ್ಗಗಳ ಸಾಲಿಗೆ ಯಾವುದೇ ಅನುಮಾನವಿಲ್ಲದಂತೆ ಪರಿಗಣಿಸಬಹುದಾದ ಮತ್ತು ಲೈಂಗಿಕ ಅಲ್ಪಸಂಖ್ಯಾತ ರೆಂದು ತಮ್ಮನ್ನು ಗುರುತಿಸಿಕೊಳ್ಳುವ ಬಡ ಜನರಿಗಾಗಿ ಮೊಟ್ಟ ಮೊದಲ ಬಾರಿಗೆ ‘ಮೈತ್ರಿ’ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರೂಪಿಸಿದೆ. ದೈಹಿಕ ಮತ್ತು ಮಾನಸಿಕ ಕಾರಣಕ್ಕೆ ಲಿಂಗ ಪರಿವರ್ತನೆಮಾಡಿಕೊಂಡವರು ಅಥವಾ ದೈಹಿಕ ತೊಂದರೆಯಿಂದ ಹಿಜಡಾಗಳೆಂದು ಗುರುತಿಸಿಕೊಂಡವರು ಕುಟುಂಬದಿಂದ ದೂರಾಗಿ ನಗರಗಳಿಗೆ ವಲಸೆ ಬಂದು ವಾಸಿಸುತ್ತಿದ್ದಾರೆ. ಅಲ್ಲದೇ ಈ ಸಮುದಾಯದ ಬಹುತೇಕರು ಅವಿದ್ಯಾವಂತರಾಗಿದ್ದು, ಉದ್ಯೋಗ ಮತ್ತು ಘನತೆಯ ಬದುಕು ಇವರಿಗೆ ಮರೀಚಿಕೆಯಾಗಿದೆ. ಹಾಗಾಗಿಯೇ ಇವರು ಬದುಕು ನಡೆಸಲು ಭಿಕ್ಷಾಟನೆ ಮತ್ತು ಇತರೆ ಅನಿಷ್ಠ ವೃತ್ತಿಗೆ ಅನಿವಾರ್ಯವಾಗಿ ಇಳಿದಿದ್ದಾರೆ.

Namma-Karntaka-Post_Mythri---uploaded

ಹೀಗಾಗಿ ಇಂತಹ ಜನಸಮುದಾಯಕ್ಕೆ ನೆರವಾಗಬೇಕೆಂಬ ಮಾನವೀಯ ಉದ್ದೇಶಕ್ಕೆ ಕಟ್ಟುಬಿದ್ದು ಸಿದ್ದರಾಮಯ್ಯನವರ ಸರ್ಕಾರವು ಇವರಿಗೆ ಕೆಲವೊಂದು ಸೌಲಭ್ಯಗಳನ್ನು ನೀಡುವ ಮೂಲಕ ಮೈತ್ರಿ ಯೋಜನೆಯನ್ನು ಜಾರಿಗೊಳಿಸಿದ್ದು ಮಾನವೀಯತೆಗೆ ಹೆಚ್ಚಿನ ಗೌರವ ತಂದುಕೊಡುವಂತಹ ಕೆಲಸ ಮಾಡಿದೆ.

ಈ ಯೋಜನೆಯಡಿಯಲ್ಲಿ 40 ವರ್ಷ ದಾಟಿದ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿದ್ದು ಅವರು 64 ವರ್ಷ ದಾಟಿದ ಬಳಿಕ ಅವರಿಗೆ ವೃದ್ದಾಪ್ಯ ವೇತನವನ್ನೂ ಸಹ ಈ ಯೋಜನೆಯಡಿ ಘೋಷಿಸಲಾಗಿದೆ. ಈ ಬಗ್ಗೆ ಸಹಜವಾಗಿಯೇ ಸಂತೋಷ ವ್ಯಕ್ತಪಡಿಸಿರುವ ಮಂಗಳೂರಿನ ಲೈಂಗಿಕ ಅಲ್ಪಸಂಖ್ಯಾತರಾ ಪ್ರೇಮ ಅವರು ಸರ್ಕಾರದ ಈ ನಡೆಗೆ ಗೌರವವನ್ನು ಸೂಚಿಸಿದ್ದಾರೆ.

MYTHRI

ಕಳೆದ ನಾಲ್ಕು ವರ್ಷಗಳ ಅಧಿಕಾರವಧಿಯಲ್ಲಿ ಒಟ್ಟು 4,461 ಜನ ಲೈಂಗಿಕ ಅಲ್ಪಸಂಖ್ಯಾತರಿಗೆ ಈ ಯೋಜನೆಯ ಪ್ರಯೋಜನ ದೊರೆತಿದ್ದು ಅವರಿಗೆ ಉದ್ಯೋಗಾವಕಾಶ, ಶಿಕ್ಷಣ ಹಾಗೂ ಇನ್ನಿತರೆ ಸರ್ಕಾರೀ ಸೌಲಭ್ಯಗಳನ್ನೂ ಸಹ ಸರ್ಕಾರದ ವತಿಯಿಂದ ಪ್ರಕಟಿಸಿದ್ದು ಲೈಂಗಿಕ ಅಲ್ಪಸಂಖ್ಯಾತರ ಕುರಿಂತತೆ ಇರುವ ಸರ್ಕಾರದ ಮಾನವೀಯ ಕಾಳಜಿಯು ಈ ಮೂಲಕ ವ್ಯಕ್ತವಾಗಿದೆ.