/ #schemes

ಲಿಂಗ ಅಲ್ಪಸಂಖ್ಯಾತರ ಬದುಕಿಗೆ ಆಸರೆಯಾದ ‘ಮೈತ್ರಿ’

ಸಮಾಜದಲ್ಲಿ ಲಿಂಗ ಅಲ್ಪಸಂಖ್ಯಾತರನ್ನು ತುಂಬಾ ಕೀಳಾಗಿ ಕಾಣುವ ಮನಸ್ಥಿತಿ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಲಿಂಗ ಅಲ್ಪಸಂಖ್ಯಾತರನ್ನು ಮುಖ್ಯಭೂಮಿಕೆಗೆ ತರಲು ರಾಜ್ಯ ಕಾಂಗ್ರೆಸ್ ಸರ್ಕಾರ ಅವಿರತ ಪ್ರಯತ್ನ ಮಾಡಿದೆ. ಇದರ ಒಂದು ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮೈತ್ರಿ’ ಯೋಜನೆಯನ್ನು ಜಾರಿಗೊಳಿಸಿದ್ದಾರೆ.

ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಲಿಂಗ ಅಲ್ಪಸಂಖ್ಯಾತರಿಗಾಗಿ ರೂಪಿಸಿರುವ ‘ಮೈತ್ರಿ’ ಯೋಜನೆಯೂ ಅನುಷ್ಠಾನಗೊಂಡಿದೆ. ರಾಜ್ಯ ಸರ್ಕಾರದ ಕನಸಿನ ಯೋಜನೆಗಳಲ್ಲಿ ‘ಮೈತ್ರಿ’ ಯೋಜನೆ ಒಂದಾಗಿದ್ದು, 2013 ಆಗಸ್ಟ್ ತಿಂಗಳಿನಿಂದ ಜಾರಿಗೊಂಡಿವೆ. ಹೋಬಳಿ ಮಟ್ಟದಲ್ಲಿ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ ಆರಂಭವಾಗಿ, ಅರ್ಜಿ ಸ್ವೀಕರಿಸಿದ 30 ದಿನಗಳೊಳಗೆ ವಾಸಸ್ಥಳ ದೃಢೀಕರಣ ಮಾಡಿಕೊಂಡು 500 ರೂ. ಮಾಸಾಶನವನ್ನು ನೀಡಲಾಗುತ್ತಿದೆ.

ma

ಲಿಂಗ ಅಲ್ಪಸಂಖ್ಯಾತರೆಂದು ತಮ್ಮನ್ನು ಗುರುತಿಸಿಕೊಳ್ಳುವ ಸಮುದಾಯದವರಿಗಾಗಿ ಮೊದಲ ಬಾರಿಗೆ ‘ಮೈತ್ರಿ’ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ದೈಹಿಕ ಮತ್ತು ಮಾನಸಿಕ ಕಾರಣಕ್ಕೆ ಲಿಂಗ ಪರಿವರ್ತನೆಮಾಡಿಕೊಂಡವರು ಅಥವಾ ದೈಹಿಕ ತೊಂದರೆಯಿಂದ ಹಿಜಡಾಗಳೆಂದು ಗುರುತಿಸಿಕೊಂಡವರು ಕುಟುಂಬದಿಂದ ದೂರಾಗಿ ನಗರಗಳಿಗೆ ವಲಸೆ ಬಂದು ವಾಸಿಸುತ್ತಿದ್ದಾರೆ. ಈ ಸಮುದಾಯದ ಬಹುತೇಕರು ಅವಿದ್ಯಾವಂತರಾಗಿದ್ದು, ಉದ್ಯೋಗ ಎಂಬುದು ಇವರಿಗೆ ಮರೀಚಿಕೆಯಾಗಿದೆ. ಹಾಗಾಗಿಯೇ ಇವರು ಭಿಕ್ಷಾಟನೆ ಅಥವಾ ಇತರ ಅನಿಷ್ಠ ವೃತ್ತಿಗೆ ಅನಿವಾರ್ಯವಾಗಿ ಇಳಿದಿದ್ದಾರೆ.

ಈಗಾಗಲೇ ಚುನಾವಣಾ ಆಯೋಗದಲ್ಲಿ ‘ಇತರೆ’ (ಹೆಣ್ಣು-ಗಂಡು ಅಲ್ಲದವರು) ಎಂಬ ಪಟ್ಟಿಯಿಂದ ನೋಂದಾಯಿಸಿಕೊಂಡವರು 2,125 ಮಂದಿ ಇದ್ದಾರೆ. ಈ ಯೋಜನೆಯಡಿ 215 ಫಲಾನುಭವಿಗಳಿಗೆ ಮಾಸಾಶನ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಸಹ ಲಿಂಗ ಅಲ್ಪಸಂಖ್ಯಾತರಿಗೆ ಮಾನ್ಯತೆ ನೀಡಿ, ಉದ್ಯೋಗ ಮತ್ತು ಶಿಕ್ಷಣದಲ್ಲೂ ಮೀಸಲಾತಿ ನೀಡುವುದನ್ನು ಕಡ್ಡಾಯಗೊಳಿಸಿದೆ.

MYTHRI

ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ರೂ.12 ಸಾವಿರ ಹಾಗೂ ನಗರ ಪ್ರದೇಶದಲ್ಲಿ ರೂ.17 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ.