/ achievements

ನಿರ್ಮಲ ಭಾಗ್ಯ

ಅಂಬೇಡ್ಕರ್, ಗಾಂಧೀ ಹಾಗೂ ಬಸವಣ್ಣನ ತತ್ವಗಳ ಪ್ರತಿಪಾದಕರಾದ ಕರ್ನಾಟಕದ ಮುಖ್ಯಮಂತ್ರಿ ಶ್ರೀ.ಸಿದ್ದರಾಮಯ್ಯನವರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರಲ್ಲಿ ರಾಜ್ಯವನ್ನು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಮಹತ್ವದ ಯೋಜನೆಯೂ ಸಹ ಒಂದಾಗಿದೆ.

ಈ ನಿಟ್ಟಿನಲ್ಲಿ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಕರ್ನಾಟಕ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ 2,129.27 ಕೋಟಿ ರೂ ವೆಚ್ಚದಲ್ಲಿ 31.12 ಲಕ್ಷ ಶೌಚಾಲಯಗಳನ್ನು ಬಡವರಿಗಾಗಿ ನಿರ್ಮಿಸಿದೆ. 2013 ರಲ್ಲಿ 35.41% ರಷ್ಟಿದ್ದ ಶೌಚಾಲಯಗಳ ಪ್ರಮಾಣವು 2017 ರ ವೇಳೆಗೆ 74 % ಗೆ ಹೆಚ್ಚಳಗೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

Namma-Karntaka-Post_Nirmala-Bhaagya---uploaded

11 ಜಿಲ್ಲೆ, 51 ತಾಲ್ಲೂಕು, ಮತ್ತು 1900 ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟ 10,000 ಗ್ರಾಮಗಳು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿವೆ.