/ Animal Husbandry

ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ‘ಪಶುಭಾಗ್ಯ’ ಯೋಜನೆ ಪೂರಕ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತಾಪಿ ಜನರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಶುಭಾಗ್ಯ ಯೋಜನೆ ಈ ನಿಟ್ಟಿನಲ್ಲಿ ಮಹತ್ವದ್ದು. ಮಳೆ ಇಲ್ಲದೇ ಬೆಳೆ ಕೈಕೊಟ್ಟರೇನಂತೆ ಪಶು ಸಾಕಾಣಿಕೆ ರೈತರ ನೆಮ್ಮದಿಯ ಬದುಕಿಗೆ ನಾಂದಿ ಹಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ಷೀರಕ್ರಾಂತಿಯಾಗಿ, ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

ಏನಿದು ಯೋಜನೆ
ವಾಣಿಜ್ಯ ಬ್ಯಾಂಕ್‌ಗಳಿಂದ ಗರಿಷ್ಠ 1.20 ಲಕ್ಷ ದವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಸು, ಕುರಿ, ಆಡು, ಕೋಳಿ ಘಟಕಗಳನ್ನು ಸ್ಥಾಪಿಸಲು ಪಜಾ ಮತ್ತು ಪಪಂದವರಿಗೆ ಶೇ.33 ಹಾಗೂ ಇತರೆ ಜನಾಂಗದವರಿಗೆ ಶೇ.25ರಷ್ಟು ಬ್ಯಾಂಕ್‌ನಿಂದ ಸಹಾಯಧನ ಒದಗಿಸಲಾಗುತ್ತದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಿಸುವುದಲ್ಲದೆ, ಹೈನುಗಾರಿಕೆಯೂ ಉತ್ತೇಜಿಸಬಹುದು ಎಂಬುದು ಸರಕಾರದ ಉದ್ದೇಶ. ಸಹಕಾರ ಬ್ಯಾಂಕ್’ಗಳಿಂದ ಶೂನ್ಯ ಬಡ್ಡಿದರದಲ್ಲಿ 50 ಸಾವಿರ ಸಾಲವನ್ನು ಮೇವು ಖರೀದಿಸಲು ಹಾಗೂ ಇತರೆ ಕೆಲಸಗಳಿಗೆ ಕೊಡಲಾಗುತ್ತದೆ. ಸರ್ಕಾರ ಹಮ್ಮಿಕೊಳ್ಳುವ ಕಾರ್ಯಾಗಾರಗಳಲ್ಲಿ ಫಲಾನುಭವಿಗಳು ಹಾಜರಿದ್ದು, ತರಬೇತಿ ಪಡೆಯುವುದು ಕಡ್ಡಾಯವಾಗಿದೆ.

**ಕುರಿ ಮೇಕೆ ಯೋಜನೆ **
ಪಶುಭಾಗ್ಯದಡಿ ಬರುವ ಈ ಯೋಜನೆಯಲ್ಲಿ ಜನರಿಗೆ ಕುರಿ ಮತ್ತು ಮೇಕೆ ನೀಡಲಾಗುತ್ತದೆ. ಇದರಂತೆ 2016 ಮತ್ತು 2017 ವರ್ಷದಲ್ಲಿ ವಿಶೇಷ ಘಟಕ ಯೋಜನೆಯಡಿ 4, ಗಿರಿಜನ ಉಪಯೋಜನೆ ವ್ಯಾಪ್ತಿಯವರಿಗೆ 2 ಮತ್ತು ಇತರೆಯಾಗಿ 43 ಜನರನ್ನು ಆಯ್ಕೆ ಮಾಡಬೇಕೆಂದು ಗುರಿ ನೀಡಲಾಗಿದೆ. ಈ ಯೋಜನೆಯಡಿ 10 ಕುರಿ ಹಾಗೂ ಟಗರು ನೀಡಲಾಗುತ್ತದೆ. ಈ ಯೋಜನೆಯಡಿ 33,720 ರೂ. ನೀಡಲಾಗುತ್ತಿದ್ದು, ಎಸ್ಸಿ ಜನರಿಗೆ 33,720 ರೂ. ಸಬ್ಸಿಡಿ ದೊರೆಯುತ್ತದೆ. ಇತರೆ ಜನರಿಗೆ 16,800 ರೂ. ಸಹಾಯ ಧನ ದೊರೆಯುತ್ತದೆ. ಒಟ್ಟು ಈ ಯೋಜನೆಯಡಿ 9,27300 ರೂ. ಆರ್ಥಿಕ ಗುರಿ ಹೊಂದಲಾಗಿದೆ.

ಕೋಳಿ ಘಟಕ
ಈ ಯೋಜನೆಯಡಿ ಪ್ರತಿಯೊಬ್ಬರಿಗೆ ಕೋಳಿ ಘಟಕಗಳನ್ನು ನಿರ್ಮಿಸಿಕೊಳ್ಳಲು ಸಾಲದ ಮೊತ್ತದಲ್ಲಿ ಅನುದಾನ ನೀಡಲಾಗುತ್ತದೆ. ಈ ಯೋಜನೆಯಡಿ ವಿಶೇಷ ಘಟಕ ಯೋಜನೆಯಡಿ 8, ಗಿರಿಜನ ಉಪಯೋಜನೆ ವ್ಯಾಪ್ತಿಯಲ್ಲಿ 2 ಹಾಗೂ ಇತರೆ 30 ಜನರನ್ನು ಆಯ್ಕೆ ಮಾಡಬೇಕೆಂದು ಇಲಾಖೆ ಗುರಿ ನೀಡಲಾಗಿದೆ. ಈ ಯೋಜನೆಯಲ್ಲಿ ಪ್ರತಿಯೊಬ್ಬರಿಗೆ 1.20 ಸಾರ ರೂ. ಸಾಲ ನೀಡಲಾಗುತ್ತದೆ ಎಸ್ಸಿ, ಎಸ್ಟಿ ಜನರಿಗೆ 60 ಸಾರ ರೂ. ಸಹಾಯಧನ ದೊರೆತರೆ, ಇತರೆ ಜನರಿಗೆ 30 ಸಾರ ರೂ. ಸಬ್ಸಿಡಿ ದೊರೆಯಲಿದೆ.
ಯೋಜನೆಯಡಿ ಎರಡು ಹಸುಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ರೂ. 1.20 ಲಕ್ಷ ಘಟಕ ವೆಚ್ಚ ನಿಗದಿಯಾಗಿದೆ. 4 ಹಂದಿ ಸಾಕಣೆಗೆ ನೀಡಲಾಗುತ್ತಿದ್ದು, ರೂ. 94 ಸಾವಿರ ಘಟಕ ವೆಚ್ಚವಾಗಿದೆ. ಆಡು ಸಾಕಣೆಯಲ್ಲಿ 11 ಆಡುಗಳನ್ನು ನೀಡಲಾಗುತ್ತಿದ್ದು, ರೂ. 67,440 ಘಟಕ ವೆಚ್ಚ ಒದಗಿಸಲಾಗುತ್ತದೆ. ಹಾಗೆಯೇ 200 ಮಾಂಸದ ಕೋಳಿ ಸಾಕಣೆಗಾಗಿ ₹ 85 ಸಾವಿರ ಘಟಕ ವೆಚ್ಚವನ್ನು ಸರ್ಕಾರ ಭರಿಸುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.50ರಷ್ಟು ಹಾಗೂ ಇತರ ವರ್ಗದ ಜನಾಂಗದವರಿಗೆ ಶೇ.25ರಷ್ಟು ಸಹಾಯ ಧನ ದೊರಕಲಿದೆ. ಪಶುಭಾಗ್ಯ ಯೋಜನೆಯಡಿ ಕಾಲಕಾಲಕ್ಕೆ ಘಟಕ ವೆಚ್ಚವನ್ನು ಅನುಮೋದಿಸುವ ಅಧಿಕಾರವನ್ನು ಪಶುಸಂಗೋಪನಾ ಇಲಾಖೆಯ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯಡಿ ರಚಿಸಲಾಗಿರುವ ರಾಜ್ಯಮಟ್ಟದ ಮಂಜೂರಾತಿ ಮತ್ತು ಪರಿವೀಕ್ಷಣಾ ಸಮಿತಿ (ಎಸ್‌ಎಲ್‌ಎಸ್‌ಎಂಸಿ)ಗೆ ನೀಡಲಾಗಿದೆ.
ಯೋಜನೆಯಡಿ ಹೈನುಗಾರಿಕೆಗೆ ಸಂಬಂಧಪಟ್ಟಂತೆ ಮಂಜೂರಾತಿ ಪಡೆಯುವ ಎಲ್ಲಾ ಫ‌ಲಾನುಭವಿಗಳು ಕಡ್ಡಾಯವಾಗಿ ಕರ್ನಾಟಕ ಹಾಲು ಮಹಾಮಂಡಳಿಯಲ್ಲಿ ರಚಿಸಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಮಿಲ್ಕ್ ರೂಟ್ಸ್‌ ವ್ಯಾಪ್ತಿಯಲ್ಲಿ ಬರಬೇಕಿದೆ.

DSC_0783

ಅಮೃತ ಯೋಜನೆ ವಿಲೀನ
ಪಶುಭಾಗ್ಯ ಯೋಜನೆಯು ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಇಲಾಖೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ನೆರವು ನೀಡುವಂತೆ ಸೂಚಿಸಲಾಗಿದೆ. ಅಮೃತ ಯೋಜನೆಯನ್ನು ಪಶುಭಾಗ್ಯ ಯೋಜನೆಯಡಿ ವಿಲೀನಗೊಳಿಸಲಾಗಿದೆ. ಅಮೃತ ಯೋಜನೆಯ ಮೂಲ ಉದ್ದೇಶದಂತೆ ಫ‌ಲಾನುಭವಿಗಳನ್ನು ಆಯ್ಕೆ ಮಾಡುವಾಗ ವಿಧವೆಯರು, ದೇವದಾಸಿಯರು ಮತ್ತು ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ. ಒಟ್ಟಾರೆ ಪಶುಭಾಗ್ಯ ಯೋಜನೆಯ ಒಟ್ಟು ಫ‌ಲಾನುಭವಿಗಳಲ್ಲಿ ಶೇ.30ರಷ್ಟು ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿದೆ.
ಯೋಜನೆಯಡಿ ಮಂಜೂರಾತಿ ಪಡೆದ ಎಲ್ಲಾ ಫ‌ಲಾನುಭವಿಗಳಿಗೆ ಪಶುಘಟಕ ಸಾಕಾಣಿಕೆ ಕುರಿತ ತರಬೇತಿಯನ್ನು ಕಡ್ಡಾಯವಾಗಿ ನೀಡಲಾಗುತ್ತದೆ. ಫ‌ಲಾನುಭವಿಗಳ ತರಬೇತಿ ವೆಚ್ಚವನ್ನು ನ್ಯಾಷನಲ್‌ ರೂರಲ್‌ ಲೈವ್ಹುಡ್‌ ಮಿಷನ್‌ ವತಿಯಿಂದ ನೀಡಲಾಗುತ್ತಿದೆ.

“ಪಶು ಭಾಗ್ಯ ಯೋಜನೆಯಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಪಶುಭಾಗ್ಯ ಯೋಜನೆಯಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಇಲಾಖೆಯಿಂದ ಸಾಲ ಸೌಲಭ್ಯನೀಡುವ ಮೂಲಕ ರೈತರು ಸಬಲೀಕರಣಗೊಳ್ಳಲು ವಿವಿಧ ಹಂತದಲ್ಲಿ ಇಂತಹ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರಿಂದ ಸಾಮಾನ್ಯ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.”
- ಎ.ಮಂಜು, ಪಶುಸಂಗೋಪನಾ ಸಚಿವರು