/ CM

ರಾಮನಗರ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ರಾಮನಗರ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

  1. ಎಚ್‍ವಿಡಿಎಸ್ ಯೋಜನೆಯಲ್ಲಿ ಇದುವರೆಗೆ ಕನಕಪುರ ತಾಲ್ಲೂಕಿನಲ್ಲಿ 19 ಸಾವಿರ ರೈತರ ಹೊಲಗಳಲ್ಲಿ ಟ್ರಾನ್ಸ್‍ಫಾರ್ಮ್ ಗಳನ್ನು ಸ್ಥಾಪಿಸಿಕೊಡಲಾಗಿದ್ದು, ಅದಕ್ಕಾಗಿ 150 ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ. ಈ ಯೋಜನೆಯನ್ನು ರಾಮನಗರ ಹಾಗೂ ಮಾಗಡಿ ಮತ್ತು ಚನ್ನಪಟ್ಟಣಗಳಿಗೂ 355 ಕೋಟಿ ರೂ.ಗಳ ವೆಚ್ಚದಲ್ಲಿ ವಿಸ್ತರಿಸಲಾಗಿದೆ.
  2. ಮುಖ್ಯಮಂತ್ರಿಗಳ 21 ಅಂಶಗಳ ಅನುಷ್ಠಾ£ಕಾರ್ಯಕ್ರಮದಲ್ಲಿ ರಾಮನಗರ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಕೃಷಿ ಹೊಂಡ, ಚೆಕ್‍ಡ್ಯಾಂ, ದನದಕೊಟ್ಟಿಗೆ ನಿರ್ಮಾಣದಲ್ಲಿ ಕ್ರಮವಾಗಿ 15942 ಕೃಷಿ ಹೊಂಡಗಳು, 174 ಕೆರೆಯ ಪುನಶ್ಚೇತನ ಕಾಮಗಾರಿಗಳು, 4600 ಚೆಕ್‍ಡ್ಯಾಂಗಳನ್ನು ನಿರ್ಮಿಸಲಾಗಿದೆ.
  3. ಬಸವ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಇದೂವರೆಗೆ 24,960 ಮನೆಗಳನ್ನು ನಿರ್ಮಿಸಿಕೊಟ್ಟು ಶೇ. 90 ರಷ್ಟು ಪ್ರಗತಿ ಸಾಧಿಸಲಾಗಿದೆ.
  4. ರಾಮನಗರ ನಗರ ಸಭೆ ವ್ಯಾಪ್ತಿಯಲ್ಲಿ ಬಯೋ ಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದ್ದು, ಮನೆ, ಹೋಟೇಲ್, ಕಲ್ಯಾಣ ಮಂಟಪ ಸೇರಿದಂತೆ ಇತರೆಡೆ ದೊರೆಯುವ ಹಸಿ ತ್ಯಾಜವ್ಯವನ್ನು ಬಳಸಿ, ಅದನ್ನು ಮೀಥೇನ್ ಗ್ಯಾಸ್ ಆಗಿ ಪರಿವರ್ತಿಸಿ, ಪ್ರತಿ ನಿತ್ಯ 10 ಕೆ.ವಿ. ವಿದ್ಯುತ್ ಉತ್ಪಾದಿಸಲಾಗುತ್ತಿದೆ.

Ramanagar_Gok-1

  1. ಬರದ ಸಮಯದಲ್ಲಿ ಸಾರ್ವಜನಿಕರ ಕುಂದುಕೊರತೆಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ 24/7ಸಾರ್ವಜನಿಕ ಕುಂದುಕೊರತೆ ನಿವಾರಣಾ ಕೇಂದ್ರವನ್ನು ಸ್ಥಾಪಿಸಿ ಕೈ ಬೆರಳ ತುದಿಯಲ್ಲೇ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರೋಪಾಯ ನೀಡಲಾಗಿದೆ.
  2. ರಾಮನಗರ ಟೌನ್‍ನಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ 1.92 ಕೋಟಿ ರೂ.ಗಳ ವೆಚ್ಚದಲ್ಲಿ ಹಾಗೂ ಕನಕಪುರ ಟೌನ್‍ನಲ್ಲಿರುವ ಕುರುಪೇಟೆ ರುದ್ರಭೂಮಿಯಲ್ಲಿ 2.28 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣವಾಗುತ್ತಿದೆ.
  3. ಕನಕಪುರ ಬಳಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಹಾರ್ ನವೋದಯ ವಿದ್ಯಾಶಾಲೆಗೆ ಕನಕಪುರದ ಬರಡನಹಳ್ಳಿ ಗ್ರಾಮದಲ್ಲಿ 30 ಎಕರೆ ಸರ್ಕಾರಿ ಜಮೀನನ್ನು ಉಚಿತವಾಗಿ ಮಂಜೂರು ಮಾಡಲಾಗಿದೆ.

Ramanagar_INC

  1. ರಾಮನಗರ ಜಿಲ್ಲೆಯಲ್ಲಿ ವಿವಿಧ ಕೋರ್ಸ್‍ಗಳ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲು ಅವಶ್ಯಕವಿರುವ ಜಮೀನಿನ ಕೊರೆತೆಯಿಂದಾಗಿ ವಿಳಂಬವಾಗಿದ್ದು, ಇದನ್ನು ಮನಗಂಡು ರಾಮನಗರದ ವಾಟರ್ ಟ್ಯಾಂಕ್ ಸಮೀಪದ ಜಿ.ಕೆ.ಎಂ.ಪಿ.ಎಸ್ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ತರಗತಿಗಳನ್ನು ಆರಂಭಿಸಲಾಗಿದೆ. ಪ್ರಥಮ ಎಂ.ಎ. ಹಾಗೂ ಎಂ.ಕಾಂ ತರಗತಿಗಳು ನಡೆಯುತ್ತಿವೆ.
  2. ಕನಕಪುರದಲ್ಲಿ 3.50 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಈಗಾಗಲೇ ನಿರ್ಮಿಸಲಾಗಿದ್ದು ರಾಮನಗರದ ಅರ್ಚಕರಹಳ್ಳಿ ಬಳಿ 10 ಎಕರೆ ಜಾಗದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣದ ಯೋಜನೆಯನ್ನು ರೂಪಿಸಲಾಗಿದೆ.

R

  1. 2013-14 ರಿಂದ ಇದೂವರೆಗೂ 783.56 ಕೋಟಿ ರೂ.ಗಳನ್ನು ವೆಚ್ಚಮಾಡಿ, ಒಟ್ಟು 1,17,979 ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ಒಟ್ಟು 8,175 ಸಮುದಾಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆಸ್ತಿಗಳನ್ನು ಸೃಜಿಸಲಾಗಿದೆ. ಯೋಜನೆಯಡಿ ಜಿಲ್ಲೆಯ 1.59 ಲಕ್ಷ ಕುಟುಂಬಗಳ ನೋಂದಣಿಯಾಗಿದ್ದು, 4.14 ಲಕ್ಷ ಕೂಲಿ ಕಾರ್ಮಿಕರು ಈ ಯೋಜನೆಯಿಂದ ಲಾಭ ಪಡೆದಿದ್ದಾರೆ.
  2. ರಾಮನಗರ ಇದೀಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಅಕ್ಟೋಬರ್ 2 ರಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಜಿಲ್ಲೆಯಲ್ಲಿನ 1,68,966 ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಇದೇ ಅಕ್ಟೋಬರ್ 02ರ ಅಂತ್ಯಕ್ಕೆ ಶೆ.100ರಷ್ಟು ಪ್ರಗತಿ ಸಾಧಿಸಲಾಗಿದೆ.

#NavaKarnatakaNirmana

ಈ ವೀಡಿಯೋ ವೀಕ್ಷಿಸಿ

Ramnagar--K2

Ramnagar-K1

Ramnagar-K3

Ramnagar-K4

Ramnagar-K5

Ramnagar-K6

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ