/ Ramthal Marol

ರಾಮತಾಳ-ಮರೋಳ : ಏಷ್ಯಾದ ಅತಿ ದೊಡ್ಡ ಹನಿನೀರಾವರಿ ಯೋಜನೆ

ಈ ಯೋಜನೆಯ ಮಹತ್ವ -
. ಕೇವಲ 2.77 ಟಿಎಂಸಿ ನೀರನ್ನು ಬಳಸಿಕೊಂಡು 60,000 ಎಕರೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಯೋಜನೆ ಇದಾಗಿದೆ
. ರೈತರಿಗೆ ಹೆಚ್ಚಿನ ಬೆಲೆಯ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ
. ಸಾಮಾನ್ಯ ನೀರಾವರಿಗಿಂತ 50% ನೀರನ್ನು ಹನಿ ನೀರಾವರಿಯು ಉಳಿಸುತ್ತದೆ.
. ಇದು ಏಷ್ಯಾದಲ್ಲೇ ಅತಿ ದೊಡ್ಡ ಪ್ರಮಾಣದ ನೀರಾವರಿ ಯೋಜನೆಯಾಗಿದೆ.

ರಾಮತಾಳ-ಮರೋಳ ನೀರಾವರಿ ಯೋಜನೆ
ಅವಶ್ಯಕ ಪ್ರದೇಶಗಳಲ್ಲಿ ನೀರಿನ ಸಮರ್ಥ ಬಳಕೆಯು ಕೇವಲ ಬೆಳೆಯ ಹೆಚ್ಚಿಸುವುದು ಮಾತ್ರವಲ್ಲದೇ ಹೆಚ್ಚಿನ ಪ್ರದೇಶದ ಕೃಷಿಗೆ ನೀರನ್ನು ಒದಗಿಸುತ್ತದೆ. ನೀರಿನ ಅಭಾವ ಇರುವ ನಮ್ಮ ರಾಜ್ಯದ ಒಳಿತಿಗಾಗಿ ಕರ್ನಾಟಕ ಸರ್ಕಾರವು ಏಷ್ಯಾದ ಅತಿ ದೊಡ್ಡ ರಾಮತಾಳ-ಮರೋಳ ನೀರಾವರಿ ಯೋಜನೆಯ 2 ನೇ ಹಂತದ ಕಾಮಗಾರಿಗೆ ಚಾಲನೆ ನೀಡಿದೆ.

file670_0

ಈ ಯೋಜನೆಯಡಿಯಲ್ಲಿ ಸಣ್ಣ ನೀರಾವರಿ ಕಲ್ಪನೆಯ ಮೂಲಕ ಹೆಚ್ ಡಿ ಪಿ ಇ/ಪಿವಿಸಿ ಪೈಪುಗಳನ್ನು ಬಳಸಿಕೊಂಡು 60,000 ಎಕರೆಗೆ ನೀರು ಹಾಯಿಸುವುದರ ಮೂಲಕ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ 20,000 ರೈತರಿಗೆ ಅನುಕೂಲ ಮಾಡಿಕೊಡುವ ದೊಡ್ಡ ಉದ್ದೇಶವನ್ನು ಹೊಂದಿದೆ. ಇದು ಸಾಂಪ್ರದಾಯಿಕ ನೀರಾವರಿ ಪದ್ದತಿಗಿಂತ ಅನುಕೂಲಕಾರಿಯಾಗಿದ್ದು ಬಹುತೇಕ ಎರಡು ಪಟ್ಟು ಭೂ ಪ್ರಮಾಣಕ್ಕೆ ನೀರಾವರಿ ಅನುಲೂಲವನ್ನು ಉಂಟುಮಾಡಲಿದೆ.

ಇದು ಸ್ವಲ್ಪ ವೆಚ್ಚದಾಯಕ ಯೋಜನೆಯಾದರೂ ಸಹ ಬಳಕೆಯ ದೃಷ್ಟಿಯಲ್ಲಿ ಎರಡು ಪಟ್ಟು ಅನುಕೂಲವನ್ನು ಹೊಂದಿದ್ದು ದೀರ್ಘ ಕಾಲದ ನೀರಾವರಿ ಯೋಜನೆಯಾಗಿದೆ. ಇಲ್ಲಿ ವಿದ್ಯುತ್ ನ ಉಳಿತಾಯಕ್ಕೆ ಅನುಗುಣವಾಗಿಯೂ ಸಹ ಯೋಜನೆಯನ್ನು ರೂಪಿಸಲಾಗಿದೆ. ಸಮರ್ಪಕ ನೀರಿನ ಪೂರೈಕೆಗೆ ಅನುಗುಣವಾಗಿರುವ ಈ ಯೋಜನೆಯಿಂದಾಗಿ ರೈತರು ಹೆಚ್ಚಿನ ಬೆಲೆಯ ವಾಣಿಜ್ಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬಹುದಾಗಿದ್ದು, ಇದರಿಂದ ರಸಗೊಬ್ಬರ ಹಾಗೂ ಕೂಲಿಯ ವೆಚ್ಚವೂ ಉಳಿತಾಯವಾಗಲಿದೆ.

Namma-Karntaka-Post_Ramthol-Marol---Uploaded