/ water resources

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲದ ವೃದ್ಧಿ

ಕೆಸಿ ವ್ಯಾಲಿ ಯೋಜನೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರದಲ್ಲಿ ಸತತವಾಗಿ ಮುಂಗಾರು ವಿಫಲವಾಗಿದ್ದರಿಂದ ಅಂತರ್ಜಲಮಟ್ಟವು ಗಣನೀಯವಾಗಿ ಕುಸಿದಿತ್ತು. ಈ ತೊಂದರೆಯನ್ನು ನಿವಾರಿಸಲು ರಾಜ್ಯ ಸರ್ಕಾರವು 2017ರಲ್ಲಿ ಬೆಂಗಳೂರಿನಿಂದ ಪರಿಷ್ಕರಿಸಿದ ನೀರನ್ನು ಬತ್ತಿದ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸರ್ಕಾರವು ಹೊಸ ಯೋಜನೆಯನ್ನು ರೂಪಿಸಿತ್ತು. ಇವುಗಳಲ್ಲಿ ಕೆಸಿ ವ್ಯಾಲಿ ಯೋಜನೆ ಕೂಡ ಒಂದಾಗಿದೆ.

C9mWYLSXcAAW15p

ಬೆಂಗಳೂರಿನಿಂದ ತಮಿಳುನಾಡಿಗೆ ವ್ಯರ್ಥವಾಗಿ ಹರಿದುಹೋಗುವ ಕೊಳಚೆ ನೀರನ್ನು ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಸಂಪೂರ್ಣವಾಗಿ ಶುದ್ಧೀಕರಿಸಿ ಹರಿಸುವ ಕೆ.ಸಿ ವ್ಯಾಲಿಯ ಯೋಜನೆಗೆ 1,280 ಕೋಟಿ ರೂ ಅನುದಾನವನ್ನು ನೀಡಲಾಗಿದೆಕೆ.ಸಿ ವ್ಯಾಲಿ ಯೋಜನೆ ಕುರಿತು ಸಾರ್ವಜನಿಕ ವಲಯದಲ್ಲಿ ಯಾವುದೇ ಅನುಮಾನಕ್ಕೆ ಆಸ್ಪದ ಕೊಡದೇ ಮೂರು ಹಂತಗಳಲ್ಲಿ ನೀರನ್ನು ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುವುದು. ಕೆರೆಗಳಲ್ಲಿ ನೀರು ತುಂಬಿ ಅಂತರ್ಜಲ ಮರುಭರ್ತಿಗೆ ಅವಕಾಶ ಮಾಡಿ ಕೊಡುವ ಮೂಲಕ ಎರಡೂ ಜಿಲ್ಲೆಗಳ ನೀರಿನ ಬವಣೆಗೆ ಮಂಗಳ ಹಾಡಲು ಈ ಯೋಜನೆಯು ಸಹಕಾರಿಯಾಗಿದೆ.

Namma-Karntaka-Post_Valley-Project

ಪ್ರಪ್ರಥಮ ಯೋಜನೆ
ಸಿದ್ದರಾಮಯ್ಯ ಸರ್ಕಾರದ ಈ ಯೋಜನೆಯು ದೇಶದಲ್ಲಿಯೇ ಪ್ರಪ್ರಥಮವಾಗಿ ರೂಪುಗೊಂಡಿರುವಂತಹ ಯೋಜನೆಯಾಗಿದೆ. ಕೊಳಚೆ ನೀರನ್ನು ಸಂಸ್ಕರಿಸಿ ಕೋರಮಂಗಲ, ಚಲ್ಲಘಟ್ಟದಿಣದ ಹರಿದು ಹೋಗುವ ನೀರನ್ನು ಕೋಲಾರ, ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಕೆರೆಯನ್ನು ತುಂಬಿಸುವ ಯೋಜನೆ ಇದಾಗಿದೆ. 8 ಟಿಎಂಸಿ ನೀರು ಈಗ ತ್ಯಾಜ್ಯವಾಗಿ ಹರಿಯುತ್ತಿದ್ದು, ಇದನ್ನು ಪುನರ್ ಬಳಕೆಯನ್ನು ಮಾಡಿಕೊಳ್ಳುವ ಕೆಸಿ ವ್ಯಾಲಿ ಯೋಜನೆ ಸಹಾಯಕವಾಗಲಿದೆ.
ಸುಮಾರು 40 ಲಕ್ಷ ಲೀ. ನೀರನ್ನು ಪ್ರತಿದಿನ ಪರಿಷ್ಕರಿಸಿ 85 ಕಿ.ಮೀ ಉದ್ದದ ಕೊಳವೆ ಮೂಲಕ ಬೆಂಗಳೂರಿನಲ್ಲಿ ಎರಡು ಹಂತ ಮತ್ತು ಕೋಲಾರಕ್ಕೂ ಮುನ್ನ ಮೂರನೇ ಹಂತದಲ್ಲಿ ಪರಿಷ್ಕರಿಸಲ್ಪಟ್ಟು ಕೋಲಾರದ ಕೆರೆಗಳಿಗೆ ನೀರು ತಲುಪುತ್ತದೆ.
ಈ ಕಾರ್ಯಕ್ರಮದಡಿ ಈಗಾಗಲೇ ಕೋಲಾರಮ್ಮ ಮತ್ತು ಕೋಡಿ ಕಣ್ನೂರು ಮತ್ತು ಮಾಲೂರಿನ ಶಿವಾರಪಟ್ಟಣ, ಬಂಗಾರಪೇಟೆ ಇಜುವನ ಹಳ್ಳಿಗಳು ಸೇರಿದ್ದು ಹೆಚ್ಚಿನ ಪ್ರಯೋಜನವನ್ನು ಪಡೆಯಲಿವೆ.
ರಾಜ್ಯದ ಇತಿಹಾಸದಲ್ಲೇ ಮೊದಲಬಾರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಯೋಜನೆ ತಯಾರಿಸಿ,ಆಲೋಚಿಸಿ,ತಜ್ಞರ ವರದಿ,ಆಡಳಿತಾತ್ಮಕ,ಆರ್ಥಿಕ ಮಂಜೂರಾತಿ ಪಡೆದು ಜಿಲ್ಲೆಯ 126 ಕೆರೆಗಳಿಗೆ ನೀರು ತುಂಬಿಸುವ ಕೆಸಿ ವ್ಯಾಲಿ ಕಾಮಗಾರಿಯು ಶರವೇಗದಿಂದ ನಡೆಯುತ್ತಿದ್ದು,2017ರೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ.