/ #achievements

ಋಣ ಮುಕ್ತ ಯೋಜನೆ

ಸಾಲದ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವ ಬಡವರನ್ನು ಸಾಲದ ಹೊರೆಯಿಂದ ಮುಕ್ತವಾಗಿಸಲು ಮುಖ್ಯಮಂತ್ರಿ ಶ್ರೀ. ಸಿದ್ದರಾಮಯ್ಯ ಅವರು “ಋಣ ಮುಕ್ತ” ಯೋಜನೆಯನ್ನು ಘೋಷಣೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಬಡತನದಲ್ಲಿ ಬೆಂದು ಇನ್ನೇನೂ ಸಾಲವನ್ನು ಪಾವತಿಸಲಾಗದೇ ಸ್ಥಿತಿಯಲ್ಲಿರುವಂತಹ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಜನರಿಗೆ ಹೊಸ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಪೂರಕವಾಗುವಂತೆ ಅವರು 977.42 ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದ್ದು ಅವರನ್ನು ಹೊರೆ ಮುಕ್ತರನ್ನಾಗಿ ಮಾಡಲಾಗಿದೆ.

Runamuktha

ಸಾಲ ಮನ್ನಾ ಕಾರ್ಯಕ್ರಮದಡಿಯಲ್ಲಿಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 13 ಮೇ 2013 ರಿಂದ ಸಾಲ ಪಡೆದುಕೊಂಡ 1.86 ಲಕ್ಷ ಫಲಾನುಭಿವಗಳ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಲಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಬುಡಕಟ್ಟು ಪಂಗಡ ಅಭಿವೃದ್ಧಿ ಮಂಡಳಿ ವತಿಯಿಂದ 40,000 ಬುಡಕಟ್ಟು ಪಂಗಡದ ಜನರ ಒಟ್ಟು 68.69 ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದ್ದು ಲಿಡ್ಕರ್ ನಿಗಮದಿಂದ ಪಡದುಕೊಂಡ ಒಟ್ಟು 3.14 ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಎಲ್ಲಾ ಸಾಲ ಯೋಜನೆಗಳ ಅಡಿಯಲ್ಲಿ ಒಟ್ಟು 4.98 ಲಕ್ಷ ಫಲಾನುಭಬಿಗಳ 514 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ.