/ department

ರೇಷ್ಮೆ ಇಲಾಖೆ

ಕರ್ನಾಟಕ ರಾಜ್ಯವು ಮೈಸೂರು ರೇಷ್ಮೆಯ ವೈಭವ ಮತ್ತು ಘನತೆಗೆ ಹೆಸರಾಗಿದೆ.

ರೇಷ್ಮೆ ಉದ್ಯಮವು ರಾಜ್ಯದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿದೆ. ಇದು ಕೃಷಿ ಮತ್ತು ಶ್ರಮ ಆಧಾರಿತವಾದ ಮತ್ತು ಹೆಚ್ಚಿನ ವಾಣಿಜ್ಯ ಮೌಲ್ಯವುಳ್ಳ ಚಟುವಟಿಕೆಯಾಗಿದ್ದು13 ಲಕ್ಷ ಕುಟುಂಬಗಳು ಈ ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದು ಇದರಲ್ಲಿ 7634 ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿದ್ದಾರೆ. ಒಂದು ಹೆಕ್ಟೇರ್ ಪ್ರದೇಶದಿಂದ ವರ್ಷವಿಡೀ 13 ಜನರಿಗೆ ಸತತವಾದ ಉದ್ಯೋಗ ದೊರಕುತ್ತದೆ. ಇಲಾಖೆಯು ರೇಷ್ಮೆ ಸಚಿವರಾದ ಎ.ಮಂಜು ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

ದಾಖಲೆ ಪ್ರಮಾಣದಲ್ಲಿ ರೇಷ್ಮೆ ಉತ್ಪಾದನೆ
ಕಳೆದ ನಾಲ್ಕು ವರ್ಷಗಳಲ್ಲಿ ರೇಷ್ಮೆ ಉತ್ಪಾದನೆ ಮಟ್ಟವು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿದ್ದು ಕೃಷಿ ಪ್ರದೇಶವು 74,128 ರಿಂದ 2017 ರ ಹೊತ್ತಿಗೆ 91,412 ಎಕರೆಗಳಷ್ಟಾಗಿದೆ. 2015 -16 ರಲ್ಲಿ 9,823 ಟನ್ ಗಳಷ್ಟು ದಾಖಲೆ ಪ್ರಮಾಣದ ರೇಷ್ಮೆಯನ್ನು ಉತ್ಪಾದಿಸಲಾಗಿದ್ದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಪ್ಪಿತವಾದಂತಹ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸಲಾಗುತ್ತಿದೆ.
ಇಂತಹ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯು ಇದೀಗ ಮೂರುಪಟ್ಟು ಹೆಚ್ಚಾಗಿದೆ, 2012-13 ರಲ್ಲಿ 572 ಟನ್ ಗಳಷ್ಟು ಉತ್ಪಾದನೆ ಹೊಂದಿದ್ದ ಇದರ ಪ್ರಮಾಣವು 2016-17 ರ ಹೊತ್ತಿಗೆ 1,488 ಗಳಷ್ಟು ಪ್ರಮಾಣದಲ್ಲಿ ಉತ್ಪಾದನಾ ಹೇರಿಕೆಯನ್ನು ಕಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 4,589 ಮೆಟ್ರಿಕ್ ಟನ್ ಗಳಷ್ಟು ರೇಷ್ಮೆಯನ್ನು ಉತ್ಪಾದನೆ ಮಾಡಲಾಗಿದ್ದು ಇದು ಸರ್ವ ಕಾಲಿಕ ಉತ್ಪಾದನೆ ದಾಖಲೆಯಾಗಿದೆ. ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಸರ್ಕಾರವು ರೇಷ್ಮೆ ಉತ್ಪಾದಕರಿಗೆ ಕಳೆದ ನಾಲ್ಕು ವರ್ಷಗಳಲ್ಲಿ 214 ಕೋಟಿ ರೂಪಾಯಿಗಳಷ್ಟು ಪ್ರೋತ್ಸಾಹ ಧನವನ್ನು ನೀಡಿದೆ.

ಪಾರದರ್ಶಶಕ ಬೆಲೆಗಾಗಿ ಇ-ಮಂಡಿ ಯೋಜನೆ
ರೇಷ್ಮೆ ಹರಾಜು ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ತಂದು ರೈತರಿಗೆ ನ್ಯಾಯಯುತ ಬೆಲೆಯನ್ನು ಒದಗಿಸಲು ಇ-ಮಂಡಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅದನ್ನು ಕೊಳ್ಳೇಗಾಲ, ಚನ್ನ ಪಟ್ಟಣ, ರಾಮನಗರ, ಶಿಡ್ಲಘಟ್ಟ, ವಿಜಯಪುರ ಮತ್ತು ಕನಕಪುರದ ಮಾರುಕಟ್ಟೆಯಲ್ಲಿ ಈಗಾಗಲೇ ಜಾರಿಗೊಳಿಸಲಾಗಿದೆ.
ಶೀಥಲೀಕರಣ ಘಟಕಗಳು :
ಬೀಜ ಉತ್ಪಾದನೆಯಲ್ಲಿ ಗುಣಮಟ್ಟ ನಿಯಂತ್ರಣವನ್ನು ಖಾತರಿಪಡಿಸಲು ತುಮಕೂರು, ಚನ್ನಪಟ್ಟಣ, ಹಾಸನ ಮತ್ತು ಮಂಡ್ಯದಲ್ಲಿ ಶಿಥಲೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಹಾಗೂ ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಈ ಘಟಕಗಳನನ್ಉ ಸ್ಥಾಪನೆ ಮಾಡಲಾಗುತ್ತಿದೆ.

Namma-Karntaka-Sericulture-1

ಪಾವಗಡದಲ್ಲಿ ರೇಷ್ಮೆಗೂಡು ಬ್ಯಾಂಕ್
ಕೃಷಿಕರನ್ನು ಮಾರುಕಟ್ಟೆ ತೊಂದರೆಗಳಿಂದ ತಪ್ಪಿಸಲು ಸರ್ಕಾರವು ಪಾವಗಡ ತಾಲ್ಲೂಕಿನಲ್ಲಿ ರೇಷ್ಮೆಗೂಡು ಘಟಕವನ್ನು ಸ್ಥಾಪಿಸಿದ್ದು ಬೆಳೆಗಾರರು ತಮ್ಮ ಗೂಡುಗಳನ್ನು ಸ್ಟೋರೇಜ್ ಗಳಲ್ಲಿಟ್ಟುಕೊಂಡು ಬೆಲೆ ಏರಿಕೆ ಆದ ವೇಳೆ ಮಾರಾಟ ಮಾಡಲು ಇದು ಸಹಕಾರಿಯಾಗಿದೆ. ಇಲಾಖೆಯು ಬೆಳೆಗಾರರಿಗೆ ಸಹಾಯವಾಗುವಂತೆ ಬೆಳೆ ನಿಗದಿಯನ್ನೂ ಸಹ ಮಾಡಿದೆ.

ಯುವಕರಿಗೆ ತರಬೇತಿ
ಇಲಾಖೆಯ ವತಿಯಿಂದ ಗ್ರಾಮೀಣ ವಲಯದಲ್ಲಿ ಡಿಪ್ಲೋಮಾ ಪದವಿ ಪಡೆದವರಿಗೆ ರೇಷ್ಮೆ ಕೃಷಿಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತರಬೇತಿಯನ್ನು ಪಡೆಯಲು ಹಣಕಾಸಿನ ನೆರವನ್ನು ನೀಡಲಾಗುತ್ತಿದ್ದು ಕೇಂದ್ರ ರೇಷ್ಮೆ ಮಂಡಳಿಯು ಇದನ್ನು ನಿರ್ವಹಿಸುತ್ತಿದೆ.

ಎರಡನೇ ನೇಯ್ಗೆ ಕಾರ್ಖಾನೆ ಸ್ಥಾಪನೆ
ಸರ್ಕಾರವು ಆರಂಭಿಕ ಅನುದಾನ 5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಮೂಲಕ (ಕೆ ಎಸ್ ಐಸಿ) ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆಯ ಎರಡನೇ ಘಟಕ ಸ್ಥಾಪನೆಗೆ ಅಸ್ತು ಎಂದಿದ್ದು ಇದರ ಅಂದಾಜು ವೆಚ್ಚ 24 ಕೋಟಿ ರೂಪಾಯಿಗಳಾಗಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Sericulture