/ CM

ಶಿವಮೊಗ್ಗ ಜಿಲ್ಲೆಗೆ ರಾಜ್ಯ ಸರ್ಕಾರದ ಕೊಡುಗೆಗಳು

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಶಿವಮೊಗ್ಗ ಜಿಲ್ಲೆಯು ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದ್ದು ಜಿಲ್ಲೆಗಾಗಿ ಈ ಕೆಳಕಾಣಿಸಿದಂತೆ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗಿದೆ.

 1. ಸರ್ಕಾರಿ ಭೂಮಿಯಲ್ಲಿ ವಾಸವಿದ್ದು ಹಕುಪತ್ರ ಹೊಂದಿಲ್ಲದವರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 94ಸಿ ಯಡಿ ಗ್ರಾಮಾಂತರ ಪ್ರದೇಶದಲ್ಲಿ 7,343 ಹಾಗೂ 94ಸಿಸಿಯಡಿ ನಗರ ಪ್ರದೇಶದಲ್ಲಿ 1,447 ಹಕ್ಕುಪತ್ರಗಳನ್ನು ವಿತರಿಸಲಾಗಿದೆ.
 2. ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿಗೆ ಆನಂದಪುರ ಬಳಿಯ ಇರುವಕ್ಕಿಯಲ್ಲಿ ಸರ್ಕಾರ 777 ಎಕರೆ ಭೂಮಿ ಮಂಜೂರು ಮಾಡಿದೆ. 155.33 ಕೋಟಿ ರೂ. ಅನುದಾನವನ್ನೂ ಮಂಜೂರು ಮಾಡಿದೆ.
 3. ರೈತರಿಗೆ ಕೃಷಿ ಯಂತ್ರೋಪಕರಣ ಖರೀದಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ರೂ. 6,388.06 ಲಕ್ಷ ಸಹಾಯಧನವನ್ನು ವಿನಿಯೋಗಿಸಿಕೊಂಡು ಒಟ್ಟು 4,095 ಪವರ್ ಟಿಲ್ಲರ್‍ಗಳನ್ನು ಹಾಗೂ 20,709 ವಿವಿಧ ಹೈಟೆಕ್ ಯಂತ್ರೋಪಕರಣಗಳನ್ನು ರೈತರಿಗೆ ಸಹಾಯಧನ ರೂಪದಲ್ಲಿ ವಿತರಿಸಲಾಗಿರುತ್ತದೆ.
 4. ರಿಯಾಯತಿ ದರದಲ್ಲಿ ಬಿತ್ತನೆ ಬೀಜವನ್ನು ಜಿಲ್ಲೆಯ 40 ರೈತ ಸಂಪರ್ಕ ಕೇಂದ್ರಗಳು ಹಾಗೂ ಹೆಚ್ಚುವರಿ 47 ಕೇಂದ್ರಗಳ ಮುಖಾಂತರ ಸಕಾಲದಲ್ಲಿ ವಿತರಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 71,240.6 ಕ್ವಿಂಟಾಲ್ ಬಿತ್ತನೆ ಬೀಜವನ್ನು ರಿಯಾಯತಿ ದರಲ್ಲಿ ವಿತರಿಸಲಾಗಿರುತ್ತದೆ.
 5. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಅಡಿಯಲ್ಲಿ, ಕಳೆದ 4 ವರ್ಷಗಳಲ್ಲಿ 40,387 ಫಲಾನುಭವಿಗಳಿಗೆ ರೂ. 2,148.88 ಲಕ್ಷಗಳ ಸಹಾಯಧನವನ್ನು ನೀಡಲಾಗಿದೆ. ಅದೇ ರೀತಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ವಯ ಹನಿ ನೀರಾವರಿಯಲ್ಲಿ ಕಳೆದ 4 ವರ್ಷಗಳಲ್ಲಿ 7,016 ಫಲಾನುಭವಿಗಳಿಗೆ ರೂ. 1,612.24 ಲಕ್ಷಗಳ ಸಹಾಯಧನವನ್ನು ನೀಡಲಾಗಿದೆ.

Shimoga-1

 1. ತೋಟಗಾರಿಕಾ ಪ್ರದೇಶ ವಿಸ್ತರಣೆ, ಕೃಷಿಹೊಂಡ ನಿರ್ಮಾಣ, ಪ್ಯಾಕ್‍ಹೌಸ್, ಪ್ರಾಥಮಿಕ ಸಂಸ್ಕರಣಾ ಘಟಕವನ್ನು ನಿರ್ಮಿಸಿದ ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದ್ದು, ಕಳೆದ 4 ವರ್ಷಗಳಲ್ಲಿ 7,226 ಫಲಾನುಭವಿಗಳಿಗೆ ರೂ. 1,525.51 ಲಕ್ಷಗಳ ಸಹಾಯಧನವನ್ನು ನೀಡಲಾಗಿದೆ.
 2. ಪಶುಪಾಲನಾ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 50 ಹಾಗೂ ಇತರೆ ಜನಾಂಗದವರಿಗೆ ಶೇ. 25 ಸಹಾಯಧನ ಒದಗಿಸಿ ಒಟ್ಟು ಜಿಲ್ಲೆಗೆ ವಿವಿಧ ಘಟಕಗಳಿಗೆ ರೂ. 262.13 ಲಕ್ಷ ಅನುದಾನ ಬಿಡುಗಡೆ ಮಾಡಿ, 904 ಫಲಾನುಭವಿಗಳಿಗೆ ಒದಗಿಸಲಾಗಿದೆ.
 3. ಜಿಲ್ಲೆಯಲ್ಲಿ 14,835 ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಗಿದೆ. 1,34,325 ವಿದ್ಯಾರ್ಥಿಗಳಿಗೆ ಒಂದು ಜೊತೆ ಬೂಟು ಮತ್ತು ಎರಡು ಜೊತೆ ಕಾಲುಚೀಲ ವಿತರಿಸಲಾಗಿದ್ದು, ಒಟ್ಟು ರೂ. 3,23,76,850 ವೆಚ್ಚ ಮಾಡಲಾಗಿದೆ. 1,39,737 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ನೀಡಲಾಗಿದೆ. ಅಲ್ಲದೆ ಮಕ್ಕಳಿಗೆ 13,34,232 ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ.

Shimoga-INCK

 1. ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 3,357 ವೈಯುಕ್ತಿಕ ಫಲಾನುಭವಿಗಳ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಾಣ ಮಾಡಿದ್ದು, ಸುಮಾರು ರೂ. 2,350.00 ಲಕ್ಷ ವೆಚ್ಚ ಭರಿಸಲಾಗಿದೆ.
 2. ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಲ್ಲಿ 1,277 ಕೆರೆಗಳ ಹೂಳೆತ್ತುವ/ ಕೋಡಿ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, 1,319 ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಒಟ್ಟು ರೂ. 5,127 ಲಕ್ಷಗಳ ವೆಚ್ಚ ಭರಿಸಲಾಗಿರುತ್ತದೆ.
 3. ಗಂಗಾ ಕಲ್ಯಾಣ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಸಣ್ಣ ಪ್ರಮಾಣದ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 1,408 ಜನ ಫಲಾನುಭವಿಗಳಿಗೆ 521.85 ಲಕ್ಷ ರೂ.ಗಳನ್ನು ವಿತರಿಸಲಾಗಿದ್ದು ಜಿಲ್ಲೆಯ 15,532 ಜನ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ 1,410.82 ಲಕ್ಷ ರೂ. ಸಾಲ ಮನ್ನಾ ಮಾಡಲಾಗಿದೆ.
 4. ಶಿವಮೊಗ್ಗ ಜಿಲ್ಲೆಯ ತಾಲೂಕಿನಲ್ಲಿ 32 ಕೆರೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ತುಂಗಾ ನದಿ ನೀರನ್ನು ಐಹೊಳೆ, ಬಾರೇಹಳ್ಳಿ ಮತ್ತು ಗೌಡನಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂ. 87.71 ಕೋಟಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು. ರೂ. 73.12 ಕೋಟಿ ವೆಚ್ಚ ಮಾಡಲಾಗಿರುತ್ತದೆ.

Shimogga

 1. ಗೊಂದಿಕಾಲುವೆ ಆಧುನೀಕರಣ ಯೋಜನೆಯ ಭಾಗವಾಗಿ 130 ಕೋಟಿ ರೂ.ಗಳ ವೆಚ್ಚದಲ್ಲಿ ಗೊಂದಿ ಅಣೆಕಟ್ಟೆ ನೀರಾವರಿ ಕಾಲುವೆಗಳ ಸಮಗ್ರ ಆಧುನೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಬರುವ ಈ ಅಣೆಕಟ್ಟೆಯು 14.7 ಕಿ.ಮೀ. ಎಡದಂಡೆ ಮತ್ತು 74.4 ಕಿ.ಮೀ., ಬಲದಂಡೆ ಕಾಲುವೆ ಒಳಗೊಂಡಿದೆ. ಈ ಅಣೆಕಟ್ಟೆಯು 4,600 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ.
 2. ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿ ನಿಲಯ ಸೌಲಭ್ಯ ದೊರೆಯದ ಮೆಟ್ರಿಕ್ ನಂತರದ 14,274 ವಿದ್ಯಾರ್ಥಿಗಳಿಗೆ ಒಟ್ಟು 1,216.07 ಲಕ್ಷ ರೂ.ಗಳನ್ನು ಅವರ ಊಟ ಮತ್ತು ವಸತಿಗಾಗಿ ಮಂಜೂರು ಮಾಡಲಾಗಿದೆ.
 3. ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿಗೆ ವಿಸಿಐ ಮಾನ್ಯತೆ ದೊರಕಿಸಿಕೊಡುವ ಮೂಲಕ ರಾಜ್ಯ ಸರ್ಕಾರ ನೂರಾರು ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡಿದೆ. ಮಾನ್ಯತೆಯೇ ಇಲ್ಲದ ಕಾರಣ ಉದ್ಯೋಗ ದೊರೆಯದ ಭೀತಿಯಿಂದ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದರು.
 4. ಇನ್ನು ಅನ್ನಭಾಗ್ಯ, ಕ್ಷೀರ ಭಾಗ್ಯ ಹಾಗೂ ಮಾತೃಪೂರ್ಣ ಯೋಜನೆಗಳು ಬಡವರ ಹಸಿವನ್ನು ತಣಿಸುವ ಕೆಲಸವನ್ನು ಮಾಡುತ್ತಿದ್ದು, ಅಪೌಷ್ಠಿಕತೆಯ ಪ್ರಮಾಣವು ಗಣನೀಯವಾಗಿ ಇಳಿಕೆ ಕಂಡಿದೆ.

#NavaKarnatakaNirmana

DS1kdosVQAEcBCh

DS2zasfV4AE922P

DS3A438U8AAjqCJ

DS25paWV4AAFe2m

Please click here to see Taluk Wise Development Data

ಈ ವೀಡಿಯೋ ವೀಕ್ಷಿಸಿ