/ social welfare

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಸಮಾಜ ಕಲ್ಯಾಣ ಇಲಾಖೆ ಪ.ಜಾತಿಗಳು ಮತ್ತು ಪ.ಪಂಗಡಗಳ ಅಭಿವೃದ್ಧಿಗೆ ಮತ್ತು ಐತಿಹಾಸಿಕವಾಗಿ ತಾರತಮ್ಯ ಎದುರಿಸುತ್ತಿರುವ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 2011 ರ ಜನಗಣತಿಯ ಪ್ರಕಾರ ರಾಜ್ಯದ 6.10 ಕೋಟಿ ನಿವಾಸಿಗಳಲ್ಲಿ ಪ.ಜಾತಿಯಲ್ಲಿ 1.04 ಕೋಟಿ ಮತ್ತು ಪ.ಪಂಗಡದಲ್ಲಿ 42.48 ಲಕ್ಷ ಜನರಿದ್ದಾರೆ.

2013 ರಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಐತಿಹಾಸಿಕ ಕಾಯಿದೆಯಾದ ಕರ್ನಾಟಕ ಪ.ಜಾತಿಯ ಉಪ ಯೋಜನೆ ಮತ್ತು ಪ.ಪಂಗಡಗಳ ಉಪ ಯೋಜನೆ ಕಾಯಿದೆ ಜಾರಿಗೆ ತರಲಾಗಿದೆ. ಈ ಸಮುದಾಯಗಳ ಜನಸಂಖ್ಯೆ ಆಧಾರದ ಮೇಲೆ ಬಜೆಟ್‍ನಲ್ಲಿ ಶೇ. 24.10 ರಷ್ಟು ಹಣವನ್ನು ಎಸ್ಸಿ/ಎಸ್ಟಿಯವರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. 2013-14 ರಿಂದ 2016-17ರ ಅವಧಿಯಲ್ಲಿ ಈ ಯೋಜನೆಯಡಿ 47,186 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. 2017-18ರಲ್ಲಿ ಇಲಾಖೆಗೆ ಒಟ್ಟು 6,363 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಈ ಅನುದಾನದಿಂದ ಶಿಕ್ಷಣ, ವಸತಿ, ಉದ್ಯಮ, ನೀರಾವರಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ವಲಯಗಳ ಸಾಮಥ್ರ್ಯವನ್ನು ಬಲಪಡಿಸಲಾಗಿದೆ.

ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಇಲಾಖೆ ತೆಗೆದುಕೊಂಡ ಕೆಲವು ಪ್ರಮುಖ ಯೋಜನೆಗಳು ಮತ್ತು ನಿರ್ಧಾರಗಳು ಈ ಕೆಳಕಂಡಂತಿವೆ.

ಋಣಮುಕ್ತ- ಸಾಲ ಮನ್ನಾ
2013 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್ಸಿ/ಎಸ್ಟಿ ಮತ್ತು ಇತರ ಹಿಂದುಳಿದ ವರ್ಗದವರು ತೆಗೆದುಕೊಂಡ ಸಾಲವನ್ನು ಮನ್ನಾ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ರೂ., ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮ ಮತ್ತು ಡಿ. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 7.6 ಲಕ್ಷ ಫಲಾನುಭವಿಗಳ 977.42 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ.

ಡಾ. ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ
ರಾಜ್ಯ ಸರ್ಕಾರವು ಪ.ಜಾತಿ ಮತ್ತು ಪ.ಪಂಗಡದವರಿಗೆ 2,400 ಕೋಟಿ ರೂಪಾಯಿ ವೆಚ್ಚದಲ್ಲಿ 1.5 ಲಕ್ಷ ಮನೆಗಳನ್ನು ನಿರ್ಮಿಸಿಕೊಡಲು ಡಾ. ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯನ್ನು ಅನುಷ್ಠಾನಗೊಳಿಸಿದೆ.ಈ ಯೋಜನೆಯಡಿ ಒಂದು ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಉಳಿದ 50,000 ಮನೆಗಳನ್ನು ನಗರ ಪ್ರದೇಶದಲ್ಲಿ ನಿರ್ಮಿಸಲಾಗುವುದು.
ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಉದ್ದೇಶದಿಂದ ಎಸ್ಸಿ / ಎಸ್ಟಿಯವರಿಗೆ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಿಸಲು ತಲಾ 1.75 ಲಕ್ಷ ರೂಪಾಯಿ ಮತ್ತು ನಗರ ಪ್ರದೇಶದಲ್ಲಿ ಮನೆ ನಿರ್ಮಿಸಲು ತಲಾ 2.00 ಲಕ್ಷ ರೂಪಾಯಿ ನೀಡಲಾಗುವುದು.

ಗಂಗಾ ಕಲ್ಯಾಣ ಯೋಜನೆ
ರಾಜ್ಯ ಸರ್ಕಾರವು ಎಸ್ಸಿ / ಎಸ್ಟಿಗೆ ಸೇರಿದ ವೈಯಕ್ತಿಕ ರೈತರು ಮತ್ತು ಗುಂಪುಗಳಿಗೆ ಸೂಕ್ತ ನೀರಾವರಿ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಸರ್ಕಾರವು ವಿದ್ಯುದ್ದೀಕರಣದೊಂದಿಕೊಳವೆ ಬಾವಿ ಕೊರೆಯಲು 2.5 ಲಕ್ಷ ರೂಪಾಯಿಗಳಿಗೆ ಸಬ್ಸಿಡಿ ನೀಡಲಿದೆ. ಹೆಚ್ಚುವರಿ ಹಣದ ಅಗತ್ಯವಿದ್ದರೆ, 4 ರೂಪಾಯಿ ಬಡ್ಡಿ ದರದಲ್ಲಿ 50,000 ರೂಪಾಯಿ ಸಾಲ ಸೌಲಭ್ಯವಿದ್ದು ಸಾಲ ಮರುಪಾವತಿಗೆ 3 ವರ್ಷಗಳ ಅವಧಿ ನೀಡಲಾಗಿದೆ. ಪ್ರಸ್ತುತ ಎಸ್ಸಿ / ಎಸ್ಟಿ ರೈತರ ಭೂಮಿಯಲ್ಲಿ 36,661 ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, 34,851 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.

Namma-Karntaka-Social-Welfare

ನವೋದ್ಯಮಿಗಳಿಗಾಗಿ ಸಂಚಿತ ನಿಧಿ
ರಾಜ್ಯ ಸರ್ಕಾರವು ಎಸ್ಸಿ / ಎಸ್ಟಿ ಸಮುದಾಯದ ನವೋದ್ಯಮಿಗಳಿಗಾಗಿ ಮೇಲಾಧಾರ ಭದ್ರತೆಯ ಆಧಾರದಲ್ಲಿ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಸಹಾಯಹಸ್ತದಲ್ಲಿ 100 ಕೋಟಿ ರೂಪಾಯಿಗಳ ಸಂಚಿತ ನಿಧಿಯನ್ನು ಮೀಸಲಿಟ್ಟಿದ್ದು ಕಳೆದ 4 ವರ್ಷಗಳಲ್ಲಿ ಕರ್ನಾಟಕ ರಾಜ್ಯ ಹಣಕಾಸು ನಿಗಮದ ವತಿಯಿಂದ 1,133 ಎಸ್ಸಿ / ಎಸ್ಟಿ ಉದ್ಯಮಿಗಳಿಗೆ 4% ಬಡ್ಡಿದರದಲ್ಲಿ 572 ಕೋಟಿ ರೂಪಾಯಿ ಸಾಲವನ್ನು ಒದಗಿಸಲಾಗಿದೆ.
ಎಸ್ಸಿ / ಎಸ್ಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಒದಗಿಸಲು 3 ಲಕ್ಷ ರೂಪಾಯಿ ಸಬ್ಸಿಡಿ ಅಥವಾ ವಾಹನದ ಒಟ್ಟು ವೆಚ್ಚದಲ್ಲಿ ಶೇ.50ರಷ್ಟು ಹಣವನ್ನು ಟೂರಿಂಗ್ ಟ್ಯಾಕ್ಸಿ ಖರೀದಿಸಲು ನೀಡಲಾಗುತ್ತದೆ.

ಭೂರಹಿತ ಕಾರ್ಮಿಕರಿಗೆ ಭೂಮಿ
ಎಸ್ಸಿ / ಎಸ್ಟಿ ಭೂರಹಿತ ಕೃಷಿ ಕಾರ್ಮಿಕರಿಗೆ ಒಂದು ಎಕರೆ ಜೌಗು ಅಥವಾ ಎರಡು ಎಕರೆ ಖುಷ್ಕಿ ಭೂಮಿಯನ್ನು ಸ್ವಇಚ್ಛೆಯ ಮಾರಾಟಗಾರರಿಂದ ಭೂಮಿ ಖರೀದಿಸಿ ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 3,380 ಭೂರಹಿತ ಕೃಷಿ ಕಾರ್ಮಿಕ ಕುಟುಂಬಗಳಿಗೆ 186 ಕೋಟಿ ರೂಪಾಯಿ ಬೆಲೆಯ 4,502 ಎಕರೆ ಭೂಮಿ ವಿತರಿಸಲಾಗಿದೆ.
ಕರ್ನಾಟಕದ ಸರ್ಕಾರ ಈ ಭೂಮಿಯನ್ನು ಕುಟುಂಬದ ಮುಖ್ಯಸ್ಥೆ ಕೃಷಿಕನ ಪತ್ನಿಯ ಹೆಸರಿನಲ್ಲಿ ದಾಖಲಿಸಿರುವುದು ವಿಶೇಷ.

ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ರಾಜ್ಯ ಸರ್ಕಾರವು ಎಸ್ಸಿ / ಎಸ್ಟಿ ಸಮುದಾಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಾರ್ಷಿಕ 50,000 ರೂಪಾಯಿ ವಿದ್ಯಾರ್ಥಿವೇತನ ನೀಡುತ್ತಿದೆ. ಈ ಯೋಜನೆಯಡಿ ನೋಂದಾಯಿತರಾದ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಬಿಎಸ್ಸಿ ಮತ್ತು ಡಿಪ್ಲೊಮಾ ಕೋರ್ಸ್ ವಿದ್ಯಾರ್ಥಿಗಳಿಗೂ ಈ ಯೋಜನೆ ಅನ್ವಯವಾಗುತ್ತದೆ.
ರಾಜ್ಯ ಸರ್ಕಾರವು ಎಸ್ಸಿ/ಎಸ್ಟಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಶುಲ್ಕವನ್ನು ಮರುಪಾವತಿಸುತ್ತಿದೆ. ಐಎಎಸ್, ಐಪಿಎಸ್ ಮತ್ತು ಚಾರ್ಟರ್ಡ್ ಅಕೌಂಟೆಂಟ್ ತರಬೇತಿಗಾಗಿ ದಾಖಲಾಗುತ್ತಿರುವ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೂ ಇದೇ ರೀತಿಯ ಧನ ಸಹಾಯವನ್ನು ಒದಗಿಸಲಾಗುತ್ತಿದೆ.

ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸುಶಿಕ್ಷಿತರಾಗಲು ಮತ್ತು ಅವರು ಹಾಜರಾತಿಗೆ ಉತ್ತೇಜಿಸಲು ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ವಿದ್ಯಾರ್ಥಿಗಳು ಬಸ್ ಪಾಸ್‍ಗೆ 25%ರಷ್ಟು ವೆಚ್ಚ ಭರಿಸಬೇಕಿತ್ತು.

ಸಮುದಾಯ ಭವನಗಳು
ಎಸ್ಸಿ/ಎಸ್ಟಿಯವರ ಪ್ರಯೋಜನಕ್ಕಾಗಿ 1,190 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯಾದ್ಯಂತ ಒಟ್ಟು 7,600 ಡಾ. ಬಿ.ಆರ್.ಅಂಬೇಡ್ಕರ್ ಭವನಗಳು, ಡಾ. ಬಾಬು ಜಗಜೀವನ್ ರಾಂ ಭವನಗಳು, ವಾಲ್ಮೀಕಿ ಭವನಗಳು ಮತ್ತು ಆದಿವಾಸಿ ಸಮಾಜ ಭವನಗಳನ್ನು ನಿರ್ಮಿಸಲಾಗಿದೆ.

ವಸತಿ ಶಾಲೆ ಮತ್ತು ಹಾಸ್ಟೆಲ್‍ಗಳ ಅಭಿವೃದ್ಧಿ
ಮನುಷ್ಯನ ಭವಿಷ್ಯ ರೂಪಿಸುವ ಏಕೈಕ ಶಕ್ತಿಶಾಲಿ ಸಾಧನವೆಂದರೆ ಶಿಕ್ಷಣ. ಎಸ್ಸಿ/ಎಸ್ಟಿ ಸಮುದಾಯದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಹಾಗೂ ಶಿಕ್ಷಣದ ಕಿಚ್ಚನ್ನು ಹಬ್ಬಿಸಲು ರಾಜ್ಯ ಸರ್ಕಾರವು ವಸತಿ ಶಾಲೆ ಮತ್ತು ಹಾಸ್ಟೆಲ್‍ಗಳ ಅಭಿವೃದ್ಧಿಗೆ ಮುಂದಾಗಿದೆ.
2012-13ರಲ್ಲಿ ಪ್ರಿ-ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‍ಗಳ ಸಂಖ್ಯೆಯನ್ನು 2,095 ರಿಂದ 2,205 ಕ್ಕೆ ಹೆಚ್ಚಿಸಲಾಗಿದೆ ಮತ್ತು ಹಾಸ್ಟೆಲ್‍ಗಳಿಗೆ ನೋಂದಾಯಿತಾದ ವಿದ್ಯಾರ್ಥಿಗಳ ಸಂಖ್ಯೆಯನ್ನು 1.42 ಲಕ್ಷದಿಂದ 1.68 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಸ್ತಿತ್ವದಲ್ಲಿರುವ ಹಾಸ್ಟೆಲ್‍ಗಳ ವಿಸ್ತರಣೆ ಮತ್ತು ಹೊಸ ಹಾಸ್ಟೆಲ್‍ಗಳ ನಿರ್ಮಾಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಲ್ಲರಿಗೂ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಒಟ್ಟು 995 ಕೋಟಿ ರೂಪಾಯಿಗಳ ವೆಚ್ಚದಲ್ಲಿ 157 ಹೊಸ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗುತ್ತಿದೆ. ಹಾಲಿ 1,338 ಹಾಸ್ಟೆಲ್‍ಗಳ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು 686 ಹೆಚ್ಚುವರಿ ಕೊಠಡಿಗಳು, 873 ಸ್ನಾನಗೃಹಗಳು ಮತ್ತು 883 ಶೌಚಾಲಯಗಳನ್ನು ನಿರ್ಮಾಣ ಕಾರ್ಯ ಸಾಗುತ್ತಿದೆ.
ಕಳೆದ ನಾಲ್ಕು ವರ್ಷಗಳಲ್ಲಿ 1,160 ಕೋಟಿ ರೂಪಾಯಿಗಳ ವೆಚ್ಚದಲ್ಲಿ 108 ವಸತಿ ಶಾಲಾ ಸಂಕೀರ್ಣಗಳನ್ನು ನಿರ್ಮಿಸಲಾಗಿದ್ದು 85 ವಸತಿ ಶಾಲೆಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಲಿ ಇರುವ 363 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಸೇರಿದಂತೆ 1.6 ಲಕ್ಷ ವಿದ್ಯಾರ್ಥಿಗಳ ಸಾಮಥ್ರ್ಯವಿರುವ 270 ಹೊಸ ವಸತಿ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷ 2018ಕ್ಕೆ ಸಿದ್ಧವಾಗಲಿದೆ.

ವಿದ್ಯಾರ್ಥಿಗಳಿಗೆ ನಗದು ಬಹುಮಾನ
ಸಮಾಜ ಕಲ್ಯಾಣ ಇಲಾಖೆಯು ಭವಿಷ್ಯದಲ್ಲಿ ಉತ್ತಮ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸಲು ಮೊದಲ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪಿಯುಸಿ/ಪದವಿಯಲ್ಲಿ ಓದುತ್ತಿರುವ 68.863 ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ 20,000 ರೂಪಾಯಿಗಳಿಂದ 35,000 ರೂಪಾಯಿಗಳವರೆಗೆ ನಗದು ಬಹುಮಾನ ನೀಡಿದ್ದು ಈ ಉದ್ದೇಶಕ್ಕಾಗಿ 137 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
Pre-metric-Scholarship

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ
Post-metric-Scholarship

ಸ್ವ-ಉದ್ಯೋಗ ಯೋಜನೆ
ಈ ಯೋಜನೆಯಡಿ, ನಿರುದ್ಯೋಗಿಗಳಾದ ಎಸ್ಸಿ / ಎಸ್ಟಿ ನಿರೀಕ್ಷಿತ ಫಲಾನುಭವಿಗಳಿಗೆ ಸ್ವ-ಉದ್ಯೋಗ ಚಟುವಟಿಕೆಗಳನ್ನು ಆರಂಭಿಸಲು ಸಬ್ಸಿಡಿ ಧನ ಮತ್ತು ಸಾಲದ ಮೂಲಕ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮಗಳಿಂದ 1.9 ಲಕ್ಷ ಫಲಾನುಭವಿಗಳಿಗೆ 1,457 ಕೋಟಿ ರೂಪಾಯಿಗಳ ಸಾಲ ಮತ್ತು ಸಬ್ಸಿಡಿಯನ್ನು ನೀಡಲಾಗಿದೆ.

ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ
ಎಸ್ಸಿಸಿಪಿ / ಟಿಎಎಸ್‍ಪಿ ಕಾಯಿದೆಯಡಿ ಕರ್ನಾಟಕ ಸರ್ಕಾರವು ಎಸ್ಸಿ /ಎಸ್ಟಿ ಕಾಲೋನಿಗಳಲ್ಲಿ 2,900 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದೆ. ಲೋಕೋಪಯೋಗಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯು ಎಸ್ಸಿ /ಎಸ್ಟಿ ಕಾಲೋನಿಗಳಲ್ಲಿ ಇಲ್ಲಿಯವರೆಗೆ ಅನುಕ್ರಮವಾಗಿ 2,663 ಕಿ.ಮೀ ರಸ್ತೆಗಳು ಮತ್ತು 1,190 ಕಿ.ಮೀ. ರಸ್ತೆಗಳನ್ನು ನಿರ್ಮಿಸಿವೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Social-Welfare