/ bangalore

ಟೆಂಡರ್ S.U.R.E. ರಸ್ತೆಗಳು

2011 ರಲ್ಲಿ ಆರಂಭಗೊಂಡ ಟೆಂಡರ್ ಶ್ಯೂರ್ ರಸ್ತೆ ಯೋಜನೆಯು ಬೆಂಗಳೂರಿನಲ್ಲಿ ಗುಣ ಮಟ್ಟದ ರಸ್ತೆಗಳ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಅದರಂತೆ ಇದರ ಗುರಿಯು ಅಗಲವಾದ ಮತ್ತು ಗುಣ ಮಟ್ಟದ ರಸ್ತೆಗಳನ್ನು ಸಾರ್ವಜನಿಕರ ಬಳಕೆಗಾಗಿ ಅನುವು ಮಾಡಿಕೊಡಲು ಮತ್ತು ಸುಸಜ್ಜಿತವಾದ ಫುಟ್ ಪಾತ್ ಗಳನ್ನು ನಿರ್ಮಿಸುವ ಗುರಿಯನ್ನು ಈ ಯೋಜನೆಯು ಹೊಂದಿದ್ದು ರಸ್ತೆಯ ನಡುವೆ ಎಲ್ ಇ ಡಿ ದೀಪಗಳು ಹಾಗೂ ಇನ್ನಿತರೆ ಸುರಕ್ಷತಾ ಸೌಕರ್ಯಗಳನ್ನು ಒಳಗೊಂಡಿದೆ.

2015 ರಲ್ಲಿ 12 ಟೆಂಡರ್ ಶ್ಯೂರ್ ರಸ್ತೆಗಳಿಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಚಾಲನೆ ನೀಡಿದ ನಂತರದಲ್ಲಿ ಸೆಂಟ್ ಮಾರ್ಕ್ ರಸ್ತೆ ಮತ್ತು ವಿಠ್ಠಲ್ ಮಲ್ಯ ರಸ್ತೆಗಳು ಮೊದಲು ನಿರ್ಮಾಣಗೊಂಡವು. ನಂತರದಲ್ಲಿ ಕನ್ನಿಂಗ್ ಹ್ಯಾಂ ರಸ್ತೆ, ಮ್ಯೂಸಿಯಂ ರಸ್ತೆ, ಕಮೀಷರೇಟ್ ರಸ್ತೆ, ರೆಸಿಡೆನ್ಸಿ ರಸ್ತೆ, ನೃಪತುಂಗ ರಸ್ತೆ, ಕೆಜಿ ರಸ್ತೆ ಮತ್ತು ಮೋದಿ ಆಸ್ಪತ್ರೆ ರಸ್ತೆಗಳು ಒಳಗೊಂಡು ಈ ರಸ್ತೆಗಳು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ರಸ್ತೆಗಳಿಗೆ ಉದಾಹರಣೆಗಳಾದವು.

18527769_1034412993355788_5601916146278631421_n

ಟೆಂಡರ್ ಶ್ಯೂರ್ ರಸ್ತೆಗಳಾದ ಸೇಂಟ್ ಮಾರ್ಕ್ಸ್ ಮತ್ತು ವಿಠ್ಠಲ್ ಮಲ್ಯ ರಸ್ತೆಗಳನ್ನು ಜೂನ್ 2015 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಕನ್ನಿಂಗ್ ಹ್ಯಾಮ್, ಮ್ಯೂಸಿಯಂ, ಕಮಿಷನರೇಟ್ ರಸ್ತೆಗಳು ಸೇರಿದಂತೆ ಒಟ್ಟು 10 ರಸ್ತೆಗಳನ್ನು ಟೆಂಡರ್ ಶೂರ್ ನಲ್ಲಿ ನವೀಕರಿಸಲಾಗಿದೆ. 2017ರವರೆಗೆ ಮೊದಲ ಹಂತದ ಟೆಂಡರ್ ಶೂರ್ ರಸ್ತೆಗೆ ರೂ. 115.33 ಕೋಟಿಗಳಷ್ಟು ಹಣವನ್ನು ಹಾಗೂ 2ನೇ ಹಂತದ ಪ್ಯಾಕೇಜ್ ಗಳಿಗೆ ರೂ. 86.46 ಕೋಟಿಗಳನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಮೆಜೆಸ್ಟಿಕ್, ಗಾಂಧಿನಗರ ಹಾಗೂ ಕೆ.ಆರ್. ಮಾರುಕಟ್ಟೆ ಅಕ್ಕ ಪಕ್ಕದ ಸುಮಾರು 10.61 ಕಿ.ಮೀ. ರಸ್ತೆಯನ್ನು ಸುಮಾರು 130 ಕೋಟಿ ರೂಪಾಯಿಗಳಲ್ಲಿ ‘ಟೆಂಡರ್ ಶೂರ್’ನಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಹೊಂದಲಾಗಿದೆ.