/ karnataka

ಸಾರಿಗೆ ಇಲಾಖೆ

ಕರ್ನಾಟಕ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಸಾರಿಗೆ ಇಲಾಖೆಯೂ ಒಂದು. ಆಡಳಿತಾತ್ಮಕವಾಗಿ, ಸಾರಿಗೆ ಇಲಾಖೆಯು ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಗಳು, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳೊಂದಿಗೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿವೆ.
ಸಾರಿಗೆ ಇಲಾಖೆಯ ಪ್ರಮುಖ ಇಲಾಖೆಗಳೆಂದರೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ)

2013 ರಲ್ಲಿ ಅಧಿಕಾರವನ್ನು ವಹಿಸಿಕೊಂಡ ರಾಜ್ಯ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ರಸ್ತೆ ಸಾರಿಗೆಯ ಸ್ಥಿತಿ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಡಿಜಿಟಲ್ ಯುಗದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪ್ರಾಮುಖ್ಯತೆ ಹಾಗೂ ಅಗತ್ಯತೆಯ ಅರಿವಿನಿಂದ, ಸಾರಿಗೆ ಇಲಾಖೆಯು ಸೂಕ್ತ ವೆಚ್ಚದಲ್ಲಿ ನಾಗರಿಕ-ಸ್ನೇಹಿ ಆಡಳಿತವನ್ನು ನೀಡಲು ಯತ್ನಿಸುತ್ತಿದೆ.

timthumb

ಕೆಎಸ್‍ಆರ್‍ಟಿಸಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‍ಆರ್‍ಟಿಸಿ) ರಾಷ್ಟ್ರದ ಏಕೈಕ ರಾಜ್ಯ-ನಿರ್ವಹಣಾ ರಸ್ತೆ ಸಾರಿಗೆ ನಿಗಮವಾಗಿದ್ದು, ಸಂಸ್ಥೆಯ ಅನನ್ಯ ಉಪಕ್ರಮಗಳು ಮತ್ತು ಉತ್ತಮ ನೀತಿಗಳಿಂದ ನಿಗಮವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಕೆಎಸ್‍ಆರ್‍ಟಿಸಿ ಭಾರತದ ಪ್ರಧಾನ ರಸ್ತೆ ಸಾರಿಗೆ ಪ್ರಾಧಿಕಾರವಾಗಿ ರೂಪುಗೊಂಡಿದ್ದು ರಸ್ತೆಯ ಸಾರಿಗೆ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ರೂಪಿಸಿದೆ.

ಕೆಎಸ್‍ಆರ್‍ಟಿಸಿ ಎಲ್ಲಾ ಸಾಧನೆಗಳು ನೇರವಾಗಿ ಕರ್ನಾಟಕ ಸರ್ಕಾರದ ಅವಿರತ ಶ್ರಮಕ್ಕೆ ಸಲ್ಲುತ್ತದೆ. ಉದಾಹರಣೆಗೆ, ಕಳೆದ 12 ವರ್ಷಗಳಿಂದ ಸಾರಿಗೆ ನಿಗಮಗಳಲ್ಲಿ ಬಾಕಿ ಉಳಿದ ಉದ್ಯೋಗಿಗಳ ಅಂತರ-ನಿಗಮದ ವರ್ಗಾವಣೆಗೆ ನೌಕರರು ಹೆಚ್ಚು ನಿರೀಕ್ಷಿತರಾಗಿದ್ದು ಪ್ರಸ್ತುತ ಸರ್ಕಾರದ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳುವಂತೆ "ಭಾರತದ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಜೆನರ್ಮ್ ಯೋಜನೆ ಸಾರಿಗೆ ನಿಗಮಗಳಿಗೆ ಬಸ್‍ಗಳನ್ನು ಒದಗಿಸಲು ಹಾಗೂ ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಲು ನೆರವಾಯಿತು. ಆದರೆ, ಇತ್ತೀಚಿನ "ಅಮೃತ್" ಯೋಜನೆಯು ಸಾರಿಗೆ ವಲಯಕ್ಕೆ ಯಾವುದೇ ಆದ್ಯತೆ ನೀಡಿಲ್ಲ. ಯೋಜನೆಗಳು ಯಾವಾಗಲೂ ಸಾರಿಗೆ ನಿಗಮಗಳ ರಕ್ಷಣೆಗೆ ಪ್ರಯತ್ನಿಸಬೇಕು. ಆದರೆ ಈ ಹೊಸ ಯೋಜನೆ ಸಾರಿಗೆ ನಿಗಮಗಳ ಭವಿಷ್ಯದ ಅಭಿವೃದ್ಧಿಗೆ ಹಾನಿಕಾರಕವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಕರ್ನಾಟಕ ಸಾರಿಗೆ ಕೇಂದ್ರ ಸರ್ಕಾರ ಅಥವಾ ಇತರ ಯಾವುದೇ ಮೂಲಗಳ ನೆರವನ್ನು ಪಡೆಯದೆ ಅಪೂರ್ವ ಸಾಧನೆಗಳನ್ನು ಮಾಡಿರುವುದಕ್ಕೆ ನನಗೆ ಹೆಚ್ಚು ತೃಪ್ತಿಯಿದೆ."

13912445_669433116538438_4394958318376066276_n

ಕಳೆದ ನಾಲ್ಕು ವರ್ಷಗಳಲ್ಲಿ ಕೆಎಸ್‍ಆರ್‍ಟಿಸಿಯ ಸಾಧನೆಗಳು

 1. ಪ್ರಶಸ್ತಿಗಳು: 2017 ರಲ್ಲಿ 'ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಸಿಸ್ಟಮ್ ಮತ್ತು ಪ್ಯಾಸೆಂಜರ್ ಇನ್ಫಾರ್ಮೇಶನ್ ಸಿಸ್ಟಮ್' ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದಿಂದ ರಾಷ್ಟ್ರೀಯ ಶ್ರೇಷ್ಠತಾ ಸಾರಿಗೆ ಪ್ರಶಸ್ತಿ ಕೆಎಸ್‍ಆರ್‍ಟಿಸಿ ಪಡೆದುಕೊಂಡಿದೆ.ಹಾಗೂ ಅಂತರಾಷ್ಟ್ರೀಯ ಸಾರ್ವಜನಿಕ ಸಾರಿಗೆಪ್ರಶಸ್ತಿಯನ್ನು ಪಡೆದಿದ್ದು ಸತತ 4ನೇ ವರ್ಷವೂ ಈ ಪ್ರಶಸ್ತಿ ಗಳಿಸಿದ ಏಕೈಕ ರಾಜ್ಯ ಸಾರಿಗೆ ಸಂಸ್ಥೆಯೆನಿಸಿದೆ.

 2. ಹೊಸ ಬಸ್ಸುಗಳು: 2013-2017ರ ಅವಧಿಯಲ್ಲಿ ವೋಲ್ವೋ ಕ್ಲಬ್ ಕ್ಲಾಸ್, ವೋಲ್ವೋ ಮಲ್ಟಿ ಆಕ್ಸಲ್, ಐರಾವತ ಡೈಮಂಡ್ ಕ್ಲಾಸ್ (ಸ್ಕ್ಯಾನಿಯಾ) ಮತ್ತು ರಾಜಹಂಸದಂತಹ ವಿವಿಧ ಬಸ್‍ಗಳು ಮತ್ತು 8326 ಹೊಸ ಬಸ್‍ಗಳನ್ನು ಪರಿಚಯಿಸಿದೆ. 2921 ಬಸ್‍ಗಳ ದಕ್ಷ ಕಾರ್ಯವೈಖರಿಯಿಂದ ಅಂದಾಜು 12,523.91 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ.

 3. ಪರೀಕ್ಷಾ ಮಾರ್ಗಗಳು: ರಾಜ್ಯ ಸರ್ಕಾರವು ಸ್ವಯಂಚಾಲಿತ / ಗಣಕೀಕೃತ ಚಾಲನೆಗಾಗಿ ಬಳ್ಳಾರಿ, ಗದಗ, ಮಂಗಳೂರು, ಬೆಳಗಾವಿ, ಹೊಸಪೇಟೆ, ರಾಯಚೂರು, ಚಿಕ್ಕೋಡಿ, ಕೋಲಾರ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರೀಕ್ಷಾ ಮಾರ್ಗಗಳನ್ನು ಸ್ಥಾಪಿಸಿದೆ. 21 ಹೊಸ ಡಿಪೋಗಳು ಮತ್ತು 21 ಹೊಸ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.

 4. ಚಾಲಕರ ತರಬೇತಿ ಕೇಂದ್ರ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ: ಸಮಾಜ ಕಲ್ಯಾಣ ಇಲಾಖೆಯ ಎಸ್‍ಸಿಪಿ / ಟಿಎಸ್‍ಪಿ ನಿಧಿಯ ಪೂಲ್ ಖಾತೆಯಡಿ 28.50 ಕೋಟಿ ರೂಪಾಯಿಗಳನ್ನು ಕೆಎಸ್‍ಆರ್‍ಟಿಸಿಗೆ ವರ್ಗಾಯಿಸಲಾಗಿದೆ. ಈ ನಿಧಿಯನ್ನು ಮಾಲೂರು, ಚಿಕ್ಕಮಗಳೂರು ಮತ್ತು ಮಳವಳ್ಳಿಯಲ್ಲಿ ಚಾಲಕರ ತರಬೇತಿ ಸಂಸ್ಥೆಗಳ ನಿರ್ಮಾಣಕ್ಕೆ ಹಾಗೂ ಶ್ರೀನಿವಾಸಪುರ, ಚಿಕ್ಕಮಗಳೂರು ಮತ್ತು ಮಳವಳ್ಳಿಯಲ್ಲಿ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ನಿರ್ಮಾಣ ಹಾಗೂ ಮಳವಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ತರಬೇತಿ ಕೇಂದ್ರಗಳ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗಿದೆ.

 5. ಬಸ್ ಪಾಸ್: ಎಲ್ಲಾ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ವಿಸ್ತರಿಸಲಾಗಿದೆ ಮತ್ತು ಹೈಸ್ಕೂಲ್ ಹುಡುಗಿಯರ ವಿದ್ಯಾರ್ಥಿಗಳ ಪಾಸ್ ದರಗಳಲ್ಲಿ ಶೇ.25ರಷ್ಟು ರಿಯಾಯಿತಿಗಳನ್ನು ವಿಸ್ತರಿಸಲಾಗಿದೆ ಮತ್ತು ಎಲ್ಲಾ ಶಾಲಾ / ಕಾಲೇಜು ವಿದ್ಯಾರ್ಥಿಗಳು ತಮ್ಮ ನಿವಾಸದಿಂದ 60 ಕಿ.ಮೀ.ವರೆಗೆ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಉಚಿತ ಬಸ್ ಪಾಸ್‍ಗಳನ್ನು 21,54,066 ವಿದ್ಯಾರ್ಥಿಗಳು, 11,344 ದೃಷ್ಟಿಮಾಂದ್ಯರು, 1,494 ಸ್ವಾತಂತ್ರ್ಯ ಹೋರಾಟಗಾರರು, 2,50,967 ದೈಹಿಕ ವಿಕಲಾಂಗರು, ಸವಾಲು ಪಡೆದ ವ್ಯಕ್ತಿಗಳು, 834 ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರು/ ವಿಧವೆಯರು ಮತ್ತು 1,369.32 ಲಕ್ಷ ಹಿರಿಯ ನಾಗರಿಕರಿಗೆ ವಿಸ್ತರಿಸಲಾಗಿದೆ. ದೈಹಿಕ ವಿಕಲಾಂಗ ಪ್ರಯಾಣಿಕರಿಗೆ ಬಸ್ ಪಾಸ್‍ಗಳ ಮಿತಿಯ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ.

17972125_841667255981689_3861015475966061315_o

ಬಿಎಂಟಿಸಿ
ಬೆಂಗಳೂರಿನಲ್ಲಿ ಎರಡು ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಕಾಣಬಹುದು. ಒಂದು ಬಸ್ಸು ಮತ್ತೊಂದು ರೈಲು. ಪ್ರಸ್ತುತ ಬಿಎಂಟಿಸಿಯಲ್ಲಿ 6323 ಬಸ್‍ಗಳಿದ್ದು, 34161 ನೌಕರರು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 74,600 ಟ್ರಿಪ್‍ಗಳ ಸಾರಿಗೆ ಸಂಚಾರ ನಡೆಯುತ್ತಿದ್ದು 50 ಲಕ್ಷ ಪ್ರಯಾಣಿಕರು ಈ ಸಾರಿಗೆ ಪದ್ಧತಿಯನ್ನು ನೆಚ್ಚಿಕೊಂಡಿದ್ದಾರೆ.
ಬಿಎಂಟಿಸಿ ಸಂಸ್ಥೆ ಇಡೀ ಭಾರತದಲ್ಲೇ ದಕ್ಷ ಸಾರಿಗೆ ಸಂಸ್ಥೆಯೆನಿಸಿದ್ದು, ಲಕ್ಷಾಂತರ ಜನರ ಸಂಚಾರಕ್ಕೆ ಅನುವಾಗಿ ಅತ್ಯಂತ ಲಾಭದಾಯಕ ಸಂಸ್ಥೆ ಎಂಂಬ ಹೆಸರು ಗಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯ ಪಡೆಯದ ಬಿಎಂಟಿಸಿ ಏಕಾಂಗಿಯಾಗಿ 2016ನೇ ಸಾಲಿನಲ್ಲಿ 33.9 ಕೋಟಿ ರೂಪಾಯಿ ಲಾಭ ಗಳಿಸಿದ್ದು, 2011-12ನೇ ಸಾಲಿನಲ್ಲಿ ಗಳಿಸಿದ 21.4 ಕೋಟಿ ರೂಪಾಯಿ ಲಾಭಕ್ಕಿಂತ ಮಿಗಿಲಾಗಿದೆ.
ಬಿಎಂಟಿಸಿಯು ಕಳೆದ ನಾಲ್ಕು ವರ್ಷಗಳಲ್ಲಿ 1701 ಬಸ್ ಖರೀದಿಸಿದ್ದು ವಿವಿಧ ಹುದ್ದೆಗಳಿಗೆ 5,492 ನೌಕರರನ್ನು ನೇಮಿಸಿಕೊಳ್ಳಲಾಗಿದೆ. ನಮ್ಮ ಮೆಟ್ರೊ ಪ್ರಯಾಣಿಕರ ಸರಾಗ ಸಂಚಾರಕ್ಕಾಗಿ 156 ಮೆಟ್ರೊ ಫೀಡರ್ ಬಸ್‍ಗಳನ್ನು ಪರಿಚಯಿಸಲಾಗಿದೆ.

ಸಾರಿಗೆ ಇಲಾಖೆಯ ವಿವಿಧ ಕೊಡುಗೆಗಳು

ಸ್ಮಾರ್ಟ್ ಕಾರ್ಡ್‍ಗಳು

 1. ಆರ್‍ಟಿಓಗಳಲ್ಲಿ ಸ್ಮಾರ್ಟ್ ಕಾರ್ಡ್: ಸಾರಿಗೆ ಇಲಾಖೆಯ ಪ್ರತಿ ಇಲಾಖೆಯಲ್ಲಿ ಸ್ಮಾರ್ಟ್ ಕಾರ್ಡ್‍ಗಳ ಬಳಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ.ಸಾರಿಗೆ ಇಲಾಖೆಯು 2009ನೇ ಸಾಲಿನಲ್ಲಿ ಪರಿಚಯಿಸಿದ ಚಾಲನಾ ಪರವಾನಗಿ (ಡಿಎಲ್) ವಾಹನ ನೋಂದಾವಣಿ ಪತ್ರ(ಆರ್‍ಸಿ) ಸ್ಮಾರ್ಟ್‍ಕಾರ್ಡ್‍ಗಳು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಪ್ರಾದೇಶಿಕ ಸಾರಿಗೆ ಕಚೇರಿಯು 2009ರಿಂದ ಇಲ್ಲಿಯವರೆಗೆ ಸ್ಮಾರ್ಟ್‍ಕಾರ್ಡ್‍ಯುಕ್ತ 1.20 ಕೋಟಿ ಆರ್‍ಸಿ ಬುಕ್‍ಗಳನ್ನು ಹಾಗೂ 1.10 ಡಿಎಲ್ ವಿತರಿಸಿರುವುದು ಅತ್ಯಂತ ಶ್ಲಾಘನೀಯ.

19247841_1796842457226975_4125423664518885464_n

 1. ಬಿಎಂಟಿಸಿಯಲ್ಲಿ ಸ್ಮಾರ್ಟ್ ಕಾರ್ಡ್: ಬಿಎಂಟಿಸಿ ಆಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ಕ್ಯಾಶ್‍ಲೆಸ್ ಸ್ಮಾರ್ಟ್ ಕಾರ್ಡ್‍ಗಳನ್ನು ಪರಿಚಯಿಸಿದ್ದು ಈ ಕಾರ್ಡ್‍ಗಳಲ್ಲಿ ಹಣವಿಟ್ಟು ಅಥವಾ ಕಾರ್ಡ್ ಆಧಾರಿತ ಪಾವತಿಯ ಮೂಲಕ ನಗದುರಹಿತವಾಗಿ ಬಿಎಂಟಿಸಿಯಲ್ಲಿ ಪ್ರಯಾಣಿಸಬಹುದಾಗಿದೆ. ಭವಿಷ್ಯದಲ್ಲಿ ನಮ್ಮ ಮೆಟ್ರೊದಲ್ಲಿ ಸಂಚಾರದಲ್ಲಿ ಕ್ಯಾಶ್‍ಲೆಸ್ ಸ್ಮಾರ್ಟ್ ಕಾರ್ಡ್‍ಗಳನ್ನು ಪರಿಚಯಿಸಲಾಗುವುದು.

 2. ಕೆಎಸ್‍ಆರ್‍ಟಿಸಿಯಲ್ಲಿ ಸ್ಮಾರ್ಟ್ ಕಾರ್ಡ್: ಈ ಪದ್ಧತಿ ಬಿಎಂಟಿಸಿಯಲ್ಲಿ ಯಶಸ್ಸು ಕಂಡ ನಂತರ ಸ್ಮಾರ್ಟ್‍ಕಾರ್ಡ್ ಪದ್ಧತಿಯನ್ನು ಕೆಎಸ್‍ಆರ್‍ಟಿಸಿಗೂ ವಿಸ್ತರಿಸಲು ಚಿಂತನೆ ನಡೆದಿದ್ದು, ಟೆಂಡರ್‍ನ್ನು ಶೀಘ್ರದಲ್ಲೇ ಕರೆಯಲಾಗುವುದು. ಕೆಎಸ್‍ಆರ್‍ಟಿಸಿಯು ಸ್ಮಾಟ್‍ಕಾರ್ಡ್ ಬೆಂಬಲಿಸುವ ಜಿಪಿಎಪ್ ಆಧಾರಿತ ವಿದ್ಯುನ್ಮಾನ ಟಿಕೆಟ್ ಯಂತ್ರಗಳ (ಇಟಿಎಂ) ಸರಬರಾಜಿಗಾಗಿ ಟೆಂಡರ್‍ಗಳನ್ನು ಆಹ್ವಾನಿಸಿದೆ. ವಿಸ್ತರಿಸಲಾಗಿದೆ. ಆಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ಕ್ಯಾಶ್‍ಲೆಸ್ ಸ್ಮಾರ್ಟ್ ಕಾರ್ಡ್‍ಗಳನ್ನು ಪರಿಚಯಿಸಿದ್ದು ಈ ಕಾರ್ಡ್‍ಗಳಲ್ಲಿ ಹಣವಿಟ್ಟು ಅಥವಾ ಕಾರ್ಡ್ ಆಧಾರಿತ ಪಾವತಿಯ ಮೂಲಕ ನಗದುರಹಿತವಾಗಿ ಬಿಎಂಟಿಸಿಯಲ್ಲಿ ಪ್ರಯಾಣಿಸಬಹುದಾಗಿದೆ. ಭವಿಷ್ಯದಲ್ಲಿ ನಮ್ಮ ಮೆಟ್ರೊದಲ್ಲಿ ಸಂಚಾರದಲ್ಲಿ ಕ್ಯಾಶ್‍ಲೆಸ್ ಸ್ಮಾರ್ಟ್ ಕಾರ್ಡ್‍ಗಳನ್ನು ಪರಿಚಯಿಸಲಾಗುವುದು.

ಬಿಎಂಟಿಸಿಯಲ್ಲಿ ಸ್ಮಾರ್ಟ್ ಕಾರ್ಡ್‍ಗಳನ್ನು 2017ರ ಜೂನ್‍ನಲ್ಲಿ ಪರಿಚಯಿಸಲಾಯಿತು. ಸಾರಿಗೆ ಸಚಿವ ಹೆಚ್.ಎಂ. ರೇವಣ್ಣನವರು ಪ್ರಯಾಣಿಕರ ಸಂಖ್ಯೆಯ ಹೆಚ್ಚಳದಲ್ಲಿ ಸ್ಮಾರ್ಟ್ ಕಾರ್ಡ್‍ಗಳ ಬಳಕೆ ಪ್ರಮುಖ ಪಾತ್ರ ವಹಿಸಲಿದೆ ಎಂದರು. ಕಾರ್ಡ್ ಬಳಕೆಯಿಂದಾಗಿ ಇಂದಿಗೂ ವಿವಿಧ ಸಾರಿಗೆ ಮಾದರಿಗಳಾದ ಮೆಟ್ರೋ ಕಾರಿಡಾರ್, ಬಿಎಂಟಿಸಿ ಮತ್ತು ಕೆಎಸ್‍ಆರ್‍ಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹೇಳಿದರು. ಪ್ರತಿನಿತ್ಯ 52 ಲಕ್ಷ ಪ್ರಯಾಣಿಕರು ಬಸ್‍ಗಳಲ್ಲಿ ಸಂಚರಿಸುತ್ತಾರೆ.ಸ್ಮಾರ್ಟ್ ಕಾರ್ಡ್ ಪದ್ಧತಿ ನಡುವೆಯೂ ಹೆಚ್ಚು ಪ್ರಯಾಣಿಕರು ಈ ಸಾರಿಗೆಗೆ ಒಲವು ತೋರಿದ್ದು ಜಗಳಮುಕ್ತ ಸಂಚಾರವನ್ನು ಆನಂದಿಸುತ್ತಿದ್ದಾರೆ.

ರಸ್ತೆ ಸುರಕ್ಷತಾ ಘಟಕ
ಕರ್ನಾಟಕ ಸರ್ಕಾರದ ರಸ್ತೆ ಸುರಕ್ಷತಾ ಯೋಜನೆಯು ಸಂಚಾರ ಕ್ಷೇತ್ರದಲ್ಲಿ ಒಂದು ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ರಸ್ತೆ ಸುರಕ್ಷತೆಯ ಕುರಿತಾದ ನೀತಿಯನ್ನು ರೂಪಿಸಿ ರಸ್ತೆ ನಿರ್ವಹಣೆ ಮತ್ತು ನಿರ್ಮಾಣ, ಜಾರಿಗೊಳಿಸುವಿಕೆ, ತುರ್ತು ಆರೈಕೆ ಮತ್ತು ರಸ್ತೆ ಕುರಿತು ಸಮಗ್ರ ಶಿಕ್ಷಣ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಎಲ್ಲಾ ರಸ್ತೆ ಬಳಕೆದಾರರಿಗೆ ಸುರಕ್ಷತೆಯನ್ನು ಹೆಚ್ಚಿಸಲು 2013ರಲ್ಲಿ ರಸ್ತೆ ಸುರಕ್ಷತಾ ಘಟಕವನ್ನು ಸ್ಥಾಪಿಸಿದೆ. ರಾಜ್ಯ ಸರ್ಕಾರವು ಮಾನ್ಯ ಸಾರಿಗೆ ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ (ಸಾರಿಗೆ) ಇವರ ಅಧ್ಯಕ್ಷತೆಯಲ್ಲಿ ಸುರಕ್ಷತಾ ಸಲಹೆ ನೀಡಲು ಮತ್ತು ರಸ್ತೆ ಸುರಕ್ಷತಾ ನೀತಿಗಳನ್ನು ರೂಪಿಸಲು ವಿವಿಧ ಪರಿಷತ್‍ಗಳು ಮತ್ತು ಸಮಿತಿಗಳನ್ನು ರಚಿಸಿದೆ. ಈ ಮೇಲ್ಕಂಡ ಸಮಿತಿಗಳಿ ರಸ್ತೆ ಸುರಕ್ಷತಾ ಘಟಕವು ರಸ್ತೆ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ದಕ್ಷ ಮೇಲ್ವಿಚಾರಣೆಗಾಗಿ ಅತ್ಯಂತ ಸಹಕಾರಿಯಾಗಿದೆ.

ಟ್ರಕ್ ಟರ್ಮಿನಲ್ಸ್
ಕರ್ನಾಟಕ ಸರ್ಕಾರದ ಅಧೀನದಲ್ಲಿ , ಬೆಂಗಳೂರು ನಗರದಲ್ಲಿ ಡಿ. ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ನ್ನು ಸ್ಥಾಪಿಸಲಾಗಿದೆ. ಕಂಪೆನಿಯಲ್ಲಿ ಶೆಡ್‍ಗಳು, ಗೋಡನ್‍ಗಳು, ಗೋದಾಮುಗಳು, ವರ್ಕ್‍ಶಾಪ್‍ಗಳು, ಪಾರ್ಕಿಂಗ್ ಸ್ಥಳಗಳು, ಪೆಟ್ರೋಲ್ ಬಂಕ್‍ಗಳು, ವೈದ್ಯಕೀಯ ಔಷಧಾಲಯಗಳು, ಚಿಕಿತ್ಸಾಲಯಗಳು, ಹೊಟೇಲ್‍ಗಳು ಮತ್ತು ಕ್ಯಾಂಟೀನ್‍ಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನೊಳಗೊಂಡ ನಿರ್ಮಾಣ ಹಂತದ ಟ್ರಕ್ ಟರ್ಮಿನಲ್‍ಗಳು ಕಾರ್ಯ ನಿರ್ವಹಿಸುತ್ತವೆ. ಕಂಪೆನಿಯು ಈಗಾಗಲೇ ಈ ಕೆಳಕಂಡಂತೆ ಹಲವಾರು ಸಾಧನೆಗಳನ್ನು ಮಾಡಿದೆ.

 1. ಟ್ರಕ್ ಟರ್ಮಿನಲ್: ಕಂಪೆನಿಯು ಬೆಂಗಳೂರಿನ ಯಶವಂತಪುರದಲ್ಲಿ 39.00 ಎಕರೆ ವಿಸ್ತಾರ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್‍ನ್ನು ಸ್ಥಾಪಿಸಿದೆ ಮತ್ತು 1995 ರಿಂದಲೂ ಈ ಯೋಜನೆ ಕಾರ್ಯಾಚರಣೆಯಲ್ಲಿದೆ. ಪ್ರಸ್ತುತ 1,500 ರಿಂದ 2,000 ಟ್ರಕ್ ಮಾಲೀಕರು / ಏಜೆಂಟರು ಟರ್ಮಿನಲ್‍ನ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

 2. ಮೈಸೂರು ಟ್ರಕ್ ಟರ್ಮಿನಲ್: ಮೈಸೂರು-ನಂಜನಗೂಡು ರಸ್ತೆ ಮತ್ತು ರಿಂಗ್ ರಸ್ತೆಯ ಜಂಕ್ಷನ್‍ನಲ್ಲಿ 16.20 ಎಕರೆ ಪ್ರದೇಶದಲ್ಲಿ 15.06 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಟರ್ಮಿನಲ್‍ನಲ್ಲಿ ನಿರ್ಮಿಸಲಾಗಿದೆ ಹಾಗೂ ಟರ್ಮಿನಲ್ 04-02-2012 ರಿಂದ ಕಾರ್ಯಾಚರಣೆಯಲ್ಲಿದೆ. ಇತರೆ ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಐಡಲ್ ಪಾರ್ಕಿಂಗ್ ಪ್ರದೇಶದಲ್ಲಿ 96 ಟ್ರಕ್ಕುಗಳು / ಲಾರಿಗಳನ್ನು ನಿಲುಗಡೆ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.

 3. ಧಾರವಾಡ ಟ್ರಕ್ ಟರ್ಮಿನಲ್: ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದ 7.26 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್‍ನ್ನು 7.71 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 13-11-2012 ರಿಂದ ಕಾರ್ಯಾಚರಣೆಯಲ್ಲಿದೆ. ಟರ್ಮಿನಲ್‍ನಲ್ಲಿ ಇತರೆ ಮೂಲಭೂತ ಸೌಕರ್ಯಗಳೊಂದಿಗೆ 183 ಲಾರಿಗಳು / ಟ್ರಕ್ಕುಗಳು ಪಾರ್ಕಿಂಗ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ

 4. ಇವುಗಳ ಹೊರತಾಗಿ ಹುಬ್ಬಳ್ಳಿ, ರಾಯಚೂರು, ಗದಗ, ಹಾಸನ ಜಿಲ್ಲೆಯಲ್ಲಿ ಟರ್ಮಿನಲ್‍ಗಳ ನಿರ್ಮಾಣಕ್ಕೆ ಪ್ರಸ್ತಾವನೆಗಳು ಪ್ರಕ್ರಿಯೆಯಲ್ಲಿವೆ. ದೀರ್ಘಾವಧಿಯಲ್ಲಿ, ಕಂಪನಿಯು ರಾಜ್ಯದ ಪ್ರಮುಖ ನಗರಗಳಲ್ಲಿ ಭೂಮಿ ಲಭ್ಯತೆಗನುಗುಣವಾಗಿ ಟ್ರಕ್ ಟರ್ಮಿನಲ್‍ಗಳನ್ನು ನಿರ್ಮಿಸಲು ಇಚ್ಛಿಸಿದೆ.
  ಸಾರಿಗೆ ಇಲಾಖೆಗೆ ನೀಡಲಾದ ಅನುದಾನಗಳು.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Transport